ಪ್ರಯಾಗರಾಜ್: ಏಪ್ರಿಲ್ 15ರಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ (Atiq Ahmed) ಮತ್ತು ಆತನ ಸಹೋದರ ಅಶ್ರಫ್ ಹತ್ಯೆಗೆ ಸಂಬಂಧಿಸಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅಮಾನತುಗೊಂಡವರಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಅಶ್ವನಿ ಕುಮಾರ್ ಸಿಂಗ್, ಇಬ್ಬರು ಇನ್ಸ್ಪೆಕ್ಟರ್ಗಳು ಮತ್ತು ಇಬ್ಬರು ಕಾನ್ಸ್ಟೆಬಲ್ಗಳು ಎಂದು ಹೇಳಲಾಗಿದೆ. ಐವರು ಅಧಿಕಾರಿಗಳನ್ನು ಶಹಗಂಜ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದತ್ತು. ಅಹ್ಮದ್ ಮತ್ತು ಆತನ ಸಹೋದರನನ್ನು ಹತ್ಯೆಗೈದ ಸ್ಥಳ ವೈದ್ಯಕೀಯ ಕಾಲೇಜು ಶಹಗಂಜ್ ಪೊಲೀಸ್ ವ್ಯಾಪ್ತಿಗೆ ಬರುತ್ತದೆ.
ಗ್ಯಾಂಗ್ಸ್ಟರ್ ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹತ್ಯೆ ಮಾಡಿದವರು ಲವ್ಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಎಂದು ಪೊಲೀಸರು ಗುರುತಿಸಲಾಗುತ್ತು. ಪ್ರಯಾಗ್ರಾಜ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅತಿಕ್ ಅಹ್ಮದ್ ಬಳಿಗೆ ಪತ್ರಕರ್ತರಂತೆ ಬಂದು ಅಹ್ಮದ್ ಮತ್ತು ಆತನ ಸಹೋದರನ ಮೇಲೆ ಗುಂಡು ಹಾರಿಸಿದ್ದಾರೆ.ಇಂದು ಮುಂಜಾನೆ, ಪ್ರಯಾಗ್ರಾಜ್ ನ್ಯಾಯಾಲಯವು ಹಂತಕರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಮೂವರನ್ನು ಏಪ್ರಿಲ್ 23 ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಹೇಳಿದೆ. ವಿಶೇಷ ತನಿಖಾ ತಂಡವು ಮೂವರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದೆ.