Author: Prajatv Kannada

ಕೋಲಾರ :- ವಾಯುಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶವಾಗಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲ್ಲೂಕಿನ ಕರಪನಹಳ್ಳಿ ಜರುಗಿದೆ. https://youtu.be/636-JFAESOY?si=UjtcksctaX465r65 ವಾಯುಸೇನಾ ಹೆಲಿಕಾಪ್ಟರ್ ಯಲಹಂಕದಿಂದ ಚೆನ್ನೈಗೆ ತೆರಳುತ್ತಿತ್ತು. ಆಕಾಶದಲ್ಲಿ ಹಾರುತ್ತಿದ್ದ ವೇಳೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ತುರ್ತು ಭೂ ಸ್ಪರ್ಶ ಮಾಡಲಾಗಿದೆ. ಮಹಿಳಾ ಪೈಲಟ್ ಸೇರಿದಂತೆ ಇಬ್ಬರು ಹೆಲಿಕಾಪ್ಟರ್​ನಲ್ಲಿದ್ದು, ಸದ್ಯ ಸುರಕ್ಷಿತವಾಗಿದ್ದಾರೆ. ರಾತ್ರಿ 10 ಗಂಟೆ ನಂತರ ತಾಂತ್ರಿಕ ದೋಷ ನಿವಾರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಸೇನಾ ಹೆಲಿಕಾಪ್ಟರ್​​ ತುರ್ತು ಭೂ ಸ್ಪರ್ಶ ಹಿನ್ನೆಲೆ ಮತ್ತೊಂದು ಹೆಲಿಕಾಪ್ಟರ್ ಸ್ಥಳಕ್ಕೆ ಬಂದಿದೆ. ವಾಯುಸೇನೆಯ ಮೆಕ್ಯಾನಿಕ್ಸ್ ಕೂಡ ಸ್ಥಳಕ್ಕೆ ಬಂದಿಳಿದಿದ್ದಾರೆ.

Read More

ಬೆಂಗಳೂರು:- ಕೊಲೆ ಪ್ರಕರಣ ಸಂಬಂಧ ಇಂದು ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಸೆಷನ್ ಕೋರ್ಟ್​ನಲ್ಲಿ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್, ಪವಿತ್ರಗೌಡ, ವಿನಯ್ ಸೇರಿ ಐದು ಜನ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. https://youtu.be/x4nx8kzdjMA?si=D8DDUbZlAM8e4xLp 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ‌ ವಿಚಾರಣೆ ನಡೆಯಲಿದ್ದು, ದರ್ಶನ್ ಪರ ಸುನೀಲ್, ಪವಿತ್ರಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಲಿದ್ದಾರೆ. ವಿಶೇಷ ಸಾರ್ವಜನಿಕ ಅಭಿಯೋಜಕರು ಶುಕ್ರವಾರವೇ ದರ್ಶನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದರು. ದರ್ಶನ್ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದ್ದರು. ಹೀಗಾಗಿ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತ್ತು.ಅದರಂತೆ ಇಂದು ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಐವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಇನ್ನು ಶುಕ್ರವಾರ ಪವಿತ್ರಾಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡನೆ ಮಾಡಿದ್ದರು. ಪವಿತ್ರಾ ಗೌಡ ಪಾತ್ರ ಹೆಚ್ಚಿಲ್ಲ, ಅದೇಗೆ ಕೊಲೆ ಆರೋಪ ಮಾಡಿದ್ದಾರೆ ಎಂದು ವಾದ ಮಂಡನೆ ಮಾಡಿದ್ದರು.…

Read More

ಬೆಂಗಳೂರು:- ಕರ್ನಾಟಕದ 14ಕ್ಕೂ ಅಧಿಕ ಜಿಲ್ಲೆಗಳಲ್ಲಿ ಅಕ್ಟೋಬರ್​ 6ರವರೆಗೂ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. https://youtu.be/x4nx8kzdjMA?si=nvWR8sGWDkNTFatp ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದ್ದು, ಯೆಲ್ಲೋ, ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ. ಎಚ್​ಎಎಲ್​ನಲ್ಲಿ 29.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.0ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 30.4 ಡಿಗ್ರಿ ಸೆಲ್ಸಿಸಯ್​ ಗರಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 28.4 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಹೊನ್ನಾವರದಲ್ಲಿ 30.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.9 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 30.4 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 24.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ…

Read More

ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದೆ. ಇದನ್ನು ತಹಬದಿಗೆ ತರಲು ಆಡಳಿತಾತ್ಮಕ ವೆಚ್ಚ ಕಡಿತಗೊಳಿಸಲು ಪಾಕ್ ಸರ್ಕಾರ ಮುಂದಾಗಿದೆ. ಈ ಕಾರಣದಿಂದ 1.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಕಡಿತಗೊಳಿಸಲಾಗಿದ್ದು, ಆರು ಸಚಿವಾಲಯಗಳನ್ನು ಮುಚ್ಚಲಾಗಿದೆ. ಅಲ್ಲದೆ ಎರಡು ಸಚಿವಾಲಯಗಳನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಇತ್ತೀಚೆಗೆ ಐಎಂಎಫ್‌ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಪಾಕ್‌ ಸರ್ಕಾರಕ್ಕೆ ₹700 ಕೋಟಿ ಸಾಲವನ್ನು ನೀಡುವುದಾಗಿ ಹೇಳಿತ್ತು. ಇದರ ಭಾಗವಾಗಿ ಕಳೆದ ಸೋಮವಾರ (ಸೆ.26) ಮೊದಲ ಕಂತಿನಲ್ಲಿ ₹100 ಕೋಟಿ ಹಣವನ್ನು ನೀಡಲಾಗಿದೆ. ಸಾಲ ನೀಡುವ ಮೊದಲು ಐಎಂಎಫ್‌ ಕೆಲವು ಷರತ್ತುಗಳನ್ನು ವಿಧಿಸಿದ್ದು, ಅನಗತ್ಯ ವೆಚ್ಚಗಳಿಗೆ ಕಡಿವಾಣ, ತೆರಿಗೆ-ಜಿಡಿಪಿಗಳ ಅನುಪಾತ ಹೆಚ್ಚಳ, ಕೃಷಿ ಮತ್ತು ರಿಯಲ್‌ ಎಸ್ಟೇಟ್‌ಗಳ ಮೇಲೆ ತೆರಿಗೆ, ಸಬ್ಸಿಡಿಗಳ ಮೇಲೆ ಮಿತಿ ಹೇರಬೇಕು ಎನ್ನುವ ಷರತ್ತುಗಳು ಒಳಗೊಂಡಿವೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕ್‌ ಹಣಕಾಸು ಸಚಿವ ಮೊಹಮ್ಮದ್‌ ಔರಂಗಜೇಬ್‌, ಐಎಂಎಫ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಷರತ್ತುಗಳಿಗೂ ಒಪ್ಪಿಗೆ ನೀಡಲಾಗಿದೆ. ತೆರಿಗೆ ಪಾವತಿಸದವರಿಗೆ ಇನ್ನು…

Read More

ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶ ತಲುಪಿ ಕೆಲ ದಿನಗಳೇ ಕಳೆದಿದೆ. ಇದೀಗ ಅವರನ್ನು ಕರೆತರಲು ಸ್ಪೇಸ್‌ ಎಕ್ಸ್‌ನ ‘ಡ್ಯ್ರಾಗನ್‌’ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿದ್ದು, ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್‌ ವಿಲ್ಮೋರ್ ಅವರನ್ನು ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಿದ್ದಾರೆ ಎಂದು ನಾಸಾ ತಿಳಿಸಿದೆ. ಇದೇ ವರ್ಷ ಜೂನ್‌ನಲ್ಲಿ ಬೋಯಿಂಗ್‌ನ ‘ಸ್ಟಾರ್‌ ಲೈನರ್’ ನೌಕೆಯಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಿದ್ದ ಸುನಿತಾ ಮತ್ತು ಬುಚ್‌, ತಾಂತ್ರಿಕ ದೋಷದಿಂದ ಭೂಮಿಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ನೌಕೆಯಲ್ಲಿ ಹೀಲಿಯಂ ಸೋರಿಕೆ ಉಂಟಾಗಿ ಒಂದು ವಾರದಲ್ಲೇ ಹಿಂತಿರುಗಬೇಕಾದ ಅವರು ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯಬೇಕಾಯಿತು. ಸುನಿತಾ ಮತ್ತು ಬುಚ್‌ ಅವರನ್ನು ಭೂಮಿಗೆ ಮರಳಿ ಕರೆತರುವ ಕಾರ್ಯಾಚರಣೆ ಪ್ರಾರಂಭಿಸಿರುವ ನಾಸಾ ಮತ್ತು ಸ್ಪೇಸ್ ಎಕ್ಸ್, ಶನಿವಾರ ಕ್ಯ್ರೂ-9 ಮಿಷನ್ ಪ್ರಾರಂಭಿಸಿತ್ತು. ಕೇಪ್ ಕ್ಯಾನವೆರಲ್ ಸ್ಪೇಸ್ ಫೋರ್ಸ್‌ ಕೇಂದ್ರದಿಂದ ಸ್ಪೇಸ್ ಎಕ್ಸ್‌ನ ‘ಡ್ಯ್ರಾಗನ್’ ವ್ಯೋಮ ನೌಕೆಯನ್ನು ಉಡ್ಡಯನ ಮಾಡಿತ್ತು. ನಾಸಾದ ನಿಕ್ ಹೇಗ್ ಮತ್ತು…

Read More

ಕನ್ನಡದ ಖ್ಯಾತ ನಿರ್ದೇಶಕ ಹೇಮಂತ್ ರಾವ್ ಅವರು ಅಬುಧಾಬಿಯಲ್ಲಿ ನಡೆದ ಐಫಾ 2024ರಲ್ಲಿ ಭಾಗಿ ಆಗಿದ್ದರು. ಇದರ ಸಂಘಟಕರ ವಿರುದ್ಧ ಹೇಮಂತ್ ರಾವ್ ಅಸಮಾಧಾನ ಹೊರಹಾಕಿದ್ದಾರೆ. ಅವರ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಸಿನಿಮಾ ನಾಮಿನೇಟ್ ಆಗಿತ್ತು. ಆದರೆ, ಇದಕ್ಕೆ ಅವಾರ್ಡ್ ಸಿಕ್ಕಿಲ್ಲ. ಅವರಿಗೆ ಅವಾರ್ಡ್ ಸಿಕ್ಕಿಲ್ಲ ಎಂಬ ಬಗ್ಗೆ ಯಾವುದೇ ಬೇಸರ ಇಲ್ಲ. ಆದರೆ, ಇದನ್ನು ತಿಳಿಯಲು ಅವರು ಸುಖಾಸುಮ್ಮನೆ ಮುಂಜಾನೆ 3 ಗಂಟೆವರೆಗೆ ಕಾಯಬೇಕಾಯಿತು ಎಂದು ಬೇಸರ ಹೊರಹಾಕಿದ್ದಾರೆ. ಹೇಮಂತ್ ರಾವ್ ಹಾಗೂ ಸಿನಿಮಾದ ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ಅಬುಧಾಬಿಗೆ ತೆರಳಿದ್ದರು. ಈ ಕಾರ್ಯಕ್ರಮದಲ್ಲಿ ಕೂತು ಅವರು ಫ್ರಸ್ಟ್ರೇಟ್ ಆಗಿದ್ದರು. ಈ ಅವಾರ್ಡ್ ಫಂಕ್ಷನ್​ನಿಂದ ಅವರ ಸಾಕಷ್ಟು ಸಮಯ ವ್ಯರ್ಥವಾಗಿದೆ. ‘ಐಫಾ ಅವಾರ್ಡ್​​ ಅನಾನುಕೂಲತೆಗಳಿಂದ ಕೂಡಿತ್ತು. ನಾನು ಒಂದು ದಶಕಕ್ಕೂ ಹೆಚ್ಚು ಕಾಲ ಇಂಡಸ್ಟ್ರಿಯಲ್ಲಿ ಇದ್ದೇನೆ. ಇದು ನನ್ನ ಮೊದಲ ಅವಾರ್ಡ್ ಫಂಕ್ಷನ್ ಅಲ್ಲ. ಯಾವಾಗಲೂ ವಿಜೇತರನ್ನು ಕಾರ್ಯಕ್ರಮಕ್ಕೆ ಕರೆಸುತ್ತಾರೆ. ಆದರೆ, ನಮಗೆ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಹಾಗೂ ಎ2 ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮಿನು ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿದ್ದು ಇಂದು ಕೋರ್ಟ್ ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಕಳೆದ 4 ತಿಂಗಳಿನಿಂದ ಜೈಲಿನಲ್ಲಿರುವ ದರ್ಶನ್ ಹೊರ ಬರಲು ಕಾದು ಕೂತಿದ್ದಾರೆ. ಬಳ್ಳಾರಿ ಜೈಲಿನ ನರಕ ದಿನದಿಂದ ದಿನಕ್ಕೆ ಉಸಿರು ಗಟ್ಟಿಸುತ್ತಿದೆ. ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಸಿರೋ ದರ್ಶನ್ ಯಾವಾಗಪ್ಪ ಹೊರಗೆ ಹೋಗ್ತೇನೆ ಎಂದು ಕಾಯ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ದರ್ಶನ್ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುತ್ತಿದ್ದಂತೆ, ದಾಸ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ರು. ಇಂದು ಸಿಟಿ ಸಿವಿಲ್ ಕೋರ್ಟ್​ನಲ್ಲಿ ಬೇಲ್​ ಅರ್ಜಿ ವಿಚಾರಣೆ ನಡೆಯಲಿದೆ. ಪವಿತ್ರಾ ಗೌಡ ಪರ ಈಗಾಗ್ಲೇ ಲಾಯರ್​ ಸಬಾಷ್ಟಿಯನ್​ ವಾದ ಮಂಡಿಸಿದ್ದಾರೆ. ಇಂದು ದರ್ಶನ್​ ಮತ್ತು ಪವಿತ್ರಗೌಡ ಇಬ್ಬರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಮತ್ತೊಂದ್ಕಡೆ ಬೇಲ್ ಸಿಕ್ಕಿದ್ರೂ ಕೂಡ…

Read More

ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಖ್ಯಾತಿ ಘಳಿಸಿದ ಬಿಗ್‌ಬಾಸ್‌ ಮಾಜಿ ಸ್ಫರ್ಧಿ ಸಮೀರ್‌ ಆಚಾರ್ಯ ದಾಂಪತ್ಯದಲ್ಲಿ ಕಲಹ ಉಂಟಾಗಿದೆ. ದಂಪತಿ ಪರಸ್ಪರ ಹೊಡೆದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಮೀರ್‌ ಆಚಾರ್ಯ ಅವರ ಪತ್ನಿ ಶ್ರಾವಣಿ ಆಚಾರ್ಯ ಅವರ ಪತಿ ಹಾಗೂ ಮಾವ ರಾಘವೇಂದ್ರ ಹಾಗೂ ಅತ್ತೆ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ ಅಂತ ಹೇಳಲಾಗ್ತಿದೆ. ಶ್ರಾವಣಿ ಆಚಾರ್ಯ ದೂರು ನೀಡಲು ಮುಂದಾಗುತ್ತಿದ್ದಂತೆ ಸಮೀರ್ ಆಚಾರ್ಯ ತಂದೆ-ತಾಯಿ ಕೂಡ ಪ್ರತಿದೂರು ನೀಡಲು ಮುಂದಾಗಿದ್ದಾರೆ. ಸಮೀರ್ ಆಚಾರ್ಯ ಅವರ ಕೌಂಟಬಿಕ ಕಲಹ ಹುಬ್ಬಳ್ಳಿ ಮಹಿಳಾ ಠಾಣೆ ಮೆಟ್ಟಿಲೇರಿದೆ. ಶ್ರಾವಣಿ ತನ್ನ ಮಗಳನ್ನು ಬೆದರಿಸಿದ ಕಾರಣಕ್ಕಾಗಿ ಜಗಳ ಶುರುವಾಗಿದೆ. ಮೊಮ್ಮಳಿಗೆ ಯಾಕೆ ಬೈದೆ ಅಂತ ಸಮೀರ್‌ ತಂದೆ ಶ್ರಾವಣಿಗೆ ಬೈದಿದ್ದಾರಂತೆ. ಮಾತು ಅತಿರೇಖಕಕ್ಕೆ ಹೋಗಿ ಮನೆಯಲ್ಲಿ ಜಗಳ ನಡೆದಿದೆ. ಸಮೀರ್ ಆಚಾರ್ಯ ಅವರು ತಂದೆ-ತಾಯಿ ಜೊತೆ ಸೇರಿ ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಇನ್ನೂ ಈ ಘಟನೆಯಾಗುವಾಗ…

Read More

‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಗ್ರ್ಯಾಂಡ್ ಒಪನಿಂಗ್ ಸಿಕ್ಕಿದೆ. ಪ್ರತಿಭಾರಿಯಂತೆ ಈ ಭಾರಿಯೂ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಘಳಿಸಿದವರನ್ನು ಬಿಗ್ ಬಾಸ್ ಮನೆಗೆ ಕರೆ ತರಲಾಗಿದೆ. ಈ ಭಾರಿ ಧನರಾಜ್ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಹೆಂಡತಿ ಹಾಗೂ ಕುಟುಂಬದ ಜೊತೆ ಅವರು ರೀಲ್ಸ್ ಮಾಡುತ್ತ ಜನರಿಗೆ ಪರಿಚಿತರಾಗಿದ್ದಾರೆ. ಕಾಮಿಡಿ ವಿಡಿಯೋಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎಷ್ಟು ನಗಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ಮಧ್ಯೆ ಮೊದಲ ದಿನವೇ ಧನರಾಜ್ ವಿರುದ್ಧ ಸುದೀಪ್ ಆಕ್ರೋಶಗೊಂಡಿದ್ದಾರೆ. ‘ನನಗೆ ನಾನೇ ನಾಯಕ…‌ನಿಮ್ಮನ್ನ ನಗ್ಸೋದೆ ನನ್ನ ಕಾಯಕ. ಕಾಫಿ ಕುಡಿಯೋ ಅಭ್ಯಾಸ ಇಲ್ಲ. ಕಂಟೆಂಟ್ ಕಾಪಿ ಮಾಡೋ ದುರಭ್ಯಾಸನೂ ಇಲ್ಲ. ಒರಿಜಿನಲ್ ಕಂಟೆಂಟ್ ಮಾತ್ರ’ ಎಂದು ಅವರು ತಮ್ಮ ಇನ್​ಸ್ಟಾಗ್ರಾಮ್​ ಬಯೋದಲ್ಲಿ ಮಾಹಿತಿ ನೀಡಿದ್ದಾರೆ. ‘ಬಿಗ್ ಬಾಸ್’ ಬಗ್ಗೆ ಧನರಾಜ್ ಅವರು ಒಂದು ವಿಡಿಯೋ ಮಾಡಿದ್ದರು. ಜಗಳ ನಡೆಯೋದು ಟಿಆರ್​ಪಿಗಾಗಿ ಎಂದು ಅವರು ಹೇಳಿದ್ದರು.…

Read More

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುವ ‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಸುದ್ದು ಮಾಡಿದವರು, ಕಿರುತೆರೆ ನಟ, ನಟಿಯರು ಬಿಗ್ ಬಾಸ್ ಮನೆಗೆ ಎಂಟ್ರಿಕೊಡ್ತಿದ್ದಾರೆ. ಈ ಬಾರಿ ನರಕ-ಸ್ವರ್ಗ ಕಾನ್ಸೆಪ್ಟ್​ನಲ್ಲಿ ಬಿಗ್ ಬಾಸ್ ಮೂಡಿ ಬಂದಿದ್ದು, ಮೊದಲ ದಿನವೇ ವೀಕ್ಷಕರಿಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ‘ಬಿಗ್ ಬಾಸ್ ಕನ್ನಡ’ ಈ ಬಾರಿ ಕಲರ್ಸ್​ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಈ ಹಿಂದಿನ ಕೆಲವು ವರ್ಷ ‘ಬಿಗ್ ಬಾಸ್’ಗೆ 24 ಗಂಟೆ ಲೈವ್ ನೀಡಲಾಗುತ್ತಿತ್ತು. ಈ ಬಾರಿ ಅದನ್ನು ತೆಗೆಯಲಾಗಿದೆ. ಎಪಿಸೋಡ್​ಗಿಂತ ಮೊದಲೇ ಬಿಗ್ ಬಾಸ್ ನೋಡಬಹುದು ಎಂದು ಪ್ಲ್ಯಾನ್ ಮಾಡಿದ್ದವರಿಗೆ ಬೇಸರ ಆಗಿದೆ. ಕಳೆದ ವರ್ಷ ‘ಬಿಗ್ ಬಾಸ್’ ಲೈವ್ ನೀಡಿದಾಗ ಕೆಲವು ತೊಂದರೆಗಳು ಎದುರಾಗಿದ್ದವು. ವೀಕ್ಷಕರಿಗೆ ಎಲ್ಲವೂ ತಿಳಿಯಬಾರದು ಎನ್ನುವ ಕಾರಣಕ್ಕೆ ಪ್ರಮುಖ ಸಂಭಾಷಣೆಗಳನ್ನು ಮ್ಯೂಟ್ ಮಾಡಾಗುತ್ತಿತ್ತು. ಅಲ್ಲದೆ, ಯಾವುದೇ ಟಾಸ್ಕ್​ಗಳನ್ನು ಇಲ್ಲಿ ತೋರಿಸುವ ಕೆಲಸ ಆಗುತ್ತಿರಲಿಲ್ಲ. ಇದು…

Read More