ಆ ಕ್ಷೇತ್ರದಲ್ಲಿ ಗಲಾಟೆ ಗದ್ಸಲದ ರಾಜಕಾರಣಕ್ಕೆ ಈ ಭಾರಿ ಬ್ರೇಕ್ ಬಿದ್ದಿದ್ದು ಮತದಾನ ಶಾಂತಿಯಾಗಿ ನಡೆದಿತ್ತು. ಇನ್ನೂ ಮತದಾನದ ರಿಸಲ್ಟ್ ಬರ್ತಿದ್ದಂತೆ ಶಾಂತವಾಗಿದ್ದ ಹೊಸಕೋಟೆ ಕಾರವಾಗಿದ್ದು ಒರ್ವನ ಹೆಣ ಬಿದ್ದಿದೆ. ಕರ್ನಾಟಕ ವಿಧಾನಸಭೆಯಲ್ಲೇ ಹೈ ಹೋಲ್ಟೇಜ್ ಕ್ಷೇತ್ರವಾಗಿರುವ ಹೊಸಕೋಟೆ ವಿಧಾನಸ ಕ್ಷೇತ್ರದಲ್ಲಿ ಈ ಭಾರಿ ಚುನಾವಣೆ ಈ ಹಿಂದಿಗಿಂತಲೂ ಶಾಂತವಾಗಿ ನಡೆದಿತ್ತು. ಇನ್ನೂ ಚುನಾವಣೆ ಶಾಂತವಾಗಿ ಮುಗಿಯುತ್ತಿದ್ದಂತೆ ಮತ್ತೊಂದು ವರಸೆ ಶುರುವಾಗಿದ್ದು ಚುನಾವಣೆ ವಿಚಾರಕ್ಕೆ ನೆತ್ತರು ಹರಿದಿದೆ.
ಹೌದು ಹೊಸಕೋಟೆಯ ಶೆಟ್ಟಹಳ್ಳಿ ಗ್ರಾಮದಲ್ಲಿ ಕೃಷ್ಣಪ್ಪ ಮತ್ತು ಗಣೇಶಪ್ಪ ಎಂಬ ಅಣ್ಣ ತಮ್ಮಂದಿರ ನಡುವೆ ರಾಜಕೀಯ ವಿಚಾರಕ್ಕೆ ಗಲಾಟೆ ಶುರುವಾಗಿದ್ದು ಕೃಣ್ಙಪ್ಪ ನೀವು ಎಂಟಿಬಿಗೆ ಮತ ಹಾಕಿಲ್ಲ ಅಂತ ಜಗಳ ಶುರು ಮಾಡಿದ್ನಂತೆ. ಇನ್ನೂ ಜಗಳ ಆರಂಭವಾಗ್ತಿದ್ದಂತೆ ಇಬ್ಬರು ಪರಸ್ಪರ ಕಿತ್ತಾಡಿಕೊಂಡಿದ್ದು ಈವೇಳೆ ಗಣೇಶಪ್ಪನ ಮಗ ಆದಿತ್ಯಾ ಎಂಬುವವನು ಕೃಷ್ಣಪ್ಪನ ಮೇಲೆ ಕುಡಗೋಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಹಲ್ಲೆಯಿಂದಾಗಿ ಗಂಬೀರವಾಗಿ ಗಾಯಗೊಂಡಿದ್ದ ಕೃಷ್ಣಪ್ಪ ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾನೆ.
ಇನ್ನು ಗಲಾಟೆಯಲ್ಲಿ ಗಾಯಗೊಂಡವರನ್ನ ನೋಡಲು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೊಸಕೋಟೆಯ ಎಂವಿಜೆ ಆಸ್ವತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಚುನಾವಣೆ ಗೆಲ್ತಿದ್ದಂತೆ ಶಾಸಕರ ಬೆಂಬಲಿಗರು ದಾಂದಲೆ ಶುರು ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮನೆಗಳ ಮುಂದೆ ಪಟಾಕಿ ಹಚ್ಚುವುದು ಮನೆಗಳ ಕಾಂಪೌಂಡ್ ಒಳಕ್ಕೆ ಪಟಾಕಿ ಎಸೆಯುವ ಕೆಲಸ ಮಾಡಿದ್ದಾರೆ. ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ಗಲಾಟೆ ಗದ್ದಲ ಮಾಡಿದ್ದಾರೆ. ಈಗಾಗಲೆ ಒರ್ವ ವ್ಯಕ್ತಿಯನ್ನ ಕೊಲೆ ಸಹ ಮಾಡಿಸಿದ್ದಾರೆ. ಶಾಸಕರ ಕುಮ್ಮಕ್ಕಿಲ್ಲದೆ ಇವೆಲ್ಲ ಮಾಡಲು ಸಾಧ್ಯವಿಲ್ಲ.
ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಆರೋಪಿಗಳನ್ನ ಕೂಡಲೆ ಬಂದಿಸಬೇಕು. ರಾತ್ರಿಯಿಂದ ಆರೆಳು ಹಳ್ಳಿಗಳಲ್ಲಿ ಇದೇ ರೀತಿ ಗಲಾಟೆಯಾಗಿದೆ ಅಂತ ಆಕ್ರೋಶ ಹೊರ ಹಾಕಿದ್ರು. ಒಟ್ಟಾರೆ ಹೊಸಕೋಟೆ ತಾಲ್ಲೂಕಿನಲ್ಲಿ ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಗಲಾಟೆ ಗದ್ದಲ ಶುರುವಾಗಿದ್ದು ಕ್ಷೇತ್ರದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇನ್ನೂ ಈ ಬಗ್ಗೆ ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಗಲಾಟೆಗಳಿಗೆ ಯಾವ ರೀತಿ ಕಡಿವಾಣ ಹಾಕುತ್ತಾರೆಂಬುದನ್ನ ಕಾದು ನೋಡಬೇಕಿದೆ.