Author: Prajatv Kannada

ತನ್ನನ್ನು ತಾನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದ ಟರ್ಕಿಶ್ ಟಿಕ್‌ಟಾಕ್ ಇನ್​​​ಫ್ಲೂಯೆನ್ಸರ್ ಕುಬ್ರಾ ಆಯ್ಕುತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 26ರ ಹರೆಯದ ಕುಬ್ರಾ ಇಸ್ತಾನ್‌ ಬುಲ್​​ನ ಸುಲ್ತಾನ್‌ಬೇಲಿ ಜಿಲ್ಲೆಯ ಐಷಾರಾಮಿ ಅಪಾರ್ಟ್‌ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕೆಯ ಆತ್ಮಹತ್ಯೆಗೆ ಮುಂಚಿನ ದಿನಗಳಲ್ಲಿ, ಕುಬ್ರಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ಅನೇಕ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದರು. ಅವಳ ಸಾವಿಗೆ ಕೆಲವೇ ಗಂಟೆಗಳ ಮೊದಲು, ಆಕೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತನ್ನ ತೂಕ ಕಡಿಮೆ ಆಗುತ್ತಿರುವ ಬಗ್ಗೆ, ಅದನ್ನು ನಿಯಂತ್ರಿಸಲು ತಾನು ಯಾವ ರೀತಿ ಕಷ್ಟಪಡುತ್ತಿದ್ದೇನೆ ಎಂಬುದರ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದರು. “ನಾನು ನನ್ನಿಂದಾದ ಶಕ್ತಿ ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ತೂಕ ಹೆಚ್ಚಾಗಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಾನು ಪ್ರತಿದಿನ ಒಂದು ಕೆಜಿ ತೂಕ ಕಳೆದುಕೊಳ್ಳುತ್ತಿದ್ದೇನೆ. ನನಗೆ ಏನು ಮಾಡಬೇಕೆಂದು ತಿಳಿದಿಲ್ಲ. ನಾನು ತುರ್ತಾಗಿ ತೂಕವನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ತಮ್ಮ ಕೊನೇ ಪೋಸ್ಟ್ ನಲ್ಲಿ ಹೇಳಿದ್ದಾರೆ. ತನ್ನ ಕೊನೆಯ ಟಿಕ್‌ಟಾಕ್…

Read More

ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾಗೆ ಸದ್ಯದಲ್ಲೇ ತೆರೆ ಕಾಣುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಪರಿಷ್ಕರಣಾ ಸಮಿತಿ ಸೂಚಿಸಿದ ಬದಲಾವಣೆಗಳನ್ನು ಮಾಡಲು ಎಮರ್ಜೆನ್ಸಿ ಸಿನಿಮಾದ ನಿರ್ಮಾಣ ಸಂಸ್ಥೆ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ತಂಡದವರು ಬಾಂಬೆ ಹೈಕೋರ್ಟ್​ಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಎಮರ್ಜೆನ್ಸಿ ತಂಡ ಕೋರ್ಟ್​ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಗುರುವಾರ (ಅಕ್ಟೋಬರ್ 3) ಮುಂದಿನ ವಿಚಾರಣೆ ನಡೆಯಲಿದೆ. ಸೆನ್ಸಾರ್ ಮಂಡಳಿಯವರು ‘ಎಮರ್ಜೆನ್ಸಿ’ ನೋಡಿ ನಂತರ ಅದನ್ನು ಪರಿಷ್ಕರಣಾ ಸಮಿತಿಗೆ ವರ್ಗಾಯಿಸಿತ್ತು. ಅವರು ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನೀಡಲು ನಿರಕಾರಿಸಿದ್ದರು. ಜೊತೆಗೆ ಒಂದಷ್ಟು ಬದಲಾವಣೆ ಮಾಡಲು ಸೂಚನೆ ನೀಡಿದ್ದರು. ಆದರೆ, ಇದಕ್ಕೆ ತಂಡ ಸಿದ್ಧ ಇರಲಿಲ್ಲ. ಕೊನೆಗೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈಗ ಕೋರ್ಟ್​ಗೆ ತಂಡದವರು ಮಾಹಿತಿ ನೀಡಿದ್ದು, ಬದಲಾವಣೆಗೆ ಒಪ್ಪಿರೋದಾಗಿ ಹೇಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಸಿನಿಮಾ ರಿಲೀಸ್ ಆಗಿರಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣ ಸಿನಿಮಾ ರಿಲೀಸ್ ದಿನಾಂಕ ವಿಳಂಬವಾಗಿದೆ. ಕೊನೆಗೂ ಸಿನಿಮಾ…

Read More

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಇತ್ತೀಚೆಗೆ ಮೊದಲ ಮಗುವನ್ನು ಭರಮಾಡಿಕೊಂಡಿದ್ದಾರೆ. ಸದ್ಯ ಮಗುವಿನ ಪಾಲನೆ ಫೋಷಣೆಯಲ್ಲಿ ತೊಡಗಿಕೊಂಡಿದ್ದು ಇದೇ ಮೊದಲ ಭಾರಿಗೆ ನಟ ರಣವೀರ್ ಸಿಂಗ್ ಸಾರ್ವಜನಿಕವಾಗಿ ಖುಷಿ ಹಂಚಿಕೊಂಡಿದ್ದಾರೆ. ಮಗು ಜನಸಿದ ಬಳಿಕ ರಣವೀರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಅವರು ಮಗುವಿನ ಆಗಮನವನ್ನು ಸಂಭ್ರಮಿಸಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರು ‘ತಂದೆ ಆಗಿದ್ದೇನೆ’ ಎಂದಿದ್ದಾರೆ. ರಿಲೈನ್ಸ್ ಫೌಂಡೇಷನ್ ಹಾಗೂ ನೀತಾ ಅಂಬಾನಿ ಅವರು ಇತ್ತೀಚೆಗೆ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿದ್ದಾರೆ. ಪ್ಯಾರಾಒಲಂಪಿಕ್​ನಲ್ಲಿ ಪದಕ ತಂದವರನ್ನು ಗೌರವಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿ ಆದರು. ಈ ವೇಳೆ ಪಾಪರಾಜಿಗಳನ್ನು ನೋಡುತ್ತಿದ್ದಂತೆ ಎಗ್ಸೈಟ್ ಆದ ರಣವೀರ್ ತಂದೆ ಆದ ಖುಷಿಯನ್ನು ಎಲ್ಲರ ಎದುರು ವ್ಯಕ್ತಪಡಿಸಿದ್ದಾರೆ. ಪಾಪರಾಜಿಗಳ ಕಡೆಗೆ ನಡೆದ ರಣವೀರ್ ಸಿಂಗ್ ಅವರು, ‘ನಾನು ತಂದೆ ಆಗಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಅವರಿಗೆ ಎಲ್ಲರೂ ಶುಭಾಶಯ ತಿಳಿಸಿದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ…

Read More

ನೆಲಮಂಗಲ: ಮುಡಾ ಹಗರಣದಲ್ಲಿ ಸಿಎಂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.ಸೋಂಪುರ ಹೋಬಳಿಯ ಸಮಾಧಾನ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಡಾ ಹಗರಣ, ವಾಲ್ಮೀಕಿ ಹಗರಣದಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ. https://youtu.be/wTvM6D24vtU?si=4HDkGdYEpTa5vDZw ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅನಿವಾರ್ಯತೆ ಬಂದಾಗಿದೆ.ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೈಸೂರಿಗೆ ಮೊದಲನೇ ಪಾದಯಾತ್ರೆ ಯಶಸ್ವಿಯಾಗಿದೆ. ಸದ್ಯ ಎರಡನೇ ಪಾದಯಾತ್ರೆ ಬಗ್ಗೆ ಚರ್ಚೆಯಾಗಿಲ್ಲ ಎಂದು ತಿಳಿಸಿದರುಈ ಎರಡು ಹಗರಣಗಳು ಸಿಬಿಐಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆಯವರೇ ಈ ಹಗರಣದ ಬಗ್ಗೆ ಮಾತಾಡಿದ್ದಾರೆ. ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಅನಿವಾರ್ಯವಾಗಿದೆ ಎಂದರು.

Read More

ನೆಲಮಂಗಲ: ರಾತ್ರೋ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 2 ಲಕ್ಷ ಬೆಲೆ ಬಾಳುವ ಹಸುಗಳ ಕಳ್ಳತನ ನಡೆದಿರುವ ಘಟನೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮದಲ್ಲಿ ಜರುಗಿದೆ. https://youtu.be/1XBScCUGWAI?si=quNfCyEWZZuCAgI9 ರೈತನ ಮನೆಯಲ್ಲೇ, ಆಶ್ರಯವಾಗಿದ್ದು ಹಸುಗಳ ಕದ್ದು ಖದೀಮರು ಪರಾರಿಯಾಗಿದ್ದಾರೆ. ಇನ್ನೂ ನೆಲಮಂಗಲ ತಾಲೂಕಿನಲ್ಲಿ ಹಸುಗಳ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ. ಹಸುಗಳ ಕಳೆದುಕೊಂಡ ರೈತ ತಿಮ್ಮಪ್ಪಯ್ಯ ಕಣ್ಣೀರು ಹಾಕಿದ್ದಾನೆ. ಹಾಲು ಕೊಡುತ್ತಿದ್ದ ಹಸುಗಳ ಜೊತೆ ಕರುಗಳನ್ನು ಸಹ ಕಳ್ಳತನ ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಗದಗ ಜಿಲ್ಲೆಯ ಹಲವಡೆ ರಾತ್ರಿ ಭಾರಿ ಮಳೆ ಹಿನ್ನೆಲೆ ವಡ್ಡಿನ ಹಳ್ಳದಲ್ಲಿ ಇಬ್ಬರು ಯುವಕರು ಕೊಚ್ಚಿ ಹೋದ ಘಟನೆ ಹುಣಸಿಕಟ್ಟಿ ಬಳಿ ನಡೆದಿದೆ. ಶಿವಪ್ಪ ಅಶೋಕಪ್ಪ ಅವರಾದಿ (25) ಮಣಿಕಂಠ ಅಶೋಕ ಮಲ್ಲಾಪೂರ (26) ನೀರು ಪಾಲಾದ ಯುವಕರಾಗಿದ್ದು, ಶಿವಪ್ಪ ಅಶೋಕಪ್ಪ ಅವರಾದಿ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಮಣಿಕಂಠನಿಗಾಗಿ ಶೋಧ ನಡೆಯುತ್ತಿದೆ. https://youtu.be/ongSxI4iz1s?si=9Lsg7U_Yfh1esQAF ನಿನ್ನೆ ರಾತ್ರಿ ಹುಣಸಿಕಟ್ಟಿಯಿಂದ ನರಗುಂದಕ್ಕೆ ಮಣಿಕಂಠ ಹಾಗೂ ಗೆಳೆಯ ಹೋಗಿದ್ದರು. ಗದಗ ಜಿಲ್ಲೆಯ ಹಲವಡೆ ರಾತ್ರಿ ಭಾರಿ ಮಳೆ ಹಿನ್ನೆಲೆ ಮಾರ್ಗ ಮಧ್ಯೆ ತುಂಬಿ ಹರಿಯುತ್ತಿದ್ದ ಒಡ್ಡಿ ಹಳ್ಳದಲ್ಲಿ ಕೊಚ್ಚಿ ಹೋಗಿ ಅವಘಡ ಸಂಭವಿಸಿದೆ. ಪೊಲೀಸ್, ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದ್ದು, ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ನವದೆಹಲಿ/ ಬಳ್ಳಾರಿ: ಮಾಜಿ ಸಚಿವ ಗಂಗಾವತಿ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಬಳ್ಳಾರಿ ಜಿಲ್ಲಾ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್‌ ತೆರವು ಮಾಡಿದೆ. ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದಿಂದ ಆದೇಶ ಪ್ರಕಟವಾಗಿದ್ದು, ಯಾವುದೇ ಪೂರ್ವಾನುಮತಿ ಇಲ್ಲದೇ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. https://youtu.be/UHMy14ryP1Q?si=JoOtEM1V-NyNeUnp ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂಎಂ ಸುಂದರೇಶ್ ನೇತೃತ್ವದ ದ್ವಿ ಸದಸ್ಯ ಪೀಠ ಈ ಆದೇಶ ನೀಡಿದೆ. ಪ್ರಕರಣದ ತನಿಖೆ ಮುಕ್ತಾಯಗೊಂಡು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು ಈ ಹಂತದಲ್ಲಿ ಸಾಕ್ಷ್ಯ ನಾಶ ಸಾಧ್ಯವಿಲ್ಲ ಎನ್ನುವ ವಾದ ಪುರಸ್ಕರಿಸಿದ ಕೋರ್ಟ್ ಜಾಮೀನಿನಲ್ಲಿದ್ದ ಷರತ್ತನ್ನು ರದ್ದು ಮಾಡಿದೆ. ನಿಷೇಧ ಹೇರಿದ್ದು ಯಾಕೆ? ಆಂಧ್ರದ ಅನಂತಪುರ, ಕರ್ನೂಲು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ 2011 ಸೆಪ್ಟೆಂಬರ್ 5ರಂದು ಜನಾರ್ದನ ರೆಡ್ಡಿಯ ಬಂಧನವಾಗಿತ್ತು. ಬಂಧನದ ಬಳಿಕ ನಡೆದ ವಿಚಾರಣೆಯಲ್ಲಿ ಜನಾರ್ದನ…

Read More

ಬೆಂಗಳೂರು/ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಲಿದ್ದಾರೆ. ಈಗಾಗಲೇ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದ್ದು ಮೊದಲು ದೂರುದಾರರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಿದೆ. ದೂರುದಾರರ ಬಳಿ ದಾಖಲೆಯನ್ನು ಪೊಲೀಸರು ಸಂಗ್ರಹಿಸಲಿದ್ದಾರೆ. https://youtu.be/O7nlzf8sw60?si=XBYqSnlwElizHCi3 ಇನ್ನೊಂದು ಕಡೆ ನಿವೃತ್ತ ನ್ಯಾ. ದೇಸಾಯಿ ತನಿಖಾ ಸಮಿತಿ ಬಳಿಯಿರುವ ದಾಖಲೆ ಪಡೆಯಲು ಕಾನೂನು ಪ್ರಕ್ರಿಯೆ ಆರಂಭವಾಗಲಿದೆ. ಆ ದಾಖಲೆಗಳು ಸಿಕ್ಕ ಮೇಲೆ ಆರೋಪಿಗಳಿಗೆ ಹಂತ ಹಂತವಾಗಿ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ. ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದರು. ಯಾರ ವಿರುದ್ಧ ಎಫ್‌ಐಆರ್‌? * ಸಿದ್ದರಾಮಯ್ಯ, ಮುಖ್ಯಮಂತ್ರಿ (A1) * ಪಾರ್ವತಿ ಬಿಎಂ, ಸಿದ್ದರಾಮಯ್ಯ ಪತ್ನಿ(A2) * ಮಲ್ಲಿಕಾರ್ಜುನ ಸ್ವಾಮಿ, ಸಿದ್ದರಾಮಯ್ಯ, ಬಾಮೈದ(A3) * ದೇವರಾಜು, ಮಾರಾಟಗಾರ, ನಕಲಿ ಭೂ ಮಾಲೀಕ (A4) * ಇತರರು‌…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಿಂಬದಿಯಿಂದ ಬಂದು ಫೋನನ್ನು ಕದಿಯುವ ಕಳ್ಳರ ಹಾವಳಿ ಆರಂಭವಾಗಿದೆ. https://youtu.be/n0qYMPZis-E?si=TeqInOqT7b1oXoFG ಹೆಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಫೋನ್ ಹಿಡಿದು ಮಾತಾಡುತ್ತಾ ಡೆಲಿವರಿ ಬಾಯ್ ಬೈಕಿನಲ್ಲಿ ಹೊರಟಿದ್ದರು. ಈ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಮೊಬೈಲ್ ಕಿತ್ತ ರಭಸಕ್ಕೆ ಡೆಲಿವರಿ ಬಾಯ್ ಆಯತಪ್ಪಿ ರಸ್ತೆಯಲ್ಲೇ ಬಿದ್ದಿದ್ದಾರೆ. ಹಿಂದೆ ಬರುತ್ತಿದ್ದ ಕಾರಿನ ಮಧ್ಯೆ ಸ್ವಲ್ಪ ಅಂತರ ಇದ್ದ ಕಾರಣ ಡೆಲಿವರಿ ಬಾಯ್‌ ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಡೆಲಿವರಿ ಬಾಯ್‌ ಹಿಂದಿನಿಂದ ಬರುತ್ತಿದ್ದ ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿದೆ.

Read More

ಬೆಂಗಳೂರು:- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಸರಕಾರ ಸಂಚು ರೂಪಿಸಿದೆ ಎಂದು ವಿಧಾನಪರಿಷತ್ ಜೆಡಿಎಸ್ ಉಪನಾಯಕ ಟಿ. ಎ.ಶರವಣ ಗಂಭೀರ ಆರೋಪ ಮಾಡಿದ್ದರೆ. ಕುಮಾರಸ್ವಾಮಿ ಬಗ್ಗೆ ಹಂದಿಗೆ ಹೋಲಿಸಿ ಮಾತನಾಡಿದ ADGP ಚಂದ್ರಶೇಖರ ವಿರುದ್ಧ ಕಿಡಿಕಾರಿ ಮಾತನಾಡಿದ ಟಿಎ ಶರವಣ ಅವರು, ರಾಜ್ಯದ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು, ಕುಮಾರಸ್ವಾಮಿ ಅವರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಸೃಷ್ಟಿಸಿ, ಕಾನೂನು ಬಲೆಯಲ್ಲಿ ಸಿಲುಕಿಸಲು ಕಾಂಗ್ರೆಸ್ ನಾಯಕರು ನಡೆಸಿರುವ ಪಿತೂರಿಗೆ ಜೆಡಿಎಸ್ ಜಗ್ಗುವುದಿಲ್ಲ ಎಂದು ಶರವಣ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರನ್ನು ನಿಂದಿಸುವ ಪತ್ರ ಬರೆದಿರುವ ಲೋಕಾಯುಕ್ತ ಹಿರಿಯ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಲು ಕ್ರಮ ಕೈಗೊಳ್ಳಬೇಕು. ಎಲ್ಲಿಂದಲೋ ರಾಜ್ಯಕ್ಕೆ ಬಂದು, ಇಲ್ಲಿಯ ಪೊಲೀಸ್ ವ್ಯವಸ್ಥೆಯಲ್ಲಿ ನೆಲೆಯೂರಿ ಇಲ್ಲಿಯ ಚುನಾಯಿತ ನಾಯಕರ ವಿರುದ್ಧವೇ ಪಿತೂರಿ ನಡೆಸಿರುವ ಪೊಲೀಸ್ ಅಧಿಕಾರಿ ಚಂದ್ರ ಶೇಖರ್ ನಡೆಸುವ ಸುಲಿಗೆಗಳ ಬಗ್ಗೆ ತನಿಖೆ ಆಗಬೇಕು ಎಂದು ಶರವಣ ಆಗ್ರಹ ಪಡಿಸಿದ್ದಾರೆ. ಹಿಮಾಚಲ ಪ್ರದೇಶದ…

Read More