ಬೆಂಗಳೂರು: ಉಭಯ ಸದನಗಳಲ್ಲಿ ಕಲಾಪ(Karnataka Assembly Session) ಆರಂಭವಾಗಿದೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮಧುಮಾದೇಗೌಡ (Madhumade Gowda)ಪ್ರಶ್ನೆ ಕೇಳಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಎಷ್ಟು ಕೋರ್ಸ್ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಯಾವ ತರಗತಿಗೆ ಯಾವ ಪರೀಕ್ಷೆಯನ್ನ ನಡೆಸಲಾಗುತ್ತಿದೆ. ಇದಕ್ಕೆ ಸಚಿವ ಡಾ ಸುಧಾಕರ್(Dr. Sudhakar) ಉತ್ತರ ನೀಡಿದ್ದು, ಕೆಎಸ್ಓಯು ನಡಿ ವಾರ್ಷಿಕ ಪರೀಕ್ಷೆ ನಡೆಸುವುದನ್ನು ಮುಂದುವರೆಸಿದೆ. ಕೆಲವು ಸೆಮಿಸ್ಟರ್ ಪರೀಕ್ಷೆ ಇದೆ. ದೂರ ಶಿಕ್ಷಣಕ್ಕೂ, ಕಾಲೇಜು ಶಿಕ್ಷಣಕ್ಕೂ ಸಮಾನವಾದ ಸ್ಥಾನ ಮಾನ ಸಿಗಬೇಕು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.