Author: Prajatv Kannada

ನೆಲಮಂಗಲ: ಮುಡಾ ಹಗರಣದಲ್ಲಿ ಸಿಎಂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.ಸೋಂಪುರ ಹೋಬಳಿಯ ಸಮಾಧಾನ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಡಾ ಹಗರಣ, ವಾಲ್ಮೀಕಿ ಹಗರಣದಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ. https://youtu.be/wTvM6D24vtU?si=4HDkGdYEpTa5vDZw ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅನಿವಾರ್ಯತೆ ಬಂದಾಗಿದೆ.ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೈಸೂರಿಗೆ ಮೊದಲನೇ ಪಾದಯಾತ್ರೆ ಯಶಸ್ವಿಯಾಗಿದೆ. ಸದ್ಯ ಎರಡನೇ ಪಾದಯಾತ್ರೆ ಬಗ್ಗೆ ಚರ್ಚೆಯಾಗಿಲ್ಲ ಎಂದು ತಿಳಿಸಿದರುಈ ಎರಡು ಹಗರಣಗಳು ಸಿಬಿಐಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆಯವರೇ ಈ ಹಗರಣದ ಬಗ್ಗೆ ಮಾತಾಡಿದ್ದಾರೆ. ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಅನಿವಾರ್ಯವಾಗಿದೆ ಎಂದರು.

Read More

ನೆಲಮಂಗಲ: ರಾತ್ರೋ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 2 ಲಕ್ಷ ಬೆಲೆ ಬಾಳುವ ಹಸುಗಳ ಕಳ್ಳತನ ನಡೆದಿರುವ ಘಟನೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮದಲ್ಲಿ ಜರುಗಿದೆ. https://youtu.be/1XBScCUGWAI?si=quNfCyEWZZuCAgI9 ರೈತನ ಮನೆಯಲ್ಲೇ, ಆಶ್ರಯವಾಗಿದ್ದು ಹಸುಗಳ ಕದ್ದು ಖದೀಮರು ಪರಾರಿಯಾಗಿದ್ದಾರೆ. ಇನ್ನೂ ನೆಲಮಂಗಲ ತಾಲೂಕಿನಲ್ಲಿ ಹಸುಗಳ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ. ಹಸುಗಳ ಕಳೆದುಕೊಂಡ ರೈತ ತಿಮ್ಮಪ್ಪಯ್ಯ ಕಣ್ಣೀರು ಹಾಕಿದ್ದಾನೆ. ಹಾಲು ಕೊಡುತ್ತಿದ್ದ ಹಸುಗಳ ಜೊತೆ ಕರುಗಳನ್ನು ಸಹ ಕಳ್ಳತನ ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಗದಗ ಜಿಲ್ಲೆಯ ಹಲವಡೆ ರಾತ್ರಿ ಭಾರಿ ಮಳೆ ಹಿನ್ನೆಲೆ ವಡ್ಡಿನ ಹಳ್ಳದಲ್ಲಿ ಇಬ್ಬರು ಯುವಕರು ಕೊಚ್ಚಿ ಹೋದ ಘಟನೆ ಹುಣಸಿಕಟ್ಟಿ ಬಳಿ ನಡೆದಿದೆ. ಶಿವಪ್ಪ ಅಶೋಕಪ್ಪ ಅವರಾದಿ (25) ಮಣಿಕಂಠ ಅಶೋಕ ಮಲ್ಲಾಪೂರ (26) ನೀರು ಪಾಲಾದ ಯುವಕರಾಗಿದ್ದು, ಶಿವಪ್ಪ ಅಶೋಕಪ್ಪ ಅವರಾದಿ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಮಣಿಕಂಠನಿಗಾಗಿ ಶೋಧ ನಡೆಯುತ್ತಿದೆ. https://youtu.be/ongSxI4iz1s?si=9Lsg7U_Yfh1esQAF ನಿನ್ನೆ ರಾತ್ರಿ ಹುಣಸಿಕಟ್ಟಿಯಿಂದ ನರಗುಂದಕ್ಕೆ ಮಣಿಕಂಠ ಹಾಗೂ ಗೆಳೆಯ ಹೋಗಿದ್ದರು. ಗದಗ ಜಿಲ್ಲೆಯ ಹಲವಡೆ ರಾತ್ರಿ ಭಾರಿ ಮಳೆ ಹಿನ್ನೆಲೆ ಮಾರ್ಗ ಮಧ್ಯೆ ತುಂಬಿ ಹರಿಯುತ್ತಿದ್ದ ಒಡ್ಡಿ ಹಳ್ಳದಲ್ಲಿ ಕೊಚ್ಚಿ ಹೋಗಿ ಅವಘಡ ಸಂಭವಿಸಿದೆ. ಪೊಲೀಸ್, ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದ್ದು, ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ನವದೆಹಲಿ/ ಬಳ್ಳಾರಿ: ಮಾಜಿ ಸಚಿವ ಗಂಗಾವತಿ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಬಳ್ಳಾರಿ ಜಿಲ್ಲಾ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್‌ ತೆರವು ಮಾಡಿದೆ. ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದಿಂದ ಆದೇಶ ಪ್ರಕಟವಾಗಿದ್ದು, ಯಾವುದೇ ಪೂರ್ವಾನುಮತಿ ಇಲ್ಲದೇ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. https://youtu.be/UHMy14ryP1Q?si=JoOtEM1V-NyNeUnp ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂಎಂ ಸುಂದರೇಶ್ ನೇತೃತ್ವದ ದ್ವಿ ಸದಸ್ಯ ಪೀಠ ಈ ಆದೇಶ ನೀಡಿದೆ. ಪ್ರಕರಣದ ತನಿಖೆ ಮುಕ್ತಾಯಗೊಂಡು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು ಈ ಹಂತದಲ್ಲಿ ಸಾಕ್ಷ್ಯ ನಾಶ ಸಾಧ್ಯವಿಲ್ಲ ಎನ್ನುವ ವಾದ ಪುರಸ್ಕರಿಸಿದ ಕೋರ್ಟ್ ಜಾಮೀನಿನಲ್ಲಿದ್ದ ಷರತ್ತನ್ನು ರದ್ದು ಮಾಡಿದೆ. ನಿಷೇಧ ಹೇರಿದ್ದು ಯಾಕೆ? ಆಂಧ್ರದ ಅನಂತಪುರ, ಕರ್ನೂಲು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ 2011 ಸೆಪ್ಟೆಂಬರ್ 5ರಂದು ಜನಾರ್ದನ ರೆಡ್ಡಿಯ ಬಂಧನವಾಗಿತ್ತು. ಬಂಧನದ ಬಳಿಕ ನಡೆದ ವಿಚಾರಣೆಯಲ್ಲಿ ಜನಾರ್ದನ…

Read More

ಬೆಂಗಳೂರು/ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಲಿದ್ದಾರೆ. ಈಗಾಗಲೇ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದ್ದು ಮೊದಲು ದೂರುದಾರರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಿದೆ. ದೂರುದಾರರ ಬಳಿ ದಾಖಲೆಯನ್ನು ಪೊಲೀಸರು ಸಂಗ್ರಹಿಸಲಿದ್ದಾರೆ. https://youtu.be/O7nlzf8sw60?si=XBYqSnlwElizHCi3 ಇನ್ನೊಂದು ಕಡೆ ನಿವೃತ್ತ ನ್ಯಾ. ದೇಸಾಯಿ ತನಿಖಾ ಸಮಿತಿ ಬಳಿಯಿರುವ ದಾಖಲೆ ಪಡೆಯಲು ಕಾನೂನು ಪ್ರಕ್ರಿಯೆ ಆರಂಭವಾಗಲಿದೆ. ಆ ದಾಖಲೆಗಳು ಸಿಕ್ಕ ಮೇಲೆ ಆರೋಪಿಗಳಿಗೆ ಹಂತ ಹಂತವಾಗಿ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ. ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದರು. ಯಾರ ವಿರುದ್ಧ ಎಫ್‌ಐಆರ್‌? * ಸಿದ್ದರಾಮಯ್ಯ, ಮುಖ್ಯಮಂತ್ರಿ (A1) * ಪಾರ್ವತಿ ಬಿಎಂ, ಸಿದ್ದರಾಮಯ್ಯ ಪತ್ನಿ(A2) * ಮಲ್ಲಿಕಾರ್ಜುನ ಸ್ವಾಮಿ, ಸಿದ್ದರಾಮಯ್ಯ, ಬಾಮೈದ(A3) * ದೇವರಾಜು, ಮಾರಾಟಗಾರ, ನಕಲಿ ಭೂ ಮಾಲೀಕ (A4) * ಇತರರು‌…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಿಂಬದಿಯಿಂದ ಬಂದು ಫೋನನ್ನು ಕದಿಯುವ ಕಳ್ಳರ ಹಾವಳಿ ಆರಂಭವಾಗಿದೆ. https://youtu.be/n0qYMPZis-E?si=TeqInOqT7b1oXoFG ಹೆಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಫೋನ್ ಹಿಡಿದು ಮಾತಾಡುತ್ತಾ ಡೆಲಿವರಿ ಬಾಯ್ ಬೈಕಿನಲ್ಲಿ ಹೊರಟಿದ್ದರು. ಈ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಮೊಬೈಲ್ ಕಿತ್ತ ರಭಸಕ್ಕೆ ಡೆಲಿವರಿ ಬಾಯ್ ಆಯತಪ್ಪಿ ರಸ್ತೆಯಲ್ಲೇ ಬಿದ್ದಿದ್ದಾರೆ. ಹಿಂದೆ ಬರುತ್ತಿದ್ದ ಕಾರಿನ ಮಧ್ಯೆ ಸ್ವಲ್ಪ ಅಂತರ ಇದ್ದ ಕಾರಣ ಡೆಲಿವರಿ ಬಾಯ್‌ ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಡೆಲಿವರಿ ಬಾಯ್‌ ಹಿಂದಿನಿಂದ ಬರುತ್ತಿದ್ದ ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿದೆ.

Read More

ಬೆಂಗಳೂರು:- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಸರಕಾರ ಸಂಚು ರೂಪಿಸಿದೆ ಎಂದು ವಿಧಾನಪರಿಷತ್ ಜೆಡಿಎಸ್ ಉಪನಾಯಕ ಟಿ. ಎ.ಶರವಣ ಗಂಭೀರ ಆರೋಪ ಮಾಡಿದ್ದರೆ. ಕುಮಾರಸ್ವಾಮಿ ಬಗ್ಗೆ ಹಂದಿಗೆ ಹೋಲಿಸಿ ಮಾತನಾಡಿದ ADGP ಚಂದ್ರಶೇಖರ ವಿರುದ್ಧ ಕಿಡಿಕಾರಿ ಮಾತನಾಡಿದ ಟಿಎ ಶರವಣ ಅವರು, ರಾಜ್ಯದ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು, ಕುಮಾರಸ್ವಾಮಿ ಅವರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಸೃಷ್ಟಿಸಿ, ಕಾನೂನು ಬಲೆಯಲ್ಲಿ ಸಿಲುಕಿಸಲು ಕಾಂಗ್ರೆಸ್ ನಾಯಕರು ನಡೆಸಿರುವ ಪಿತೂರಿಗೆ ಜೆಡಿಎಸ್ ಜಗ್ಗುವುದಿಲ್ಲ ಎಂದು ಶರವಣ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರನ್ನು ನಿಂದಿಸುವ ಪತ್ರ ಬರೆದಿರುವ ಲೋಕಾಯುಕ್ತ ಹಿರಿಯ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಲು ಕ್ರಮ ಕೈಗೊಳ್ಳಬೇಕು. ಎಲ್ಲಿಂದಲೋ ರಾಜ್ಯಕ್ಕೆ ಬಂದು, ಇಲ್ಲಿಯ ಪೊಲೀಸ್ ವ್ಯವಸ್ಥೆಯಲ್ಲಿ ನೆಲೆಯೂರಿ ಇಲ್ಲಿಯ ಚುನಾಯಿತ ನಾಯಕರ ವಿರುದ್ಧವೇ ಪಿತೂರಿ ನಡೆಸಿರುವ ಪೊಲೀಸ್ ಅಧಿಕಾರಿ ಚಂದ್ರ ಶೇಖರ್ ನಡೆಸುವ ಸುಲಿಗೆಗಳ ಬಗ್ಗೆ ತನಿಖೆ ಆಗಬೇಕು ಎಂದು ಶರವಣ ಆಗ್ರಹ ಪಡಿಸಿದ್ದಾರೆ. ಹಿಮಾಚಲ ಪ್ರದೇಶದ…

Read More

ನಾವು ಮನೆಯಲ್ಲಿ ವಿಶೇಷ ಸಂದರ್ಭಗಳು ಬಂದಂತಹ ಸಮಯದಲ್ಲಿ ಸಿಹಿ ಅಡುಗೆಗಳನ್ನು ಮಾಡುತ್ತೇವೆ. ಆ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚಾಗಿ ಬಳಸುತ್ತೇವೆ. ಇದರಲ್ಲಿ ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ, ಖರ್ಜೂರ, ಪಿಸ್ತಾ ಇತ್ಯಾದಿಗಳು ಸೇರಿರುತ್ತವೆ. ಯಾವ ಸಿಹಿ ಅಡುಗೆಗೆ ಖರ್ಜೂರ ಹಾಕುತ್ತೇವೆ, ಅಂತಹ ಅಡುಗೆಯ ಸ್ವಾದ ಬೇರೆಯೇ ಇರುತ್ತದೆ. ಆದರೆ ಖರ್ಜೂರವನ್ನು ಕೇವಲ ಇಂತಹ ಸಂದರ್ಭಗಳಲ್ಲಿ ಮಾತ್ರ ತಿನ್ನುವುದಲ್ಲ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಈ ಕೆಳಗಿನ ಲಾಭಗಳು ನಿಮಗೆ ಸಿಗುತ್ತವೆ. ಖಾಲಿ ಹೊಟ್ಟೆಯಲ್ಲಿ ಯಾರೂ ಖರ್ಜೂರ ಸೇವಿಸುತ್ತಾರೆ ಅವರಿಗೆ ಸುಸ್ತು, ಆಯಾಸ ಮತ್ತು ದುರ್ಬಲತೆ ಎನ್ನುವುದು ಇರುವುದಿಲ್ಲ. ಏಕೆಂದರೆ ಖರ್ಜೂರಗಳಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೇರಳ ವಾಗಿ ಸಿಗುತ್ತದೆ. ಗ್ಲುಕೋಸ್, ಫ್ರಕ್ಟೂಸ್, ಸುಕ್ರೋಸ್ ಹೀಗೆ ಬೇರೆ ಬೇರೆ ರೂಪಗಳಲ್ಲಿ ಇರುವುದರಿಂದ ಎಲ್ಲವೂ ಸಹ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಕೊಡುವಲ್ಲಿ ನೆರವಾಗುತ್ತವೆ. ತುಂಬಾ ವೇಗವಾಗಿ ಖರ್ಜೂರಗಳಿಂದ ಈ ಲಾಭಗಳನ್ನು ಪಡೆಯ ಬಹುದು. ಖರ್ಜೂರಗಳಲ್ಲಿ ನಾರಿನ…

Read More

ನವರಾತ್ರಿಯ ಶುಭ ಸಂದರ್ಭದಲ್ಲಿ, ದುರ್ಗಾ ದೇವಿಯ ಆಶೀರ್ವಾದ ಪಡೆಯಲು ಕೆಲವು ವಸ್ತುಗಳನ್ನು ಮನೆಗೆ ತರುವುದು ಒಳ್ಳೆಯದು. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ವಸ್ತುಗಳನ್ನು ಮನೆಗೆ ತಂದರೆ ದೇವರ ಆಶೀರ್ವಾದ ನಿಮ್ಮದಾಗುತ್ತದೆ. ಶಾರದಿಯ ನವರಾತ್ರಿಗಳು ಅಶ್ವಯುಜ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ ಬರುತ್ತದೆ. ಈ ಉತ್ಸವಗಳು 9 ದಿನಗಳ ಕಾಲ ನಡೆಯಲಿವೆ. ಈ ಹಬ್ಬದಲ್ಲಿ ದುರ್ಗಾದೇವಿಯ ಅವತಾರಗಳನ್ನು 9 ದಿನಗಳ ಕಾಲ ಪ್ರತಿದಿನ ಒಂಬತ್ತು ದೇವತೆಗಳ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ಭಕ್ತರು ಉಪವಾಸ ಮಾಡುತ್ತಾರೆ. ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ ಮತ್ತು ದುರ್ಗಾದೇವಿಯ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಇನ್ನೂ ನವರಾತ್ರಿ ಸಂದರ್ಭದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಮನೆಗೆ ತಂದರೆ ದುರ್ಗಾ ದೇವಿಯನ್ನು ಮೆಚ್ಚಿಸಬಹುದು. ತಾಯಿಯು ಭಕ್ತರಿಗೆ ವಿಶೇಷ ಅನುಗ್ರಹವನ್ನು ನೀಡುತ್ತಾಳೆ. ಅದಕ್ಕಾಗಿಯೇ ಹೊಸ ವರ್ಷದ ಸಮಯದಲ್ಲಿ ಈ ವಸ್ತುಗಳನ್ನು ಮನೆಗೆ ತರಬೇಕು. ಇಂದು ಅವು ಯಾವುವು ಎಂದು ತಿಳಿದುಕೊಳ್ಳೋಣ. ವೈದಿಕ ಪಂಚಾಂಗದ ಪ್ರಕಾರ ಅಕ್ಟೋಬರ್ 3 ರಂದು ಮಧ್ಯರಾತ್ರಿ 12.19 ಕ್ಕೆ ಪ್ರಾರಂಭವಾಗುವ…

Read More

ಕೇಂದ್ರ ಸರ್ಕಾರವು ಕಾರ್ಮಿಕರಿಗೆ ಕನಿಷ್ಠ ವೇತನ ದರಗಳನ್ನು ಹೆಚ್ಚಳ ಮಾಡಿದೆ. ವೇರಿಯಬಲ್ ಡಿಯರ್ನೆಸ್ ಅಲೋವೆನ್ಸ್ (VDA) ಪರಿಷ್ಕರಣೆ ಮೂಲಕ ಕೇಂದ್ರ ಸರ್ಕಾರವು ಕನಿಷ್ಠ ವೇತನ ದರ ಹೆಚ್ಚಳ ಘೋಷಿಸಿದೆ. ಇದು ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿದೆ. ಈ ಪರಿಷ್ಕರಣೆಯು ಕಾರ್ಮಿಕರಿಗೆ, ವಿಶೇಷವಾಗಿ ಅಸಂಘಟಿತ ವಲಯದಲ್ಲಿರುವವರಿಗೆ, ಆರ್ಥಿಕ ನಿರ್ವಹಣೆಗೆ ಸಹಕಾರಿಯಾಗಲಿದೆ. ಪರಿಷ್ಕೃತ ವೇತನವು ಕಟ್ಟಡ ಕಾರ್ಮಿಕರು, ಲೋಡಿಂಗ್ ಮತ್ತು ಅನ್‌ಲೋಡಿಂಗ್, ವಾಚ್ ಮತ್ತು ವಾರ್ಡ್, ಕಸ ಗುಡಿಸುವುದು, ಸ್ವಚ್ಛತೆ, ಮನೆಗೆಲಸ, ಗಣಿಗಾರಿಕೆ ಮತ್ತು ಕೃಷಿ ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ. ಕೌಶಲ್ಯಮಟ್ಟಕ್ಕೆ ಅನುಗುಣವಾಗಿ ಕನಿಷ್ಠ ವೇತನ ದರ ಹೆಚ್ಚಿಸಲಾಗಿದೆ. ಕೌಶಲ್ಯರಹಿತ, ಅರೆ-ಕುಶಲ, ಕೌಶಲ್ಯ ಮತ್ತು ಹೆಚ್ಚು ನುರಿತ ಮತ್ತು ಇತರೇ ವರ್ಗಗಳನ್ನು A, B ಮತ್ತು C ಎಂದು ವರ್ಗೀಕರಿಸಲಾಗಿದೆ. ವೇತನ ಪರಿಷ್ಕರಣೆ ಅಡಿಯಲ್ಲಿ ಎ- ವರ್ಗದಲ್ಲಿರುವವರು ದಿನಕ್ಕೆ 783 ರೂ.ಗಳಂತೆ ತಿಂಗಳಿಗೆ ರೂ 20,358 ರೂ., ಅರೆ-ಕುಶಲ ಕೆಲಸಗಾರರು 868 ರೂ. ನಂತೆ ತಿಂಗಳಿಗೆ ರೂ…

Read More