ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 45 ಪ್ರಮುಖ ರೌಡಿಗಳನ್ನು ಗಡಿಪಾರು ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ 12 ರೌಡಿಗಳನ್ನ ಗಡಿಪಾರು ಮಾಡಲು ಆಯಾ ವಿಭಾಗದ ಡಿಸಿಪಿಗಳು ಆದೇಶ ಹೊರಡಿಸಿದ್ದಾರೆ. ಉಳಿದಂತೆ 33 ರೌಡಿಗಳ ಗಡಿಪಾರಿಗೆ ಸಿದ್ದತೆ ನಡಿತಾಯಿದ್ದು, ಕೌನ್ಸಿಲಿಂಗ್ ಆಗುತ್ತಿದೆಯಂತೆ. ಇನ್ನೊಂದು ವಾರದ ಒಳಗೆ ನಗರ ಪೊಲೀಸರು ಗಡಿಪಾರು ಮಾಡಲಿದ್ದಾರೆ.
ಪೂರ್ವ ವಿಭಾಗ 12, ಪಶ್ಚಿಮ ವಿಭಾಗ 6, ಆಗ್ನೇಯ ವಿಭಾಗ 5, ಕೇಂದ್ರ ವಿಭಾಗ 4, ಈಶಾನ್ಯ ವಿಭಾಗ 4, ವೈಟ್ ಫೀಲ್ಡ್ ವಿಭಾಗ 5, ಉತ್ತರ ವಿಭಾಗ 5, ದಕ್ಷಿಣ ವಿಭಾಗ 4 ರೌಡಿಗಳನ್ನ ಗಡಿಪಾರು ಮಾಡಲಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ದಿನಗಳು ಬಾಕಿ ಉಳಿದಿದ್ದು, ಅದರಂತೆ ಚುನಾವಣೆ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಈಗಾಗಲೇ ಸೂಕ್ತ ಕ್ರಮಕೈಗೊಳ್ಳಲಾಗಿದೆ.