ಮಧ್ಯಪ್ರದೇಶ:- ಮಧ್ಯಪ್ರದೇಶದ ಬೇತುಲ್ನಲ್ಲಿ ಇವಿಎಂ ಹಾಗೂ ಮತಗಟ್ಟೆ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ಬಸ್ ಬೆಂಕಿಗಾಹುತಿಯಾದ ಘಟನೆ ಜರುಗಿದೆ.
ಘಟನೆಯ ಪರಿಣಾಮ ಕೆಲವು ಇವಿಎಂ ಯಂತ್ರಗಳಿಗೆ ಹಾನಿಯಾಗಿದೆ.
ಘಟನೆಯಲ್ಲಿ ಯಾವುದೇ ಮತಗಟ್ಟೆ ಸಿಬ್ಬಂದಿ ಹಾಗೂ ಬಸ್ ಚಾಲಕನಿಗೆ ಗಾಯಗಳಾಗಿಲ್ಲ. ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಜಿಲ್ಲೆಯ ಗೋಲಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬೂತ್ ಸಂಖ್ಯೆ 275, 276,277,278,279 ಹಾಗು 280ಕ್ಕೆ ಸೇರಿದಂತೆ ನಾಲ್ಕು ಮತಗಟ್ಟೆಗಳ ಇವಿಎಂಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿತು. ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಘಟನೆಯ ಸಮಯದಲ್ಲಿ ಬಸ್ನಲ್ಲಿ ಆರು ಮತಗಟ್ಟೆಗಳ ಇವಿಎಣಗಳು ಇದ್ದವು, ಅವುಗಳಲ್ಲಿ ನಾಲ್ಕಕ್ಕೆ ಹಾನಿಯಾಗಿದೆ. ಎರಡು ಸುರಕ್ಷಿತವಾಗಿದೆ.
ಘಟನೆಯಿಂದ ಇವಿಎಂಗಳಲ್ಲಿ ದಾಖಲಾದ ಮತ ಎಣಿಕೆ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಈ ಕುರಿತು ಚುನಾವಣಾ ಆಯೋಗಕ್ಕೆ ತಮ್ಮ ವರದಿಯನ್ನು ಕಳುಹಿಸಲಾಗುವುದು ಮತ್ತು ಹಾನಿಗೊಳಗಾದ ಮತಗಟ್ಟೆಗಳಲ್ಲಿ ಮರು ಮತದಾನದ ಬಗ್ಗೆ ಚುನಾವಣಾ ಸಂಸ್ಥೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.