ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂಕುಸಿತದಿಂದ ನೇಪಾಳ ರಾಷ್ಟ್ರ ತತ್ತರಿಸಿ ಹೋಗಿದೆ. ಘಟನೆಯಲ್ಲಿ ಇದುವರೆಗೂ 112 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ನೇಪಾಳದಲ್ಲಿ ಕನಿಷ್ಠ 112 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದ್ದು, ನೇಪಾಳದ ಕೆಲವು ಭಾಗಗಳು ಜಲಾವೃತಗೊಂಡಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈವರೆಗೂ 112 ಮಂದಿ ಸಾವಿಗೀಡಾಗಿದ್ದಾರೆ. ಅವರಲ್ಲಿ 34 ಮಂದಿ ರಾಜಧಾನಿ ಕಠ್ಮಂಡು ಕಣಿವೆಯಲ್ಲಿಯೇ ಮೃತಪಟ್ಟಿದ್ದಾರೆ. 36 ಜನ ಗಾಯಗೊಂಡಿದ್ದಾರೆ’ ಎಂದು ನೇಪಾಳ ಪೊಲೀಸರ ಉಪ ವಕ್ತಾರ ಬಿಷ್ಣೋ ಅಧಿಕಾರಿ ತಿಳಿಸಿದ್ದಾರೆ. ಪ್ರವಾಹದಲ್ಲಿ ಒಟ್ಟು 44 ಮಂದಿ ನಾಪತ್ತೆಯಾಗಿದ್ದು, ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ದೇಶದಾದ್ಯಂತ 44 ಸ್ಥಳಗಳಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಕಠ್ಮಂಡುವಿನಲ್ಲಿ ಸುಮಾರು 226 ಮನೆಗಳು ಮುಳುಗಡೆಯಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು 3,000 ಭದ್ರತಾ ಸಿಬ್ಬಂದಿಯ…
Author: Prajatv Kannada
ಲೆಬನಾನ್‌ನ ಹಮಾಸ್ ಬೆಂಬಲಿಸ್ತಿರೋ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು ದಾಳಿಯಲ್ಲಿ ಹಿಜ್ಬುಲ್ಲಾದ ದೀರ್ಘಕಾಲದ ಮುಖ್ಯಸ್ಥ ಶೇಖ್ ಹಸನ್ ನಸ್ರಲ್ಲಾ ಮೃತಪಟ್ಟಿದ್ದಾಗಿ ಇಸ್ರೇಲ್ ಘೋಷಿಸಿದೆ. ನಸ್ರಲ್ಲಾ ಜೊತೆ ಆತನ ಪುತ್ರಿ ಝೈನಾಬ್ ನಸ್ರಲ್ಲಾ ಕೂಡ ಹತ್ಯೆಗೀಡಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಳೆದ 32 ವರ್ಷಗಳಿಂದ ಉಗ್ರ ಹಿಜ್ಬುಲ್ಲಾ ಸಂಘವನ್ನು ಶೇಖ್ ಹಸನ್ ನಸ್ರಲ್ಲಾ ನಡೆಸುತ್ತಿದ್ದಾರೆ. ಇದೀಗ ಹತ್ಯೆಗೀಡಾಗಿದ್ದು ಮುಂದೆ ಹಿಜ್ಬುಲ್ಲಾ ಗುಂಪಿನ ಮುಂದಾಳತ್ವ ಯಾರು ವಹಿಸುತ್ತಾರೆ ಎಂಬ ಆತಂಕ ಶುರುವಾಗಿದೆ. ಈ ಬಗ್ಗೆ ಇಸ್ರೇಲ್ ಸೇನೆ ಟ್ವೀಟ್ ಮಾಡಿದ್ದು, `ಹಸನ್ ನಸ್ರಲ್ಲಾ ಇನ್ನು ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲʼ ಅಂದಿದೆ. ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣದ ದಹಿಯೆಹ್‌ನಲ್ಲಿರುವ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಇಸ್ರೇಲ್ 5 ಗಂಟೆಗಳ ವೈಮಾನಿಕ ದಾಳಿಯಲ್ಲಿ ಸುಮಾರು ಟನ್‌ಗಳಷ್ಟು ಸ್ಫೋಟಕ ಬಾಂಬ್‌ಗಳನ್ನು ಬಳಸಿದೆ. ಕಟ್ಟರ್ ಮೂಲಭೂತವಾದಿಯಾಗಿದ್ದ ನಸ್ರಲ್ಲಾ.. 1992ರಿಂದ ಹಿಜ್ಬುಲ್ಲಾದ ಮುಖ್ಯಸ್ಥನಾಗಿದ್ದು, ವಿಶ್ವದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿದ್ದ. ಹಿಜ್ಬುಲ್ಲಾ ಸಂಘಟನೆ ಸೇರಿದವರಿಗೆ…
ಗುವಾಹಟಿ: ಇಲ್ಲಿನ ಸರ್ಕಾರಿ ವಸತಿ ಶಾಲೆಯೊಂದರಲ್ಲಿ 2014ರಿಂದ 2022ರ ವರೆಗೆ 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಹಾಸ್ಟೆಲ್ ವಾರ್ಡನ್ ಯುಮ್ಕೆನ್ ಬಾಗ್ರಾಗೆ ಅರುಣಾಚಲ ಪ್ರದೇಶದ ವಿಶೇಷ ನ್ಯಾಯಾಲಯ ಗುರುವಾರ ಗಲ್ಲು ಶಿಕ್ಷೆ ವಿಧಿಸಿದೆ. ಅಲ್ಲದೇ ಮಕ್ಕಳು ದೂರು ನೀಡಿದರೂ ಅಪರಾಧವನ್ನು ವರದಿ ಮಾಡುವಲ್ಲಿ ವಿಫಲರಾದ ಮಾಜಿ ಮುಖ್ಯಶಿಕ್ಷಕ ಸಿಂಗ್ತುಂಗ್ ಯೋರ್ಪೆನ್ ಮತ್ತು ಹಿಂದಿ ಶಿಕ್ಷಕಿ ಮಾರ್ಬೊಮ್ ನ್ಗೊಮ್ದಿರ್ ಅವರಿಗೆ ಪೋಕ್ಸೊ ಕಾಯ್ದೆ ಅಡಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ವಿಶೇಷ ನ್ಯಾಯಾಧೀಶರಾದ ಜಾವೆಪ್ಲು ಚೈ ತೀರ್ಪು ಪ್ರಕಟಿಸಿದ್ದಾರೆ. ಭಾರತೀಯ ದಂಡ ಸಂಹಿತೆ (IPC) ಮತ್ತು POCSO ಕಾಯ್ದೆ ಅಡಿಯಲ್ಲಿ ಮೂವರನ್ನು ದೋಷಿಗಳೆಂದು ಘೋಷಿಸಿದ್ದಾರೆ. ವಿದ್ಯಾರ್ಥಿಗಳು ದೂರು ನೀಡಿದರೂ ಸಹ ಶಾಲೆಯ ಖ್ಯಾತಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಮೌನವಾಗಿರುವಂತೆ ಕೇಳಿಕೊಂಡಿದ್ದರು ಎಂಬ ಕಾರಣಕ್ಕೆ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. ಈ ಕುರಿತು ಮಾತನಾಡಿರುವ 21 ಮಕ್ಕಳ ಪರ ವಕೀಲ ಓಯಾಮ್ ಬಿಂಗೆಪ್, ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದು…
ಚಂಡೀಗಢ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ರೈತರ ಜೀವದ ವೈರಿಯಾಗಿದೆ. ಅವರು ರೈತರಿಗೆ ಸುಳ್ಳು ಮಾತ್ರ ಹೇಳುತ್ತಾರೆ. ರೈತರಿಗೆ ನೀಡಿದ ಒಂದು ಭರವಸೆಯನ್ನು ಈಡೇರಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆ ಹಿನ್ನಲೆ ಹಿಸ್ಸಾರ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹರಿಯಾಣದಲ್ಲಿ ಚುನಾವಣೆ ಕಾರಣಕ್ಕೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರೈತರಿಗೆ ದೊಡ್ಡ ದೊಡ್ಡ ಭರವಸೆ ನೀಡಿದೆ. ಆಕಾಶದಲ್ಲಿರುವ ನಕ್ಷತ್ರಗಳನ್ನು ತಂದು ಕೊಡುವ ಭರವಸೆ ನೀಡುತ್ತಿದ್ದಾರೆ. ಇಂತಹ ಭರವಸೆ ನೀಡುವ ಕಾಂಗ್ರೆಸ್ ನಾಯಕರಿಗೆ ಕೇಳಿ ಹರಿಯಾಣದಲ್ಲಿ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದೀರಿ. ಕರ್ನಾಟಕಣ ತೆಲಂಗಾಣ, ಹಿಮಾಲಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಅಲ್ಲಿ ಇಂತಹ ಯೋಜನೆ ಅನುಷ್ಠಾನ ಮಾಡಿ ತೋರಿಸಲು ಹೇಳಿ ಎಂದು ಕಿಡಿಕಾರಿದರು. ಹರಿಯಾಣದ ಜನರು ಕಟ್ಟಾ ದೇಶಭಕ್ತರು. ಇಂದಿನ ಕಾಂಗ್ರೆಸ್ ಅರ್ಬನ್ ನಕ್ಸಲೀಯರ ಕಪಿಮುಷ್ಠಿಯಲ್ಲಿದೆ. ಕಾಂಗ್ರೆಸ್ ನಾಯಕರು ವಿದೇಶಕ್ಕೆ ಹೋದಾಗ ಯಾರನ್ನು ಭೇಟಿ ಮಾಡುತ್ತಾರೆ? ಭಾರತದ ಶತ್ರುಗಳ ಭಾಷೆ…
ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ ಅವಾರ್ಡ್ಸ್ 2024ಕ್ಕೆ ಇಂದು ತೆರೆ ಬೀಳಲಿದೆ. ಸೆಪ್ಟೆಂಬರ್ 27ರಿಂದ ಪ್ರಾರಂಭವಾಗಿರುವ ಐಫಾ ಅವಾರ್ಡ್ಸ್ 29ರ ವರೆಗೆ ನಡೆಯಲಿದೆ. ಭಾರತದ ಐದು ಪ್ರಮುಖ ಚಿತ್ರರಂಗಳ ಗಣ್ಯರು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ಅತ್ಯುತ್ತಮ ಸಿನಿಮಾ, ತಂತ್ರಜ್ಞರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಕನ್ನಡದ ಎರಡೇ ಎರಡು ಸಿನಿಮಾಗಳಿಗೆ ಮಾತ್ರವೇ ಐಫಾ ಪ್ರಶಸ್ತಿ ನೀಡಲಾಗಿದೆ. ಎಲ್ಲ ವಿಭಾಗದ ಪ್ರಶಸ್ತಿಯನ್ನೂ ಕನ್ನಡದ ಕೇವಲ ಎರಡೇ ಸಿನಿಮಾಗಳಿಗೆ ಕೊಟ್ಟು ಐಫಾ ಕೈತೊಳೆದುಕೊಂಡಿದೆಯಾ ಎಂಬ ಅನುಮಾನ ಶುರುವಾಗಿದೆ. ಯಾಕೆಂದರೆ 2023 ರಲ್ಲಿ ಕನ್ನಡದಲ್ಲಿ ಸಾಕಷ್ಟ ಸಿನಿಮಾಗಳು ಬಿಡುಗಡೆ ಆಗಿದ್ದು ಹಿಟ್ ಆಗಿವೆ. ಆದ್ರೆ ಅದ್ಯಾವುದಕ್ಕೂ ಪರಿಗಣನೆಗೆ ತೆಗೆದುಕೊಳ್ಳದ ಐಫಾ ಕಾಟೇರಾ ಹಾಗೂ ಸಪ್ತ ಸಾಗರದಾಚೆ ಸಿನಿಮಾವನ್ನು ಮಾತ್ರ ಪರಿಗಣಿಸಿದೆಯಾ. ಇಲ್ಲಿದೆ ನೋಡಿ ಐಫಾ ನೀಡಿರುವ ಪ್ರಶಸ್ತಿಗಳ ಪಟ್ಟಿ ಅತ್ಯುತ್ತಮ ಸಿನಿಮಾ: ಕಾಟೇರ ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ…
ಬಿಗ್ ಬಾಸ್ ಸೀಸನ್ 11ಕ್ಕೆ ಇನ್ನೆನ್ನೂ ಕೆಲವೇ ಗಂಟೆಗಳು ಮಾತ್ರವೇ ಭಾಕಿ ಇದೆ. ಇಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಮಧ್ಯೆ ಬಿಗ್ ಬಾಸ್ ಮನೆಗೆ ಹೋಗುವ ಐವರು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ಅವರ್ಲಿ 4ನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ದೊಡ್ಮನೆ ಒಳಗೆ ಎಂಟ್ರಿಕೊಡ್ತಿದ್ದಾರೆ. ಮೂಲತಃ ಉತ್ತರ ಕರ್ನಾಟಕದವರಾದ ಗೋಲ್ಡ್ ಸುರೇಶ್ ಉದ್ಯಮಿ ಹಾಗೂ ರೈತರಾಗಿ ಗುರುತಿಸಿಕೊಂಡಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇರುವ ಗೋಲ್ಡ್ ಸುರೇಶ್ ಚಿನ್ನದ ವ್ಯಾಪಾರಿಯಾಗಿಯೂ ಹೌದು. ಇದೀಗ ಮೊದಲ ಕ್ಯಾಮೆರಾ ಮುಂದೆ ಸುರೇಶ್ ಬಂದಿದ್ದಾರೆ. ಈ ವಿಚಾರ ರಾಜ ರಾಣಿ ಫಿನಾಲೆಯಲ್ಲಿ ರಿವೀಲ್ ಆಗಿದೆ. ಇಂದು ಸಂಜೆ ದೊಡ್ಮನೆಗೆ ಕಾಲಿಡಲಿದ್ದಾರೆ. ಕಳೆದ ಬಾರಿ ಮೈತುಂಬಾ ಚಿನ್ನ ಧರಿಸಿ ಬಿಗ್ಬಾಸ್ ಮನೆಗೆ ಹೋಗಿದ್ದ ವರ್ತೂರು ಸಂತೋಷ್, ಬಿಗ್ಬಾಸ್ ಮನೆಗೆ ಹೋದ ಬಳಿಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಈಗ ಅದೇ ಮಾದರಿಯ ಸ್ಪರ್ಧಿಯೊಬ್ಬರನ್ನು ಆಯೋಜಕರು ಹುಡುಕಿ ತಂದಿದ್ದಾರೆ. ವರ್ತೂರು ಸಂತೋಷ್ ಮಾದರಿಯಲ್ಲಿಯೇ ಮೈಮೇಲೆ…
ಡ್ರಾಮಾ ಮಾಡ್ಕೊಂಡು, ವಿವಾದಗಳ ಮೂಲಕವೇ ಸದ್ದು ಮಾಡೋ ನಟಿ ರಾಖಿ ಸಾವಂತ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಡ್ತಿದ್ದಾರೆ. ಈ ಹಿಂದೆ ಹಿಂದಿ ಬಿಗ್ ಬಾಸ್ ಶೋಗೆ ಆಗಮಿಸಿದ್ದ ರಾಖಿ ಸಾವಂತ್ ಈ ಭಾರಿ ಮರಾಠಿ ‘ಬಿಗ್ ಬಾಸ್ ಸೀಸನ್ 5’ಕ್ಕೆ ಆಗಮಿಸಿದ್ದಾರೆ. ರಿತೇಶ್ ದೇಶ್‌ಮುಖ್ ನಿರೂಪಣೆಯ ಮರಾಠಿ ಬಿಗ್ ಬಾಸ್‌ಗೆ ರಾಖಿ ಆಗಮಿಸಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದರಲ್ಲಿ ನಟಿ ಡ್ಯಾನ್ಸ್ ಮಾಡುತ್ತಾ ಎಂಟ್ರಿ ಕೊಟ್ಟಿದ್ದು, ಹಲೋ ಬಿಗ್ ಬಾಸ್ ನಾನು ಮತ್ತೆ ಬಂದಿದ್ದೇನೆ ಎಂದಿದ್ದಾರೆ. ಬಳಿಕ ಸ್ಪರ್ಧಿ ನಿಕ್ಕಿ ತಂಬೋಲಿಗೆ ರಾಖಿ ಕ್ವಾಟ್ಲೆ ಕೊಟ್ಟಿದ್ದಾರೆ. ರಾಖಿ ಮಾತಿಗೆ ನಿಕ್ಕಿ ಮುಖ ಕಿವುಚಿಕೊಂಡಿದ್ದಾರೆ. ಒಟ್ನಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರೋದು ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ.
ಪ್ರೇಕ್ಷಕರು ಕುತೂಹಲದಿಂದ ಕಾಯ್ತಿದ್ದ ದಿನ ಕೊನೆಗೂ ಬಂದೇ ಬಿಟ್ಟಿದೆ. ಇಂದು ಸಂಜೆ 6.30ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಬಾರಿ ಸ್ವರ್ಗ ಮತ್ತು ನರಕ ಅಂತ ಎರಡು ಥೀಮ್‌ಗಳೊಂದಿಗೆ ‘ಬಿಗ್ ಬಾಸ್’ ಆಟ ಶುರುವಾಗಲಿದೆ. ಅದ್ಧೂರಿಯಾಗಿ ಸಿದ್ಧವಾಗಿರುವ ‘ಬಿಗ್ ಬಾಸ್’ ಮನೆಯ ತೆರೆಹಿಂದಿನ ಕಸರತ್ತು ಹೇಗಿತ್ತು? ಎಂಬುದರ ಝಲಕ್ ಅನ್ನು ವಾಹಿನಿ ರಿವೀಲ್ ಮಾಡಿದೆ. ಈ ಬಾರಿ ಸ್ವರ್ಗ ಮತ್ತು ನರಕ ಅಂತ ಥೀಮ್‌ನಲ್ಲಿ ದೊಡ್ಮನೆ ಆಟ ಶುರುವಾಗಲಿದ್ದು, ‘ಬಿಗ್’ ಮನೆಗೆ ಬರಲಿರುವ ಸ್ಪರ್ಧಿಗಳು ಯಾವ ಟೀಮ್‌ಗೆ ಯಾರೆಲ್ಲಾ ಬರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಬಿಗ್ ಬಾಸ್ ಗೆ ಎಂಟ್ರಿಕೊಡಲಿರುವ ಐವರು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ಸ್ವರ್ಗ ಮತ್ತು ನರಕ ಎರಡು ಲೋಕವನ್ನು ತೋರಿಸಲು ‘ಬಿಗ್ ಬಾಸ್’ ತಂಡ ದೊಡ್ಡ ಮಟ್ಟದಲ್ಲಿಯೇ ತಯಾರಿ ಮಾಡಿರುವ ಚೆಂದದ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಲಕ್ಷುರಿ ಆಗಿಯೇ ಬಿಗ್ ಬಾಸ್ ಮನೆ ಸಿದ್ಧವಾಗುತ್ತಿದೆ. ಪೂರ್ತಿಯಾಗಿ ಬಿಗ್ ಬಾಸ್ ಮನೆ ಹೇಗಿರಲಿದೆ ಎಂಬ ಅನಾವರಣ ಆಗದೇ…
ಈ ಭಾರಿ ದೊಡ್ಮೆನೆ ಒಳಗೆ ಯಾರೆಲ್ಲಾ ಹೋಗ್ತಾರೆ ಎಂಬ ಕುತೂಹಲ ಸಾಕಷ್ಟು ದಿನಗಳಿಂದ ಪ್ರೇಕ್ಷಕರಿಗೆ ಶುರುವಾಗಿದೆ. ಸಾಕಷ್ಟು ಮಂದಿಯ ಹೆಸರು ಕೇಳಿ ಬಂದಿತ್ತು. ಅಂತು ಇಂತೂ ಕೊನೆಗೂ ಬಿಗ್ ಬಾಸ್ ಸ್ಪರ್ಧಿಗಳ ಕುತೂಹಲಕ್ಕೆ ತೆರೆಬಿದ್ದಿದೆ. ದೊಡ್ಮನೆಯ ಬರಲಿರುವ ಮೊದಲ ಸ್ಪರ್ಧಿ ಯಾರೆಂಬುದು ರಿವೀಲ್ ಆಗಿದೆ. ಸತ್ಯ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ನಟಿ ಗೌತಮಿ ಜಾದವ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ. ‘ರಾಜ ರಾಣಿ’ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಗೌತಮಿ ಹೆಸರು ರಿವೀಲ್ ಆಗಿದೆ. ಸತ್ಯ ಸೀರಿಯಲ್ ಖ್ಯಾತಿಯ ಗೌತಮಿ ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಮೋಡಿ ಮಾಡಲಿದ್ದಾರೆ. ಹಾಗಾದ್ರೆ ಅವರು ಸ್ಪರ್ಗಕ್ಕೆ ಹೋಗ್ತಾರಾ? ಅಥವಾ ನರಕಕ್ಕೆ ಹೋಗ್ತಾರಾ? ಅದು ಪ್ರೇಕ್ಷಕರಿಗೆ ನಿರ್ಧರಿಸುವ ಅವಕಾಶವಿದೆ. ಅಂದಹಾಗೆ, ನಟಿ ಗೌತಮಿ ನಾಗ ಪಂಚಮಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದ್ದು ಸತ್ಯ ಧಾರವಾಹಿ.