ಬಾಗಲಕೋಟೆ : ಕೃಷ್ಣಾ ನದಿಯಲ್ಲಿ ನೀರು ವಿರಳವಾಗುತ್ತಿದ್ದಂತೆ ಬೃಹತ್ ಮೊಸಳೆ ಪ್ರತ್ಯಕ್ಷವಾಗಿವೆ, ಬಾಗಲಕೋಟೆ ಜಿಲ್ಲೆಯ ಗಲಗಲಿ ಸಮೀಪದ ರಬಕವಿಯಲ್ಲಿ ಮೊಸಳೆ ಪ್ರತ್ಯಕ್ಷಗೊಂಡಿದೆ. ಗ್ರಾಮದ ಸುರೇಶ ಗುಮ್ಮಡಿ ಎಂಬುವವರ ಹೊಲದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಮೊಸಳೆಯನ್ನ ನದಿಗೆ ಬಿಟ್ಟಿದ್ದಾರೆ. https://youtu.be/5f42XyMZyb8?si=paNX71FAqaZ_L1Uv ದಿನೇ ದಿನೇ ಹೆಚ್ಚಿದ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು, ನದಿಯಿಂದ ಬೃಹದಾಕಾರದ ಮೊಸಳೆಗಳು ನದಿಯಿಂದ ಹೊರ ಬರುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರ ಆತಂಕ ಹೆಚ್ಚಿಸಿದೆ. ನದಿ ತೀರದ ಹೊಲಗದ್ದೆಗಳ ರೈತರಿಗೆ ದಿನೇ ದಿನೇ ಆತಂಕ ಹೆಚ್ಚಾಗುತ್ತಿದ್ದು, ಮೊಸಳೆಗಳ ಬಗ್ಗೆ ಎಚ್ಚರಿಕೆಯಿಂದಿರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Author: Prajatv Kannada
ಬೆಂಗಳೂರು: ರಾಹುಲ್ ಗಾಂಧಿ ಭೇಟಿ ಬಳಿಕ ಇದೀಗ ಖರ್ಗೆ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡುವ ಸಾಧ್ಯತೆ ಇದೆ. ಜತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಅವರನ್ನೂ ಭೇಟಿ ಮಾಡಿ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ. https://youtu.be/iIT7ej3M0fE?si=PaCO3EYAKc0T2VMu ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಸಚಿವ ಕೆ.ಎನ್ ರಾಜಣ್ಣಗೆ ಹನಿಟ್ರ್ಯಾಪ್ ಯತ್ನ, ಖಾಲಿ ಇರುವ ವಿಧಾನಪರಿಷತ್ ಸ್ಥಾನಗಳಿಗೆ ನಾಮನಿರ್ದೇಶನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಹೈಕಮಾಂಡ್ ನಾಯಕರಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆಯಂತೆ. ಹೀಗಾಗಿ ಸಿದ್ದರಾಮಯ್ಯ- ರಾಹುಲ್ ಗಾಂಧಿ ಭೇಟಿ ಹಲವು ರಾಜಕೀಯ ಊಹಾಪೋಹಗಳಿಗೆ ರೆಕ್ಕೆಪುಕ್ಕ ಬಂದಿದೆ. ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಿನ್ನೆಯೇ ಕರ್ನಾಟಕ ಭವನ ಉದ್ಘಾಟನೆಗೆಂದು ದೆಹಲಿಗೆ ತೆರಳಿರುವ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕರ ಭೇಟಿ ಫಿಕ್ಸ್ ಆಗಿದೆ. ಕಳೆದವಾರ ಸಿಎಂ ಆರೋಗ್ಯ ವಿಚಾರಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೆಹಲಿಗೆ ಬನ್ನಿ ಮಾತನಾಡೋಣ…
ತೆಂಗಿನ ನೀರನ್ನು ಆಯುರ್ವೇದದಲ್ಲಿ ಅಮೃತ ಎಂದು ಕರೆಯಲಾಗುತ್ತದೆ. ಆದರೆ ಈ ಅಮೃತವನ್ನು ಹೇಗೆ ಸೇವಿಸಬೇಕು ಎಂಬದು ನಿಮಗೆ ಗೊತ್ತಿರಬೇಕು. ಕೆಲವರು ಖಾಲಿ ಹೊಟ್ಟೆಯಲ್ಲಿ ಕುಡಿಯಲು ಹೇಳುತ್ತಾರೆ, ಕೆಲವರು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಡಿ ಎಂದು ಹೇಳುವವರೂ ಇದ್ದಾರೆ. ಈ ಬಗ್ಗೆ ಖ್ಯಾತ ಆಹಾರ ತಜ್ಞ ಡಾ.ಅಲ್ಕಾ ಕಾರ್ಣಿಕ್ ಮಾಹಿತಿ ಹಂಚಿಕೊಂಡಿದ್ದಾರೆ ಬೇಸಿಗೆಯಲ್ಲಿ ತೆಂಗಿನ ನೀರು ಕುಡಿಯುವುದು ಬೇರೆ ವಿಷಯ! ಆದರೆ ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲಿ ತೆಂಗಿನ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಎಂದು ತಜ್ಞರು ಹೇಳುತ್ತಾರೆ. ಬೆಳಗಿನ ಉಪಹಾರದ ನಂತರ, ಮಧ್ಯಾಹ್ನದ ಊಟದ ನಂತರ ಮತ್ತು ಸಂಜೆ ಲಘು ಉಪಹಾರದ ನಂತರ ನೀವು ತೆಂಗಿನ ಎಳನೀರನ್ನು ಕುಡಿಯಬಹುದು. ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನಮ್ಮ ಹಿರಿಯರು ಬಹಳ ಹಿಂದಿನ ಕಾಲದಿಂದಲೂ ಹೇಳುತ್ತಾ ಬಂದಿರುವುದನ್ನು ನಾವು ಕೇಳಿರುತ್ತೇವೆ. ಇದಕ್ಕೆ ಕಾರಣವೇನೆಂದರೆ ಅದರಲ್ಲಿರುವ ಅನೇಕ ಪೋಷಕಾಂಶಗಳು. ಇದನ್ನು ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಹಾಗಾಗಿ ದೇಹ…
ಗರ್ಭಕಂಠದ ಕ್ಯಾನ್ಸರ್ ಎಂಬುದು ಗರ್ಭಕಂಠದಲ್ಲಿ ಪ್ರಾರಂಭವಾಗುವ ಜೀವಕೋಶಗಳ ಬೆಳವಣಿಗೆಯಾಗಿದೆ. ಗರ್ಭಕಂಠವೆಂಬುದು ಗರ್ಭಾಶಯದ ಕೆಳಗಿನ ಭಾಗವಾಗಿದ್ದು ಅದು ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಹೆಚ್ಪಿವಿ ಎಂದು ಕರೆಯಲ್ಪಡುವ ಹ್ಯೂಮನ್ ಪ್ಯಾಪಿಲೋಮವೈರಸ್‌ನ ವಿವಿಧ ತಳಿಗಳು ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಉಂಟಾಗಲು ಮುಖ್ಯವಾದ ಪಾತ್ರ ವಹಿಸುತ್ತವೆ. ಈ HPV ಲೈಂಗಿಕ ಸಂಪರ್ಕದ ಮೂಲಕ ಹಾದುಹೋಗುವ ಸಾಮಾನ್ಯ ಸೋಂಕು. ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ: ಲೈಂಗಿಕವಾಗಿ ಸಕ್ರಿಯರಾಗಿರುವವರು ಕೆಲವೊಂದು ಲಕ್ಷಣಗಳು ಗೋಚರಿಸಿದರೆ ಆದಷ್ಟು ಬೇಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸಂಭೋಗದ ನಂತರ, ಪಿರಿಯಡ್ಸ್ ಮುಗಿದ ನಂತರ ಅಥವಾ ಋತುಬಂಧದ ನಂತರ ಯೋನಿಯಲ್ಲಿ ರಕ್ತಸ್ರಾವ ಉಂಟಾದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಮುಟ್ಟಿನ ಸಮಯದಲ್ಲಿ ವಿಪರೀತ ಮತ್ತು ದೀರ್ಘಕಾಲದವರೆಗೆ ರಕ್ತಸ್ರಾವ ಆಗುವುದು. ಯೋನಿಯಲ್ಲಿ ಕೆಟ್ಟ ವಾಸನೆ ಬರುವುದು, ಸಂಭೋಗದ ಸಮಯದಲ್ಲಿ ಬಹಳ ನೋವು ಉಂಟಾಗುವುದು ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳಾಗಿವೆ. ಗರ್ಭಕಂಠದ ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಮಹಿಳೆಯರ ಗರ್ಭಾಶಯದಲ್ಲಿರುವ ಗರ್ಭಕಂಠದ ಗರ್ಭಕೋಶದ ಗರ್ಭಾಶಯದ ಜೀವಕೋಶಗಳಲ್ಲಿ ವೇಗವಾಗಿ ಬೆಳೆಯಲು ಆರಂಭಿಸುತ್ತದೆ. ಗರ್ಭಕಂಠದ ಕ್ಯಾನ್ಸರ್‌ನ…
ಬ್ರಹ್ಮ ಮುಹೂರ್ತ – 4:36 ಬೆ. ದಿಂದ 5:24 ಬೆ. ವರೆಗೆ ಅಮೃತ ಕಾಲ – 9:28 ರಾ.ದಿಂದ 10:59 ರಾ. ವರೆಗೆ ಅಭಿಜಿತ್ ಮುಹುರ್ತ – 11:55 ಬೆ. ದಿಂದ 12:43 ಮ. ವರೆಗೆ ಮೇಷ ರಾಶಿ: ಗುರುಸ್ವಾಮಿ ಅನುಗ್ರಹದಿಂದ ಆದಾಯ ವೃದ್ಧಿ, ಸ್ಥಿರಾಸ್ತಿಯನ್ನು ಖರೀದಿಸುವ ಯೋಗವಿದೆ, ಸರ್ಕಾರಿ ಕೆಲಸ ಕಾರ್ಯಗಳು ನಿಧಾನವಾಗಿ ಯಶಸ್ಸು ಕಾಣುವುದು, ಉದ್ಯೋಗ ಪ್ರಯತ್ನಿಸಿದವರಿಗೆ ಉದ್ಯೋಗ ಭಾಗ್ಯ, ಶತ್ರುಗಳು ನಿಮಗೆ ಶರಣಾಗತಿಯಾಗುವವರು, ಹೈನುಗಾರಿಕೆಯಲ್ಲಿ ಭಾರಿ ಧನ ಲಾಭ ಗಳಿಸುವಿರಿ, ಸಂಗಾತಿಯಿಂದ ಧನಸಾಯ ಸಿಗಲಿದೆ, ಆಭರಣ ವ್ಯಾಪಾರಿಗಳಿಗೆ ಹೊಸ ಅಂಗಡಿ ಪ್ರಾರಂಭಿಸುವ ಚಿಂತನೆ, ಪಿತ್ರಾರ್ಜಿತ ಆಸ್ತಿ ನಿಧಾನಗತಿಯಿಂದ ಪಡೆಯಲಿದ್ದೀರಿ, ತಾಳ್ಮೆಯಿಂದ ಇರುವುದು ಉತ್ತಮ, ವೃತ್ತಿ ಕ್ಷೇತ್ರದಲ್ಲಿ ಧನ ಲಾಭವಿದೆ, ಗ್ರಾಹಕರೋಡನೆ ಸಂಘರ್ಷ ಬೇಡ, ಅವಿವಾಹಿತರಿಗೆ ಮದುವೆ ಯೋಗ, ರೈತರ ಮಕ್ಕಳಿಗೆ ಉತ್ತಮ ಕಡೆ ಮದುವೆ ಸಂಬಂಧ, ಟೆಕ್ನಿಷಿಯನ್ ವೃತ್ತಿ ಹೊಂದಿದವರಿಗೆ ಭಾರಿ ಬೇಡಿಕೆ ಹಾಗೂ ವಿದೇಶಕ್ಕೆ ಹೋಗುವ ಅವಕಾಶ ಕೂಡ ಸಿಗಲಿದೆ, ಆರೋಗ್ಯ ಇಲಾಖೆದಲ್ಲಿ ಸೇವೆ…
ಗ್ಲೋಬಲ್ ಸ್ಟಾರ್ ಶ್ರೀ ರಾಮ್ ಚರಣ್ ರವರ ಹುಟ್ಟುಹಬ್ಬದ ಸಂದರ್ಭವಾಗಿ ಕೋಟೆ ಶ್ರೀ ಜಲಕಂಠೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರಕ್ತದಾನ ಶಿಬಿರವನ್ನು ಮೆಗಾಸ್ಟಾರ್ ಚಿರಂಜೀವಿ ರವರ ಅಭಿಮಾನಿಗಳು ಹಾಗೂ ರಾಮ್ ಚರಣ್ ಯುವಶಕ್ತಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು ಹಾಗೆ ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜ್ ಕುಮಾರ್ ರವರ ನಿವಾಸದಲ್ಲಿ ರಾಮ್ ಚರಣ್ ಹುಟ್ಟು ಹಬ್ಬದ ಕೇಕನ್ನು ಕತ್ತರಿಸಲಾಯಿತು ಈ ಒಂದು ಕಾರ್ಯಕ್ರಮದಲ್ಲಿ ಅಖಿಲ ಭಾರತ ಚಿರಂಜೀವಿ ಯುವತ ಅಧ್ಯಕ್ಷರು ಶ್ರೀ ಮಹೇಶ್ ರವರು ಹಾಗೂ ಅಖಿಲ ಕರ್ನಾಟಕ ಚಿರಂಜೀವಿ ಯುವತ ರಾಜ್ಯಾಧ್ಯಕ್ಷರು ಶ್ರೀ ಬಿಜಿ ನಾಗೇಂದ್ರ ಅವರು ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳು ರಾಮ್ ಚರಣ್ ಯುವಶಕ್ತಿ ಪದಾಧಿಕಾರಿಗಳು ಶ್ರೀನಿವಾಸ್ ರವರು ಇದೇ ಸಂದರ್ಭದಲ್ಲಿ ಡಾಕ್ಟರ್ ಶಿವರಾಜಕುಮಾರ್ ರವರು ಗ್ಲೋಬಲ್ ಸ್ಟಾರ್ ಶ್ರೀ ರಾಮ್ ಚರಣ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದರು
ದೇವದುರ್ಗ : ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಬ್ಬೂರಿನಿಂದ ರಾಯಚೂರು ವರೆಗೂ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಈ ವೇಳೆ ಬಿರು ಬಿಸಿಲಿನಲ್ಲಿ ಬೇಸಿಗೆ ತಾಪಕ್ಕೆ ಶಾಸಕಿ ಕರೆಮ್ಮ ನಾಯಕ್ ನಿಂತ್ರಾಣಗೊಂಡಿದ್ದಾರೆ. https://youtu.be/ZxZ_yj1R5jc?si=BW-l4VInk6rK6GKw ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ದೇವದುರ್ಗ ಶಾಸಕಿ ಪಾದಯಾತ್ರೆ ಕೈಗೊಂಡಿದ್ದಾರೆ. ಆದರೆ ಪಾದಯಾತ್ರೆ ವೇಳೆ ಶಾಸಕಿ ಜಿ.ಕರೆಮ್ಮ ನಾಯಕ ಅವರು ಅಸ್ವಸ್ಥಗೊಂಡು ನಿತ್ರಾಣಗೊಂಡಿದ್ದಾರೆ ಕೂಡಲೇ ಶಾಸಕಿಗೆ ಆ್ಯಂಬುಲೇಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಕಲ್ಮಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಕಾಲ ವಿಶ್ರಾಂತಿ ಪಡೆದು ಮತ್ತೆ ಪಾದಯಾತ್ರೆ ಕರೆಮ್ಮ ನಾಯಕ ಅವರು ಮುಂದುವರಿಸಿದರು ವರದಿಗಾರರು ರಂಗನಾಥ್ H ಜಾಡಲದಿನ್ನಿ…..
ಬೆಳಗಾವಿ : ಮಹಾರಾಷ್ಟ್ರ ಸರ್ಕಾರದಿಂದ ಹಣಕಾಸಿನ ನೆರವು ಪಡೆದು ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ಗ್ರಾಮದ ಖಾಸಗಿ ಜಾಗದಲ್ಲಿ ಸ್ಮೃತಿ ಭವನ ನಿರ್ಮಿಸಲು ಈಗಾಗಲೇ ಭೂಮಿ ಪೂಜೆ ಮಾಡಿದೆ. 1986 ರಲ್ಲಿ ಬೆಳಗಾವಿಯಲ್ಲಿ ನಡೆದ ಸೀಮಾ ಲಢಾಯಿ (ಗಡಿ ಚಳುವಳಿ) ಕಾಲಕ್ಕೆ ನಡೆದ ಹಿಂಸಾಚಾರ ನೆನಪಿಗಾಗಿ ಸ್ಮೃತಿ ಭವನ ನಿರ್ಮಾಣಕ್ಕೆ ಮುಂದಾಗಿದೆ. ಮತ್ತೆ ಗಡಿಯಲ್ಲಿ ನಾಡದ್ರೋಹಿ ಎಂಇಎಸ್ ಪುಂಡಾಟ ಮೆರೆದಿದ್ದು, ಬೆಳಗಾವಿಯಲ್ಲಿ ಸ್ಮೃತಿ ಭವನ ನಿರ್ಮಿಸಲು ನಿರ್ಧಾರ ಮಾಡಿದೆ. ಎಂಇಎಸ್ ನ ಸ್ಮೃತಿ ಭವನಕ್ಕೆ ಸರ್ಕಾರ ಬ್ರೇಕ್ ಹಾಕಬೇಕೆಂಬ ಆಗ್ರಹ ಕೇಳಿಬಂದಿದೆ. ಅಂದು ಎನ್.ಸಿಪಿ ನಾಯಕ ಶರದ್ ಪವಾರ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸೀಮಾ ಲಡಾಯಿ ನಡೆದಿತ್ತು. ಮಹಾರಾಷ್ಟ್ರದಿಂದ ನಾಯಕರು, ಬೆಂಬಲಿಗರು ಬೆಳಗಾವಿಗೆ ನುಗ್ಗಿದ್ದರು. ಈ ವೇಳೆ ಭಾರೀ ಪ್ರಮಾಣದಲ್ಲಿ ಹಿಂಸಾಚಾರ ನಡೆದಿತ್ತು. ಕರ್ನಾಟಕ ಪೊಲೀಸರು ಗೋಲಿಬಾರ್ ನಡೆಸಿದ್ದರು. ಈ ಗೋಲಿಬಾರನಲ್ಲಿ 9 ಜನ ಹಿಂಸಾಚಾರಿಗಳು ಸಾವನ್ನಪ್ಪಿದರು. ಈ ಹಿಂಸಾಚಾರಿಗಳನ್ನ ಹುತಾತ್ಮರೆಂದು ಬಿಂಬಿಸುತ್ತಿರೋ ಎಂಇಎಸ್ ಪುಂಡರು, ಪ್ರತಿ ವರ್ಷ…
19 ನೇ ಕಂತಿನ ಹಣವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದರೂ, 20ನೇ ಕಂತಿನ ಹಣ ಜೂನ್ 2025ರಲ್ಲಿ ಬಿಡುಗಡೆಯಾಗಬಹುದು. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ, ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.ಆದಾಗ್ಯೂ, ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುವ ರೈತರು ಕೆವೈಸಿಗೆ ಒಳಗಾಗಬೇಕಾಗುತ್ತದೆ. KYC ಇಲ್ಲದವರಿಗೆ ಹಣ ಸಿಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಸಂಪೂರ್ಣ KYC ಮಾಡದ ರೈತರ ಹಣವನ್ನು ಸರ್ಕಾರ ನಿಲ್ಲಿಸುತ್ತದೆ. ಅದಕ್ಕಾಗಿಯೇ KYC ಮಾಡುವುದು ಕಡ್ಡಾಯವಾಗಿದೆ. ಇದಕ್ಕಾಗಿ, ನೀವು ನಿಮ್ಮ ಹತ್ತಿರದ ಸೇವಾ ಕೇಂದ್ರ ಅಥವಾ ಯಾವುದೇ ಆನ್‌ಲೈನ್ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ KYC ಮಾಡಬಹುದು. ಭಾರತ ಸರ್ಕಾರ ಹಲವು ಯೋಜನೆಗಳನ್ನು ಪರಿಚಯಿಸುತ್ತಿದೆ. ಮೋದಿ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಒಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯ ಲಾಭ ರೈತರಿಗೆ ಸಿಗಲಿದೆ. ನೀವು ಈ ಯೋಜನೆಗೆ ಅರ್ಹರಾಗಿದ್ದರೆ, ಈ ಯೋಜನೆಯಡಿಯಲ್ಲಿ ಪಡೆದ ಕಂತುಗಳ ಪ್ರಯೋಜನಗಳನ್ನು ನೀವು ಪಡೆಯಬಹುದು. ಇಲ್ಲಿಯವರೆಗೆ…
ಬೆಂಗಳೂರು: ಬೆಂಗಳೂರಿನ ಎಚ್ಎಎಲ್ನಲ್ಲಿ 32.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 32.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 32.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 33.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಬೀದರ್, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ರಾಮನಗರ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿಯಲ್ಲಿ ಸಾಧಾರಣ ಮಳೆಯಾಗಲಿದೆ. ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ…