ದೊಡ್ಡಬಳ್ಳಾಪುರ: ಬೆಳೆ ಸಮೀಕ್ಷೆ ಮಾಡಲು ಹೋದ ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದ ಖಾಸ್ ಬಾಗ್ ನ ಕೃಷ್ಣಪ್ಪ ನವರ ಜಮೀನಿನಲ್ಲಿ ನಡೆದಿದೆ.
ಸಿದ್ದೇನಾಯಕನಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ರಾಜೇಂದ್ರ ಬಾಬು ಹಲ್ಲೆಗೊಳಗಾದ ಗ್ರಾಮಲೆಕ್ಕಾಧಿಕಾರಿಯಾಗಿದ್ದು, ಬೆಳೆ ಸಮೀಕ್ಷೆ ನಡೆಸಲು ಮೊಬೈಲ್ ನಲ್ಲಿ ಪೋಟೋ ತೆಗೆಯುತ್ತಿದ್ದ ವೇಳೆ ಗ್ರಾಮಲೆಕ್ಕಾಧಿಕಾರಿ ಮೇಲೆ ಜಮೀನಿನ ಮಾಲಿಕನ ಮಗ ವಂಸತ್ ಕುಮಾರ್ ನಿಂದ ಹಲ್ಲೆ ಮಾಡಲಾಗಿದೆ.
ತೆಂಗಿನ ಮೊಟ್ಟೆಯಿಂದ ಗ್ರಾಮಲೆಕ್ಕಾಧಿಕಾರಿ ತಲೆ ಕೈ ಎದೆ ಭಾಗಕ್ಕೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಕಂದಾಯ ಇಲಾಖೆ ಆದೇಶದಂತೆ ಪ್ರತಿ ಜಮೀನಿನ ಬೆಳೆ ಸಮೀಕ್ಷೆ ನಡೆಸಲು ಮೊಬೈಲ್ ಮೂಲಕ ಸ್ಥಳಕ್ಕೆ ಹೋಗಿ ಪೋಟೋ ಅಪ್ ಲೋಡ್ ಮಾಡಬೇಕು. ಆದ್ದರಿಂದ ಪೋಟೋ ತೆಗೆಯುವ ಸಂದರ್ಭದಲ್ಲಿ ಈ ವೇಳೆ ಪೋಟೊ ತೆಗೆದಿದ್ದು ಯಾಕೆ ಎಂದು ಏಕಾಏಕಿ ಹಲ್ಲೆ ಮಾಡಿದ್ದಾನೆ. ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಆರೋಪಿ ವಸಂತ್ ನನ್ನ ಬಂಧಿಸಿದ್ದು, ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲು ಮಾಡಲಾಗಿದೆ.