ಸ್ಯಾಂಡಲ್ ವುಡ್ ಖ್ಯಾತ ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ‘ಮನಸಾಲಜಿ’ ಹಾಗೂ ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ದೀಪಕ್ ಅರಸ್ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 42 ವರ್ಷ ವಯಸ್ಸಿನ ದೀಪಕ್ ಅರಸ್ ಅವರಿಗೆ ಕಿಡ್ನಿ ವೈಫಲ್ಯ ಆಗಿತ್ತು. ಅದಕ್ಕೆ ಡಯಾಲಿಸಿಸ್ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ. ದೀಪಕ್ ಅರಸ್ ಅವರ ಸಾವಿನಿಂದಾಗಿ ಅಮೂಲ್ಯ ಅವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಬೆಂಗಳೂರಿನ ಆರ್ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್ ಮೃತಪಟ್ಟಿದ್ದು, ಬಳಿಕ ವಯ್ಯಾಲಿಕಾವಲ್ ನ ನಿವಾಸಕ್ಕೆ ಮೃತ ದೇಹವನ್ನು ತರಲಾಗಿದೆ. ಇಂದು ಅವರ ಸ್ವಗ್ರಾಮ ನಾಗಮಂಗಲಕ್ಕೆ ಮೃತ ದೇಹ ತೆಗೆದುಕೊಂಡು ಹೋಗಿ ಅಲ್ಲೇ ಅಂತ್ಯ ಸಂಸ್ಕಾರ ಮಾಡುವ ಸಾಧ್ಯತೆ ಇದೆ. ಅಮೂಲ್ಯ, ರಾಕೇಶ್ ಅಡಿಗ, ಸಾಧು ಕೋಕಿಲ ಮುಂತಾದವರು ನಟಿಸಿದ್ದ ‘ಮನಸಾಲಜಿ’ ಸಿನಿಮಾಗೆ ದೀಪಕ್ ಅರಸ್ ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾ 2011ರಲ್ಲಿ ಬಿಡುಗಡೆ ಆಗಿತ್ತು. ಬಳಿಕ…
Author: Prajatv Kannada
ಬಿಗ್ ಬಾಸ್ ಸೀಸನ್ 11 ಆರಂಭವಾದ ಎರಡೇ ವಾರಕ್ಕೆ ಸಾಕಷ್ಟು ವಿವಾದಗಳನ್ನು ಮಾಡಿಕೊಳ್ಳುತ್ತಿದೆ. ಹಿಂದನ ಎಲ್ಲಾ ಸೀಸನ್ ಗಳಿಗೆ ಹೋಲಿಸಿದರೆ ಈ ಸೀಸನ್ ಹೆಚ್ಚು ವಿವಾದಕ್ಕೆ ಕಾರಣವಾಗುತ್ತಿದೆ. ಸ್ಪರ್ಧಿ ಲಾಯರ್ ಜಗದೀಶ್ ಪದೇ ಪದೇ ಕಾಂಟ್ರವರ್ಸಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಬಿಗ್ ಬಾಸ್, ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದನ್ನು ಇನ್ನುಳಿದ ಎಲ್ಲ ಸದಸ್ಯರು ಖಂಡಿಸಿದ್ದಾರೆ. ಈ ಬಗ್ಗೆ ವಾದ ನಡೆಯುವಾಗ ರಂಜಿತ್ ಅವರು ಜಗದೀಶ್ ಮೇಲೆ ಕೈ ಮಾಡಿದ್ದು, ಇದರಿಂದ ಸಿಟ್ಟಾದ ಬಿಗ್ ಬಾಸ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಗುರುವಾರದ (ಅಕ್ಟೋಬರ್ 17) ಸಂಚಿಕೆಯಲ್ಲಿ ಜಗದೀಶ್ ಮತ್ತು ಗೋಲ್ಡ್ ಸುರೇಶ್ ಮಾತನಾಡುತ್ತ ಕುಳಿತಿದ್ದರು. ಆಗ ಹಂಸಾ ಬಗ್ಗೆ ಜಗದೀಶ್ ಅವರು ಒಂದಷ್ಟು ಆರೋಪಗಳನ್ನು ಮಾಡಿದರು. ಮಾತಿನ ಭರದಲ್ಲಿ ಹಂಸಾ ಬಗ್ಗೆ ಜಗದೀಶ್ ಅಸಭ್ಯ ಪದ ಬಳಕೆ ಮಾಡಿದ್ದಾರೆ. ಇದನ್ನು ಗೋಲ್ಡ್ ಸುರೇಶ್ ಅವರು ಕೂಡಲೇ ಖಂಡಿಸಿದ್ದಾರೆ. ಅಲ್ಲಿಂದ ದೊಡ್ಡ ಜಗಳ ಶುರುವಾಗಿದೆ. ಜಗದೀಶ್ ತುಂಬ ಕೆಟ್ಟ ಮಾತುಗಳನ್ನು ಆಡಿದ್ದರಿಂದ…
ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಬಳಿಕ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನಗೊಂಡಿದ್ದರು. ಇದೀಗ ಹಸೀನ ವಿರುದ್ಧ ಸಾಮೂಹಿಕ ಹತ್ಯೆ ಆರೋಪ ಕೇಳಿ ಬಂದಿದ್ದು ಅವರ ಬಂಧನಕ್ಕೆ ದೇಶದ ಅಂತರರಾಷ್ಟ್ರೀಯ ಅಪರಾಧ ಪ್ರಕರಣಗಳ ನ್ಯಾಯಮಂಡಳಿಯು ಆದೇಶ ಹೊರಡಿಸಿದೆ. ನ್ಯಾ. ಗುಲಾಮ್ ಮೊರ್ತುಜಾ ಮಜೂಂದಾರ್ ಅವರ ಅಧ್ಯಕ್ಷತೆಯ ನ್ಯಾಯಮಂಡಳಿಯು ಶೇಖ್ ಹಸೀನಾ ಅವರನ್ನು ಒಳಗೊಂಡು 50 ಜನರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ. ‘ಪ್ರಕರಣದಲ್ಲಿ ಅತ್ಯಂತ ಪ್ರಭಾವಿಯಾದವರನ್ನು ಬಂಧಿಸದಿದ್ದರೆ, ತನಿಖೆ ನಡೆಸುವುದೇ ಕಷ್ಟವಾಗಲಿದೆ’ ಎಂದು ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಜೂಲ್ ಇಸ್ಲಾಂ ನ್ಯಾಯಮಂಡಳಿಗೆ ಮನವಿ ಮಾಡಿದ್ದರು. ‘ಶೇಖ್ ಹಸೀನಾ ಹಾಗು ಅವರ ಅವಾಮಿ ಲೀಗ್ ಪಕ್ಷದ ಮುಖಂಡರ ವಿರುದ್ಧ ಕೊಲೆ, ಸಾಮೂಹಿಕ ಹತ್ಯೆ ಸೇರಿದಂತೆ ಇದುವರೆಗೂ ಒಟ್ಟು 60 ದೂರುಗಳು ದಾಖಲಾಗಿವೆ. ಹಸೀನಾ ಅವರ ಪುತ್ರ ಸಾಜೀದ್ ವಾಜೆದ್ ಅವರು ಕೆಲ ದಿನಗಳ ಹಿಂದೆ ಪ್ರತಿಕ್ರಿಯಿಸಿ, ‘ನಮ್ಮ ತಾಯಿ ಯಾವುದೇ ತಪ್ಪು ಮಾಡಿಲ್ಲ. ಆದರೂ ಬಾಂಗ್ಲಾದೇಶದಲ್ಲಿ ನಡೆಯುವ ತನಿಖೆಯನ್ನು ಅವರು ಎದುರಿಸಲಿದ್ದಾರೆ’ ಎಂದಿದ್ದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಆರಂಭದಿಂದಲೂ ಟಿಆರ್ ಪಿ ರೇಟ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಆರಂಭದಿಂದಲೂ ಜನರ ಮನಸ್ಸು ಗೆಲ್ಲುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಇದೀಗ ಮಹಾ ತಿರುವು ಪಡೆದುಕೊಂಡಿದೆ. ಪುಟ್ಟಕ್ಕನ ಹುಟ್ಟುಹಬ್ಬಕ್ಕೆ ಎರಡೆರಡು ಸರ್ಪ್ರೈಸ್ ಕೊಡೋಕೆ ಸ್ನೇಹಾ ತಯಾರಾಗಿದ್ದಾಳೆ. ಒಂದು ಕಡೆ ಬಂಗಾರಮ್ಮನನ್ನು ಬಡಿಸಿಕೊಂಡು ಹೋಗಿರುವ ಸ್ನೇಹಾಗೆ ಮತ್ತೊಂದೆಡೆ ಸಹನಾ ಸಿಕ್ಕಿದ್ದಾಳೆ. ಅದೇ ಕಾರಣಕ್ಕೆ ಈ ಧಾರವಾಹಿ ಮುಕ್ತಾಯ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ. ಜೀ ವಾಹಿನಿ ಪ್ರೋಮೋ ಶೇರ್ ಮಾಡಿಕೊಂಡಿದೆ.ಈ ಪ್ರೋಮೋ ನೋಡಿ ವೀಕ್ಷಕರು ಈ ಧಾರಾವಾಹಿ ಅಂತ್ಯ ಕಾಣಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಗಾಸಿಪ್ ಬೆನ್ನಲ್ಲೇ ಸ್ನೇಹಾ ಪಾತ್ರಧಾರಿ ಸಂಜನಾ ಅವರು ಇನ್‌ಸ್ಟಾದಲ್ಲಿ ಹೊಸ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಕೆಲವೊಂದು ಗುಡ್ ಬೈ ಹೇಳೋದು ತುಂಬ ಕಷ್ಟ. ಆದರೆ ಬೆಳವಣಿಗೆಗೆ ಅದು ತುಂಬಾ ಮುಖ್ಯ ಎಂದು ಸಂಜನಾ ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ…
ಉತ್ತರ ಪ್ರದೇಶ:- ರೈಲಿನ ಎಮರ್ಜೆನ್ಸಿ ಕಿಟಕಿಯಿಂದ ಜಾರಿ ಬಿದ್ದ ಪುಟ್ಟ ಮಗಳನ್ನು ರಕ್ಷಿಸಲು ಅಪ್ಪನೋರ್ವ ರೈಲು ನಿಲ್ಲಿಸಿ 16 ಕಿಲೋಮೀಟರ್ ಹಿಂದಕ್ಕೆ ಓಡಿಹೋಗಿ ಮಗುವನ್ನು ಪತ್ತೆಹಚ್ಚಿ ಉಳಿಸಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಅಪ್ಪನ ಭುಜವೇರಿ ಕುಳಿತಿದ್ದ 8 ವರ್ಷದ ಮಗಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ನಿದ್ದೆಗೆ ಜಾರಿದ ಮುದ್ದಿನ ಮಗಳನ್ನು ಮಲಗಿಸೋದಕ್ಕೆ ಅಪ್ಪ ತಡಕಾಡಿದ್ದ. ತುರ್ತು ಕಿಟಕಿ ಪಕ್ಕದಲ್ಲೇ ಮಗಳನ್ನು ಮಲಗಿಸಿ ಜೋಪಾನ ಮಾಡುತ್ತಿದ್ದ. ಮಂಪರುಗಣ್ಣಿನಲ್ಲೇ ಇದ್ದವನಿಗೆ ಶಾಕ್ ಕೊಟ್ಟಿದ್ದು ಮುಂದಿನ ನಿಲ್ದಾಣದಲ್ಲಿ ಹತ್ತಿಕೊಂಡ ಪ್ರಯಾಣಿಕರು. ಗಾಳಿ ಬರಲಿ ಅಂತ ತುರ್ತು ಕಿಟಕಿಯನ್ನು ಯಾರೋ ತೆಗೆದಿದ್ದಾರೆ. ಕೂಡಲೇ ಪಕ್ಕದಲ್ಲೇ ಮಲಗಿದ್ದ ಕಂದಮ್ಮ ಕಿಟಕಿಯಿಂದ ಜಾರಿ ಕೆಳಕ್ಕೆ ಬಿದ್ದಿದ್ದಾಳೆ ಉತ್ತರ ಪ್ರದೇಶದ ಲಲಿತ್ಪುರ ರೈಲು ನಿಲ್ದಾಣ ಕರುಣಾಜನಕ ಘಟನೆಗೆ ಸಾಕ್ಷಿಯಾಗಿದೆ. ಮಥುರಾದ ಅರವಿಂದ ತನ್ನ ಮಗಳು ಗೌರಿಯೊಂದಿಗೆ ಕುರುಕ್ಷೇತ್ರದಿಂದ ಮಥುರಕ್ಕೆ ವಾಪಾಸ್ ಆಗುತ್ತಿದ್ದರು. ಶುಕ್ರವಾರ ರಾತ್ರಿ ರೈಲಿನಲ್ಲಿ ಎಮರ್ಜೆನ್ಸಿ ವಿಂಡೋ ಬಳಿ ಮಲಗಿದ್ದ ಮಗಳು ಜಾರಿ ಬಿದ್ದ ಕೂಡಲೇ ಅಕ್ಷರಶಃ ಎದೆ ಝಲ್ ಅಂದಿತ್ತು.…
ನವದೆಹಲಿ: ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು, ಮುಂದಿನ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಹೆಸರು ಶಿಫಾರಸು ಮಾಡಿದ್ದಾರೆ. ಮುಂದಿನ ನವೆಂಬರ್ 11ರಂದು ಸಿಜೆಐ ಹುದ್ದೆಯಿಂದ ಚಂದ್ರಚೂಡ್ ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಮೊರಾಂಡಮ್ ಆಫ್ ಪ್ರೊಸೀಜರ್ ಪ್ರಕಾರ,ಮುಂದಿನ ಶಿಫಾರಸು ಕಳುಹಿಸುವಂತೆ ಕೇಂದ್ರ ಸರ್ಕಾರ ಕಳೆದ ಶುಕ್ರವಾರ ಚಂದ್ರಚೂಡ್ ಅವರಿಗೆ ಪತ್ರ ಬರೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಚಂದ್ರಚೂಡ್ ಅವರು ತಮ್ಮ ಉತ್ತರಾಧಿಕಾರಿಯಾಗಿ ಸಂಜೀವ್ ಖನ್ನಾ ಅವರ ಹೆಸರನ್ನ ಶಿಫಾರಸು ಮಾಡಿದ್ದಾರೆ. ಸರ್ಕಾರದ ಅನುಮೋದನೆ ನಂತರ ನ್ಯಾ. ಸಂಜೀವ್ ಖನ್ನಾ 51ನೇ ಸಿಜೆಐಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 2022ರ ನವೆಂಬರ್ 8ರಂದು ಸಿಜೆಐ ಉದಯ್ ಉಮೇಶ್ ಲಲಿತ್ ಅವರು ನಿವೃತ್ತಿ ಹೊಂದಿದ ಬಳಿಕ ಚಂದ್ರಚೂಡ್ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಚಂದ್ರಚೂಡ್ ಅವರು ಅಧಿಕಾರ ಸ್ವೀಕರಿಸಿದ್ದರು. ಯುಯು ಲಲಿತ್ ಅವರಿಗೂ ಮುನ್ನ ಎನ್.ವಿ.ರಮಣ ಅವರು 48ನೇ ಸಿಜೆಐ ಆಗಿ ಅಧಿಕಾರ ನಿರ್ವಹಿಸಿದ್ದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಕಾಲಿಕವಾಗಿ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಘೋಷಿಸಿ ರೈತರಿಗೆ ಬಲ ತುಂಬಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಮಾದ್ಯಮದವರೊಂದಿಗೆ ಮಾತನಾಡಿ, ಮುಂಗಾರು, ಹಿಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಪ್ರಧಾನಿ ಮೋದಿ ಅವರು ಅನ್ನದಾತರಿಗೆ ಬೆಳಕು ತೋರಿದ್ದಾರೆ ಎಂದು ಬಣ್ಣಿಸಿದರು. 2025-26ಕ್ಕೆ ಹಿಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮೋದಿ ಅವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಮಂತ್ರಿಮಂಡಲ ಸಮಿತಿ (ಸಿಸಿಇಎ) ವ್ಯಾಪಾರ ವರ್ಷ 2025-26ಕ್ಕಾಗಿ ಸೂಚಿಸಿದ ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಲು ಅನುಮೋದನೆ ನೀಡಿದೆ ಎಂದರು. ಎಂಎಸ್‌ಪಿಯಲ್ಲಿ ಗರಿಷ್ಠ ಹೆಚ್ಚಳವಾಗಿ ಕುರಿ ಮೇವಿನ ಕಾಳು ಮತ್ತು ಸಾಸಿವೆಗಳಿಗೆ ಪ್ರತಿ ಕ್ವಿಂಟಲ್ ಗೆ 300 ರೂ. ಹಾಗೂ ಮಸೂರ ಬೇಳೆಗೆ ಪ್ರತಿ ಕ್ವಿಂಟಲ್ ಗೆ 275 ರೂ. ಹೆಚ್ಚಿಸಿದೆ. ಕಡಲೆ, ಗೋಧಿ,…
ಮಡಿಕೇರಿ: ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಗ್ಗೆ ಕಾವೇರಿ ಪವಿತ್ರ ತೀರ್ಥೋದ್ಭವ ನೆರವೇರಿತು. ಭಕ್ತರಿಗೆ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ನೀಡಿದಳು. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಗ್ಗೆ 7 ಗಂಟೆ 40 ನಿಮಿಷ ತುಲಾ ಲಗ್ನದಲ್ಲಿ ತೀರ್ಥೋದ್ಭವವಾಯಿತು. ವರ್ಷಕ್ಕೊಮ್ಮೆ ಜರುಗುವ ದೇಶದ ಪವಿತ್ರ ತೀರ್ಥೋದ್ಭವ ಸಂಭ್ರಮ ಇಂದು ನಡೆಯಿತು. ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ದರ್ಶನವಾದಳು. ನಿಗದಿಯಂತೆ 7:40ಕ್ಕೆ ಸೂರ್ಯ ಕನ್ಯಾ ಲಗ್ನದಿಂದ ತುಲಾ ಲಗ್ನಕ್ಕೆ ಪ್ರವೇಶಿಸುತ್ತಿದ್ದಂತೆ ತೀರ್ಥೋದ್ಭವ ನೆರವೇರಿತು. ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿ, ಮೂರು ಬಾರಿ ಉಕ್ಕಿ ಬಂದಳು. ಬಳಿಕ ಅರ್ಚಕರು ನೆರೆದಿರುವ ಭಕ್ತರಿಗೆ ಬ್ರಹ್ಮಕುಂಡಿಕೆಯಿಂದ ತೀರ್ಥ ಪ್ರೋಕ್ಷಣೆ ಮಾಡಿದರು. ತೀರ್ಥೋದ್ಭವಕ್ಕೆ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಆಗಮಿಸಿದ್ದರು. ಬೆಳಗ್ಗೆ 7 ಗಂಟೆ 40 ನಿಮಿಷಕ್ಕೂ ಮೊದಲು ಒಂದು ಗಂಟೆಯಿಂದ ನಿರಂತರವಾಗಿ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ವಿಶೇಷ ಪೂಜಾ ಪುನಸ್ಕಾರಗಳು ನಡೆದವು. ಜೊತೆಗೆ ಅರ್ಚಕ ಪ್ರಶಾಂತ್…
ಕಲಬುರಗಿ: ಬೈಕ್, ಕಾರು, ಲಾರಿ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಜೇವರ್ಗಿ ತಾಲೂಕಿನ ಹಸನಾಪುರ ಬಳಿ ನಡೆದಿದೆ. ರಾಘವೇಂದ್ರ (35), ಮುಜಾಹಿದ್ (30), ಹುಸೇನ್ (45) ಮೃತರು. ಕಾರು ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮಕ್ಕೆ ತೆರಳುತ್ತಿತ್ತು. ಬೈಕ್‌ನಲ್ಲಿದ್ದ ಪರಮಾನಂದ ಎಂಬುವರಿಗೆ ಮತ್ತು ಕಾರಿನಲ್ಲಿದ್ದ ಇನ್ನೂ ಮೂವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ನಾಲ್ವರನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಕಲಬುರಗಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲಬುರಗಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಿಟನ್ನ ಖ್ಯಾತ ಪಾಪ್ ಗಾಯಕ ಲಿಯಾಮ್ ಪಾಯ್ನ್ ಅವರು ತಾವು ತಂಗಿದ್ದ ಹೋಟೆಲ್ ಕೊಠಡಿಯ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಲಿಯಾಮ್ ಪಾಯ್ನ್ ಅವರಿಗೆ 31 ವರ್ಷ ವಯಸ್ಸಾಗಿದ್ದು ಅವರು ಅರ್ಜೆಂಟೀನಾದ ರಾಜಧಾನಿ ಬೋನಸ್ ಐರಿಸ್ನಲ್ಲಿ ಲಿಯಾಮ್ ಹೋಟೆಲ್ ನ್ಲಿ ತಂಗಿದ್ದರು. ಲಿಯಾಮ್ ಸಾವಿಗೆ ಮುನ್ನ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಡಿರುವ ಕರೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೋನಸ್ ಐರಿಸ್ ಪೊಲೀಸರು, ಲಿಯಾಮ್ ಅವರು ಕಾಸಾ ಸರ್ ಹೋಟೆಲ್ನ ಮೂರನೇ ಮಹಡಿಯ ತನ್ನ ಕೋಣೆಯ ಬಾಲ್ಕನಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಳಗೆ ಹಾರಿದ ಕೂಡಲೇ ಲಿಯಾಮ್ ಸಾವನ್ನಪ್ಪಿದ್ದಾರೆ. ‘ಸಂಜೆ ಐದು ಗಂಟೆ ವೇಳೆಗೆ ಘಟನೆ ನಡೆದಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಆ ವೇಳೆಗಾಗಲೆ ಲಿಯಾಮ್ ನಿಧನ ಹೊಂದಿದ್ದರು. ಆತ ಬಹಳ ಒರಟು ಹಾಗೂ ಮಾದಕ ದ್ರವ್ಯ ವ್ಯಸನಿಯಾಗಿದ್ದ, ಮಾದಕ ವಸ್ತು ಸೇವಿಸಿಯೇ ಆತ ಈ ಕೃತ್ಯ ಎಸಗಿಕೊಂಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಸಲಿಗೆ…