PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಕರ್ನಾಟಕಕ್ಕೆ ನೀರು ಬಿಡಿ: ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

June 1, 2023

ಉಚಿತ ವಿದ್ಯುತ್ ಬಗ್ಗೆ ಕೆ.ಜೆ.ಜಾರ್ಜ್​ ಜೊತೆ ಸಿಎಂ ಸಮಾಲೋಚನೆ

June 1, 2023

DKS Meet BSY: ಬಿ.ಎಸ್.ಯಡಿಯೂರಪ್ಪರನ್ನ ಭೇಟಿ ಮಾಡಿದ ಡಿಕೆಶಿ: ನೂತನ ಡಿಸಿಎಂಗೆ ಶುಭಕೋರಿದ ಮಾಜಿ ಸಿಎಂ

June 1, 2023
Facebook Twitter Instagram
Thursday, June 1
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » Rape attempt: ಮನೆ ಮುಂದೆ ನಿಂತಿದ್ದ ವಿವಾಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಗಳಿಗಾಗಿ ಶೋಧ
ಜಿಲ್ಲೆ Prajatv KannadaBy Prajatv KannadaMarch 22, 2023

Rape attempt: ಮನೆ ಮುಂದೆ ನಿಂತಿದ್ದ ವಿವಾಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಗಳಿಗಾಗಿ ಶೋಧ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಮಡಿಕೇರಿ: ವಿವಾಹಿತೆಯ ಮೇಲೆ ತಡರಾತ್ರಿ ಅತ್ಯಾಚಾರಕ್ಕೆ (Rape) ಯತ್ನಿಸಿರುವ ಘಟನೆ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ (Somwarpet) ತಾಲೂಕಿನ ಬಿಳಿಗೆರೆ (Biligere)  ಗ್ರಾಮದಲ್ಲಿ ನಡೆದಿದೆ.

19 ವರ್ಷದ ವಿವಾಹಿತೆ ರಾತ್ರಿ 9:30ರ ವೇಳೆಗೆ ಮನೆ ಮುಂಭಾಗದಲ್ಲಿ ಪೋನ್‌ನಲ್ಲಿ (Phone) ಮಾತಾನಾಡುತ್ತಿದ್ದಳು. ಈ ಸಂದರ್ಭ ಆಟೋದಲ್ಲಿ (Auto Rickshaw) ಬಂದಿಳಿದ ಮೂವರು ಯುವಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ

ನಂದಿಮೊಟ್ಟೆಯ ರಾಜ, ಹಟ್ಟಿಹೊಳೆಯ ನೌಶದ್, ಇಗ್ಗೋಡ್ಲಿನ ಫಾರೂಕ್ ಎಂಬವರು ಈ ಪ್ರಕರಣದ ಪ್ರಮುಖ ಆರೋಪಿಗಳು. ಬಲತ್ಕಾರವಾಗಿ ಯುವತಿಯನ್ನು ಕಾಫಿತೋಟದೊಳಗೆ ಎಳೆದೊಯ್ಯುತ್ತಿದ್ದ ಸಂದರ್ಭ ಯುವತಿ ಜೋರಾಗಿ ಕಿರುಚಲಾರಂಭಿಸಿದಳು. ಇದನ್ನು ಗಮನಿಸಿದ ಯುವತಿಯ ಸಂಬಂಧಿಕರು ಭಯಭೀತರಾಗಿ ಕೂಡಲೇ ಸ್ಥಳೀಯರಿಗೆ ಹಾಗೂ ಹಿಂದೂ ಜಾಗರಣ ವೇದಿಕೆಯ (Hindu Jagarana Vedike) ಪ್ರಮುಖರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕ್ಷಣಾರ್ಧದಲ್ಲಿ ಘಟನಾ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಓರ್ವ ಆರೋಪಿಯಾದ ರಾಜ ಹಾಗೂ ದುಷ್ಕೃತ್ಯಕ್ಕೆ ಬಳಸಿದ್ದ ಎರಡು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ. ಈ ದುಷ್ಕೃತ್ಯದಲ್ಲಿ ತೊಡಗಿದ್ದ ಇನ್ನಿಬ್ಬರು ಆರೋಪಿಗಳಾದ ನೌಶದ್ ಹಾಗೂ ಫಾರೂಕ್ ಪರಾರಿಯಾಗಿದ್ದಾರೆ.

ಫಾರೂಕ್ ಮಾದಾಪುರದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ. ದುಷ್ಕೃತ್ಯಕ್ಕೆ ಬಳಸಿರುವ 2 ಆಟೋರಿಕ್ಷಾಗಳು ನೌಶದ್ ಹಾಗೂ ರಶೀದ್ ಎಂಬವರಿಗೆ ಸೇರಿದ್ದಾಗಿದೆ. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಓರ್ವ ಆರೋಪಿ ಹಾಗೂ ಎರಡು ಆಟೋರಿಕ್ಷಾಗಳನ್ನು ಸೋಮವಾರಪೇಟೆ ಪೋಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಹೊರದೇಶಗಳಿಗೆ ಪಲಾಯನವಾಗುವ ಸಾಧ್ಯತೆಯಿರುವುದರಿಂದ ದುಷ್ಕೃತ್ಯ ನಡೆಸಿದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಅನ್ಯಾಯಕ್ಕೊಳಗಾದ ಯುವತಿ ಹಾಗೂ ಅವರ ಕುಟುಂಬ ವರ್ಗಕ್ಕೆ ನ್ಯಾಯ ದೊರಕಿಸಲು ಸಂಘಟನೆಯ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಘಟನೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

Share. Facebook Twitter WhatsApp Pinterest LinkedIn Tumblr Telegram Email

Related Posts

ಬೆಂಗಳೂರಲ್ಲಿ ಫ್ರೀ ಕೋರ್ಸ್ ಹೆಸರಲ್ಲಿ ವಂಚನೆ ಎಸಗುತ್ತಿದ್ದ ಆರೋಪಿ ಅರೆಸ್ಟ್

June 1, 2023

ಚಾಮರಾಜನಗರ ಜಿಲ್ಲೆಯಲ್ಲಿ ಜೆಟ್ ವಿಮಾನ ಪತನ: ಪೈಲಟ್ ಗಳಿಬ್ಬರು ಪಾರು

June 1, 2023

ಉಚಿತ ಬಸ್ ಪ್ರಯಾಣ ಹಿನ್ನೆಲೆ: ಟಿಕೆಟ್ ಪಡೆಯಲು ಮಹಿಳೆಯರ ನಿರಾಕರಣೆ

June 1, 2023

ಕಾಡು ಪ್ರಾಣಿಗಳಿಗೆ ನೀರಿನ ದಾಹ ತಣಿಸುವ ಕಾರ್ಯಕ್ಕೆ‌ ಮುಂದಾದ ಯುವಪಡೆ

June 1, 2023

ನಾನು ಯಾರ ಮೇಲೂ ದೂಷಣೆ ಮಾಡುವುದಿಲ್ಲ: ಶಾಸಕ ಕೊತ್ತೂರು ಮಂಜುನಾಥ್

June 1, 2023

ಪ್ರತಿಭಾವಂತ ಮಕ್ಕಳನ್ನು ಪ್ರತ್ಯೇಕ ಹಾಸ್ಟೆಲ್’ನಲ್ಲಿ ಇರಿಸಲಾಗುವುದು: ಶಾಸಕ ಪ್ರದೀಪ್ ಈಶ್ವರ್

June 1, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.