Author: Prajatv Kannada

ಬಿಗ್ ಬಾಸ್ ಸೀಸನ್ 11ಕ್ಕೆ ಇನ್ನೂ ಕೆಲವೇ ಗಂಟೆಗಳು ಮಾತ್ರವೇ ಭಾಕಿ ಇದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗ್ತಿದ್ದಾರೆ ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಇದೀಗ ಬಿಗ್​ಬಾಸ್​ ಸೀಸನ್​ 11ಕ್ಕೆ ಹೋಗುವ ಐದು ಸ್ಪರ್ಧಿಗಳು ಹೆಸರನ್ನು ಅಧಿಕೃತವಾಗಿ ಗೊತ್ತಾಗಲಿದೆ. ಸಿನಿಮಾ ಕ್ಷೇತ್ರದಿಂದ ಈ ಬಾರಿ ಬಿಗ್​ಬಾಸ್​ ಕೆಲವೊಂದು ಸ್ಟಾರ್​ ನಟ ನಟಿಯರು ಎಂಟ್ರಿ ಕೊಡಲಿದ್ದಾರೆ. ಬಿಗ್‌ಬಾಸ್‌ ಸೀಸನ್‌ ಅಂದ್ರೆ ಗ್ಲಾಮರಸ್​ ಕೂಡ ಇರ್ಬೇಕು. ಈ ಗ್ಲಾಮರ್ ತುಂಬಲೂ ಈ ಬಾರಿ ಬರ್ತಿರೋರು ನಟಿ ಅನುಷಾ ರೈ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾನೇ ಆ್ಯಕ್ಟಿವ್ ಆಗಿರೋ ಅನುಷಾ ರೈ ಬಿಗ್‌ಬಾಸ್‌ ಸೀಸನ್‌ 11ಗೆ ಸೆಲೆಕ್ಟ್ ಆಗಿದ್ದಾರೆ. ಆದ್ರೆ, ಕೊನೆಗೆ ಇವರು ಕನ್ಫರ್ಮ ಆಗಿದ್ದಾರೆ. ಬಿಗ್​ಬಾಸ್​ಗೆ ಎಂಟ್ರಿ ಕೊಡ್ತಾ ಇರೋ ಸ್ಪರ್ಧಿ ಧರ್ಮ ಕೀರ್ತಿರಾಜ್‌. ಧರ್ಮ ಅಂದಾ ಕ್ಷಣ ನೆನಪಾಗೋದೇ ಈ ಹಾಡು. ಕಣ್ ಕಣ್ಣ ಸಲಿಗೇ.. ಈ ಹಾಡು ಮತ್ತು ಹಲವು ಸಿನಿಮಾಗಳಿಂದ ಖ್ಯಾತಿಗಳಿಸಿರೋ ಧರ್ಮ ಕೀರ್ತಿರಾಜ್‌. ಸಿನಿಮಾ…

Read More

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಹೆಸರಿನಲ್ಲಿ ಈಗಾಗಲೇ ನಕಲಿ ಅಕೌಟ್ ಓಪನ್ ಆಗಿದೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ. ಇದೀಗ ಆರಾಧ್ಯ ಎಂದು ಹೇಳಲಾಗುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ಆರಾಧ್ಯ ಅವರು ಹಸಿರು ಬಣ್ಣದ ಕ್ರಾಪ್ ಟಾಪ್ ಮತ್ತು ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎನ್‌ಎಸ್‌ಎಸ್ ನೀರಜ್ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. “ಈಗ ಆರಾಧ್ಯ ಕೂಡ ಐಶ್ವರ್ಯಾ ರೈ ಅವರೊಂದಿಗೆ ಸೌಂದರ್ಯದಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದ್ದಾರೆ. ಐಶ್ವರ್ಯಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ, ತಾಯಿ ಮತ್ತು ಮಗಳು ಇಬ್ಬರೂ ಮ್ಯಾಚಿಂಗ್ ಕಪ್ಪು ಡ್ರೆಸ್ಗಳನ್ನು ಧರಿಸಿದ್ದರು. ಆದರೆ ಇಲ್ಲಿ ಜನರು ಐಶ್ವರ್ಯಾಳನ್ನು ಪಕ್ಕಕ್ಕಿಟ್ಟು ಆರಾಧ್ಯರನ್ನೇ ನೋಡಿದರು. ಇವರ ಮುದ್ದು ಮುಗುಳ್ನಗೆ ಮತ್ತು ಮುಖ ನೋಡಿದ ಜನರು ಭವಿಷ್ಯದಲ್ಲಿ ಬಾಲಿವುಡ್‌ನ ದೊಡ್ಡ ನಾಯಕಿಯಾಗುತ್ತಾರೆ ಎಂದು ಈಗಾಗಲೇ ಊಹಿಸಲು ಪ್ರಾರಂಭಿಸಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ. ಅಂದ ಹಾಗೆ ಇದು…

Read More

ಬೆಳಗಾವಿ: ಹಿಂದೂಗಳಿಗೆ ಈ ದೇಶದಲ್ಲಿ ಗುಲಾಮಾರಾಗಿ ಜೀವನ ಮಾಡುವ ಪರಿಸ್ಥಿತಿಯಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಹಿಂದೂಗಳು ಈ ದೇಶದಲ್ಲಿ ಗುಲಾಮಾರಾಗಿ ಜೀವನ ಮಾಡುವ ಪರಿಸ್ಥಿತಿಯಿದೆ. ನರೇಂದ್ರ ಮೋದಿ ದೇಶದ ಪ್ರಧಾನಿ ಆಗಿರದಿದ್ದರೆ, ನಮ್ಮನ್ನು ಅತ್ಯಂತ ನಿರ್ದಿಷ್ಟ ಪರಿಸ್ಥಿತಿಯಲ್ಲಿ ನೋಡಬೇಕಾಗುತ್ತಿತ್ತು. https://youtu.be/IxyjBQQ7L3Q?si=OmyjXZm21qv1nrqp ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಿದವರು, ಕಲ್ಲು ಒಗೆದವರು ಅವರು. ಆದರೆ, 1 ರಿಂದ 32ವರೆಗೂ ಹಿಂದೂ ಯುವಕರು ಆರೋಪಿಗಳು. ಎ33ರಿಂದ ಅವರು. ತಿರುಪತಿ ಲಾಡುವಿನಲ್ಲಿ ದನ ಕೊಬ್ಬು, ಮೀನನ ಎಣ್ಣೆ ಹಾಕಿದರು. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿ ಇದ್ದಾಗ ತಿರುಪತಿ ಅಪವಿತ್ರ ಮಾಡಿದ್ದರು. ಇನ್ನೂ ನಮಗೆ ಬುದ್ಧಿ ಬಂದಿಲ್ಲ ಎಂದರು. ನಾವು ಗ್ಯಾರಂಟಿ ಅಂದ ತಕ್ಷಣವೇ ವೋಟ್ ಹಾಕುತ್ತೇವೆ. ಎರಡು ಸಾವಿರ ಕೊಡುತ್ತಾರೆ ಅಂದ್ರೆ ವೋಟ್ ಹಾಕುತ್ತೇವೆ. ಹೀಗೆ ಮಾಡಿದರೆ ಹಿಂದೂಗಳೇ ಉಳಿಯುವುದಿಲ್ಲ. ಹಿಂದೂಗಳು ಎರಡು ಸಾವಿರಕ್ಕೆ ಹೋಗುತ್ತೀರಾ. ಲಕ್ಷ್ಮೀ ಅಕ್ಕಾ ನಿಮಗೆ ಎರಡು ಸಾವಿರದಲ್ಲೇ ಬರ್ಬಾದ್ ಮಾಡಿದರು. ಆದಷ್ಟು ಜಲ್ದಿ…

Read More

ಮೈಸೂರು : ಗ್ಯಾರಂಟಿ ಯೋಜನೆಗಳ ಫಲ ಜನರಿಗೆ ತಲುಪಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ ನೀಡಿದರು. ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ”ಈ ವಿಚಾರದಲ್ಲಿ ತೋರುವ ಅಸಡ್ಡೆ ಮತ್ತು ಉದಾಸೀನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. https://youtu.be/_YY0wjhpYRs?si=76itVNCJi27TGtW8 ಸರಕಾರ ವರ್ಷಕ್ಕೆ ಸುಮಾರು 56 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗಾಗಿ ವಿನಿಯೋಗಿಸುತ್ತಿದೆ. ಇಷ್ಟೂ ಹಣ ಜನರಿಗೆ ತಲುಪುವಂತೆ ಮಾಡಬೇಕು ಎಂದು ಸೂಚಿಸಿದರು. ದಸರಾ ನೆಪದಲ್ಲಿ ಇತರ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಿದರೆ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಅಂತಹ ಅಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು. ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಣೆ ಪಾಠ ಮಾಡಿದ ಅವರು, ಅಧಿಕಾರಿಗಳು ಜನರ ನಡುವೆ ಇದ್ದು ಕೆಲಸ ಮಾಡಬೇಕು. ಅದನ್ನು ಬಿಟ್ಟು ತಾವೇ ಸಿದ್ದ ಮಾದರಿಯ ಮಾಹಿತಿಯೊಂದನ್ನು ತಂದು ಸಭೆಗೆ ನೀಡಿದರೆ ಅದನ್ನು ನಾನು ಒಪ್ಪುವುದಿಲ್ಲ. ಕೆಳ ಹಂತದ ಅಕಾರಿಗಳು ಡೈರಿ ಬರೆಯುವುದನ್ನು, ಜಮೀನುಗಳಿಗೆ ಭೇಟಿ ನೀಡುವುದನ್ನು ಜಿಲ್ಲಾ ಮಟ್ಟದ ಅಕಾರಿಗಳು ಪರಿಶೀಲಿಸಿ…

Read More

ಮಂಡ್ಯದ ಕೆರಗೋಡು ಹನುಮ ಧ್ವಜ ವಿವಾದ ಪ್ರಕರಣದ ಹಿನ್ನಲೆ, ಅರ್ಜಿದಾರರು ವಿವಾದದಿಂದ ಹಿಂದೆ ಸರಿದಿದ್ದಾರೆ.ಗ್ರಾಮಸ್ಥರು ತಾರ್ಕಿಕ ಅಂತ್ಯಕ್ಕೆ ಮುನ್ನುಡಿ ಬರೆದಿದ್ದಾರೆ.ಶಾಸಕರ ವಿರುದ್ದ ತೊಡೆತಟ್ಟಿದವರಿಂದಲೇ ಶಾಸಕರಿಗೆ ಬೆಂಬಲ ನೀಡಿದ್ದು,ಅಭಿವೃದ್ಧಿಗಾಗಿ ಹನುಮ ಧ್ವಜ ಪ್ರಕರಣ ಕೈಬಿಡಲು ಮನವಿ ಮಾಡಿಕೊಂಡಿದ್ದಾರೆ. https://youtu.be/C5fmGwqTANg?si=D_l-C-9Az_vqIbtA ಕೊನೆಗೂ ಹನುಮ ಧ್ವಜ ವಿವಾದಕ್ಕೆ ಪೂರ್ಣ ವಿರಾಮ ನೀಡಿದ್ದು, ಗ್ರಾ.ಪಂ.ಸದಸ್ಯರಾರದ ಯೋಗೇಶ್, ರಾಜೇಶ್ ಸುದ್ದಿಗೋಷ್ಟಿ ನಡೆಸಿದ್ದರು.ಶಾಸಕರ ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಗ್ರಾ.ಪಂ.ಸದಸ್ಯ ಹಾಗೂ ಹನುಮ ಧ್ವಜ ಪರವಾದ ಅರ್ಜಿದಾರ ಯೋಗೇಶ್ ಹೇಳಿಕೆ ಕೊಟ್ಟಿದ್ದಾರೆ.ಕಳೆದ ವರ್ಷ ಹನುಮ ಧ್ವಜದ ಪರವಾಗಿ ಗ್ರಾ.ಪಂ ಗೆ ಅರ್ಜಿ ಕೊಟ್ಟಿದೆ.ಗ್ರಾ.ಪಂ.ಯ ಕಾರ್ಯಾಂಗದ ಮುಖ್ಯಸ್ಥರು ಸಾರ್ವಜನಿಕ ಜಾಗದಲ್ಲಿ ಹನುಮಧ್ವಜ ಹಾಕುವ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದಿದ್ದಾರೆ.ಅರ್ಜಿ ಪಡೆದಿದ್ದರು, ಸದಸ್ಯರು ಅನುಮತಿ ಕೊಟ್ಟ ನಂತರ ಹನುಮ ಧ್ವಜ ಹಾರಿಸಲಾಗಿತ್ತು.ಹನುಮ ಧ್ವಜದ ಬಗ್ಗೆ ಪ್ರತಿಭಟನೆ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ

Read More

ಸ್ಯಾಂಡಲ್‌ವುಡ್‌ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್ ಕಳೆದ ತಿಂಗಳು ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಇದೀಗ ನಟಿ ಸೋನಲ್ ಸೋಷಿಯಲ್ ಮೀಡಿಯಾದಲ್ಲಿ ರಿಸೆಪ್ಷನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಕರ್ಷಕವಾಗಿ ರೆಡಿಯಾಗಿದ್ದ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೇರೋ ರಿಸೆಪ್ಷನ್ ನಲ್ಲಿ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.  ಸೋನಲ್ ಗೋಲ್ಡನ್ ಲೆಹೆಂಗಾ ಧರಿಸಿದ್ದು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಲೆಹೆಂಗಾಗೆ ಮ್ಯಾಚ್ ಆಗುವಂತೆ ಗ್ರೀನ್ ಬೀಟ್ಸ್ ನೆಕ್ಲೆಸ್ ಧರಿಸಿದ್ದರು. ಆಕರ್ಷಕವಾಗಿ ಮೇಕಪ್ ಮಾಡಿಕೊಂಡು ಸಖತ್ ಮುದ್ದಾಗಿ ಕಾಣಿಸಿದ್ದಾರೆ. ನಟಿ ಸುಂದರವಾದ ಲೆಹೆಂಗಾ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದು ಆಕರ್ಷಕವಾದ ಸ್ಮೈಲ್ ನೀಡಿದ್ದಾರೆ. ನಟಿ ಮುದ್ದಾಗಿ ಸ್ಮೈಲ್ ಮಾಡಿದ್ದು ಅವರ ಬ್ರೈಡಲ್ ಲುಕ್ ಸಖತ್ ಆಗಿದೆ. ನನ್ನೆಲ್ಲ ನಗು ನಿನ್ನಲ್ಲೇ ಶುರುವಾಗುತ್ತದೆ ಎಂದು ಸೋನಲ್ ಫೋಟೋಗಳಿಗೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಅಲ್ಲದೆ ಪತಿ ತರುಣ್ ಸುಧೀರ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಫೋಟೋಸ್ ನೋಡಿದ ಫ್ಯಾನ್ಸ್ ರೆಡ್ ಹಾರ್ಟ್ ಎಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ.…

Read More

ಕಲಘಟಗಿ: ರಾಜ್ಯ ರೈತ ಸಂಘಟನೆ ಒಕ್ಕೂಟ, ರೈತರು ಸೇನಾ ಹಾಗೂ ನರಗುಂದ ಮಹದಾಯಿ ಹೋರಾಟ ವೇದಿಕೆ ನೇತೃತ್ವದಲ್ಲಿನ. 4ರಂದು ನರಗುಂದದಲ್ಲಿ ರೈತರ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂ ದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಕಾರ್ಯ ದರ್ಶಿ ಪರಶುರಾಮ್ ಎತ್ತಿನಗುಡ್ಡ ತಿಳಿಸಿದರು. https://youtu.be/V_vHz1kt11g?si=nQb6k7NNu5ns43Zi ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹೋರಾಟದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬರ ಶಾಂತಕು ಮಾರ, ವೀರೇಶ ಸೊಬರದಮಠ ಹಾಗೂ ಹಲವು ರೈತ ಹೋರಾಟಗಾರರು, ರೈತರು ಭಾಗವಹಿ ಸಲಿದ್ದಾರೆ ಎಂದರು. ಮಹದಾಯಿ ಯೋಜನೆಗೆ ವನ್ಯಜೀವಿ ಹಾ ಗೂ ಪರಿಸರ ಇಲಾಖೆಗಳ ಪರವಾನಗಿ ಯನ್ನು ಕೇಂದ್ರ ಸರ್ಕಾರ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂ ಬಲ ಬೆಲೆ ಖಾತರಿ ಕಾನೂನು ಜಾರಿ, ಡಾ. ಸ್ವಾಮಿನಾ ಥನ ಆಯೋಗ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಯಾಗಬೇಕು ಎಂದರು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ, 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ, ಕೃಷಿ ಪಂಪಸೆಟ್‌ಗಳಿಗೆ ಆಧಾರ್‌ಲಿಂಕ್…

Read More

ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟು ಹೋದ ಒಡವೆ, ಹಣ ಹಾಗೂ ಪ್ರಮುಖ ದಾಖಲೆಗಳಿದ್ದ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಚಾಲಕ ಕಂ ನಿರ್ವಾಹಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದು, ಅವರನ್ನು ಅಧಿಕಾರಿಗಳು ಅಭಿನಂದಿಸಿದ್ದಾರೆ. https://youtu.be/V_vHz1kt11g?si=2PGAighCS_5S5IrN ಶಿವಮೊಗ್ಗ ಜಿಲ್ಲೆಯ ಗೋಂದಿ ಚಟ್ನಹಳ್ಳಿ ನಿವಾಸಿ ಸಾವಿತ್ರಮ್ಮ ಎಂಬುವರು ಶುಕ್ರವಾರ ಮಧ್ಯಾಹ್ನ ತಮ್ಮ ಮಗಳು ಹಾಗೂ ಮೊಮ್ಮಗಳೊಂದಿಗೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಗ್ರಾಮಾಂತರ 3ನೇ ಘಟಕದ ಕೆ ಎ 25 ಎಫ್ 3127 ಬಸ್ಸಿನಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದಾರೆ. ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಕೈಯಲ್ಲಿದ್ದ ಬ್ಯಾಗನ್ನು ಬಸ್ಸಿನಲ್ಲಿ ಮರೆತು ಬಂದಿದ್ದಾರೆ. ನಂತರ ಮತ್ತೊಂದು ಬಸ್ಸಿನಲ್ಲಿ ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣಿಕರು ಇಳಿಯುವಾಗ ಬೇರೆ ಪುರುಷ ಪ್ರಯಾಣಿಕರೊಬ್ಬರು ಸದರಿ ಬ್ಯಾಗನ್ನು ಎತ್ತಿಕೊಳ್ಳಲು ಪ್ರಯತ್ನಿಸುವುದನ್ನು ಬಸ್ ಚಾಲಕ ಕಮ್ ನಿರ್ವಾಹಕ ರಾದ ಸಿ.ಎಸ್ ಸಿರಿಯಮ್ಮನವರ ಗಮನಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಘಟಕದಲ್ಲಿ ಮೇಲಾಧಿಕಾರಿಗಳ ಸಮಕ್ಷಮದಲ್ಲಿ ಬ್ಯಾಗು ತೆಗೆದು ನೋಡಲಾಗಿ ಅದರಲ್ಲಿ ರೋ…

Read More

ಕಲಘಟಗಿ( ಧಾರವಾಡ) : ಪಟ್ಟಣದಲ್ಲಿ ಕೇಲ ದಿನಗಳಿಂದ ವಿದ್ಯುತ್ ಇರದ ಕಾರಣ ಜನರು ತೊಂದರೆ ಅನುಭಸುತಿದ್ದು ಹೆಸ್ಕಾಂಗೆ ಹಿಡಿಶಾಪ ಹಾಕತಾ ಇದ್ದಾರೆ. https://youtu.be/9xIWvi9RW14?si=gR9yW2vkSjQ6wkku ಪ್ರತಿದಿನ ಬೆಳಗಿನ ಜಾವ ಮಧ್ಯಾಹ್ನ ಹಾಗೂ ಸಾಯಂಕಾಲ ಅರ್ಧ ಗಂಟೆಯಿಂದ ಹಿಡಿದು ಎರಡು ಗಂಟೆಗಳ ಕಟ್ ಆಗುವುದಿರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಣ್ಣ ಪುಟ್ಟ ಕರಕುಶಲ ಕಾರ್ಮಿಕರಿಗೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲದೆ ಸಾರ್ವಜನಿಕರು ಪರಿತಪಿಸುತಿದ್ದಾರೆ. ಸರಕಾರ ಮಾತ್ರ ಗೃಹ ಜ್ಯೋತಿಯ ಭಾಗ್ಯ ಒದಗಿಸಿ ಸುಮ್ಮನೆ ಕುಳಿತಿಬಿಟ್ಟಿದೆ, ತಾಲೂಕಿನ ಸಾರ್ವಜನಿಕರ ಪರಿಸ್ಥಿತಿ ಕೇಳುವವರಿಲ್ಲ ಫೋನ್ ಮಾಡಿದ್ರೆ ಫ್ರೀ ಇದೆ ಅಲ್ರಿ ಬರುತ್ತೆ ತಡಿರಿ ಅನ್ನುವ ಮಾತು ಹೆಸ್ಕಾಂ ಅಧಿಕಾರಿಗಳಿಂದ ಸಾಮಾನ್ಯವಾಗಿದೆ. ಮರ ಗಿಡಗಳು ವಿದ್ಯುತ್ ಲೈನಗಳ ಬಿದ್ದ ಕಾರಣ ವಿಳಂಬ ವಿದ್ಯುತ್ ಕಂಬಕ್ಕೆ ವಾಹನಗಳ ಡಿಕ್ಕಿ ಎಕ್ಸಿಡೆಂಟ್ ವಿದ್ಯುತ್ ಲೈನ್ ಸಂಚಾರದ ರಿಪೇರಿ ಹತ್ತು ಹಲವು ಸಮಸ್ಯೆ ಹೆಸ್ಕಾಂ ಸಿಬ್ಬಂದಿಗೆ ಕಾಡುತ್ತಿವೆ. ಕೆಲಸ ನಿರ್ವಹಿಸಿದರು ತಾಲೂಕಿಗೆ ಪ್ರತಿನಿತ್ಯ ಜನರಿಗೆ ವಿದ್ಯುತ್ ನಿಂದ ಬಹಳಷ್ಟು ಅನುಕೂಲಕರವಾಗಿದ್ರು ಕೆಲವೊಂದಿಷ್ಟು ಜನರು ಸೋಲಾರ್ ಬಳಕೆಯಲ್ಲಿದ್ದಾರೆ. ತಾಲೂಕಿನ…

Read More

ದಾವಣಗೆರೆ:-ಸಿದ್ದರಾಮಯ್ಯ ಮುಗ್ಧ, ಬಿಜೆಪಿಯವರು ರಾಜಕೀಯ ಷಡ್ಯಂತ್ರ ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪರ ಎಸ್​ಎಸ್ ಮಲ್ಲಿಕಾರ್ಜುನ್ ಬ್ಯಾಟಿಂಗ್ ಮಾಡಿದ್ದಾರೆ. https://youtu.be/QcUP9cUVR6k?si=dapvPN6YBwhUiQrf ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿಎಂ ನಿರಪರಾಧಿ, ಬಿಜೆಪಿಯವರು ರಾಜಕೀಯ ಷ್ಯಡ್ಯಂತ್ರ ಮಾಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಮುಗ್ಧರು ಆದರೆ ಲೀಗಲ್​ನಲ್ಲಿ ಟಾಪ್ ಇದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ ಎಂದು ಸಿದ್ದು ಪರ ಬ್ಯಾಟ್ ಬೀಸಿದ್ದಾರೆ. ಲೋಕಾಯುಕ್ತದಲ್ಲಿ ಎಫ್ ಐಆರ್ ಆಗಿದೆ, ನಾವು ಲೀಗಲಿ ಫೈಟ್ ಮಾಡುತ್ತೇವೆ. ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ​ ಅರೆಸ್ಟ್ ವಾರೆಂಟ್ ಆಗಿತ್ತು, ಹಾಗಾಗಿ ಬಂಧನ ಮಾಡಿದ್ದರು. ಈಗ ಸಿಎಂ ಮೇಲೆ ಆರೋಪ ಮಾತ್ರ ಇದೆ. ಕೋರ್ಟ್ ಆದೇಶ ಹಿನ್ನಲೆ ಎಫ್ ಐಆರ್ ಆಗಿದೆ ಅಷ್ಟೆ, ಮುಂದೇ ಏನು ಮಾಡಬೇಕೆಂಬುದನ್ನ ಯೋಚನೆ ಮಾಡುತ್ತೇವೆ ಎಂದು ಹೇಳಿದರು. ಸಿಎಂ ರಾಜೀನಾಮೆ ನೀಡಬೇಕು, ಪಕ್ಷಕ್ಕೆ ಮುಜುಗರ ಆಗಬಾರದು ಎಂದೆಲ್ಲಾ ಹೇಳಿಕೆ ನಿಡಿದ್ದ ಮಾಜಿ ಸ್ಪೀಕರ್, ಕೋಳಿವಾಡ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್ ಅವರು, ಕೋಳಿವಾಡ್​ಗೆ…

Read More