ನಾವು ಮನೆಯಲ್ಲಿ ವಿಶೇಷ ಸಂದರ್ಭಗಳು ಬಂದಂತಹ ಸಮಯದಲ್ಲಿ ಸಿಹಿ ಅಡುಗೆಗಳನ್ನು ಮಾಡುತ್ತೇವೆ. ಆ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚಾಗಿ ಬಳಸುತ್ತೇವೆ. ಇದರಲ್ಲಿ ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ, ಖರ್ಜೂರ, ಪಿಸ್ತಾ ಇತ್ಯಾದಿಗಳು ಸೇರಿರುತ್ತವೆ. ಯಾವ ಸಿಹಿ ಅಡುಗೆಗೆ ಖರ್ಜೂರ ಹಾಕುತ್ತೇವೆ, ಅಂತಹ ಅಡುಗೆಯ ಸ್ವಾದ ಬೇರೆಯೇ ಇರುತ್ತದೆ. ಆದರೆ ಖರ್ಜೂರವನ್ನು ಕೇವಲ ಇಂತಹ ಸಂದರ್ಭಗಳಲ್ಲಿ ಮಾತ್ರ ತಿನ್ನುವುದಲ್ಲ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಈ ಕೆಳಗಿನ ಲಾಭಗಳು ನಿಮಗೆ ಸಿಗುತ್ತವೆ. ಖಾಲಿ ಹೊಟ್ಟೆಯಲ್ಲಿ ಯಾರೂ ಖರ್ಜೂರ ಸೇವಿಸುತ್ತಾರೆ ಅವರಿಗೆ ಸುಸ್ತು, ಆಯಾಸ ಮತ್ತು ದುರ್ಬಲತೆ ಎನ್ನುವುದು ಇರುವುದಿಲ್ಲ. ಏಕೆಂದರೆ ಖರ್ಜೂರಗಳಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೇರಳ ವಾಗಿ ಸಿಗುತ್ತದೆ. ಗ್ಲುಕೋಸ್, ಫ್ರಕ್ಟೂಸ್, ಸುಕ್ರೋಸ್ ಹೀಗೆ ಬೇರೆ ಬೇರೆ ರೂಪಗಳಲ್ಲಿ ಇರುವುದರಿಂದ ಎಲ್ಲವೂ ಸಹ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಕೊಡುವಲ್ಲಿ ನೆರವಾಗುತ್ತವೆ. ತುಂಬಾ ವೇಗವಾಗಿ ಖರ್ಜೂರಗಳಿಂದ ಈ ಲಾಭಗಳನ್ನು ಪಡೆಯ ಬಹುದು. ಖರ್ಜೂರಗಳಲ್ಲಿ ನಾರಿನ…
Author: Prajatv Kannada
ನವರಾತ್ರಿಯ ಶುಭ ಸಂದರ್ಭದಲ್ಲಿ, ದುರ್ಗಾ ದೇವಿಯ ಆಶೀರ್ವಾದ ಪಡೆಯಲು ಕೆಲವು ವಸ್ತುಗಳನ್ನು ಮನೆಗೆ ತರುವುದು ಒಳ್ಳೆಯದು. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ವಸ್ತುಗಳನ್ನು ಮನೆಗೆ ತಂದರೆ ದೇವರ ಆಶೀರ್ವಾದ ನಿಮ್ಮದಾಗುತ್ತದೆ. ಶಾರದಿಯ ನವರಾತ್ರಿಗಳು ಅಶ್ವಯುಜ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ ಬರುತ್ತದೆ. ಈ ಉತ್ಸವಗಳು 9 ದಿನಗಳ ಕಾಲ ನಡೆಯಲಿವೆ. ಈ ಹಬ್ಬದಲ್ಲಿ ದುರ್ಗಾದೇವಿಯ ಅವತಾರಗಳನ್ನು 9 ದಿನಗಳ ಕಾಲ ಪ್ರತಿದಿನ ಒಂಬತ್ತು ದೇವತೆಗಳ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ಭಕ್ತರು ಉಪವಾಸ ಮಾಡುತ್ತಾರೆ. ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ ಮತ್ತು ದುರ್ಗಾದೇವಿಯ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಇನ್ನೂ ನವರಾತ್ರಿ ಸಂದರ್ಭದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಮನೆಗೆ ತಂದರೆ ದುರ್ಗಾ ದೇವಿಯನ್ನು ಮೆಚ್ಚಿಸಬಹುದು. ತಾಯಿಯು ಭಕ್ತರಿಗೆ ವಿಶೇಷ ಅನುಗ್ರಹವನ್ನು ನೀಡುತ್ತಾಳೆ. ಅದಕ್ಕಾಗಿಯೇ ಹೊಸ ವರ್ಷದ ಸಮಯದಲ್ಲಿ ಈ ವಸ್ತುಗಳನ್ನು ಮನೆಗೆ ತರಬೇಕು. ಇಂದು ಅವು ಯಾವುವು ಎಂದು ತಿಳಿದುಕೊಳ್ಳೋಣ. ವೈದಿಕ ಪಂಚಾಂಗದ ಪ್ರಕಾರ ಅಕ್ಟೋಬರ್ 3 ರಂದು ಮಧ್ಯರಾತ್ರಿ 12.19 ಕ್ಕೆ ಪ್ರಾರಂಭವಾಗುವ…
ಕೇಂದ್ರ ಸರ್ಕಾರವು ಕಾರ್ಮಿಕರಿಗೆ ಕನಿಷ್ಠ ವೇತನ ದರಗಳನ್ನು ಹೆಚ್ಚಳ ಮಾಡಿದೆ. ವೇರಿಯಬಲ್ ಡಿಯರ್ನೆಸ್ ಅಲೋವೆನ್ಸ್ (VDA) ಪರಿಷ್ಕರಣೆ ಮೂಲಕ ಕೇಂದ್ರ ಸರ್ಕಾರವು ಕನಿಷ್ಠ ವೇತನ ದರ ಹೆಚ್ಚಳ ಘೋಷಿಸಿದೆ. ಇದು ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿದೆ. ಈ ಪರಿಷ್ಕರಣೆಯು ಕಾರ್ಮಿಕರಿಗೆ, ವಿಶೇಷವಾಗಿ ಅಸಂಘಟಿತ ವಲಯದಲ್ಲಿರುವವರಿಗೆ, ಆರ್ಥಿಕ ನಿರ್ವಹಣೆಗೆ ಸಹಕಾರಿಯಾಗಲಿದೆ. ಪರಿಷ್ಕೃತ ವೇತನವು ಕಟ್ಟಡ ಕಾರ್ಮಿಕರು, ಲೋಡಿಂಗ್ ಮತ್ತು ಅನ್‌ಲೋಡಿಂಗ್, ವಾಚ್ ಮತ್ತು ವಾರ್ಡ್, ಕಸ ಗುಡಿಸುವುದು, ಸ್ವಚ್ಛತೆ, ಮನೆಗೆಲಸ, ಗಣಿಗಾರಿಕೆ ಮತ್ತು ಕೃಷಿ ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ. ಕೌಶಲ್ಯಮಟ್ಟಕ್ಕೆ ಅನುಗುಣವಾಗಿ ಕನಿಷ್ಠ ವೇತನ ದರ ಹೆಚ್ಚಿಸಲಾಗಿದೆ. ಕೌಶಲ್ಯರಹಿತ, ಅರೆ-ಕುಶಲ, ಕೌಶಲ್ಯ ಮತ್ತು ಹೆಚ್ಚು ನುರಿತ ಮತ್ತು ಇತರೇ ವರ್ಗಗಳನ್ನು A, B ಮತ್ತು C ಎಂದು ವರ್ಗೀಕರಿಸಲಾಗಿದೆ. ವೇತನ ಪರಿಷ್ಕರಣೆ ಅಡಿಯಲ್ಲಿ ಎ- ವರ್ಗದಲ್ಲಿರುವವರು ದಿನಕ್ಕೆ 783 ರೂ.ಗಳಂತೆ ತಿಂಗಳಿಗೆ ರೂ 20,358 ರೂ., ಅರೆ-ಕುಶಲ ಕೆಲಸಗಾರರು 868 ರೂ. ನಂತೆ ತಿಂಗಳಿಗೆ ರೂ…
ತೆಲಂಗಾಣ:- ಇಲ್ಲಿನ ಸಿದ್ದಿಪೇಟ್ ಜಿಲ್ಲೆಯಲ್ಲಿ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಜರುಗಿದೆ. ಘಟನೆಯಿಂದ ಆಕ್ರೋಶಗೊಂಡ ಹುಡುಗಿ ಕುಟುಂಬಸ್ಥರು, ಆರೋಪಿಯ ಮನೆ ಮತ್ತು ಕಾರಿಗೆ ಬೆಂಕಿ ಹಚ್ಚಿದರು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪೊಲೀಸರ ಉಪಸ್ಥಿತಿಯ ಹೊರತಾಗಿಯೂ ಸಂತ್ರಸ್ತೆಯ ಕುಟುಂಬ ಮತ್ತು ಸಂಬಂಧಿಕರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು ಮತ್ತು ಆರೋಪಿಯ ಮನೆಯನ್ನು ಸುಟ್ಟುಹಾಕಿದರು. ಪೊಲೀಸರು ಅಂತಿಮವಾಗಿ ಗುಂಪನ್ನು ಚದುರಿಸಲು ಮತ್ತು ಶಾಂತಿ ಪುನಃಸ್ಥಾಪಿಸುವಲ್ಲಿ ಯಶಸ್ವಿಯಾದರು. ಸಿದ್ದಿಪೇಟೆ ಪೊಲೀಸ್ ಕಮಿಷನರ್ ಕೂಡ ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಉದ್ವಿಗ್ನತೆಯನ್ನು ಶಮನಗೊಳಿಸಿ ಶಾಂತಿ ಕಾಪಾಡಿದರು. ಇದೇ ವೇಳೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸಂತ್ರಸ್ತೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ಸೂರ್ಯೋದಯ: 06:10, ಸೂರ್ಯಾಸ್ತ : 06:02 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿನ್ ಅಯಣ ಶರದ ಋತು, ಭಾದ್ರಪದ ಮಾಸ, ತಿಥಿ: ತ್ರಯೋದಶಿ ನಕ್ಷತ್ರ: ಮಖಾ ರಾಹು ಕಾಲ: 07:30 ನಿಂದ 09:00ತನಕ ಯಮಗಂಡ: 10:30ನಿಂದ 12:00 ತನಕ ಗುಳಿಕ ಕಾಲ: 01:30ನಿಂದ 03:00 ತನಕ ಅಮೃತಕಾಲ: ರಾ.2:04 ನಿಂದ ರಾ .3:52 ತನಕ ಅಭಿಜಿತ್ ಮುಹುರ್ತ: ಬೆ.11:42 ನಿಂದ ಮ.12:29 ತನಕ ಮೇಷ ರಾಶಿ: ಹಿತ ಶತ್ರುಗಳ ಕಿರಿಕಿರಿ ಅಧಿಕ, ಮಕ್ಕಳ ಚಿಂತೆ,ವಿವಾಹದಲ್ಲಿ ಅಡೆತಡೆ, ಸ್ತ್ರೀ ಮೂಲದಿಂದ ಧನ ಆಗಮನ, ಉದ್ಯೋಗದಲ್ಲಿ ಬಡ್ತಿ, ವಿದೇಶಕ್ಕೆ ಹೋಗುವ ಕನಸು ನನಸಾಗುತ್ತದೆ, ಜನ್ಮ ದಿನಾಂಕ, ಸಮಯ ತಿಳಿಸಿದರೆ,ಜಾತಕ ಬರೆದು ತಿಳಿಸಲಾಗುವುದು. ನಿಮ್ಮ ಸಮಸ್ಯೆಗಳಾದ ವಿವಾಹ ಅಡೆತಡೆ, ಸಂತಾನ ಸಮಸ್ಯೆ, ಪ್ರೇಮ ವಿವಾಹ, ವ್ಯಾಪಾರದಲ್ಲಿ ಲಾಭ ನಷ್ಟ,ವಿದೇಶ ಪ್ರವಾಸ, ಪರಸ್ತ್ರೀ ಬಯಕೆ,ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯಶಾಸ್ತ್ರ ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು, M. 93534 88403 ವೃಷಭ ರಾಶಿ : ಬಂಧುಗಳ ಮುಖಾಂತರ…
ಮಂಡ್ಯ :- ಮೈ- ಬೆಂ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಅಂದಾಜು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಐದಾರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮಂಡ್ಯದ ಸಾಂಜೋ ಆಸ್ಪತ್ರೆ ಮುಂಭಾಗ ಸೋಮವಾರ ಜರುಗಿದೆ. https://youtu.be/n0qYMPZis-E?si=_4qzpISsRvBhrwYa ತುಮಕೂರಿನಿಂದ – ಮೈಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ದಶಪಥ ಹೆದ್ದಾರಿಯಿಂದ ಮಂಡ್ಯ ನಗರಕ್ಕೆ ತೆರಳಲು ಸರ್ವಿಸ್ ರಸ್ತೆಗೆ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಯಲ್ಲಿದ್ದ ಕ್ಯಾಂಟರ್ ಗೆ ಡಿಕ್ಕಿಯಾಗಿ ಬಸ್ ಪಲ್ಟಿಯಾಗಿದ್ದು, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿ ಗಾಯಗೊಂಡಿದ್ದಾರೆ. ಬಸ್ ನಲ್ಲಿದ್ದ ಹಲವರಿಗೆ ಗಂಭೀರ ಗಾಯವಾಗಿದ್ದು, ಪಲ್ಟಿಯಾದ ಬಸ್ ನಲ್ಲಿದ್ದವರನ್ನು ಗಾಯಾಳುಗಳನ್ನು ಸ್ಥಳೀಯರು ಹಾಗೂ ವಾಹನ ಸವಾರರು ಹೊರ ತೆಗೆದು ಹತ್ತಿರವೇ ಇದ್ದ ಸಾಂಜೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಕ್ಷಣವೇ ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಪೋಲೀಸರು ಆಗಮಿಸಿ ಪಲ್ಟಿಯಾಗಿದ್ದ ಬಸ್ ಅನ್ನು ಕ್ರೇನ್ ಮೂಲಕ ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ…
ಬಿಗ್ ಬಸ್ ಸೀಸನ್ 11 ಗ್ರ್ಯಾಂಡ್ ಆರಂಭವಾಗಿದೆ. ಕಿರುತೆರೆ, ಹಿರಿತೆರೆ, ಕಾಮನ್ ಪೀಪಲ್, ಕಾಮಿಡಿ ಆರ್ಟೀಸ್ಟ್ ಸೇರಿದಂತೆ ಸಾಕಷ್ಟು ಮಂದಿ ದೊಡ್ಮನೆ ಒಳಗೆ ಕಾಲಿಟ್ಟಿದ್ದಾರೆ. ಅಂದ ಹಾಗೆ ಈ ಭಾರಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿರುವ ಈ ಸುಂದರಿ ಒಮ್ಮೆ ಹಾಕಿದ ಬಟ್ಟೆಯನ್ನು ಮತ್ತೊಮ್ಮೆ ಹಾಕಲ್ವಂತೆ. ಬಿಗ್ ಬಾಸ್ ಮನೆಗೆ ಹೋಗುವಾಗ ಒಂದು ಸೂಟ್ ಕೇಸ್ ತುಂಬ ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಇದರಲ್ಲಿ ತೆಗೆದುಕೊಂಡು ಹೋದ ಬಟ್ಟೆಗಳು ಎಷ್ಟು ದಿನಕ್ಕೆ ಸಾಕಗುತ್ತೆ ಅನ್ನೋ ಪ್ರಶ್ನೆ ಶುರುವಾಗುತ್ತೆ. ಆದರೆ ಈ ನಟಿ ಅಲ್ಲಿ ಹೇಗೆತ್ಯಾರೆ ಅನ್ನೋ ಕುತೂಹಲ ಇದೆ. ಅವರು ಒಂದ ಸಲ ಹಾಕಿದ ಡ್ರೆಸ್ ಇನ್ನೊಂದು ಸಲ ಹಾಕೋದೇ ಇಲ್ವಂತೆ. ಗೀತಾ ಧಾರವಾಹಿ ಮೂಲಕ ಖ್ಯಾತಿ ಘಳಿಸಿದವರು ನಟಿ ಭವ್ಯಾ ಗೌಡ. 3-4 ವರ್ಷಗಳ ಕಾಲ ಸುದೀರ್ಘವಾಗಿ ಪ್ರಸಾರ ಕಂಡಿದ್ದ ಸೀರಿಯಲ್ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿತ್ತು. ಒಟ್ಟು 1107 ಸಂಚಿಕೆಗಳು ಕೂಡಾ ಪ್ರಸಾರವಾಗಿದ್ದವು. ಒಂದಷ್ಟು ಸಲ ಗ್ರಾಫಿಕ್ಸ್ ವಿಚಾರವಾಗಿ…
ಕೋಲಾರ :- ವಾಯುಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶವಾಗಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲ್ಲೂಕಿನ ಕರಪನಹಳ್ಳಿ ಜರುಗಿದೆ. https://youtu.be/636-JFAESOY?si=UjtcksctaX465r65 ವಾಯುಸೇನಾ ಹೆಲಿಕಾಪ್ಟರ್ ಯಲಹಂಕದಿಂದ ಚೆನ್ನೈಗೆ ತೆರಳುತ್ತಿತ್ತು. ಆಕಾಶದಲ್ಲಿ ಹಾರುತ್ತಿದ್ದ ವೇಳೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ತುರ್ತು ಭೂ ಸ್ಪರ್ಶ ಮಾಡಲಾಗಿದೆ. ಮಹಿಳಾ ಪೈಲಟ್ ಸೇರಿದಂತೆ ಇಬ್ಬರು ಹೆಲಿಕಾಪ್ಟರ್ನಲ್ಲಿದ್ದು, ಸದ್ಯ ಸುರಕ್ಷಿತವಾಗಿದ್ದಾರೆ. ರಾತ್ರಿ 10 ಗಂಟೆ ನಂತರ ತಾಂತ್ರಿಕ ದೋಷ ನಿವಾರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಹಿನ್ನೆಲೆ ಮತ್ತೊಂದು ಹೆಲಿಕಾಪ್ಟರ್ ಸ್ಥಳಕ್ಕೆ ಬಂದಿದೆ. ವಾಯುಸೇನೆಯ ಮೆಕ್ಯಾನಿಕ್ಸ್ ಕೂಡ ಸ್ಥಳಕ್ಕೆ ಬಂದಿಳಿದಿದ್ದಾರೆ.
ಬೆಂಗಳೂರು:- ಕೊಲೆ ಪ್ರಕರಣ ಸಂಬಂಧ ಇಂದು ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಸೆಷನ್ ಕೋರ್ಟ್ನಲ್ಲಿ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್, ಪವಿತ್ರಗೌಡ, ವಿನಯ್ ಸೇರಿ ಐದು ಜನ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. https://youtu.be/x4nx8kzdjMA?si=D8DDUbZlAM8e4xLp 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ದರ್ಶನ್ ಪರ ಸುನೀಲ್, ಪವಿತ್ರಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಲಿದ್ದಾರೆ. ವಿಶೇಷ ಸಾರ್ವಜನಿಕ ಅಭಿಯೋಜಕರು ಶುಕ್ರವಾರವೇ ದರ್ಶನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದರು. ದರ್ಶನ್ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದ್ದರು. ಹೀಗಾಗಿ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತ್ತು.ಅದರಂತೆ ಇಂದು ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಐವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಇನ್ನು ಶುಕ್ರವಾರ ಪವಿತ್ರಾಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡನೆ ಮಾಡಿದ್ದರು. ಪವಿತ್ರಾ ಗೌಡ ಪಾತ್ರ ಹೆಚ್ಚಿಲ್ಲ, ಅದೇಗೆ ಕೊಲೆ ಆರೋಪ ಮಾಡಿದ್ದಾರೆ ಎಂದು ವಾದ ಮಂಡನೆ ಮಾಡಿದ್ದರು.…
ಬೆಂಗಳೂರು:- ಕರ್ನಾಟಕದ 14ಕ್ಕೂ ಅಧಿಕ ಜಿಲ್ಲೆಗಳಲ್ಲಿ ಅಕ್ಟೋಬರ್ 6ರವರೆಗೂ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. https://youtu.be/x4nx8kzdjMA?si=nvWR8sGWDkNTFatp ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದ್ದು, ಯೆಲ್ಲೋ, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ. ಎಚ್ಎಎಲ್ನಲ್ಲಿ 29.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.0ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 30.4 ಡಿಗ್ರಿ ಸೆಲ್ಸಿಸಯ್ ಗರಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 28.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಹೊನ್ನಾವರದಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 30.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ…