ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ಪತ್ನಿ ಸೈರಾ ಬಾನು ಅವರಿಗೆ ವಿಚ್ಛೇದನ ನೀಡಿದ್ದಾರೆ. ಈ ಮೂಲಕ 29 ವರ್ಷಗಳ ದಾಂಪತ್ಯ ಜೀವನ ಕೊನೆಯಾಗಿದೆ. ಈ ವಿಚಾರವನ್ನು ಸೈರಾ ಬಾನು ಅವರು ಖಚಿತಪಡಿಸಿದ್ದರು. ಈಗ ಎಆರ್ ರೆಹಮಾನ್ ಕೂಡ ಈ ಬಗ್ಗೆ ಮೌನ ಮುರಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ರೆಹಮಾನ್ ಅವರು, ‘ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ ಗೆಳೆಯರಿಗೆ ಧನ್ಯವಾದ’ ಎಂದಿದ್ದಾರೆ. 1995ರಲ್ಲಿ ಎ.ಆರ್. ರೆಹಮಾನ್ ಹಾಗೂ ಸೈರಾ ವಿವಾಹ ಮದುವೆಯಾದರು. ಮನೆಯವರು ನೋಡಿದ ಹುಡುಗಿಯನ್ನೇ ರೆಹಮಾನ್ ಕೈ ಹಿಡಿದಿದ್ದರು. ಮದುವೆ ಆದಾಗ ರೆಹಮಾನ್ ಅವರಿಗೆ 29 ವರ್ಷ ವಯಸ್ಸಾಗಿತ್ತು. ಈ ದಂಪತಿಗೆ ಮೂವರು ಮಕ್ಕಳು ಇದ್ದಾರೆ. ರೆಹಮಾನ್ ಅವರು…
Author: Prajatv Kannada
ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗುವಂತಹ ʼMYTH FXʼ ಸ್ಟುಡಿಯೋ ಆರಂಭವಾಯಿತು. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಈ ಸುಸಜ್ಜಿತ ವಿ ಎಫ್ ಎಕ್ಸ್ ಸ್ಟುಡಿಯೋವನ್ನು ಉದ್ಘಾಟಿಸಿ ಶುಭ ಕೋರಿದರು. ಸ್ಟುಡಿಯೋ ಮಾಲಿಕ ಕಮಲ್ ಮಾತನಾಡಿ, ವಿಡಿಯೋ ಕಾನ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ನಾನು ಕವಿ ಕೂಡ. ನನ್ನ ಎರಡು ಕವನ ಸಂಕಲನಗಳನ್ನು ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಹಾಗೂ ಗಾನ ಕೋಗಿಲೆ ಲತಾ ಮಂಗೇಶ್ಕರ್ ಬಿಡುಗಡೆ ಮಾಡಿದ್ದಾರೆ. ಆನಂತರ ನಟನಾಗುವ ಆಸೆ ಮೂಡಿತ್ತು. ಇತ್ತೀಚೆಗೆ ತೆರೆಕಂಡ “ದಿ ಸೂಟ್” ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರರಂಗಕ್ಕೆ ಅನುಕೂಲವಾಗುವಂತಹ ಏನಾದರೊಂದು ಕೆಲಸ ಮಾಡಬೇಕೆಂದು ನನಗೆ ಅನಿಸುತ್ತಲೇ ಇತ್ತು. ಆ ಸಮಯಕ್ಕೆ ನನಗೆ ಇಪ್ಪತ್ತಕ್ಕೂ ಅಧಿಕ ವರ್ಷಗಳ ಅನುಭವವಿರುವ ಲೋಕೇಶ್ ಹಾಗೂ ಮಾರುತಿ ಎಂಬ ನುರಿತ ತಂತ್ರಜ್ಞರು ಸಿಕ್ಕರು. ನಾವೆಲ್ಲಾ ಸೇರಿ ಈ “MYTH FX” ಸ್ಟುಡಿಯೋವನ್ನು…
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ರಿಯೋ ಜಿ-20 ಶೃಂಗಸಭೆಯ ಪಾರ್ಶ್ವದಲ್ಲಿ ಭೇಟಿ ಮಾಡಿದ್ದಾರೆ. ಉಭಯ ದೇಶಗಳ ವಿದೇಶಾಂಗ ಸಚಿವರುಗಳು ಭೇಟಿ ಮಾಡಿ, ಗಡಿಗಳಲ್ಲಿನ ಸೇನಾ ಹಿಂತೆಗೆತದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಚೀನಾ- ಭಾರತದ ನಡುವೆ ನೇರ ವಿಮಾನ ಸಂಪರ್ಕ ಆರಂಭಿಸುವುದು, ಮಾನಸ ಸರೋವರ ಯಾತ್ರೆಯನ್ನು ಪುನಾರಂಭ ಮಾಡುವುದರ ಬಗ್ಗೆಯೂ ವಾಂಗ್ ಯಿ ಹಾಗೂ ಜೈಶಂಕರ್ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಜೈಶಂಕರ್ ಜೊತೆಗಿನ ಮಾತುಕತೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ, ಇದು ಭಾರತ- ಚೀನಾ ಸಂಬಂಧದಲ್ಲಿ ಹೊಸ ಆರಂಭದ ಹಂತ” ಎಂದು ಬಣ್ಣಿಸಿದೆ. ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನ ಎರಡು ವಿವಾದಿತ ಪ್ರದೇಶಗಳಲ್ಲಿ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡ ನಂತರ ಉಭಯ ದೇಶಗಳ ನಡುವಿನ ಮೊದಲ ಉನ್ನತ ಮಟ್ಟದ ಸಭೆ ಇದಾಗಿದೆ ಮತ್ತು ಇದು ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆಗೆ ಕೊಡುಗೆ ನೀಡಿದೆ ಎಂದು ಸಚಿವರು ಗಮನಿಸಿದ್ದಾರೆ. 2020 ರಲ್ಲಿ…
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಎರಡೂ ಕಡೆಯವರು ಭೇಟಿಯ ಸಾಧ್ಯತೆಯನ್ನು ನೋಡುತ್ತಿದ್ದಾರೆ ಆದರೆ ಇನ್ನೂ ಯಾವುದೂ ಅಂತಿಮಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈನಲ್ಲಿ ಮಾಸ್ಕೋದಲ್ಲಿ ಉಭಯ ನಾಯಕರು ಶೃಂಗಸಭೆಯ ಮಾತುಕತೆ ನಡೆಸಿದಾಗ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಕಳೆದ ಮಂಗಳವಾರ, ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಭಾರತದ ಹಿರಿಯ ಸಂಪಾದಕರೊಂದಿಗಿನ ವೀಡಿಯೊ ಸಂವಾದದಲ್ಲಿ ಭಾರತ ಮತ್ತು ರಷ್ಯಾ ನಡುವಿನ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಉಲ್ಲೇಖಿಸಿದರು ಮತ್ತು ಪುಟಿನ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಆದರೆ ಕ್ರೆಮ್ಲಿನ್ ವಕ್ತಾರರು ಯಾವುದೇ ನಿರ್ದಿಷ್ಟ ದಿನಾಂಕಗಳನ್ನು ಘೋಷಿಸಿಲ್ಲ ಅಥವಾ ಭೇಟಿಯ ನಿರ್ಣಾಯಕ ಘೋಷಣೆಯನ್ನು ಮಾಡಿಲ್ಲ.
ಭರತ್ ಗೌಡ ಹೊಸಕೋಟೆ ನಿರ್ಮಾಣದ, ಶ್ರೀವಿದ ನಿರ್ದೇಶನದ ಹಾಗೂ ಹಾಸ್ಯನಟನಾಗಿ ಜನಮನ ಗೆದ್ದಿರುವ ಕೆಂಪೇಗೌಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಕಟ್ಲೆʼ ಚಿತ್ರದ ಮೊದಲ ಹಾಡನ್ನು ನಟ ಡಾರ್ಲಿಂಗ್ ಕೃಷ್ಣ ಇತ್ತೀಚೆಗೆ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಬಹದ್ದೂರ್ ಚೇತನ್ ಕುಮಾರ್ ಬರೆದಿರುವ ʼಯಾರೋ ನಾ ಕಾಣೆ. ಚಂದಾಗೌಳೆ ಶಾಣೆʼ ಎಂಬ ಈ ಹಾಡನ್ನು ಖ್ಯಾತ ಗಾಯಕ ಟಿಪ್ಪು ಅವರು ಹಾಡಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಹಾಸ್ಯನಟನಾಗಿದ್ದ ನನ್ನ ಮೇಲೆ ಭರವಸೆಯಿಟ್ಟು ನನ್ನನ್ನು ನಾಯಕನನ್ನಾಗಿ ಮಾಡಿದ ನಿರ್ಮಾಪಕ ಭರತ್ ಗೌಡ ಅವರಿಗೆ ನಾನು ಆಭಾರಿ ಎಂದು ಮಾತು ಆರಂಭಿಸಿದ ನಾಯಕ ಕೆಂಪೇಗೌಡ, ಶ್ರೀವಿದ ಅವರು “ಕಟ್ಲೆ” ಚಿತ್ರಕ್ಕೆ ಅದ್ಭುತವಾದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚೇತನ್ ಕುಮಾರ್ ಬರೆದು ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿರುವ ಈ ಹಾಡು ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಹಾಡು…
ಸಹನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಲಯಾಳಂ ನಟ ಸಿದ್ದಿಕ್ ಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಸಿದ್ದಿಕ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್‌ವಜಾಗೊಳಿಸಿತ್ತು. ಸಂತ್ರಸ್ತೆ ಹಲವು ವರ್ಷಗಳಿಂದ ಪದೇ ಪದೆ ತಮ್ಮ ವಿರುದ್ಧ ಆಧಾರರಹಿತ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ತಮಗೆ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಇದೀಗ ಸುಪ್ರೀಂ ಕೋರ್ಟ್ ಸಿದ್ದಿಕ್ ಗೆ ಜಾಮೀನು ಮಂಜೂರು ಮಾಡಿದೆ. ತಿರುವನಂತಪುರಂ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ಸಿದ್ದಿಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನಾಧಾರದಲ್ಲಿ ಪೊಲೀಸರು ಜಾಮೀನು ರಹಿತ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಲು ರಚನೆಯಾಗಿರುವ ವಿಶೇಷ ತನಿಖಾ ತಂಡದ ಎದುರು ಸಂತ್ರಸ್ತೆ ತನ್ನ ಹೇಳಿಕೆ ದಾಖಲಿಸಿದ್ದಳು. ಕೆಲವು ತಿಂಗಳ ಹಿಂದೆ ಮಲಯಾಳಂ ನಟ ಸಿದ್ದಿಕ್ ವಿರುದ್ಧ ಅತ್ಯಾಚಾರ…
ಟ್ರೈಲರಿಂದಲೇ ನಿರೀಕ್ಷೆ ಹುಟ್ಟಿಸಿರುವ ‘ಮರ್ಯಾದೆ ಪ್ರಶ್ನೆ’ ಚಿತ್ರದ 3ನೇ ಹಾಡು ‘ಫಿರಾಕೋ ಮಾರ್’ ಸದ್ಯ ಟ್ರೆಂಡ್ ಕ್ರಿಯೇಟ್ ಮಾಡಿದೆ. ಮರ್ಯಾದೆ ಪ್ರಶ್ನೆʼ ತಂಡ ‘ಹಿಟ್ ಬ್ಯಾಕ್’ ಹಾಡನ್ನು ದಕ್ನಿ ರ್ಯಾಪರ್ ಪಾಶಾಬಾಯ್ ಬರೆದು ಹಾಡಿದ್ದಾರೆ. ಕಳೆದ ಎರಡು ಹಾಡುಗಳನ್ನು ಮೆಲೋಡಿ, ಜಾನಪದ ಶೈಲಿಯಲ್ಲಿ ಸಂಯೋಜಿಸಿದ್ದ ಸಂಗೀತ ನಿರ್ದೇಶಕ ಅರ್ಜುನ್ ರಾಮು ಈ ಹಾಡನ್ನು ಹಿಪ್ ಹಾಪ್ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ಹಾಡಿನ ಬಗ್ಗೆ ಪ್ರತಿಕ್ರಿಯಿಸಿರುವ ಸಂಗೀತ ನಿರ್ದೇಶಕ ಅರ್ಜುನ್ ರಾಮು “ಮಿಡಲ್ ಕ್ಲಾಸ್ ಅಗ್ರೆಶನ್ ತೋರಿಸುವ ಹಾಡೊಂದು ಸಿನಿಮಾಕ್ಕೆ ಬೇಕಿತ್ತು. ಪಾಶಾಬಾಯ್ ಜತೆ ಸೇರಿ ಈ ರ್ಯಾಪರ್ ಮಾಡಿದ್ದೇವೆ. ಕ್ಲಾಸ್ ಜತೆ ಸಕ್ಕತ್ ಮಾಸ್ ಬಿಜಿಎಂ ಇರುವ ಈ ಹಾಡು ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ” ಎಂದರು. ಈ ಹಾಡಿನಲ್ಲಿ ‘ಮರ್ಯಾದೆ ಪ್ರಶ್ನೆ’ ಸಿನಿಮಾದ ಮುಖ್ಯ ಪಾತ್ರಧಾರಿಗಳಾದ ಸುನೀಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ನಲ್ಲಿ ತೋರಿಸಿದ ವಿಷಯಗಳಿಗೆ ಪುಷ್ಟಿ ನೀಡುವ ಹಾಗೆ ಎರಡೂವರೆ…
ಸಂಗೀತ ಲೋಕದ ಮಾಂತ್ರಿಕ ಎ.ಆರ್ ರೆಹಮಾನ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. 29 ವರ್ಷಗಳ ಕಾಲ ಸಂಸಾರ ಮಾಡಿದ್ದ ರೆಮಹಾನ್ ಹಾಗೂ ಪತ್ನಿ ಸೈರಾ ಬಾನು ದೂರ ದೂರವಾಗಿದ್ದಾರೆ. ಸೈರಾ ವಕೀಲರು ಈ ಬಗ್ಗೆ ಅಧಿಕತ ಘೋಷಣೆ ಮಾಡಿದ್ದಾರೆ. ಎ.ಆರ್ ರೆಹಮಾನ್ ಹಾಗೂ ಸೈರಾ ಅವರ ದಾಂಪತ್ಯ ಬಿರುಕು ಕಾಣಿಸಿಕೊಂಡಿದೆ. ಸೈರಾ ಪರ ವಕೀಲರಾದ ವಂದನಾ ಶಾ ಅವರು ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ. ರೆಹಮಾನ್ ಹಾಗೂ ಸೈರಾ ದಂಪತಿ ಬೇರೆ, ಬೇರೆಯಾಗಲು ನಿರ್ಧಾರ ಮಾಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಬಹಳ ವರ್ಷಗಳ ಬಳಿಕ ಸೈರಾ ಅವರು ತಮ್ಮ ಪತಿ ಎ.ಆರ್ ರೆಹಮಾನ್ ಅವರಿಂದ ಬೇರೆಯಾಗುವ ಕಷ್ಟದ ತೀರ್ಮಾನ ತೆಗೆದುಕೊಂಡಿದ್ದಾರೆ. ಬಹಳ ಪ್ರೀತಿಯಿಂದ ಕಾಲ ಕಳೆಯುತ್ತಿದ್ದ ಜೋಡಿ ಹಕ್ಕಿಗಳು ಭಾವನಾತ್ಮಕ ಒತ್ತಡದಲ್ಲಿ ಸಿಲುಕಿದ್ದವು. ಒಬ್ಬರಿಗೊಬ್ಬರ ಗೌರವಪೂರ್ವಕವಾಗಿ ದೂರ ಆಗುತ್ತಾ ಒಬ್ಬರಿಗೊಬ್ಬರು ಗೌರವಿಸಲು ತೀರ್ಮಾನಿಸಿದ್ದಾರೆ. ಬಹಳ ನೋವಿನಿಂದಲೇ ಸೈರಾ ಅವರು ರೆಹಮಾನ್ ಅವರಿಂದ ದೂರವಾಗಲು ನಿರ್ಧಾರ ಮಾಡಿದ್ದಾರೆ. ಖಾಸಗಿ ಬದುಕು…
ಭಾರತೀಯ ಚಿತ್ರರಂಗದ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಹಾಗೂ ಗಾಯಕ ಎ.ಆರ್.ರೆಹಮಾನ್ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ಸೈರಾ ಭಾನು ಜೊತೆಗಿನ ದಾಂಪತ್ಯಕ್ಕೆ ರೆಹಮಾನ್ ಅಂತ್ಯ ಹಾಡಿದ್ದಾರೆ. ಈ ಮೂಲ 29 ವರ್ಷಗಳ ಸಾಂಸಾರಿಕ ಜೀವನ ಅಂತ್ಯಗೊಳಿಸಿದ್ದಾರೆ. ವಿಚ್ಛೇದನದ ವಿಚಾರವನ್ನು ಸೈರಾ ಭಾನು ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. 1995ರಲ್ಲಿ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು ವಿವಾಹ ಆಗಿದ್ದರು. ಅವರದ್ದು ಅರೇಂಜ್ ಮ್ಯಾರೇಜ್. ಸಿನಿಮಾದಲ್ಲಿ ಬ್ಯುಸಿ ಆಗಿದ್ದ ರೆಹಮಾನ್ ಅವರಿಗೆ ಹುಡುಗಿ ನೋಡುವಷ್ಟು ಸಮಯ ಇರಲಿಲ್ಲ. ಹಾಗಾಗಿ ತಾಯಿ ನೋಡಿದ ಹುಡುಗಿಯನ್ನು ಅವರು ಮದುವೆ ಆಗಿದ್ದರು. ಆಗ ಅವರಿಗೆ 29 ವರ್ಷ ವಯಸ್ಸಾಗಿತ್ತು. ರೆಹಮಾನ್ ಮತ್ತು ಸೈರಾ ಬಾನು ಜೋಡಿಗೆ ಮೂವರು ಮಕ್ಕಳಿದ್ದಾರೆ. ಬಹುತೇಕ ಮೂರು ದಶಕಗಳ ಕಾಲ ಹೊಂದಾಣಿಕೆಯಿಂದ ಸಂಸಾರ ಮಾಡಿದ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು ಹೀಗೆ ಏಕಾಏಕಿ ವಿಚ್ಛೇದನ ಘೋಷಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ‘ಸಂಬಂಧದಲ್ಲಿನ ಭಾವನಾತ್ಮಕವಾಗಿ ಸಂಕಟದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಇಬ್ಬರ…
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಕೊನೆಗೂ ಮದುವೆಯಾಗುತ್ತಿದ್ದಾರೆ. ಈ ಹಿಂದೆ ಹಲವರ ಜೊತೆ ಕೀರ್ತಿ ಸುರೇಶ್ ಹೆಸರು ಕೇಳಿ ಬಂದಿತ್ತು. ಆದರೆ ಇದೀಗ ಬಾಲ್ಯ ಸ್ನೇಹಿತನ ಜೊತೆ ಮದುವೆಯಾಗಲು ಕೀರ್ತಿ ಸುರೇಶ್ ಮುಂದಾಗಿದ್ದಾರೆ. ಈ ಹಿಂದೆ, ಕೀರ್ತಿ ದುಬೈ ಮೂಲದ ಉದ್ಯಮಿ ಮತ್ತು ತಮಿಳು ಚಿತ್ರರಂಗದ ಸ್ಟಾರ್ ಸಂಗೀತ ಸಂಯೋಜಕರೊಂದಿಗೆ ನಟಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ, ಕೀರ್ತಿ ಮತ್ತು ಆಕೆಯ ತಂದೆ ಈ ವದಂತಿಗಳನ್ನು ಅಲ್ಲಗಳೆದಿದ್ದರು. ಕಳೆದೆರಡು ದಿನಗಳಿಂದ ಕೀರ್ತಿ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಾಗುತ್ತಿದೆ. ಈ ಬಾರಿ, ಡಿಸೆಂಬರ್ 11 ರಂದು ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ನಲ್ಲಿ ಕೀರ್ತಿ ತನ್ನ ಬಹುಕಾಲದ ಗೆಳೆಯ ಆಂಥೋನಿ ಥಟ್ಟಿಲ್ ಅವರೊಂದಿಗೆ ವಿವಾಹವಾಗಲಿದ್ದಾರೆ ಎಂದು ಕಾಲಿವುಡ್ ವಲಯಗಳಲ್ಲಿ ಚರ್ಚೆ ಆಗುತ್ತಿದೆ. ಕೀರ್ತಿ ಮತ್ತು ಆಂಟನಿ ಕಳೆದ 16 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. 2015ರಲ್ಲಿ ಮಲಯಾಳಂ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ನಟಿ ಕೀರ್ತಿ ಸುರೇಶ್, ಮಹಾನಟಿ…