ಡ್ರಾಮಾ ಮಾಡ್ಕೊಂಡು, ವಿವಾದಗಳ ಮೂಲಕವೇ ಸದ್ದು ಮಾಡೋ ನಟಿ ರಾಖಿ ಸಾವಂತ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಡ್ತಿದ್ದಾರೆ. ಈ ಹಿಂದೆ ಹಿಂದಿ ಬಿಗ್ ಬಾಸ್ ಶೋಗೆ ಆಗಮಿಸಿದ್ದ ರಾಖಿ ಸಾವಂತ್ ಈ ಭಾರಿ ಮರಾಠಿ ‘ಬಿಗ್ ಬಾಸ್ ಸೀಸನ್ 5’ಕ್ಕೆ ಆಗಮಿಸಿದ್ದಾರೆ. ರಿತೇಶ್ ದೇಶ್‌ಮುಖ್ ನಿರೂಪಣೆಯ ಮರಾಠಿ ಬಿಗ್ ಬಾಸ್‌ಗೆ ರಾಖಿ ಆಗಮಿಸಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದರಲ್ಲಿ ನಟಿ ಡ್ಯಾನ್ಸ್ ಮಾಡುತ್ತಾ ಎಂಟ್ರಿ ಕೊಟ್ಟಿದ್ದು, ಹಲೋ ಬಿಗ್ ಬಾಸ್ ನಾನು ಮತ್ತೆ ಬಂದಿದ್ದೇನೆ ಎಂದಿದ್ದಾರೆ. ಬಳಿಕ ಸ್ಪರ್ಧಿ ನಿಕ್ಕಿ ತಂಬೋಲಿಗೆ ರಾಖಿ ಕ್ವಾಟ್ಲೆ ಕೊಟ್ಟಿದ್ದಾರೆ. ರಾಖಿ ಮಾತಿಗೆ ನಿಕ್ಕಿ ಮುಖ ಕಿವುಚಿಕೊಂಡಿದ್ದಾರೆ. ಒಟ್ನಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರೋದು ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ.
Author: Prajatv Kannada
ಪ್ರೇಕ್ಷಕರು ಕುತೂಹಲದಿಂದ ಕಾಯ್ತಿದ್ದ ದಿನ ಕೊನೆಗೂ ಬಂದೇ ಬಿಟ್ಟಿದೆ. ಇಂದು ಸಂಜೆ 6.30ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಬಾರಿ ಸ್ವರ್ಗ ಮತ್ತು ನರಕ ಅಂತ ಎರಡು ಥೀಮ್‌ಗಳೊಂದಿಗೆ ‘ಬಿಗ್ ಬಾಸ್’ ಆಟ ಶುರುವಾಗಲಿದೆ. ಅದ್ಧೂರಿಯಾಗಿ ಸಿದ್ಧವಾಗಿರುವ ‘ಬಿಗ್ ಬಾಸ್’ ಮನೆಯ ತೆರೆಹಿಂದಿನ ಕಸರತ್ತು ಹೇಗಿತ್ತು? ಎಂಬುದರ ಝಲಕ್ ಅನ್ನು ವಾಹಿನಿ ರಿವೀಲ್ ಮಾಡಿದೆ. ಈ ಬಾರಿ ಸ್ವರ್ಗ ಮತ್ತು ನರಕ ಅಂತ ಥೀಮ್‌ನಲ್ಲಿ ದೊಡ್ಮನೆ ಆಟ ಶುರುವಾಗಲಿದ್ದು, ‘ಬಿಗ್’ ಮನೆಗೆ ಬರಲಿರುವ ಸ್ಪರ್ಧಿಗಳು ಯಾವ ಟೀಮ್‌ಗೆ ಯಾರೆಲ್ಲಾ ಬರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಬಿಗ್ ಬಾಸ್ ಗೆ ಎಂಟ್ರಿಕೊಡಲಿರುವ ಐವರು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ಸ್ವರ್ಗ ಮತ್ತು ನರಕ ಎರಡು ಲೋಕವನ್ನು ತೋರಿಸಲು ‘ಬಿಗ್ ಬಾಸ್’ ತಂಡ ದೊಡ್ಡ ಮಟ್ಟದಲ್ಲಿಯೇ ತಯಾರಿ ಮಾಡಿರುವ ಚೆಂದದ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಲಕ್ಷುರಿ ಆಗಿಯೇ ಬಿಗ್ ಬಾಸ್ ಮನೆ ಸಿದ್ಧವಾಗುತ್ತಿದೆ. ಪೂರ್ತಿಯಾಗಿ ಬಿಗ್ ಬಾಸ್ ಮನೆ ಹೇಗಿರಲಿದೆ ಎಂಬ ಅನಾವರಣ ಆಗದೇ…
ಈ ಭಾರಿ ದೊಡ್ಮೆನೆ ಒಳಗೆ ಯಾರೆಲ್ಲಾ ಹೋಗ್ತಾರೆ ಎಂಬ ಕುತೂಹಲ ಸಾಕಷ್ಟು ದಿನಗಳಿಂದ ಪ್ರೇಕ್ಷಕರಿಗೆ ಶುರುವಾಗಿದೆ. ಸಾಕಷ್ಟು ಮಂದಿಯ ಹೆಸರು ಕೇಳಿ ಬಂದಿತ್ತು. ಅಂತು ಇಂತೂ ಕೊನೆಗೂ ಬಿಗ್ ಬಾಸ್ ಸ್ಪರ್ಧಿಗಳ ಕುತೂಹಲಕ್ಕೆ ತೆರೆಬಿದ್ದಿದೆ. ದೊಡ್ಮನೆಯ ಬರಲಿರುವ ಮೊದಲ ಸ್ಪರ್ಧಿ ಯಾರೆಂಬುದು ರಿವೀಲ್ ಆಗಿದೆ. ಸತ್ಯ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ನಟಿ ಗೌತಮಿ ಜಾದವ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ. ‘ರಾಜ ರಾಣಿ’ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಗೌತಮಿ ಹೆಸರು ರಿವೀಲ್ ಆಗಿದೆ. ಸತ್ಯ ಸೀರಿಯಲ್ ಖ್ಯಾತಿಯ ಗೌತಮಿ ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಮೋಡಿ ಮಾಡಲಿದ್ದಾರೆ. ಹಾಗಾದ್ರೆ ಅವರು ಸ್ಪರ್ಗಕ್ಕೆ ಹೋಗ್ತಾರಾ? ಅಥವಾ ನರಕಕ್ಕೆ ಹೋಗ್ತಾರಾ? ಅದು ಪ್ರೇಕ್ಷಕರಿಗೆ ನಿರ್ಧರಿಸುವ ಅವಕಾಶವಿದೆ. ಅಂದಹಾಗೆ, ನಟಿ ಗೌತಮಿ ನಾಗ ಪಂಚಮಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದ್ದು ಸತ್ಯ ಧಾರವಾಹಿ.
ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ನಾಯಕ ಹಸನ್ ನಸ್ರಲ್ಲಾನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಮಿಲಿಟರಿ ಘೋಷಿಸಿದೆ. ಘಟನೆಯ ಬಗ್ಗೆ ಹಿಜ್ಬುಲ್ಲಾ ಸಂಘಟನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೂರು ದಶಕಗಳಿಗೂ ಹೆಚ್ಚು ಕಾಲ ಹಿಜ್ಬುಲ್ಲಾವನ್ನು ಮುನ್ನಡೆಸಿರುವ ನಸ್ರಲ್ಲಾಹ್, ಬೈರುತ್‌ನ ದಕ್ಷಿಣದ ದಹೀಹ್‌ನಲ್ಲಿ ಆರು ವಸತಿ ಕಟ್ಟಡಗಳನ್ನು ನೆಲಸಮಗೊಳಿಸಿದ ಬೃಹತ್ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ನಿನ್ನೆಯ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ ಆರು ಜನರು ಮೃತಪಟ್ಟಿದ್ದರು. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷದಲ್ಲಿ ಲೆಬನಾನಿನ ರಾಜಧಾನಿಯಲ್ಲಿ ಸಂಭವಿಸಿದ ಅತಿ ದೊಡ್ಡ ಸ್ಫೋಟ ಇದಾಗಿದೆ. ಇಸ್ರೇಲ್ ಸೇನೆಯು ಇದು ಹಿಜ್ಬುಲ್ಲಾ ಪ್ರಧಾನ ಕಛೇರಿಯ ಮೇಲೆ ನಿಖರವಾದ ವೈಮಾನಿಕ ದಾಳಿ ಎಂದು ಹೇಳಿಕೊಂಡಿದೆ. ಆರಂಭಿಕ ಸ್ಫೋಟದ ನಂತರ ಇಸ್ರೇಲ್ ದಕ್ಷಿಣದ ಉಪನಗರಗಳ ಇತರ ಪ್ರದೇಶಗಳ ಮೇಲೆ ಸರಣಿ ದಾಳಿಗಳನ್ನು ಪ್ರಾರಂಭಿಸಿತು. ಹಿಜ್ಬುಲ್ಲಾದ ಸದರ್ನ್ ಫ್ರಂಟ್‌ನ ಕಮಾಂಡರ್ ಅಲಿ ಕರ್ಕಿ ಮತ್ತು ಹೆಚ್ಚುವರಿ ಹಿಜ್ಬುಲ್ಲಾ ಕಮಾಂಡರ್‌ಗಳು ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು…