ಬೆಂಗಳೂರು:- ಯುಗಾದಿ ಹಬ್ಬಕ್ಕೆ ಎಂದು ಮಾಂಸ ಚೀಟಿ ಹಾಕಿದವರಿಗೆ ರಾತ್ರಿ ಶಾಕ್ ನೀಡಲಾಗಿದೆ. ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಸಾಮಗ್ರಿ, ಮಾಂಸಕ್ಕಾಗಿ ಚೀಟಿ ಹಾಕಿದ್ದ ಸಾವಿರಾರು ಜನ ಈಗ ಮೋಸ ಹೋಗಿದ್ದಾರೆ.
ಹೌದು, ಯುಗಾದಿ ಹಬ್ಬದ ಚೀಟಿ ಮಾಡುತ್ತಿದ್ದ ಪುಟ್ಟಸ್ವಾಮಿ ಎಂಬಾತ ಎಲ್ಲರಿಗೂ ಮೋಸ ಮಾಡಿ ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದು, ಈ ಸಂಬಂಧ ಬ್ಯಾಟರರಾಯನಪುರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಒಬ್ಬೊಬ್ಬರ ಬಳಿ 4 ರಿಂದ 5 ಸಾವಿರ ಹಣ ಪಡೆದು ಮೋಸ ಮಾಡಿದ್ದು, ಬೆಂಗಳೂರಿನ ಗಿರಿನಗರದಲ್ಲಿ ಈ ಘಟನೆ ನಡೆದಿದೆ
ಪುಟ್ಟಸ್ವಾಮಿ ಓಡಿ ಹೋಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಮೋಸ ಹೋದವರೆಲ್ಲ ಆತನ ಮನೆ ಮುಂದೆ ಜಮಾಯಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಪುಟ್ಟಸ್ವಾಮಿ ಯುಗಾದಿ ಚೀಟಿ ನಡೆಸುತ್ತಿದ್ದ. ಈ ಬಾರಿ ಚೀಟಿ ಸಂಖ್ಯೆನ್ನೂ ಹೆಚ್ಚಿಸಿಕೊಂಡು ಕೋಟ್ಯಾಂತರ ರೂಪಾಯಿ ಗುಳುಂ ಮಾಡಿದ್ದಾನೆ. ಯುಗಾದಿ ಹತ್ತಿರ ಬಂದಿದ್ದೆ ಪುಟ್ಟಸ್ವಾಮಿ ಎಸ್ಕೇಪ್ ಆಗಿದ್ದು, ಹಬ್ಬಕ್ಕೆ ದುಡ್ಡು ಒಂದೇ ಬಾರಿಗೆ ಹೊಂದಿಸೋಕೆ ಆಗಲ್ಲ ಅಂತ ಚೀಟಿ ಹಾಕಿದ್ದ ಜನರಿಗೆ ಈಗ ದಿಕ್ಕೇ ತೋಚದಂತೆ ಆಗಿದೆ.