ಒಡಿಐ ವಿಶ್ವಕಪ್ ಟೂರ್ನಿಗೂ ಮುನ್ನವೇ ಸ್ಫೋಟಕ ಲಯ ಕಂಡುಕೊಂಡಿರುವ ಆಸ್ಟ್ರೇಲಿಯಾದ ಸಿಡಿಲಬ್ಬರದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ , ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ 20ನೇ ಒಡಿಐ ಶತಕ ಸಿಡಿಸಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಮಹತ್ತರ ದಾಖಲೆ ಮುರಿದು ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಬ್ಯಾಟರ್ ಆಗಿ ಸ್ಫೋಟಕ ಇನಿಂಗ್ಸ್ ಕಟ್ಟಿರುವ ವಾರ್ನರ್ 343 ಪಂದ್ಯಗಳಿಂದ 46ನೇ ಶತಕ ಸಿಡಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ 346ನೇ ಪಂದ್ಯಗಳಿಂದ ಆರಂಭಿಕ ಬ್ಯಾಟರ್ ರೂಪದಲ್ಲಿ 45 ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು. ಈಗ ಆ ದಾಖಲೆಯನ್ನು ಡೇವಿಡ್ ವಾರ್ನರ್ ಮುರಿದಿದ್ದಾರೆ.
46ನೇ ಶತಕ ಸಿಡಿಸಿದ ವಾರ್ನರ್
ಆಸ್ಟ್ರೇಲಿಯಾ ಪರ ದಶಕಕ್ಕಿಂತಲೂ ಹೆಚ್ಚು ವರ್ಷಗಳಿಂದ ಆರಂಭಿಕ ಆಟಗಾರರಾಗಿ ಬ್ಯಾಟ್ ಮಾಡುತ್ತಿರುವ ಡೇವಿಡ್ ವಾರ್ನರ್ , ಎಲ್ಲ ಮಾದರಿ ಕ್ರಿಕೆಟ್ ನಲ್ಲೂ ಶತಕದ ಸಂಭ್ರಮ ಕಂಡಿದ್ದಾರೆ. ಏಕದಿನ ಸ್ವರೂಪದಲ್ಲಿ 20 ಶತಕ ಸಿಡಿಸಿದ್ದರೆ, ಟೆಸ್ಟ್ ಪಂದ್ಯದಲ್ಲಿ 25 ಹಾಗೂ ಟಿ20 ಸ್ವರೂಪದಲ್ಲಿ 1 ಸೆಂಚುರಿ ಬಾರಿಸಿದ್ದಾರೆ.