ಕೋಲಾರ: ದೇಶ ಮತ್ತು ರಾಜ್ಯದ ಜನರ ಬದುಕನ್ನು ಹಸನಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಗಳಡಿ ಲಕ್ಷಾಂತರ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಯೋಜನೆಗಳ ಸೌಲಭ್ಯಗಳು ಹಲವರ ಬದುಕನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತೋಟಗಾರಿಕ ಸಚಿವರಾದ ಮುನಿರತ್ನ ಅವರು ತಿಳಿಸಿದರು.
ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಛೇರಿಯ ಸಮೀಪದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ್ರು. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದ ಎಲ್ಲಾ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿರುವುದನ್ನು ಖಾತ್ರಿ ಪಡಿಸಲು ಈ ಸಮಾವೇಶವನ್ನು ಆಯೋಜಿಸಲಾಗಿದೆ.
ಸರ್ಕಾರದ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಫಲಾನುಭವಿಗಳೊಡನೆ ಸಮಾಲೋಚಿಸಿ ಜನ ಹಿತ ಚಿಂತನೆಗಳ ಜಾರಿಗೆ ಮತ್ತಷ್ಟು ಯೋಜನೆಗಳನ್ನು ರೂಪಿಸಬೇಕು ಎಂಬ ಆಶಯವನ್ನು ಹೊತ್ತುಕೊಂಡು ನಿಮ್ಮ ಮುಂದೆ ಬಂದಿದ್ದೇವೆ. ಇದು ನಮ್ಮ ಸಾಧನೆಯ ಪ್ರದರ್ಶನವಲ್ಲ ಬದಲಿಗೆ ನಾಡಿನ ಜನತೆಗೆ ನಮ್ಮ ನಿಜವಾದ ಕಳಕಳಿಯಿಂದ ರೂಪಿತವಾದ ಯೋಜನೆಗಳು ಜನರನ್ನು ತಲುಪಿರುವುದನ್ನು ಖಾತ್ರಿ ಪಡಿಸಿಕೊಳ್ಳವುದೆ ಉದ್ದೇಶ ಎಂದು ಹೇಳಿದರು.
ಸಾಮಾಜಿಕ ನ್ಯಾಯ, ಸಮಾನ ಅಭಿವೃದ್ಧಿ, ಬಡವರ ಬಗೆಗೆ ಇರುವ ನೈಜ ಕಾಳಜಿಯಿಂದಾಗಿ ರೂಪಿತಗೊಂಡ ನಮ್ಮ ಅವಿರತ ಪ್ರಯತ್ನಗಳನ್ನು ನಾಡಿಗೆ ಪರಿಚಯಿಸುವ ಸಣ್ಣ ಪ್ರಯತ್ನ ಎಂದರು.