Author: Prajatv Kannada

ಮೈಸೂರು:- ಮುಡಾ ದೂರುದಾರ ದೂರುದಾರ ಸ್ನೇಹಮಯಿ ಕೃಷ್ಣ ಸಿದ್ದರಾಮಯ್ಯ ವಿರುದ್ಧ ಇಡಿಗೂ ದೂರು ನೀಡಿದ್ದಾರೆ. ಆ ಮೂಲಕ ಸಿಎಂಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಮುಡಾದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಇಡಿಗೆ 16 ಪುಟಗಳ ಇ-ಮೇಲ್ ಹಾಗೂ ಪತ್ರ ಬರೆಯುವ ಮೂಲಕ ಜಾರಿ ನಿರ್ದೇಶನಾಲಯದ ಬೆಂಗಳೂರು ನಿರ್ದೇಶಕರಿಗೆ ದೂರು ನೀಡಿದ್ದಾರೆ. ಮನಿ ಲ್ಯಾಂಡರಿಂಗ್ ಆಯಕ್ಟ್​ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಮುಡಾದಲ್ಲಿ ಪತ್ನಿಯ ಹೆಸರಿನಲ್ಲಿ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎಂ ಪತ್ನಿಗೆ ಅಕ್ರಮವಾಗಿ ಸೈಟ್‌ ಹಂಚಿಕೆ ಮಾಡಿದ್ದಾರೆ ಅನ್ನೋ ಆರೋಪ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಹಗರಣ ಸಂಬಂಧ ನಿನ್ನೆಯಷ್ಟೇ ಸಿಎಂ ಹಾಗೂ ಪತ್ನಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಇಂದು ಹಾಗೂ ನಾಳೆ ರಜೆ ಇರೋದ್ರಿಂದ ಸೋಮವಾರದಿಂದ ತನಿಖೆ ಆರಂಭ ಆಗೋ ಸಾಧ್ಯತೆ ಇದೆ. ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಬ್ಬಂದಿ ಸಭೆ ನಡೆಸಿದ ಎಸ್‌ಪಿ ಉದೇಶ್‌,…

Read More

ಬೆಂಗಳೂರು:- ಕರ್ನಾಟಕದ ಕೆಲವೆಡೆ ಇಂದು ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.ಈ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಹಾಸನ, ಕೊಡಗು, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಭಾನುವಾರ ಹಾಗೂ ಸೋಮವಾರ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read More

ನಿಗದಿತ ಸಮಯದಲ್ಲಿ ಬಿಲ್ ಪಾವತಿಸದಿದ್ದರೆ ಅಕ್ಟೋಬರ್ 1ರಿಂದ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೆಸ್ಕಾಂ ತಿಳಿಸಿದ್ದು, ವಿದ್ಯುತ್ ಬಿಲ್‌ ನೀಡಿದ ನಂತರದ 30 ದಿನಗಳೊಳಗೆ ಬಿಲ್‌ ಪಾವತಿಸದಿದ್ದಲ್ಲಿ ನಿಯಮಾವಳಿಗಳ ಅನ್ವಯ ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಅಕ್ಟೋಬರ್ 1ರಿಂದಲೇ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್‌ ಪಾವತಿಸಬೇಕು ಇಲ್ಲದಿದ್ದಲ್ಲಿ ಮೀಟರ್‌ ರೀಡಿಂಗ್‌ಗೆ ಬರುವ ದಿನ ಅಂದರೆ, ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ. ಈ ವರೆಗೆ, ಪ್ರತಿ ತಿಂಗಳ ಮೊದಲ 15 ದಿನದಲ್ಲಿ ಮೀಟರ್‌ ಓಡಿದ ಬಳಿಕ, ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲು ಲೈನ್‌ಮೆನ್‌ಗಳ ಜತೆ ಮಾಪಕ ಓದುಗರು ತೆರಳುತ್ತಿದ್ದರು. ಇನ್ನುಮುಂದೆ ಮಾಪಕ ಓದುಗರೊಂದಿಗೆ ಲೈನ್‌ಮೆನ್‌ಗಳು…

Read More

ಇರಾನ್‌ ಬೆಂಬಲಿತ ಪ್ರತಿರೋಧ ಗುಂಪುಗಳು ತನ್ನ ಬೆಂಬಲದೊಂದಿಗೆ ಇಸ್ರೇಲ್‌ ವಿರುದ್ಧದ ಹೋರಾಟವನ್ನು ಮುಂದುವರಿಸಲಿವೆ ಎಂದು ಇರಾನ್‌ ಸಂಸತ್ತಿನ ಸ್ಪೀಕರ್‌ ಮೊಹಮ್ಮದ್‌ ಬಕೀರ್‌ ಕಲಿಬಫ್‌ ಹೇಳಿದ್ದಾರೆ. ಈ ಕುರಿತು ಸರ್ಕಾರಿ ಮಾಧ್ಯಮಗಳು ವರದಿ ಮಾಡಿದ್ದು, ಹಿಜ್ಬುಲ್ಲಾ ನಾಯಕ ಸಯ್ಯದ್‌ ಹಸನ್‌ ನಸ್ರಲ್ಲಾ ಹತ್ಯೆಗೆ ಸಂಬಂಧಿಸಿದಂತೆ ಮೊಹಮ್ಮದ್‌ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗುತ್ತಿದೆ. ಏತನ್ಮಧ್ಯೆ, ಲೆಬನಾನ್‌ ಸಾರ್ವಭೌಮತೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದನ್ನು ವಿರೋಧಿಸುವುದಾಗಿ ಚೀನಾ ಹೇಳಿದೆ. ಹಿಜ್ಬುಲ್ಲಾ ಸಂಘಟನೆಯ ಹಲವು ನಾಯಕರು ಲೆಬನಾನ್‌ನ ದಕ್ಷಿಣ ಬೈರೂತ್‌ನ ದಾಹಿಯಾ ಪ್ರದೇಶದಲ್ಲಿ ಶುಕ್ರವಾರ (ಸೆಪ್ಟೆಂಬರ್‌ 17ರಂದು) ಸಭೆ ಸೇರಿದ್ದರು. ಈ ಸಭೆಯಲ್ಲಿ ನಸ್ರಲ್ಲಾ ಭಾಗವಹಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇಸ್ರೇಲ್‌ ಸೇನೆ, ವಾಯುದಾಳಿ ನಡೆಸಿತ್ತು. ನಸ್ರಲ್ಲಾ ಮಾತ್ರವಲ್ಲದೆ, ಸಂಘಟನೆಯ ಕಮಾಂಡರ್‌ ಅಲಿ ಕರ್ಕಿ ಸಹ ಮೃತಪಟ್ಟಿದ್ದರು.

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅಂದ ಹಾಗೆ ದರ್ಶನ್ ಜೈಲಿಗೆ ಹೋಗುವ ಮುನ್ನ ತೆರೆಕಂಡ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿದೆ. ಬ್ಯಾಕ್ ಟು ಬ್ಯಾಕ್ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಇದೀಗ ಅಬುಧಾಬಿಯಲ್ಲಿ ನಡೆದ ಫಿಫಾ 2025 ಕಾರ್ಯಕ್ರಮದಲ್ಲಿ ಕಾಟೇರ ಪ್ರಶಸ್ತಗಳ ಸುರಿಮಳೆಯನ್ನೇ ಬಾಚಿಕೊಂಡಿದೆ. ಕಾಟೇರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಕರೀಯರ್​ನಲ್ಲೇ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿದೆ. ಹೋದ ಕಡೆಗಳಲ್ಲೆ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಕರ್ನಾಟಕದಲ್ಲೇ ಮಾತ್ರ ರಿಲೀಸ್ ಆಗಿದ್ದ ಕಾಟೇರ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ದಾಖಲೆ ಮಾಡಿತ್ತು. ದರ್ಶನ್ ಜೈಲಿನಲ್ಲಿದ್ದರು ತರುಣ್ ಸುದೀರ್ ನಿರ್ದೇಶನದ ಈ ಸಿನಿಮಾಕ್ಕೆ ಪ್ರಶಸ್ತಿಗಳು, ಬಹುಮಾನಗಳು ಹರಿದು ಬರುತ್ತಿವೆ. ಇತ್ಥೀಚೆಗೆ ದುಬೈನಲ್ಲಿ ನಡೆದಿದ್ದ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬರೋಬ್ಬರಿ 4 ಪ್ರಶಸ್ತಿಗಳನ್ನು ಕಾಟೇರಗೆ ಬಂದಿದ್ದವು. ಇದರ ಬೆನ್ನಲ್ಲೇ ಕಾಟೇರ ಮತ್ತೆ ನಾಲ್ಕು ಆವಾರ್ಡ್​ಗಳನ್ನು ಪಡೆದುಕೊಂಡಿದೆ. ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (ಐಐಎಫ್​​​ಎ) ಕಾರ್ಯಕ್ರಮದಲ್ಲಿ ದರ್ಶನ್‌ ಅಭಿನಯಿಸಿದ್ದ…

Read More

ಕಿರುತೆರೆ ನಟಿ ನೇಹಾ ಗೌಡ ಅಮ್ಮನಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ನೇಹಾ ಹಾಗೂ ಚಂದನ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ನೇಹಾ ಗೌಡ ಇದೀಗ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋ ಶೂಟ್‌ನಲ್ಲಿ ನೇಹಾ ಗೌಡ ಸ್ವರ್ಗದಿಂದ ಧರೆಗಿಳಿದ ಅಪ್ಸರೆ ರೀತಿ ಕಾಣಿಸುತ್ತಿದ್ದಾರೆ. ಗರ್ಭಿಣಿ ಅಪ್ಸರೆ ಧರೆಗೆ ಇಳಿದ್ರೆ ಹೇಗಿರುತ್ತದೆಯೋ ಆ ರೀತಿಯ ಒಂದು ಕಲ್ಪನೆಯಲ್ಲಿಯ ಇಡೀ ಫೋಟೋ ಶೂಟ್ ಮಾಡಲಾಗಿದೆ. ನೇಹಾ ಗೌಡ ಇಲ್ಲಿ ಬಿಳಿ ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದು ಅದಕ್ಕೆ  ಸಿಂಪಲ್ ಅನಿಸೋ ಆಭರಣಗಳನ್ನ ಧರಿಸಿದ್ದಾರೆ. ರಾಣಿ ರೀತಿ ಕಂಗೊಳಿಸಿದ್ದಾರೆ. ಕಮಲಗಳೇ ಇರೋ ಕೊಳದ ಪಕ್ಕ ಕುಳಿತು ನೇಹಾ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ನಟಿ ನೇಹಾ ಗೌಡ ತುಂಬು ಗರ್ಭಿಣಿಯಾಗಿದ್ದು, ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಸಮಾರಂಭವನ್ನೂ ಸಹ ಮಾಡಲಾಗಿತ್ತು, ಚಂದನ್ ಗೌಡ ಮತ್ತು ನೇಹಾ ಗೌಡ ದಂಪತಿಗಳು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಶೇಷ ಫೋಟೊಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ನೇಹಾ ಗೌಡ ಶಾಕುಂತಲೆ ಫೋಟೋ…

Read More

ನವದೆಹಲಿ: ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ಅವರನ್ನು ನೇಮಕ ಮಾಡಲಾಗಿದ್ದು, ಇಂದು ಮಧ್ಯಾಹ್ನ 3.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸದ್ಯ ಅಸ್ತಿತ್ವದಲ್ಲಿರುವ ಕ್ರೀಡಾ ಸಚಿವ ಸ್ಥಾನದ ಜೊತೆಗೆ, ಉದಯನಿಧಿ ಅವರಿಗೆ ಯೋಜನೆ ಮತ್ತು ಅಭಿವೃದ್ಧಿಯ ಖಾತೆಯನ್ನು ಸಹ ನೀಡಲಾಗಿದೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಉದಯನಿಧಿ ಅವರಿಗೆ ಈಗಿರುವ ಖಾತೆಗಳ ಜೊತೆಗೆ ಯೋಜನೆ ಮತ್ತು ಅಭಿವೃದ್ಧಿ ಖಾತೆಯನ್ನು ಮಂಜೂರು ಮಾಡಿ ಉಪಮುಖ್ಯಮಂತ್ರಿ ಹುದ್ದೆಗೆ ನಿಯೋಜಿಸುವಂತೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಶಿಫಾರಸು ಮಾಡಿದ್ದರು. ಮಹತ್ವದ ಕ್ಯಾಬಿನೆಟ್ ಪುನರ್ ರಚನೆಯಲ್ಲಿ, ಉನ್ನತ ಶಿಕ್ಷಣ ಸಚಿವ ಕೆ.ಪೊನ್ಮುಡಿ ಅವರನ್ನು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಿಸಿದೆ. ಶಿವ ವಿ.ಮೆಯ್ಯನಾಥನ್ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ನೇಮಕಗೊಂಡರೆ, ಎನ್.ಕಯಲ್ವಿಝಿ ಸೆಲ್ವರಾಜ್ ಅವರು ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಮಾಜಿ ಸೈನಿಕರ ಕಲ್ಯಾಣ ಖಾತೆಗಳನ್ನು ವಹಿಸಿಕೊಳ್ಳಲಿದ್ದಾರೆ. ಎಂ.ಮತಿವೆಂಥನ್ ಅವರು ಆದಿ ದ್ರಾವಿಡರ್ ಮತ್ತು ಗಿರಿಜನ ಕಲ್ಯಾಣದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಆರ್‌ಎಸ್ ರಾಜಕಣ್ಣಪ್ಪನ್ ಅವರನ್ನು ಹಾಲು ಮತ್ತು ಡೈರಿ…

Read More

ಮೈಸೂರು: ಮಹೋತ್ಸವ ದಿನದಿಂದ ದಿನಕ್ಕೆ ರಂಗೇರುತ್ತಿದೆ. ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ತಾಲೀಮು ಚುರುಕುಗೊಳಿಸಲಾಗಿದೆ. ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಸಂಸ್ಕೃತಿ ಕಾರ್ಯಕ್ರಮವೊಂದು ನಡೆದಿದೆ. ಮೈಸೂರಿನ ಹೊರವಲಯದಲ್ಲಿ ಹೊರವಲಯದಲ್ಲಿ ರೇವ್​ ಪಾರ್ಟಿ ಮೇಲೆ ಪೊಲೀಸರು ದಾಳಿ ಮಾಡಿ ಐವತ್ತಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ತಡ ರಾತ್ರಿ ಪಾರ್ಟಿ ಮಾಡುತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. . ಇಲವಾಲ ಪಿಎಸ್ಐ ಮಂಜುನಾಥ ನಾಯಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಪಾರ್ಟಿಯಲ್ಲಿದ್ದ 50ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಪ್ರಕರಣ ಸಂಬಂಧ ಎಸ್​ಪಿ ವಿಷ್ಣುವರ್ಧನ್ ಮಾತನಾಡಿ, ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ಮಾದಕ ದ್ರವ್ಯ ಸಿಕ್ಕಿಲ್ಲ. ಮದ್ಯ ಮತ್ತು ಸಿಗರೇಟ್ ಸ್ಥಳದಲ್ಲಿ ಇತ್ತು. ಅಲ್ಲಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುತ್ತೇವೆ. ಎಫ್ಎಸ್​ಎಲ್ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಈ ಎರಡೂ ವರದಿ ಬಂದ ನಂತರ…

Read More

ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಜೊತೆಗೆ ಇರಾನ್‌ನ ಡೆಪ್ಯೂಟಿ ಕಮಾಂಡರ್ ಕೂಡ ಹತ್ಯೆ ಗೀಡಾಗಿದ್ದಾರೆ. ಬೈರುತ್‌ನಲ್ಲಿ ಇಸ್ರೇಲ್ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಡೆಪ್ಯೂಟಿ ಕಮಾಂಡರ್ ಅಬ್ಬಾಸ್ ನಿಲ್ಫೊರೊಶನ್ ಕೂಡ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅಬ್ಬಾಸ್ ನಿಲ್ಫೊರೊಶನ್ ಬ್ರಿಗೇಡಿಯರ್ ಜನರಲ್ ಆಗಿದ್ದರೂ ಲೆಬನಾನ್‌ನಲ್ಲಿ ಕುಡ್ಸ್ ಫೋರ್ಸ್‌ನ ಕಮಾಂಡರ್ ಆಗಿದ್ದರು. ನಿಲ್ಫೊರೊಶನ್ ಅವರು IRGC ಯ ಕಾರ್ಯಾಚರಣೆಗಳ ಕಮಾಂಡ್ ಅನ್ನು ನೋಡಿಕೊಳ್ಳುತ್ತಿದ್ದರು. ಇದು ವಿವಿಧ ಮಿಲಿಟರಿ ಮತ್ತು ಭದ್ರತಾ ಕಾರ್ಯಾಚರಣೆಗಳಲ್ಲಿ ನೇರವಾಗಿ ತೊಡಗಿಸಿಕೊಂಡಿದೆ. ಇದು ವಿಶೇಷವಾಗಿ ಸಿರಿಯಾದಲ್ಲಿ ಮಿಲಿಟರಿ ಚಟುವಟಿಕೆಯನ್ನು ನಡೆಸಿತ್ತು. ಇಸ್ರೇಲಿ ವೈಮಾನಿಕ ದಾಳಿ ನಡೆದಾಗ ಅವರು ಶುಕ್ರವಾರ ನಸ್ರಲ್ಲಾ ಅವರೊಂದಿಗೆ ಬೈರುತ್‌ನಲ್ಲಿದ್ದರು. ನಸ್ರಲ್ಲಾ ಜೊತೆ ಅಬ್ಬಾಸ್ ಕೂಡ ಹತ್ಯೆಗೀಡಾಗಿದ್ದಾರೆ. ಲೆಬನಾನ್‌ನಲ್ಲಿ ಇಸ್ರೇಲ್ ಸೇನೆಯ ದಾಳಿಗೆ ಇರಾನ್ ಪ್ರತಿಕ್ರಿಯಿಸಿದ್ದು,. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ಎಂದಿಗೂ ಹೆಜ್ಬುಲ್ಲಾವನ್ನು ತೊಡೆದುಹಾಕಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಖಮೇನಿ ಹೇಳಿಕೆಯಲ್ಲಿ ಹಸನ್…

Read More

ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂಕುಸಿತದಿಂದ ನೇಪಾಳ ರಾಷ್ಟ್ರ ತತ್ತರಿಸಿ ಹೋಗಿದೆ. ಘಟನೆಯಲ್ಲಿ ಇದುವರೆಗೂ 112 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ನೇಪಾಳದಲ್ಲಿ ಕನಿಷ್ಠ 112 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದ್ದು, ನೇಪಾಳದ ಕೆಲವು ಭಾಗಗಳು ಜಲಾವೃತಗೊಂಡಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈವರೆಗೂ 112 ಮಂದಿ ಸಾವಿಗೀಡಾಗಿದ್ದಾರೆ. ಅವರಲ್ಲಿ 34 ಮಂದಿ ರಾಜಧಾನಿ ಕಠ್ಮಂಡು ಕಣಿವೆಯಲ್ಲಿಯೇ ಮೃತಪಟ್ಟಿದ್ದಾರೆ. 36 ಜನ ಗಾಯಗೊಂಡಿದ್ದಾರೆ’ ಎಂದು ನೇಪಾಳ ಪೊಲೀಸರ ಉಪ ವಕ್ತಾರ ಬಿಷ್ಣೋ ಅಧಿಕಾರಿ ತಿಳಿಸಿದ್ದಾರೆ. ಪ್ರವಾಹದಲ್ಲಿ ಒಟ್ಟು 44 ಮಂದಿ ನಾಪತ್ತೆಯಾಗಿದ್ದು, ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ದೇಶದಾದ್ಯಂತ 44 ಸ್ಥಳಗಳಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್‌ ಮಾಡಲಾಗಿದೆ. ಕಠ್ಮಂಡುವಿನಲ್ಲಿ ಸುಮಾರು 226 ಮನೆಗಳು ಮುಳುಗಡೆಯಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು 3,000 ಭದ್ರತಾ ಸಿಬ್ಬಂದಿಯ…

Read More