ತಂದೆ ಮಗ ಸೇರಿ ಸೊಸೆಯನ್ನ ಮಚ್ಚು ಬೀಸಿ ಕೊಂದು ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹಾಲುಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದ್ದಿದ್ದ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಮಚ್ಚಿನಿಂದ ಹಲ್ಲೆಗೊಳಗಾದ ಮಹಿಳೆ ಈರಮ್ಮ(40) ಮಚ್ಚಿನಿಂದ ಮನ ಇಚ್ಚೆ ಹಲ್ಲೆ ಮಾಡಿದ ಈರಮ್ಮ ನ ಪತಿಯ ಅಣ್ಣ ಚಂದ್ರಪ್ಪ,ಹಾಗು ಚಂದ್ರಪ್ಪನ ಪುತ್ರ ಗಂಗಪ್ಪ ಎಂದು ತಿಳಿದುಬಂದಿದೆ.ಈರಮ್ಮ ನನ್ನು ಹಾಲುಗೊಂಡನಹಳ್ಳಿ ಯಿಂದ ಸೂರನಹಳ್ಳಿ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು.
ಈರಮ್ಮ ಪತಿ ಕಾರಣಾತರದಿಂದ ಸಾವನ್ನಪಿದ್ದು ತನ್ನ ಪತಿಯ 10 ಎಕರೆ ಜಮೀನಿಗಾಗಿ ಹೋರಾಟ ಮಾಡುತ್ತಿದ್ದ . ಜಮೀನು ವಿಚಾರ ಕುರಿತು ಗುರುವಾರ ತೀರ್ಪು ಹೊರಬೀಳಲಿತ್ತು, ಅಷ್ಟರಲ್ಲಿ ಇಂದು ಬೆಳಗ್ಗೆ ಚಂದ್ರಣ್ಣ ಹಾಗೂ ಚಂದ್ರಣ್ಣನ ಮಗ ಗಂಗಾಧರ್ ಸೂರನಹಳ್ಳಿಯಿಂದ ಹಾಲುಗೊಂಡನಹಳ್ಳಿ ಗೆ ಬಂದು ಈರಮ್ಮನನ್ನು ಮನೆಯಲ್ಲಿದ್ದ ಈರಮ್ಮನ್ನ ಹೊರಗೆ ಕರೆದು ಕೊಲು ಮಚ್ಚಿನಿಂದ ಅಲ್ಲೇ ಮಾಡಿ ಕೊಲೆ ಮಾಡಿದ್ದಾರೆ.
ಹಲ್ಲೆ ಮಾಡಿ ಮಚ್ಚಿಹಿದು ಓಡಾಡುತ್ತಿದ್ದವರನ್ನ ಗ್ರಾಮಸ್ಥರು ಹಿಡಿದು ಮರಕ್ಕೆ ಕಟ್ಟಿಹಾಕಿದ್ದಾರೆ.ಈರಮ್ಮ ನನ್ನು ಹಲ್ಲೆ ಮಾಡುವಾಗ ಅಡ್ಡ ಬಂದ ಈರಮ್ಮ ಸಹೋದರಿ ಮಮತ ಅಡ್ಡ ಬಂದಾಗ ಅವರ ಕೈಗೆ ಮಚ್ಚಿನಿಂದ ಹಲ್ಲೆಯಾಗಿದೆ ಮಮತ ಹಾಗೂ ಈರಮ್ಮ ತಾಯಿ ಇಬ್ಬರನ್ನ ಚಳ್ಳಕೆರೆ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ,ಎಎಸ್ಪಿ ಜೆ.ಕುಮಾರಸ್ವಾಮಿ,ಚಳ್ಳಕೆರೆ ಡಿವೈಎಸ್ಪಿ ಟಿ.ಬಿ.ರಾಜಣ್ಣ ,ಪಿಐ ಆರ್.ಎಫ್ ದೇಸಾಯಿ ಪಿಆರ್ ಪುರ ಪಿಎಸ್ ಬಸವರಾಜ್ ಭೇಟಿ ನೀಡಿ ಸ್ಥಳ ಮಹಜರ್ ಮಾಡಿದ್ದಾರೆ. ಪರಶುರಾಮಪುರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ.