ಬೆಂಗಳೂರು ;- ಅಶೋಕ್ ನಗರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಶ್ರೀಕಾಂತ್ ಎಸ್ ತೋಟಗಿ ಅವರನ್ನು ಅಮಾನತು ಮಾಡಿ ಬೆಂಗಳೂರಿನ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಟಿತ ಪ್ರೈಡ್ ಹೋಟೆಲ್ ನಲ್ಲಿ ನಿಯಮ ಮೀರಿ ಲೇಟ್ ನೈಟ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಿನಾಂಕ 10 ರಂದು ಸಿಸಿಬಿ ಪೊಲೀಸರು ದಾಳಿ ಮಾಡಿದರು. ಬಳಿಕ ಘಟನೆ ಸಂಬಂಧ ವರದಿ ಸಲ್ಲಿಸಿದರು.
ಇಷ್ಟು ದೊಡ್ಡ ಪಾರ್ಟಿ ನಡೆಯುತ್ತಿದ್ದರೂ ಇನ್ಸಪೆಕ್ಟರ್ ನಿರ್ಲಕ್ಷ ವಹಿಸಿದ್ದ ಹಿನ್ನೆಲೆ ಅಶೋಕ್ ನಗರ ಪೊಲೀಸ್ ಇನ್ಸಪೆಕ್ಟರ್ ಅಮಾನತು ಶ್ರೀಕಾಂತ್ ಎಸ್ ತೋಟಗಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.