ಸಂಗೀತ ಮಾಂತ್ರಿಕ ಎಆರ್ ರೆಹಮಾನ್ 29 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಸೈರಾ ಬಾನುಗೆ ಡಿವೋರ್ಸ್ ಘೋಷಿಸಿದ ಬೆನ್ನಲೇ ರೆಹಮಾನ್ ತಂಡದ ಸದಸ್ಯರಾದ ಬಾಸಿಸ್ಟ್ ವಾದಕಿ ಮೋಹಿನಿ ಡೇ ತಮ್ಮ ಪತಿ, ಸಂಯೋಜಕ ಮಾರ್ಕ್ ಹಾರ್ಟ್ಸುಚ್‌ನಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸುದ್ದಿಯನ್ನು ಮೋಹಿನಿ ಡೇ ಸ್ಪಷ್ಟಪಡಿಸಿದ್ದಾರೆ. ರೆಹಮಾನ್ ತಮ್ಮದೇ ಟ್ರೂಫ್ ಹೊಂದಿದ್ದು, ಈ ಟ್ರೂಫ್ನಲ್ಲಿ ಮೋಹಿನಿ ಅವರು ಬಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಬರೆದುಕೊಂಡಿರುವ ಮೋಹಿನಿ, “ಭಾರವಾದ ಹೃದಯದಿಂದ, ಮಾರ್ಕ್ ಮತ್ತು ನಾನು ಬೇರ್ಪಟ್ಟಿದ್ದೇವೆ ಎಂದು ಘೋಷಿಸುತ್ತೇವೆ. ಮೊದಲನೆಯದಾಗಿ, ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ, ಇದು ನಮ್ಮ ನಡುವಿನ ಪರಸ್ಪರ ನಿರ್ಧಾರ. ನಾವು ಉತ್ತಮ ಸ್ನೇಹಿತರಾಗಿದ್ದರೂ, ನಮ್ಮ ಜೀವನದಲ್ಲಿ ಇಬ್ಬರಿಗೂ ಬೇರೆ ಬೇರೆ ಅಂಶಗಳು ಬೇಕಾಗಿವೆ. ಪರಸ್ಪರ ಒಪ್ಪಂದ ಪಡೆದು ಬೇರೆ ಆಗುತ್ತಿದ್ದೇವೆ. ಖಾಸಗಿತನಕ್ಕೆ ಆದ್ಯತೆ ನೀಡಿ ಎಂದಿದ್ದಾರೆ. ಡಿವೋರ್ಸ್ ಜತೆಗೆ ಮುಂದೆ ಅನೇಕ ಹೊಸ ಯೋಜನೆಗಳ ಮೂಲಕ ಕನ್‌ಬ್ಯಾಕ್ ಆಗುವುದಾಗಿ ಹೇಳಿಕೊಂಡಿದ್ದಾರೆ…
Author: Prajatv Kannada
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟ ಜೋರಾಗುತ್ತಿದೆ. 50ನೇ ದಿನಕ್ಕೆ ವೈಲ್ಡ್ ಕಾರ್ಡ್ ಮೂಲಕ ಶೋಭಾ ಶೆಟ್ಟಿ ಹಾಗೂ ರಜತ್ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ವೇದಿಕೆಗೆ ಕಾಲಿಡ್ತಿದ್ದಂಗೆ ಇಬ್ಬರು ಸಾಕಷ್ಟು ಮಾತನಾಡಿದ್ದರು. ಅಲ್ಲದೆ ಶೋಭಾ ಶೆಟ್ಟಿ ಜೋರು ಧ್ವನಿಯಲ್ಲಿ ಕಿರುಚಾಡುತ್ತಾ ಎಲ್ಲರಿಗೂ ನಡುಕ ಹುಟ್ಟಿಸಲು ಪ್ರಯತ್ನಿಸಿದ್ದರು. ಆದರೆ ಮೊದಲ ಆಟದಲ್ಲೇ ಶೋಭಾ ಶೆಟ್ಟಿಗೆ ಹಿನ್ನಡೆ ಆಗಿದೆ ಇದರಿಂದ ಶೋಭಾ ಕಣ್ಣೀರು ಹಾಕಿದ್ದಾರೆ. ಇಂದಿನ ಸಂಚಿಕೆಯಲ್ಲಿನ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಅದರಲ್ಲಿ ಶೋಭಾ ಮತ್ತು ಭವ್ಯಾ ಗೌಡ ನೇತೃತ್ವದಲ್ಲಿ ಎರಡು ಟೀಮ್‌ಗಳಾಗಿ ವಿಂಗಡಿಸಿದ್ದಾರೆ. ಎದುರಾಳಿ ತಂಡ ಭವ್ಯಾಗಿಂತ ವೇಗವಾಗಿ ಟಾಸ್ಕ್ ಪೂರ್ಣಗೊಳಿಸಬೇಕು ಎಂಬ ಆತುರದಲ್ಲಿ ಶೋಭಾ ಆಟ ಆಡುವಾಗ ಎತ್ತರದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಸಹಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಎತ್ತರದಿಂದ ಬಿದ್ದರೂ ಕೂಡ ಅವರು ಆಟ ನಿಲ್ಲಿಸಲಿಲ್ಲ. ದೇವರ ಸ್ಮರಣೆ ಮಾಡುತ್ತಾ ಆಟ ಮುಂದುವರಿಸಿದರು. ಹಾಗಿದ್ದರೂ ಕೂಡ ಅವರಿಗೆ ಗೆಲವು ಸಿಗಲಿಲ್ಲ. ಅಂತಿಮವಾಗಿ…
ಸಂಭಾವ್ಯ ವಾಯುದಾಳಿಯ ಮಾಹಿತಿ ಪಡೆದ ನಂತರ ಉಕ್ರೇನ್ ರಾಜಧಾನಿ ಕೀವ್‍ನಲ್ಲಿನ ಅಮೆರಿಕದ ರಾಯಭಾರ ಕಚೇರಿಯನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ರಾಯಭಾರ ಕಚೇರಿಯನ್ನು ಮುಚ್ಚಲಾಗುವುದು ಮತ್ತು ರಾಯಭಾರ ಕಚೇರಿಯ ಸಿಬ್ಬಂದಿಗಳಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಕಾನ್ಸುಲರ್ ವ್ಯವಹಾರಗಳ ವಿಭಾಗ ಹೇಳಿದೆ. ವಾಯುದಾಳಿಯ ಎಚ್ಚರಿಕೆ ಕೇಳಿಬಂದರೆ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಲು ಸಿದ್ಧವಾಗಿರುವಂತೆ ಅಮೆರಿಕದ ಪ್ರಜೆಗಳಿಗೆ ರಾಯಭಾರ ಕಚೇರಿ ಸೂಚಿಸಿದೆ. ಅಮೆರಿಕ ಒದಗಿಸಿದ ಎಟಿಎಸಿಎಂಎಸ್ ಕ್ಷಿಪಣಿಗಳನ್ನು ಬಳಸಿ ಮಂಗಳವಾರ ಉಕ್ರೇನ್ ರಶ್ಯದ ವಿರುದ್ಧ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ರಾಯಭಾರ ಕಚೇರಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ನೂತನ ಸರ್ಕಾರದ ಶಿಕ್ಷಣ ಇಲಾಖೆಯ ಮುಖ್ಯಸ್ಥೆಯನ್ನಾಗಿ WWE ಮಾಜಿ ಸಿಇಒ ಲಿಂಡಾ ಮೆಕ್‌ಮಹೋನ್ ರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಲಿಂಡಾ ಅವರನ್ನು “ಪೋಷಕರ ಹಕ್ಕುಗಳ ಪ್ರಬಲ ವಕೀಲೆ” ಎಂದು ಬಣ್ಣಿಸಿರುವ ಟ್ರಂಪ್, “ನಾವು ಶಿಕ್ಷಣವನ್ನು ಮರಳಿ ರಾಜ್ಯಗಳಿಗೆ ಕಳಿಸಲಿದ್ದೇವೆ ಹಾಗೂ ಈ ಪ್ರಯತ್ನದ ನೇತೃತ್ವವನ್ನು ಲಿಂಡಾ ವಹಿಸಿಕೊಳ್ಳಲಿದ್ದಾರೆ” ಎಂದಿದ್ದಾರೆ. ಲಿಂಡಾ ಜನವರಿಯಲ್ಲಿ ಶ್ವೇತ ಭವನಕ್ಕೆ ಮರಳಲಿರುವ ಡೊನಾಲ್ಡ್ ಟ್ರಂಪ್ ರ ಪರಿವರ್ತನೆ ತಂಡದ ಸಹ ಮುಖ್ಯಸ್ಥೆಯಾಗಿದ್ದಾರೆ. ಈ ತಂಡಕ್ಕೆ ಸರಕಾರದ ಸುಮಾರು 4,000 ಹುದ್ದೆಗಳನ್ನು ಭರ್ತಿ ಮಾಡುವ ಗುರಿ ನೀಡಲಾಗಿದೆ. ಕನೆಕ್ಟಿಕಟ್ ಶಿಕ್ಷಣ ಮಂಡಳಿಯಲ್ಲಿ ಎರಡು ವರ್ಷ ಹಾಗೂ ಖಾಸಗಿ ಕ್ಯಾಥೊಲಿಕ್ ಶಾಲೆಯಾದ ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದಲ್ಲಿ 16 ವರ್ಷಗಳ ಕಾಲ ಲಿಂಡಾ ಕಾರ್ಯನಿರ್ವಹಿಸಿದ್ದಾರೆ ಎಂದು ಅವರ ಶೈಕ್ಷಣಿಕ ಕ್ಷೇತ್ರದ ಅನುಭವದ ಕುರಿತು ಟ್ರಂಪ್ ಉಲ್ಲೇಖಿಸಿದ್ದಾರೆ. ಅಮೆರಿಕ ಸೆನೆಟ್ ಗೆ ಸ್ಪರ್ಧಿಸಲು 2009ರಲ್ಲಿ ತರಾತುರಿಯಲ್ಲಿ WWE ತೊರೆದಿದ್ದ ಲಿಂಡಾ, ಟ್ರಂಪ್ ರ ಪ್ರಮುಖ…
ಗಾಝಾದಲ್ಲಿರುವ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹೊರತಂದರೆ ಅವರಿಗೆ 5 ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ. ಗಾಝಾದಲ್ಲಿರುವ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹೊರತರುವವರ ಮತ್ತು ಅವರ ಕುಟುಂಬದವರ ಸುರಕ್ಷತೆಯನ್ನು ನಾವು ಖಾತರಿಪಡಿಸುತ್ತೇವೆ. ಜೊತೆಗೆ ಬಿಡುಗಡೆಗೊಳಿಸಿದ ಪ್ರತೀ ಒತ್ತೆಯಾಳಿಗೆ ತಲಾ 5 ದಶಲಕ್ಷ ಡಾಲರ್ ನಂತೆ ಪುರಸ್ಕಾರ ದೊರೆಯುತ್ತದೆ ಎಂದು ನೆತನ್ಯಾಹು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ನಮ್ಮ ಒತ್ತೆಯಾಳುಗಳಿಗೆ ತೊಂದರೆ ನೀಡುವ ಧೈರ್ಯ ಮಾಡಿದವರು ಸತ್ತವರೆಂದು ಪರಿಗಣಿಸಲಾಗುತ್ತದೆ. ಅವರು ಎಲ್ಲಿಯೇ ಇದ್ದರೂ ಬೆನ್ನಟ್ಟಿ ಹಿಡಿಯುತ್ತೇವೆ ಎಂದು ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಗಾಝಾ ನಗರದ ದಕ್ಷಿಣದಲ್ಲಿರುವ ನೆಟ್‍ಝರಿಮ್ ಕಾರಿಡಾರ್ ಗೆ ಭೇಟಿ ನೀಡಿ ಇಸ್ರೇಲ್ ಸೈನಿಕರ ಜತೆ ಮಾತನಾಡಿದ ಅವರು ` ಗಾಝಾವನ್ನು ಹಮಾಸ್ ಆಳಬಾರದು ಎಂಬುದು ನಮ್ಮ ಯುದ್ಧದ ಮುಖ್ಯ ಗುರಿಯಾಗಿದೆ. ಒತ್ತೆಯಾಳುಗಳನ್ನು ಪತ್ತೆಹಚ್ಚಿ ಅವರನ್ನು ಮನೆಗೆ ತರುವ ಪ್ರಯತ್ನ ಮುಂದುವರಿದಿದೆ. ನಾವು ಕೈಚೆಲ್ಲುವುದಿಲ್ಲ. ಅವರನ್ನು ಜೀವಂತ ರಕ್ಷಿಸಲು ಸಾಧ್ಯವಾಗದಿದ್ದರ ಮೃತದೇಹವನ್ನಾದರೂ ಪತ್ತೆಹಚ್ಚುತ್ತೇವೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎ1 ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಪವಿತ್ರಾ ಗೌಡ ಜೈಲು ಸೇರಿ 5 ತಿಂಗಳು ಕಳೆದಿದ್ದರು ಜಾಮೀನು ಸಿಕ್ಕಿಲ್ಲ. ಹಲವು ಭಾರಿ ಬೇಲ್ ಗೆ ಅರ್ಜಿ ಸಲ್ಲಿಸಿದ್ದರು ಅದು ವರ್ಕೌಟ್ ಆಗಿಲ್ಲ. ಇಂದು ಪ್ರಕರಣದ ಪ್ರಮುಖ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ಬೇಲ್ ಸಿಗುವ ನಿರೀಕ್ಷೆಯಲ್ಲಿ ಪವಿತ್ರಾ ಗೌಡ ಇದ್ದಾರೆ. ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿರುವ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಲಿದೆ. ದರ್ಶನ್, ಪವಿತ್ರಾ ಗೌಡ, ಆರ್. ನಾಗರಾಜು, ಅನುಕುಮಾರ್, ಎಂ. ಲಕ್ಷ್ಮಣ್, ಜಗದೀಶ್ ಅವರ ಜಾಮೀನು ಅರ್ಜಿ ವಿಚಾರಣೆ ಮಾಡಲಾಗುವುದು. ಅನಾರೋಗ್ಯ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಈವರೆಗೂ ಸರ್ಜರಿ ಮಾಡಿಸಿಲ್ಲ. ಆ ಬಗ್ಗೆ ಅವರು ನ್ಯಾಯಾಲಯಕ್ಕೆ ಪ್ರತಿಕ್ರಿಯಿಸಬೇಕಿದೆ. ಇನ್ನೂ ಯಾಕೆ ಸರ್ಜರಿ ಮಾಡಿಸಿಲ್ಲ, ಬೆನ್ನು ನೋವಿಗೆ ಚಿಕಿತ್ಸೆ ಯಾವ ಹಂತದಲ್ಲಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ದರ್ಶನ್ ಪರ ವಕೀಲರು ಹೈಕೋರ್ಟ್ಗೆ ಇಂದು ಪ್ರತಿಕ್ರಿಯೆ…
ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪತ್ನಿ ಸೈರಾ ಬಾನುಗೆ ವಿಚ್ಚೇದನ ಘೋಷಿಸಿದ್ದಾರೆ. ಈ ಮೂಲಕ 29 ವರ್ಷಗಳ ವೈವಾಹಿಕ ಜೀವನ ಕೊನೆಯಾಗಿಸಿದ್ದಾರೆ. 1995ರ ಜನವರಿಯಲ್ಲಿ ರೆಹಮಾನ್ ಹಾಗೂ ಸೈರಾ ಮದುವೆ ನಡೆದಿದ್ದು. ಇದೀಗ ತಮ್ಮ 57ನೇ ವರ್ಷದಲ್ಲಿ ರೆಹಮಾನ್ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಹೆಸರು ಖತೀಜಾ ಮತ್ತು ರಹೀಮಾ. ಮಗನ ಹೆಸರು ಅಮೀನ್ ರೆಹಮಾನ್. ಸೈರಾ ಬಾನು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡುವ ಮೂಲಕ ಡಿವೋರ್ಸ್ ವಿಚಾರ ತಿಳಿಸಿದ್ದಾರೆ. ಎಆರ್ ರೆಹಮಾನ್ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದಾರೆ. ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆ ಮ್ಯೂಸಿಕ್ ಡೈರೆಕ್ಟರ್ ಆಗಿರುವ ಎ. ಆರ್ ರೆಹಮಾನ್ ಗಾಯಕರು ಕೂಡ ಆಗಿದ್ದಾರೆ. ರೆಹಮಾನ್ ಒಂದು ಹಾಡಿಗೆ ಸುಮಾರು 3 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ರೆಹಮಾನ್ ಕೆಲವೇ ಹಾಡುಗಳಿಗೆ ಹಾಡಿದ್ದಾರೆ. ಅನೇಕ ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ್ದಾರೆ. ಎಆರ್ ರೆಹಮಾನ್ ಅವರ ಒಟ್ಟು ಸಂಪತ್ತು 2100 ಕೋಟಿ ಎನ್ನಲಾಗ್ತಿದೆ. ಸ್ಟಾರ್ಟಪ್ಸ್…
ಖ್ಯಾತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಹಾಗೂ ಅವರ ಪತ್ನಿ ಸೈರಾ ಬಾನು 29 ವರ್ಷಗಳ ದಂಪತ್ಯ ಜೀವನ ಅಂತ್ಯಗೊಳಿಸಿದ್ದಾರೆ. ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನ ಘೋಷಿಸಿರೋದು ಅನೇಕರಿಗೆ ಶಾಕಿಂಗ್ ಎನಿಸಿದೆ. ಈ ಘೋಷಣೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದೀಗ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಬಯಲಾಗಿದೆ. ಕೈತುಂಬ ಕೆಲಸ ಇರುವ ರೆಹಮಾನ್ ವರ್ಷದ ಎಲ್ಲಾ ದಿನಗಳಲ್ಲೂ ಸಖತ್ ಬ್ಯುಸಿಯಾಗಿರ್ತಾರೆ ಅವರು ತಂಡದ ಜೊತೆ ಕಾನ್ಸರ್ಟ್ ನಡೆಸುತ್ತಾರೆ. ಒಂದೊಮ್ಮೆ ಕಾನ್ಸರ್ಟ್ ಇಲ್ಲ ಎಂದಾದರೆ ಹಾಡಿನ ಕಂಪೋಸ್ನಲ್ಲಿ ಬ್ಯುಸಿ ಆಗುತ್ತಾರೆ. ಈ ಕಾರಣಕ್ಕೆ ಅವರು ನಿದ್ರಿಸೋದು ಮುಂಜಾನೆ ವೇಳೆಗೆ. ಅವರು ನಿದ್ದೆಯಿಂದ ಎದ್ದೇಳುವಾಗ ಮಧ್ಯಾಹ್ನ ಆಗುತ್ತದೆ. ಇದು ಅವರ ದಿನಚರಿ. ಈ ಕಾರಣಕ್ಕೆ ಕುಟುಂಬಕ್ಕೆ ಅವರು ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದು ವಿಚ್ಛೇದನಕ್ಕೆ ಕಾರಣ ಆಗಿರಬಹುದು ಎಂಬುದು ಕೆಲವರ ವಾದ. ಸೈರಾ ಬಾನು ಅವರು ವಿಚ್ಛೇದನಕ್ಕೆ ಕಾರಣ ಏನು ಎಂಬ ಬಗ್ಗೆ ಮಾತನಾಡಿದ್ದಾರೆ ಎಂದು ವರದಿ ಆಗಿದೆ. ‘ಸಂಬಂಧದಲ್ಲಿನ ಭಾವನಾತ್ಮಕ…
ಆಫ್ರಿಕಾದ ಬಡದೇಶಗಳಲ್ಲೊಂದಾದ ಕಾಂಗೋದಲ್ಲಿ ಪರ್ವತದ ಭಾಗವೊಂದು ಕುಸಿದು ಬಿದ್ದಿದೆ. ಈ ವೇಳೆ ಪ್ರತಿಯೊಬ್ಬರಿಗೂ ಅಚ್ಚರಿ ಕಾದಿದ್ದು ಕುಸಿದ ಬಿದ್ದ ಪರ್ವದಲ್ಲಿ ಭಾರೀ ಪ್ರಮಾಣದ ತಾಮ್ರದ ನಿಕ್ಷೇಪ ಪತ್ತೆಯಾಗಿದೆ. ಪರ್ವತ ಕುಸಿಯುರುವ ವಿಡಿಯೋ ವೈರಲ್ ಆಗಿದ್ದು, ಇಷ್ಟೊಂದು ತಾಮ್ರ ಇದ್ದರೂ ಕಾಂಗೋ ಬಡ ದೇಶವಾಗಿಯೇ ಉಳಿದುಕೊಂಡಿರುವುದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ನಿಕ್ಷೇಪದ ವಿಚಾರದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಮಧ್ಯಪ್ರವೇಶ ಮಾಡಬಾರದು ಎಂದು ಹಲವರು ಒತ್ತಾಯಿಸಿದ್ದಾರೆ. ಕಾಂಗೋ ದೇಶ ತನ್ನಲ್ಲಿರುವ ನೈಸರ್ಗಿಕ ಸಂಪನ್ಮೂಲದಿಂದಲೇ ಖ್ಯಾತಿ ಪಡೆದುಕೊಂಡಿದೆ. ಸುಮಾರು ಶತಮಾನಗಳ ಕಾಲದಿಂದ ಇಲ್ಲಿ ತಾಮ್ರದ ಗಣಿಗಾರಿಕೆ ನಡೆಯುತ್ತಿದೆ. ಆಫ್ರಿಕಾದ ತಾಮ್ರದ ಬೆಲ್ಟ್ನಲ್ಲಿರುವ ಕಾಂಗೋ ವಿಶ್ವದಲ್ಲಿರುವ ತಾಮ್ರದ ಶೇ.10ರಷ್ಟನ್ನು ಪೂರೈಕೆ ಮಾಡುತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಪ್ರವಾಸದ ಭಾಗವಾಗಿ ಗಯಾನಾದ ಜಾರ್ಜ್‌ಟೌನ್‌ಗೆ ಭೇಟಿ ನೀಡಿದ್ದಾರೆ. ಇದರೊಂದಿಗೆ 56 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿದಂತಾಗಿದೆ. ಬ್ರೆಜಿಲ್‌ನಲ್ಲಿ ನಡೆದ 2 ದಿನಗಳ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಮೋದಿ ಅವರು ಇಂದು ಗಯಾನಾದ ಜಾರ್ಜ್‌ಟೌನ್‌ಗೆ ಬಂದಿಳಿದಿದ್ದಾರೆ. ಇದೇ ಸಂದರ್ಭದಲ್ಲಿ ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಸೇರಿದಂತೆ ಇತರೆ ನಾಯಕರು ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಭಾರತ- ಕೆರಿಕಮ್ (ಕೆರಿಬಿಯನ್ ಕಮ್ಯುನಿಟಿ) ಶೃಂಗಸಭೆಯಲ್ಲಿ ಭಾಗಿಯಾಗಲಿರುವ ಮೋದಿ ಅವರು ಮೊಹಮದ್ ಇರ್ಫಾನ್ ಅಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಗಯಾನಾ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್- 19 ಸಾಂಕ್ರಾಮಿಕದ ಅವಧಿಯಲ್ಲಿ ಮೋದಿ ಅವರು ಡೊಮಿನಿಕಾಕ್ಕೆ ನೀಡಿದ ನೆರವು ಮತ್ತು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವಲ್ಲಿ ಅವರು ತೋರಿದ ಬದ್ಧತೆಯನ್ನು ಗುರುತಿಸಿ ಡೊಮಿನಿಕಾ ದೇಶವು ‘ಡೊಮಿನಿಕಾ ಅವಾರ್ಡ್ ಆಫ್ ಆನರ್’ ನೀಡಲು ನಿರ್ಧರಿಸಿದೆ ಎಂದು ಅಲ್ಲಿನ ಸರ್ಕಾರ…