ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊಬೈಲ್ ಶಾಪ್ ಮಾಲೀಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದವನ ವಿರುದ್ಧವೂ ಇದೀಗ ಎಫ್ಐಆರ್ ದಾಖಲಾಗಿದೆ.
ಘಟನೆ ಬಳಿಕ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಲ್ಲಿ ಒಬ್ಬನಾದ ಸುಲೇಮಾನ್ ಎಂಬಾತನ ತಾಯಿ ಅವರು ಮುಖೇಶ್ ವಿರುದ್ಧ ಪ್ರತಿ ದೂರು ನೀಡಿದ್ದರು. ನಂತರ ದೂರು ಆಧರಿಸಿ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದರು. ಇದೀಗ ಕೋರ್ಟ್ ಅನುಮತಿ ಪಡೆದು ಮುಖೇಶ್ ವಿರುದ್ಧ FIR ದಾಖಲು ಮಾಡಲಾಗಿದೆ.
ಮುಖೇಶ್ ಮೂರರಿಂದ ನಾಲ್ಕು ದಿನಗಳಿಂದ ಜೊರಾಗಿ ಸೌಂಡ್ ಸಿಸ್ಟಂ ಹಾಕಿದ್ದ. ಸೌಂಡ್ ಸಿಸ್ಟಂನಿಂದ ರಂಜಾನ್ ಹಿನ್ನಲೆ ಪ್ರಾರ್ಥನೆ ಮಾಡುವ 3 ಸಾವಿರ ಮಂದಿಗೆ ತೊಂದರೆಯಾಗಿದೆ. ಹೀಗಾಗಿ ಏಕೆ ಸೌಂಡ್ ಸಿಸ್ಟಂ ಜೋರಾಗಿ ಕೊಟ್ಟಿದ್ದೀಯ ಎಂದು ನನ್ನ ಮಗ ಹಾಗೂ ಆತನ ಸ್ನೇಹಿತರು ಹೇಳಿದಕ್ಕೆ ಮುಖೇಶ್ನಿಂದ ಐವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.