ಬೆಂಗಳೂರು:-: ವೈಟ್ ಟಾಪಿಂಗ್ ಕಾಮಗಾರಿ ನಗರದ ಕೆಲವು ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಬಿಟಿಎಂ ಲೇಔಟ್ 29ನೇ ಮುಖ್ಯ ಜಂಕ್ಷನ್ನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹಾಗೇ ಪರ್ಯಾಯ ಮಾರ್ಗವನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬನ್ನೇರುಘಟ್ಟ ಮುಖ್ಯ ರಸ್ತೆಯ, ಜಯದೇವಾ ಜಂಕ್ಷನ್ನಲ್ಲಿ ಔಟರ್ ರಿಂಗ್ ರಸ್ತೆಯ ಸಿಲ್ಕ್ ಬೋರ್ಡ ಜಂಕ್ಷನ್ನಿಂದ ಬರುವ ವಾಹನಗಳು ಮುಕ್ತ ಎಡ ತಿರುವು ಪಡೆಯಲು ಅವಕಾಶ ನೀಡಲಾಗಿದೆ. ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್ನಿಂದ ಜಯದೇವ ಜಂಕ್ಷನ್ ಕಡೆಗೆ ಬರುವ ವಾಹನಗಳು ರಿಂಗ್ ರಸ್ತೆಯನ್ನು ತಲುಪಲು ಜಯದೇವ ಜಂಕ್ಷನ್ನ ಸರ್ವಿಸ್ ರಸ್ತೆಯ ಮುಖಾಂತರ ಚಲಿಸಿ ಮುಕ್ತ ಎಡ ತಿರುವು ಪಡೆದು ಬನಶಂಕರಿ ಕಡೆಗೆ ಚಲಿಸಬಹುದಾಗಿದೆ.
ಸಂಚಾರ ನಿರ್ಬಂಧ
ಔಟರ್ ರಿಂಗ್ ರಸ್ತೆಯಲ್ಲಿ ಬಿಟಿಎಂ 29ನೇ ಮೇನ್ ಜಂಕ್ಷನ್ ನಿಂದ ಬನ್ನೇರುಘಟ್ಟ ಮುಖ್ಯ ರಸ್ತೆಯ ರೂಬಿ-2 ಜಂಕ್ಷನ್ವರೆಗೆ.
ಬನ್ನೇರುಘಟ್ಟ ರಸ್ತೆಯ ಜಯದೇವ ಜಂಕ್ಷನ್ನಲ್ಲಿ ರಿಂಗ್ ರಸ್ತೆಯಲ್ಲಿ ಬರುವ ವಾಹನಗಳಿಗೆ ಮುಕ್ತ ಎಡ ತಿರುವು ಕಲಿಸಲಾಗಿದ್ದು ಸಾಯಿರಾಂ ಜಂಕ್ಷನ್ನಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರಸ್ತುತ ಸಾಯಿರಾಂ ಜಂಕ್ಷನ್ನಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯ ರಸ್ತೆ ವಿಭಜಕವನ್ನು ಮುಚ್ಚಲಾಗಿದೆ
ಪರ್ಯಾಯ ಮಾರ್ಗ’:-
ಔಟರ್ ರಿಂಗ್ ರಸ್ತೆಯ ಸಿಲ್ಕ್ ಬೋರ್ಡ ಜಂಕ್ಷನ್ನಿಂದ ಜಯದೇವಾ ಜಂಕ್ಷನ್ ಕಡೆಗೆ ಚಲಿಸುವ ವಾಹನಗಳು 29ನೇ ಮುಖ್ಯ ರಸ್ತೆ ಔಟರ್ ರಿಂಗ್ ರಸ್ತೆ ಜಂಕ್ಷನ್ನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಯುಕ್ತ ಮುಚ್ಚಲಾಗಿರುವ ರಸ್ತೆಗೆ ಪರ್ಯಾಯವಾಗಿ ಬಿಟಿಎಂ 16ಮೇನ್ ಜಂಕ್ಷನ್ ಮುಖಾಂತರವಾಗಿ ನೇರವಾಗಿ ಚಲಿಸಿ ಜಯದೇವಾ ಜಂಕ್ಷನ್ ತಲುಪಿ ಮುಕ್ತ ಎಡ ತಿರುವು ಪಡೆದು ಬನ್ನೇರುಘಟ್ಟ ಮುಖ್ಯ ರಸ್ತೆಯನ್ನು ತಲುಪಬಹುದಾಗಿದೆ.
ಬನ್ನೇರುಘಟ್ಟ ಮುಖ್ಯ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್ನಿಂದ ಜಯದೇವಾ ಜಂಕ್ಷನ್ ಕಡೆಗೆ ಚಲಿಸುವ ವಾಹನಗಳು ಸಾಯಿರಾಂ ಜಂಕ್ಷನ್ನಲ್ಲಿ ಜಯದೇವಾ ಫ್ಲೈ ಔವರ್ನ ಸರ್ವಿಸ್ ರಸ್ತೆಯಲ್ಲಿ ಚಲಿಸಿ ಔಟರ್ ರಿಂಗ್ ರಸ್ತೆಯನ್ನು ತಲುಪಬಹುದಾಗಿದೆ.,
ಬನ್ನೇರುಘಟ್ಟ ಮುಖ್ಯ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್ನಿಂದ ಜಯದೇವಾ ಜಂಕ್ಷನ್ ಕಡೆಗೆ ಚಲಿಸುವ ವಾಹನಗಳು ಸಾಯಿರಾಂ ಜಂಕ್ಷನ್ನಲ್ಲಿ ಜಯದೇವಾ ಫ್ಲೈ ಔವರ್ನ ಸರ್ವಿಸ್ ರಸ್ತೆಯಲ್ಲಿ ಚಲಿಸಿ ಔಟರ್ ರಿಂಗ್ ರಸ್ತೆಯನ್ನು ತಲುಪಬಹುದಾಗಿದೆ.