ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ರೌಡಿಗಳ ಅಟ್ಟಹಾಸಕ್ಕೆ ಸ್ಕೆಚ್ ಹಾಕೋ ಅಡ್ಡೆಯಾಗಿದೆಯಾ…ದರ್ಶನ್ ರಾಜಾತಿಥ್ಯ ಪ್ರಕರಣದಲ್ಲಿ ಸಾಲು ಸಾಲಾಗಿ ಅಧಿಕಾರಿಗಳು ಸಸ್ಪೆಂಡ್ ಆದ್ರೂ ಪರಪ್ಪನ ಅಗ್ರಹಾರದಲ್ಲಿ ಮೊಬೈಲ್ ಬಳಕೆಗೆ ಬ್ರೇಕ್ ಹಾಕುವಲ್ಲಿ ವಿಫಲರಾದ್ರಾ ಅನ್ನೋ ಪ್ರಶ್ನೆ ಕೇಳಿಬರ್ತಿದೆ.
ಸದ್ಯ ಪರಪ್ಪನ ಅಗ್ರಹಾರ ಮತ್ತೆ ಸುದ್ದಿಯಾಕ್ತಿರೋದ್ಯಾಕೆ…? ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ರೌಡಿಗಳ ಮೊಬೈಲ್ ಆಕ್ಟಿವ್ ಆಗಿದೆಯಾ…? ಹೌದೇ ಎನ್ನುವಂತ ಪ್ರಶ್ನೆ ಮೂಡಿಸಿರುವುದು ಸಿಸಿಬಿ ಯಲ್ಲಿ ದಾಖಲಾಗಿರುವ ಈ ಎಫ್ಐಆರ್…
ಯೆಸ್…ನಟ ದರ್ಶನ್ ರಾಜಾತಿಥ್ಯ ಕೇಸ್ ಬಳಿಕವೂ ಜೈಲ್ಲಿನಲ್ಲಿ ಮೊಬೈಲ್ ಹಾವಳಿ ಕಡಿವಾಣ ಬಿದ್ದಿಲ್ಲ. ಜೈಲ್ಲಿನಿಂದಲ್ಲೇ ಇನ್ ಸ್ಟಾ ಗ್ರಾಂ ಮೂಲಕ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. 2021 ರಲ್ಲಿ ರಾಜಧಾನಿಯನ್ನ ಬೆಚ್ಚಿ ಬೀಳಿಸಿದ್ದ ಜೋಸೆಫ್ ಅಲಿಯಾಸ್ ಬಬ್ಲಿ ಕೊಲೆ ಪ್ರಕರಣದ ಸಾಕ್ಷಿ ಗಳಿಗೆ ಇನ್ ಸ್ಟಾ ಗ್ರಾಂ ಮೂಲಕ ವಾಯ್ಸ್ ಮೇಸೆಜ್ ಮಾಡಿ ಬೆದರಿಕೆವೊಡ್ಡಿದ್ದಾರೆ.
ಜೈಲ್ಲಿನಲ್ಲಿರುವ ಕೈದಿ ಸೋಮಶೇಖರ್ ಅಲಿಯಾಸ್ ಸೋಮ ಎಂಬಾತ ಆರ್ಮುಗಂ ಬೆದರಿಕೆ ವೊಡ್ಡಿದ್ದಾನೆ ಎನ್ನಲಾಗಿದೆ. ಪ್ರಕರಣದ ಸಾಕ್ಷ್ಯ ಆಟೋ ಚಾಲಕ ಆಮುರ್ಗಂ ಗೆ ಇನ್ಸ್ ಸ್ಟಾಗ್ರಾಂ ಮೂಲಕ ಬೆದರಿಕೆ ಹಾಕಲಾಗಿದೆ ಎನ್ನಲಾಗಿದ್ದು ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿದೆ. ಯೆಸ್.. ಬಬ್ಲಿ ಕೊಲೆ ಪ್ರಕರಣದಲ್ಲಿ ಐ ವಿಟ್ನಸ್ (ಪ್ರತ್ಯಕ್ಷ ಸಾಕ್ಷಿ) ಆಗಿರುವ ಆರ್ಮುಗಂ.
ಸೆಪ್ಟೆಂಬರ್ ನಲ್ಲಿ ಸೋಮ ಹೆಸರಿನ ಐಡಿಯಿಂದ ಮೂರು ವಾಯ್ಸ್ ಮೇಸೆಜ್ ಕಳುಹಿಸಿ. ‘ಜೋಸೆಫ್ ಬಾಬು ಅಲಿಯಾಸ್ ಬಬ್ಲಿ ಕೊಲೆ ಕೇಸ್ ನಲ್ಲಿ ಯಾರೊಬ್ಬರು ಕೋರ್ಟ್ ನಲ್ಲಿ ಸಾಕ್ಷಿ ಹೇಳಬಾರದು ಎಂದು ಬೆದರಿಸಿದ್ದಾರೆ. ಬಬ್ಲಿ ಹೆಂಡತಿ, ಸುನೀಲ ಅಲಿಯಾಸ್ ಸೊಂಡಿಲಿ ಜಾರ್ಜ್, ನಾದನಿಗೂ ತಲುಪಿಸು ಎಂದು ಮೇಸೆಜ್ ಹಾಕಿದ್ದಾರೆ.
ಹೇಳಿದಂತೆ ಕೇಳದಿದ್ದರೆ ಎಲ್ಲರನ್ನೂ ಹೊಡೆದು ಹಾಕುತ್ತೇವೆ,ಮಿಲ್ಟ್ರಿ ಸತೀಶನ ಹತ್ಯೆ ವಿಚಾರ ಪ್ರಸ್ತಾಪಿಸಿ,ವಿವೇಕನಗರದಲಿ ನಡೆದ ರೌಡಿ ಮಿಲ್ಟ್ರಿ ಸತೀಶ್ ಹತ್ಯೆ ಬಗ್ಗೆಯೂ ಮಾತನಾಡಿದ್ದು,ಮಿಲ್ಟ್ರಿ ಸತೀಶನನ್ನು ಹೊಡೆಸಿದ್ದೇವೆ ಆಟೋ ಓಡಿಸುವ ನಿನ್ನನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. 2021 ರ ಜುಲೈ 19 ಕೋರಮಂಗಲ ಎಂಟನೇ ಬ್ಲಾಕ್ ಬ್ಯಾಂಕ್ ನಲ್ಲಿ ನಡೆದಿದ್ದ ಜೋಸೆಫ್ ಅಲಿಯಾಸ್ ಬಬ್ಲಿ ಭೀಕರ ಕೊಲೆ ನಡೆದಿತ್ತು.
ಬಬ್ಲಿ ಪತ್ನಿ ಎದುರೇ ಹಳೇ ವೈಷಮ್ಯದ ಹಿನ್ನಲೆ ರೌಡಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಮನಸೋಇಚ್ಚೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಯಾವುದೇ ಗಂಭೀರ ಪರಪ್ಪನ ಜೈಲಿನಿಂದಲೇ ಧಮ್ಕಿ ಹಾಕಿರುವ ಬಗ್ಗೆ ಆರ್ಮುಗಂ ನಿಂದ ಸಿಸಿಬಿಗೆ ದೂರು ನೀಡಿದ್ದು,ಪ್ರಕರಣ ಗಂಭೀರ ವಾಗಿ ತಗೋಡಿರುವ ಸಿಸಿಬಿ ಅಧಿಕಾರಿಗಳು ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.