ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರಿಗೆ ತಮ್ಮ ಮಾತುಗಳೆ ಮುಳುವಾಗುತ್ತಿವೆ. ಈಗಾಗಲೇ ಸುದೀಪ್ ಎಚ್ಚರಿಕೆ ನೀಡಿದ್ದರು ಚೈತ್ರಾ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇದೀಗ ಮತ್ತೆ ನಾಲಿಗೆ ಹರಿಬಿಟ್ಟ ಚೈತ್ರಾ ವಿವಾದ ಹುಟ್ಟು ಹಾಕಿದ್ದಾರೆ. ಕಳೆದ ವಾರ ಚೈತ್ರಾ ‘ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಜಗದೀಶ್ಗೆ ಹೇಳಿದ್ದರು. ಆ ಮಾತನ್ನು ಕಿಚ್ಚ ಸುದೀಪ್ ಅವರು ಖಂಡಿಸಿದ್ದರು. ಆದರೂ ಚೈತ್ರಾ ಕೊಂಚವೂ ಬದಲಾಗಿಲ್ಲ. ಅಕ್ಟೋಬರ್ 21ರ ಸಂಚಿಕೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಕಳೆದ ವಾರ ಜಗದೀಶ್ ಅವರಿಗೆ ಉಗ್ರಂ ಮಂಜು ಅವರು ಚಪ್ಪಲಿ ತೋರಿಸಿದ್ದರು. ಅದು ಸರಿಯಲ್ಲ ಎಂದು ಸುದೀಪ್ ಅವರು ಹೇಳಿದ್ದರು. ಇಂಥ ಹಲವು ಕಾರಣಗಳಿಂದಾಗಿ ಮನೆಯ ಸದಸ್ಯರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದರು. ಅಷ್ಟಾದರೂ ಕೂಡ ಚೈತ್ರಾ ಅವರು ಮಾತಿನ ವರಸೆ ಬದಲಾಯಿಸಿಕೊಂಡಿಲ್ಲ. ಸಂದರ್ಭ ಬಂದರೆ ತಾವು ಮೆಟ್ಟಿನಲ್ಲಿ ಹೊಡೆಯುವುದಾಗಿ ಚೈತ್ರಾ ಹೇಳಿದ್ದಾರೆ. ಈ ಮೊದಲು ಹಂಸಾ ಅವರ ಬಗ್ಗೆ ಗೋಲ್ಡ್ ಸುರೇಶ್ ಏನೇನೋ ಕಮೆಂಟ್ ಮಾಡಿದ್ದರು. ಹಂಸಾ ಅವರದ್ದು ಲವ್…
Author: Prajatv Kannada
ವೈಲ್ಡ್ ಕಾರ್ಡ್ ಮೂಲಕ ಸಿಂಗರ್ ಹನುಮಂತ ಬಿಗ್ ಬಾಸ್ ಎಂಟ್ರಿಕೊಟ್ಟಿದ್ದಾರೆ. ಅವರು ಎಂಟ್ರಿ ನೀಡಿದ ಬಳಿಕ ಮನೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಜಗದೀಶ್ ಇದ್ದಾಗ ಮಾತು ಮಾತಿಗೂ ಜಗಳ ಮಾಡುತ್ತಿದ್ದ ಮನೆ ಮಂದಿ ಹನುಮಂತನ ಆಗಮನದಿಂದ ಫುಲ್ ಖುಷ್ ಆಗಿದ್ದಾರೆ. ಆತನ ಮಾತಿಗೆ ಮನೆ ಮಂದಿ ಸಖತ್ ಮಜಾ ಮಾಡ್ತಿದ್ದಾರೆ. ಹಳ್ಳಿಯಿಂದ ಬಂದ ಹನುಮಂತ ಸಿಟಿ ಮಂದಿಯ ಜೀವನ ಶೈಲಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಆತ ಪೆದ್ದು ಪೆದ್ದಾಗಿ ಆಡುವಾಗ ವೀಕ್ಷಕರಿಗೂ ನಗು ಬರುತ್ತಿದೆ. ಹನುಮಂತನಿಗೆ ಗೊತ್ತಿಲ್ಲದ ವಿಚಾರಗಳನ್ನು ಉಳಿದ ಮನೆ ಮಂದಿ ಹೇಳಿಕೊಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಎಂದು ಪ್ರತಿಯೊಬ್ಬರು ಅಂದುಕೊಳ್ಳುತ್ತಾರೆ. ಅದಕ್ಕಾಗಿ ಸಾಕಷ್ಟು ಕಷ್ಟ ಪಡುತ್ತಾರೆ. ಆದರೆ ಹನುಮಂತ ಸುಲಭವಾಗಿ ಕ್ಯಾಪ್ಟನ್ ಸ್ಥಾನಕ್ಕೆ ಏರಿದ್ದಾರೆ. ಹಂಗಾಮಿ ಕ್ಯಾಪ್ಟನ್ ಆದರೂ ಕೂಡ ಅವರಿಗೆ ವಿಶೇಷ ಸವಲತ್ತುಗಳು ಸಿಕ್ಕಿವೆ. ಕ್ಯಾಪ್ಟನ್ ರೂಮ್ನಲ್ಲಿ ಅವರು ಹಾಯಾಗಿ ಮಲಗಿದ್ದಾರೆ. ಮುಂದಿನ ವಾರದ ಕ್ಯಾಪ್ಟೆನ್ಸಿ ಟಾಸ್ಕ್ಗೆ ಯಾರು ಅರ್ಹರು ಎಂಬುದನ್ನು ತೀರ್ಮಾನಿಸುವ ಅಧಿಕಾರವೂ ಹನುಮಂತನಿಗೆ ನೀಡಲಾಗಿದೆ.…
ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ಅಕ್ಟೋಬರ್ 20ರಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸುದೀಪ್ ಅವರ ಜೆಪಿ ನಗರದ ನಿವಾಸದ ಬಳಿ ಚಿತ್ರರಂಗ, ರಾಜಕೀಯ ಗಣ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಹಾಗೆಯೇ ಈ ಬಗ್ಗೆ ವರದಿ ಮಾಡಲು ಮಾಧ್ಯಮದ ಸಿಬ್ಬಂದಿಯೂ ನೆರೆದಿದ್ದರು. ತಮ್ಮ ನಿವಾಸದ ಬಳಿ ನೆರೆದಿದ್ದ ಜನರು ಜೋರಾಗಿ ಕಿರುಚುತ್ತಾ ಮೊಬೈಲ್ ಹಿಡಿದು ವಿಡಿಯೋ ಮಾಡುತ್ತಾ ಗಲಾಟೆ ಮಾಡಿದ್ದವರ ಬಗ್ಗೆ ಸುದೀಪ್ ಪುತ್ರಿ ಸಾನ್ವಿ ಬೇಸರ ಹೊರ ಹಾಕಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಬೇಸರ ತೋಡಿಕೊಂಡಿದ್ದಾರೆ. ಇದು ನಮ್ಮ ಕುಟುಂಬಕ್ಕೆ ಅತ್ಯಂತ ಕಷ್ಟಕರವಾದ ದಿನವಾಗಿದೆ. ನನ್ನ ಅಜ್ಜಿಯನ್ನು ಕಳೆದುಕೊಂಡ ದುಃಖಕ್ಕಿಂತ ನಮ್ಮ ಮನೆ ಮುಂದೆ ಸೇರಿದ ಜನರು ಜೋರಾಗಿ ಚೀರುವುದು ಹೆಚ್ಚು ನೋವುಂಟು ಮಾಡಿದೆ. ನಾನು ಅಳುತ್ತಿರುವಾಗ ನನ್ನ ಸುತ್ತಲೇ ಕ್ಯಾಮೆರಾಗಳು ಸುತ್ತುವರೆದಿದ್ದವು, ಇಷ್ಟೊಂದು ಅಮಾನುಷವಾಗಿ ನಡೆದುಕೊಳ್ಳುತ್ತಾರೆ ಎಂದು ನಾನು ತಿಳಿದುಕೊಂಡಿರಲಿಲ್ಲ. ತಾಯಿಯನ್ನು ಕಳೆದುಕೊಂಡಿದ್ದ ನನ್ನ ತಂದೆ ಅಳುತ್ತಿದ್ದಾಗ ಜನರು ನಮ್ಮನ್ನು…
ಚಿತ್ರದುರ್ಗ: ನೂರಕ್ಕೆ ನೂರರಷ್ಟು ಮೂರು ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ ಎಂದು ಉಪಚುನಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್‌ಗೆ ಕಾಂಗ್ರೆಸ್ ಸರ್ಕಾರ ಗಾಳ ಹಾಕುತ್ತಿದೆ ಎಂದು ಜೆಡಿಎಸ್ ಆರೋಪಿಸುತ್ತಿರುವ ವಿಚಾರವಾಗಿ ಜೆಡಿಎಸ್‌ನವರು ಬಾಯಿಗೆ ಬಂದಂತೆ ಮಾತಾಡುತ್ತಾರೆ. https://youtu.be/D7qjA5A79SY?si=syzE3vZR25pPaYB9 ಮೊದಲು ಜೆಡಿಎಸ್‌ನವರು ಅಭ್ಯರ್ಥಿ ಘೋಷಣೆ ಮಾಡಲಿ. ಇಂದು ಸಂಜೆ ಅಥವಾ ನಾಳೆ ನಾವು ಅಭ್ಯರ್ಥಿ ಘೋಷಿಸುತ್ತೇವೆ. ನೂರಕ್ಕೆ ನೂರರಷ್ಟು ಮೂರು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಪ್ರತಿಕ್ರಿಯಿಸಿದರು. ಬೆಂಗಳೂರಲ್ಲಿ ಮಳೆ ಜಾಸ್ತಿಯಾಗಿದೆ. ಆದರೆ ಬೆಳೆಗಳಿಗೆ ಯಾವುದೇ ತೊಂದರೆ ಆಗಿಲ್ಲ. ನಮ್ಮ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ನಮ್ಮ ಸರ್ಕಾರ ಬೀಳಿಸಲು ಸಾವಿರ ಕೋಟಿ ರೂ. ಖರ್ಚೆಂದು ಯತ್ನಾಳ್ ಹೇಳಿದ್ದರು. ಸಾವಿರ ಕೋಟಿ ಬ್ಲಾಕ್ ಮನಿ ಅಲ್ಲವೇ? ಅಷ್ಟೊಂದು ಹಣ ಎಲ್ಲಿಂದ ತರುತ್ತಾರೆ? ಜೆಪಿಯವರು ಬ್ಲಾಕ್ ಮನಿ ಮಾಡಿದ್ದಾರೆ ಎಂದು ಕಿಡಿಕಾರಿದರು
ಹವಾಮಾನ ಬದಲಾವಣೆಯ ಪರಿಣಾಮ ಎದುರಿಸಲು ಹೆಚ್ಚುವರಿಯಾಗಿ 2 ಮಿಲಿಯನ್ ಡಾಲರ್ ಹಣಕಾಸು ನೆರವು ನೀಡುವಂತೆ ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್) ಮನವಿ ಮಾಡಿದೆ. ಈ ತಿಂಗಳಾಂತ್ಯದಲ್ಲಿ ಐಎಂಎಫ್ ಸಭೆ ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚುವರಿ ನಿಧಿ ನೀಡುವಂತೆ ಪಾಕಿಸ್ತಾನ ಹಣಕಾಸು ಸಚಿವ ಮೊಹಮ್ಮದ್ ಔರಂಗಜೇಬ್ ವಿನಂತಿಸಿಕೊಂಡಿದ್ದಾರೆ. ಅಕ್ಟೋಬರ್ 21ರಿಂದ ಅಕ್ಟೋಬರ್ 26ರವರೆಗೆ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಗ್ರೂಪ್ನ ವಾರ್ಷಿಕ ಸಭೆ ಆಯೋಜನೆಯಾಗಿದೆ. ಹೆಚ್ಚುವರಿ ಸಾಲ ಮರುಪಾವತಿಸುವ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಈಗಾಗಲೇ ಐಎಂಎಫ್ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಇದೀಗ ಕೇಳಿರುವ 2 ಮಿಲಿಯನ್ ಡಾಲರ್ ಹಣಕಾಸು ನೆರವಿನ ಕುರಿತು ಐಎಂಎಫ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಕಾದು ನೋಡಬೇಕಿದೆ.
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪ್ರಜ್ವಲ್ ರೇವಣ್ಣ ಒಂದು ಪ್ರಕರಣದಲ್ಲಿ ಜಾಮೀನು ಹಾಗೂ ಇನ್ನೆರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು. https://youtu.be/u6t7BY6Tswk?si=jk8ph-u50RL1-nWA ವಿಚಾರಣೆ ನಡೆಸಿದ್ದ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು ಮೂರು ಅರ್ಜಿಗಳನ್ನು ವಜಾಗೊಳಿಸಿದೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿದ್ದರೆ, ಸಿಐಡಿ ಸೈಬರ್ ಸೆಲ್ ನಲ್ಲಿ ದಾಖಲಾಗಿದ್ದ ಇನ್ನೆರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು. ಪರಪ್ಪನ ಅಗ್ರಹಾರದಲ್ಲಿರುವ ಪ್ರಜ್ವಲ್ ರೇವಣ್ಣ ಅವರು ನಾಲ್ಕು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ತಾಯಿ ಸರೋಜ ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯ ನೋವಿನಲ್ಲಿರುವ ಸುದೀಪ್ ಸುದೀರ್ಘವಾದ ಟ್ವೀಟ್ ಒಂದನ್ನು ಮಾಡಿದ್ದಾರೆ. ಸುದೀಪ್ ಅವರ ತಾಯಿ ಸರೋಜ ಅವರು ಅಕ್ಟೋಬರ್ 21ರಂದು ನಿಧನರಾಗಿದ್ದು ನಟ ಮಾತೃ ವಿಯೋಗದ ನೋವಿನಲ್ಲಿದ್ದಾರೆ. ಸದ್ಯ ಸುದೀಪ್ ಮಾಡಿರುವ ಟ್ವೀಟ್ ವೈರಲ್ ಆಗಿದೆ. ಬಿಗ್ ಬಾಸ್ ಶೂಟಿಂಗ್ಗೆ ಹೊರಡುವಾಗ ಅವರನ್ನು ಗಟ್ಟಿಯಾಗಿ ಹಗ್ ಮಾಡಿ ಬಂದಿದ್ದೆ, ಎಲ್ಲ ಬದಲಾಯಿತು ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ನಟ ಘಟನೆಯನ್ನು ಸುದೀಪ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ನನ್ನ ಅಮ್ಮ ನಾನು ಶೂಟ್ಗೆ ಹೊರಡುವ ಮುನ್ನ ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದರು. ನಂತರದ ಕೆಲವೇ ಗಂಟೆಗಳಲ್ಲಿ ಅವರು ಇಲ್ಲವಾದರು. ಆದರೆ ಇದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಇದನ್ನು ಒಪ್ಪಿಕೊಳ್ಳಲು ಮತ್ತಷ್ಟು ಕಾಲಾವಕಾಶ ಬೇಕು ಎಂದಿದ್ದಾರೆ. ನಮ್ಮ ಅಮ್ಮ ನನ್ನ ಮೊದಲ ಅಭಿಮಾನಿ ಆಗಿದ್ದರು. ಅಭಿಮಾನವನ್ನು ನಿತ್ಯವೂ ವ್ಯಕ್ತಪಡಿಸುತ್ತಿದ್ದರು. ತಪ್ಪು ಮಾಡಿದರೆ, ತಿದ್ದುವ ಗುರುವಾಗಿದ್ದರು. ಸದಾ ನನ್ನ ಹಿತವನ್ನೇ ಬಯಸುತ್ತಿದ್ದರು ಎಂದು ಕಿಚ್ಚ ಅವರು ಅಮ್ಮನ…
ಹುಬ್ಬಳ್ಳಿ/ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿ ಯೋಗೇಶ್ವರ್ ಅವರಿಂದು ಬಿಜೆಪಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. https://youtu.be/tOf1d74Obm0?si=Zf1LvVQyHtOlh6kz ಸಂಜೆ ನಾಲ್ಕು ಗಂಟೆ ಸುಮಾರಿಗೆ ಹುಬ್ಬಳ್ಳಿಗೆ ತೆರಳಿದ ಯೋಗೇಶ್ವರ್, ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಸಿಪಿವೈ ನಿರ್ಧರಿಸಿದ್ದರು. ಕೊನೇ ಕ್ಷಣದವರೆಗೂ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಿಪಿವೈಗೆ ಬಿಜೆಪಿ ಕಡೆಯಿಂದ ಯಾವುದೇ ಶುಭ ಸುದ್ದಿ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಹಾಗಾಗಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು: ಸಚಿವ ಎನ್.ಎಸ್.ಬೋಸರಾಜು ಪತ್ನಿ ಹೆಸರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಅವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. https://youtu.be/F18zRQnb1ds?si=fBvXYe-oKdfE_fnD ರಾಯಚೂರಿನಲ್ಲಿ ರಕ್ಷಿತಾರಣ್ಯ ಪ್ರದೇಶದಲ್ಲಿ 5 ಎಕರೆ 27 ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕುರಿತಂತೆ ರಾಯಚೂರು ಉಪವಲಯ ಅರಣ್ಯಾಧಿಕಾರಿ ತನಿಖೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ. ಅದರ ಪ್ರಕಾರ, ಸಿ.ಎಚ್.ಶ್ರೀನಿವಾಸ್, ಎನ್.ಎಸ್.ಕೃಷ್ಣವೇಣಿ, ಮುತ್ಯಾಲ ತಿರುಮಲ, ವಿ.ಶಿವನಾದ ಅವರು ಆರೋಪಿಗಳಾಗಿದ್ದಾರೆ. ಕೃಷ್ಣವೇಣಿಯವರು ಎನ್.ಎಸ್.ಬೋಸರಾಜು ಅವರ ಪತ್ನಿಯಾಗಿದ್ದು, ಅರಣ್ಯ ಒತ್ತುವರಿಯಲ್ಲಿ ಪ್ರಭಾವ ಬಳಕೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ಭೂಮಿ ಒತ್ತುವರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸೃಜನಪಕ್ಷಪಾತ ಎಸಗಲಾಗಿದೆ. ಗುಂಪು ರಚನೆ ಮಾಡಿಕೊಂಡು ರಕ್ಷಿತಾರಣ್ಯವನ್ನು ಕಬಳಿಸಿದ್ದಾರೆ. ಈ ಭಾಗದಲ್ಲಿ ಪ್ರತಿ ಚದರ ಅಡಿಗೆ ಕನಿಷ್ಟ 4 ಸಾವಿರ ರೂ. ದರ ಇದೆ. ಒಟ್ಟು ಭೂಮಿಗೆ ನೂರಾರು ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವಿದೆ. ಕೃಷ್ಣವೇಣಿ ಅವರು 17 ಗುಂಟೆ…
ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನನಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ, ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿರುವುದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ನಡುವೆ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಿದೆ. https://youtu.be/EzOEd3DJnkE?si=pscK8e99vIrMD-Mn ಜೆಡಿಎಸ್‍ನಿಂದ ಸ್ಪರ್ಧಿಸಿದರೆ ಕಷ್ಟ ಆಗುತ್ತದೆ. ಬಿಜೆಪಿಯಿಂದಲೇ ಸ್ಪರ್ಧಿಸಬೇಕೆಂಬ ಆಸೆ ಇದೆ. ಆದರೆ, ಅವರು ಆಗಲ್ಲ ಎನ್ನುತ್ತಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮನಸ್ಸಿನಲ್ಲಿ ಅವರ ಮಗನಿಗೆ ಟಿಕೆಟ್ ಕೊಡಬೇಕು ಎಂಬ ಆಸೆ ಇದೆ. ಅವರ ಮನಸಲ್ಲೇ ಆ ರೀತಿ ಇದ್ದರೆ, ಏನು ಮಾಡಲಾಗುತ್ತದೆ ಎಂದು ಅವರು ಪ್ರಶ್ನಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆ ಇದೆ. ಇನ್ನೂ ಎರಡು ದಿನ ಕಾದು ನೋಡುವ ತಂತ್ರವನ್ನು ಉಪಯೋಗಿಸುತ್ತೇನೆ. ನಾನು ಈ ಕ್ಷಣಕ್ಕೂ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದೇನೆ. ಬೆಳಿಗ್ಗೆ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂದು ನಮ ಜಿಲ್ಲಾಧ್ಯಕ್ಷರು ಎಂದು ಹೇಳಿದ್ದರು. ಆ ರೀತಿ ಹೇಳಿದ ಮೇಲೆ…