ಕಾನ್ಪುರ: ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸುತ್ತಿವೆ. ಮಳೆಯ ಕಾಟದಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ಕೇವಲ 35 ಓವರ್‌ಗಳಿಗೆ ಮುಕ್ತಾಯಗೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಮೊದಲ ದಿನದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದೆ. ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯಕ್ಕೆ ಮಳೆಯ ಕಾಟದಿಂದಾಗಿ ಟಾಸ್ ತಡವಾಯಿತು. ಜೊತೆಗೆ ಮೊದಲ ದಿನದಾಟವನ್ನು ಕೇವಲ 35 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ 26 ರನ್‌ಳಿಗೆ ಮೊದಲ ವಿಕೆಟ್ ಪಡೆದರೂ ಬಳಿಕ ಮೊಮಿನುಲ್ ಹಕ್, ನಾಯಕ ನಜ್ಮುಲ್ ಹೊಸೈನ್ ಸ್ಯಾಂಟೋ ಅವರ ಸಾಧಾರಣ ಬ್ಯಾಟಿಂಗ್ ಪ್ರದರ್ಶನದಿಂದ 100 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಶಾದ್ಮಾನ್ ಇಸ್ಲಾಂ 24 ರನ್ ಗಳಿಸಿದ್ರೆ, ಸ್ಯಾಂಟೋ 31 ರನ್ ಗಳಿಸಿ ಔಟಾದರು. ಮತ್ತೊಬ್ಬ ಆರಂಭಿಕ ಝಾಕಿರ್ ಹಸನ್ ಶೂನ್ಯ…
Author: Prajatv Kannada
ಇಸ್ರೇಲ್ ಹಾಗೂ ಹಿಜ್ಬುಲ್ಲಾ ನಡುವೆ ನಡೆಯುತ್ತಿರುವ ದಾಳಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಶುಕ್ರವಾರ ಸಂಜೆ ಇಸ್ರೇಲಿ ವಾಯುಪಡೆಯು ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ಭಾರೀ ವಾಯು ದಾಳಿ ನಡೆಸಿದೆ. ಹಿಜ್ಬುಲ್ಲಾದ ಮುಖ್ಯ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿರುವುದಾಗಿ ಸೇನೆ ತಿಳಿಸಿದೆ. ದಾಳಿಯ ಗುರಿಯು ಆ ಸಮಯದಲ್ಲಿ ಕಮಾಂಡ್ ಸೆಂಟರ್‌ನಲ್ಲಿದ್ದ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಆಗಿದ್ದ ಎಂದು ಇಸ್ರೇಲಿ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಸ್ರೇಲ್‌ಗೆ ದೃಢಪಡಿಸಿದರು. ಆದರೆ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 76 ಮಂದಿಗೆ ಗಾಯಗೊಂಡಿದ್ದಾರೆ. ಇರಾನ್ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ಪ್ರತಿದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇನೆಂದು ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಹೇಳಿದ್ದಾರೆ. ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಹಿಜ್ಬುಲ್ಲಾ ಉಗ್ರರ ವಿರುದ್ಧ ಗುಡುಗಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ‘ಅವರು ಅಂತಹ ದಾಳಿಯಿಂದ ಬದುಕುಳಿದಿದ್ದಾರೆಂದು ಊಹಿಸಿಕೊಳ್ಳುವುದು ಅಸಾಧ್ಯ’ ಎಂದು ಸೇನಾ ಅಧಿಕಾರಿ ತಿಳಿಸಿದರು. ಹಲವಾರು ಹೀಬ್ರೂ ಮಾಧ್ಯಮ ವರದಿಗಳು ಭೂಗತ ಪ್ರಧಾನ ಕಚೇರಿಯ ಮೇಲಿನ ದಾಳಿಯಲ್ಲಿ…
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನೀಡಿದ್ದ ಹೇಳಿಕೆಯೊಂದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ‘ಬಾಲಿವುಡ್ ಸಿನಿಮಾಗಳು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಆಯ್ಕೆ ಆಗುತ್ತವೆ. ಆದರೆಅಲ್ಲಿ ಭಾರತದವನ್ನು ಕೆಟ್ಟದಾಗಿ ತೋರಿಸಿವೆ’ ಎಂದು ಹೇಳಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಬಗ್ಗೆ ರಿಷಬ್ ಶೆಟ್ಟಿ ಅವರು ಈಗ ಸ್ಪಷ್ಟನೆ ನೀಡಿದ್ದಾರೆ. ಮೆಟ್ರೋ ಸಾಗಾ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಿಷಬ್ ಶೆಟ್ಟಿ, ‘ಭಾರತೀಯ ಸಿನಿಮಾಗಳು ಅದರಲ್ಲೂ ವಿಶೇಷವಾಗಿ ಬಾಲಿವುಡ್ ಸಿನಿಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ. ಇದೇ ಸಿನಿಮಾ ಆರ್ಟ್ಸ್ ಎಂದುಕೊಂಡು ಹೊರದೇಶಗಳಿಗೆ ಹೋಗಿ ಅವಾರ್ಡ್ಗಳನ್ನು ಗೆದ್ದು ಬಂದಿದ್ದನ್ನು ನೋಡಿದ್ದೇನೆ. ನಮ್ಮ ದೇಶ ನಮ್ಮ ಹೆಮ್ಮೆ, ನನ್ನ ರಾಜ್ಯ ನನ್ನ ಹೆಮ್ಮೆ, ನನ್ನ ಭಾಷೆ ನನ್ನ ಹೆಮ್ಮೆ. ನಮ್ಮಲ್ಲಿರೋದನ್ನು ಪಾಸಿಟಿವ್ ನೋಟ್ನಲ್ಲಿ ತೋರಿಸಬಹುದಲ್ಲ’ ಎಂದಿದ್ದರು ರಿಷಬ್. ಐಐಎಫ್ಎ 2024 ಕಾರ್ಯಕ್ರಮದಲ್ಲಿ ಭಾಗಿ ಆದ ರಿಷಬ್ ಶೆಟ್ಟಿ ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಶೀಘ್ರವೇ ನಾನು ಈ ಬಗ್ಗೆ ಸ್ಪಷ್ಟನೆ ಅಥವಾ ವಿವರಣೆ…
ಅರುಣಾಚಲ ಪ್ರದೇಶದ ಪರ್ವತವೊಂದನ್ನು ಏರಿದ ಭಾರತದ ಪರ್ವತಾರೋಹಿಗಳ ತಂಡವು ಪರ್ವತಕ್ಕೆ 6ನೇ ದಲಾಯಿ ಲಾಮಾರ ಹೆಸರನ್ನು ನಾಮಕರಣ ಮಾಡಿದ್ದಾರೆ. ಇದನ್ನು ಬಲವಾಗಿ ಆಕ್ಷೇಪಿಸಿರುವ ಚೀನಾ ಆ ಪ್ರದೇಶದ ಮೇಲೆ ತನ್ನ ಪ್ರಾದೇಶಿಕ ಹಕ್ಕುಗಳನ್ನು ಪುನರುಚ್ಚರಿಸಿದೆ. ಅರುಣಾಚಲ ಪ್ರದೇಶದಲ್ಲಿರುವ 20,942 ಅಡಿ ಎತ್ತರದ ಪರ್ವತವನ್ನು ಯಶಸ್ವಿಯಾಗಿ ಏರಿದ ಪ್ರಥಮ ತಂಡ ಎನಿಸಿರುವ `ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳ ರಾಷ್ಟ್ರೀಯ ಸಂಸ್ಥೆ’ಯ ತಂಡವು ಈ ಪರ್ವತಕ್ಕೆ 6ನೇ ಲಾಮಾ ತ್ಸಾಂಗ್ಯಾಂಗ್ ಗ್ಯಾಟ್ಸೋ ಅವರ ಹೆಸರನ್ನು ನಾಮಕರಣ ಮಾಡಿತ್ತು. 6ನೇ ದಲಾಯಿ ಲಾಮಾ ಅವರ ಕಾಲಾತೀತ ಪಾಂಡಿತ್ಯ ಮತ್ತು ಮೊನ್ಬಾ ಸಮುದಾಯಕ್ಕೆ ಹಾಗೂ ಇತರ ಸಮುದಾಯಗಳಿಗೆ ಅವರು ನೀಡಿದ ಕೊಡುಗೆಗೆ ಸಲ್ಲಿಸುವ ಗೌರವವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ` ಝಂಗ್ನಾನ್ ಪ್ರದೇಶ ಚೀನಾದ ಪ್ರದೇಶವಾಗಿದೆ. ಇಲ್ಲಿ ತಥಾಕಥಿತ ಅರುಣಾಚಲ ಪ್ರದೇಶವನ್ನು ಸ್ಥಾಪಿಸುವುದು ಭಾರತದ ಕಾನೂನುಬಾಹಿರ ಕ್ರಮವಾಗಿದ್ದು ಇದು ಅನೂರ್ಜಿತವಾಗಿದೆ’ ಎಂದಿದ್ದಾರೆ.
ಅಮೇರಿಕಾದಲ್ಲಿ ಸಂಬವಿಸಿದ ಭೀಕರ ಹೆಲೆನ್ ಚಂಡಮಾರುತಕ್ಕೆ 33 ಜನರು ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿದ್ದಾರೆ. ಭೂಕುಸಿತದ ನಂತರ ಉಷ್ಣವಲಯದ ಚಂಡಮಾರುತವಾಗಿ ದುರ್ಬಲಗೊಂಡಿದೆ, ಜಲಾವೃತಗೊಳಿಸಿದೆ ಮತ್ತು ನಾಲ್ಕು ದಶಲಕ್ಷಕ್ಕೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕವನ್ನು ಕಳೆದುಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫ್ಲೋರಿಡಾ, ಜಾರ್ಜಿಯಾ, ದಕ್ಷಿಣ ಕೆರೊಲಿನಾ ಮತ್ತು ಉತ್ತರ ಕೆರೊಲಿನಾದಲ್ಲಿ ಸಾವಿನ ಸಂಖ್ಯೆ ಕನಿಷ್ಠ 35 ಕ್ಕೆ ತಲುಪಿದೆ, ಇದರಲ್ಲಿ ದಕ್ಷಿಣ ಕೆರೊಲಿನಾದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಹೆಲೆನ್ ಚಂಡಮಾರುತವು ಗುರುವಾರ ರಾತ್ರಿ 11:10 ಕ್ಕೆ ಫ್ಲೋರಿಡಾದ ಬಿಗ್ ಬೆಂಡ್ ಪ್ರದೇಶವನ್ನು ಪ್ರಬಲ ವರ್ಗ 4 ಚಂಡಮಾರುತವಾಗಿ ಅಪ್ಪಳಿಸಿತು ಮತ್ತು ಬಂದರುಗಳಲ್ಲಿ ಪಲ್ಟಿಯಾದ ದೋಣಿಗಳು, ಮರಗಳನ್ನು ಕಡಿಯುವುದು, ಕಾರುಗಳು ಮುಳುಗಿದ ಮತ್ತು ಬೀದಿಗಳಲ್ಲಿ ಪ್ರವಾಹಕ್ಕೆ ಸಿಲುಕಿದ ದೋಣಿಗಳ ಗೊಂದಲಮಯ ಭೂದೃಶ್ಯವನ್ನು ಬಿಟ್ಟಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಅದರ ಪ್ರಭಾವವು ಜಾರ್ಜಿಯಾ, ದಕ್ಷಿಣ ಕೆರೊಲಿನಾ, ಉತ್ತರ ಕೆರೊಲಿನಾ, ಟೆನ್ನೆಸ್ಸೀ ಮತ್ತು ವರ್ಜೀನಿಯಾ…
ಗಲ್ಲು ಶಿಕ್ಷೆಗೆ ಗುರಿಯಾಗಿ ಅತೀ ಹೆಚ್ಚು ವರ್ಷಗಳ ಕಾಲ ಜೈಲಿನಲ್ಲಿದ್ದ ಕೈದಿಗೆ ಜಪಾನ್‌ನಲ್ಲಿ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಬಾಕ್ಸರ್ ಆಗಿದ್ದ ಜಪಾನ್‌ನ ಐವೋ ಹಕ ಮಡಾ ಎಂಬಾತ ತನ್ನ 45ನೇ ವಯಸ್ಸಿನಲ್ಲಿ ಅಂದರೆ 1966ರಲ್ಲಿ ತನ್ನ ಕಂಪೆನಿ ಮಾಲಕ ಆತನ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಹತ್ಯೆ ಮಾಡಿ ಜೈಲು ಪಾಲಾಗಿದ್ದ. ಈತನ ಮೇಲಿದ್ದ ಆರೋಪ ಸಾಭೀತಾದ ಬಳಿಕ 1968ರಲ್ಲಿ ಈತನಿಗೆ ಜಪಾನ್‌ನ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಆದರೂ ಆತನನ್ನು ಗಲ್ಲಿಗೆ ಏರಿಸಿರಲಿಲ್ಲ. ಈತ ಸುಮಾರು 48 ವರ್ಷ ಕಳೆದ ಬಳಿಕ ತನ್ನ 88ನೇ ವಯಸ್ಸಿನಲ್ಲಿ ಬಿಡುಗಡೆಯಾಗಿದ್ದಾನೆ.
ತಮಿಳು ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಗಾಸಿಪ್ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿದ್ದಾರೆ. ಇದು ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಇದೀಗ ಬೈಲ್ವಾನ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅನೇಕ ಕಲಾವಿದರು ರಂಗನಾಥನ್ ವಿರುದ್ಧ ತಮ್ಮ ಧ್ವನಿ ಎತ್ತಿದ್ದಾರೆ. ಆದರೂ ರಂಗನಾಥನ್ ಅವರು ಚಿತ್ರರಂಗದ ಕುರಿತು ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಇದೀಗ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಅರೆಬೆತ್ತಲೆ ಫೋಟೋ ಹಂಚಿಕೊಳ್ಳುವುದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ರಂಗನಾಥ್ ಆಡಿರುವ ಮಾತುಗಳು ವಿವಾದ ಸೃಷ್ಟಿಸಿವೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೊಸದಾಗಿ ಹಂಚಿಕೊಂಡಿರುವ ವಿಡಿಯೋದಲ್ಲಿ ಚಿತ್ರರಂಗದಲ್ಲಿ ನಡೆಯುತ್ತದೆ ಎನ್ನಲಾದ ಅನೇಕ ಸಂಗತಿಗಳನ್ನು ರಂಗನಾಥ್ ಬಹಿರಂಗಪಡಿಸಿದ್ದಾರೆ. ಸಿನಿಮಾದಲ್ಲಿ ವೈಯಕ್ತಿಕ ನೈತಿಕತೆ 100ಕ್ಕೆ 99 ರಷ್ಟು ಕೂಡ ಇಲ್ಲ. ಇಲ್ಲಿ ನಾನು ಹೇಳುತ್ತಿರುವ ಎಲ್ಲ ವಿಷಯಗಳಿಗೂ ನನ್ನ ಬಳಿ ಪುರಾವೆ ಇದೆ. ನಟಿಯರು ಸಿನಿಮಾ…
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಗಾಗ ಸುದ್ದಿಯಾಗುತ್ತಲೆ ಇರುತ್ತಾರೆ. ಸದ್ಯ ವಿವೆಕ್ ಅಗ್ನಿಹೋತ್ರಿ ಹೊಸ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಒಂದು ಕಹಿ ಸುದ್ದಿ ಕೇಳಿಬಂದಿದೆ. ಕಳೆದ ವಾರ ತಮ್ಮದೇ ಸಿನಿಮಾದ ಹೀರೋಗೆ ವಿವೇಕ್ ಅಗ್ನಿಹೋತ್ರಿ ಗೇಟ್ಪಾಸ್ ನೀಡಿದ್ದಾರಂತೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಆದರೆ ಆ ಹೀರೋ ಯಾರು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ವಿವೇಕ್ ಅಗ್ನಿಹೋತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಕಾಸ್ಟಿಂಗ್ ಡೈರೆಕ್ಟರ್ ಮುಕೇಶ್ ಛಾಬ್ರಾ ಮಾಡಿದ ಒಂದು ‘ಎಕ್ಸ್’ ಪೋಸ್ಟ್ಗೆ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯಿಸಿದ್ದಾರೆ. ‘ಚಿತ್ರರಂಗದ ಸದ್ಯದ ಪರಿಸ್ಥಿತಿ: ಒಬ್ಬ ನಟ, 200 ಕಾಸ್ಟಿಂಗ್ ಡೈರೆಕ್ಟರ್ ಮತ್ತು 15,680 ಮ್ಯಾನೇಜರ್ಗಳು’ ಎಂದು ಮುಕೇಶ್ ಛಾಬ್ರಾ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವಾಗ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಸಿನಿಮಾ ತಂಡದಲ್ಲಿ ಆದ ವಿಚಾರವನ್ನು ತಿಳಿಸಿದ್ದಾರೆ. ‘ನನ್ನ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವ ಒಬ್ಬ ನಟನನ್ನು ಕಳೆದ…
ಮೈಸೂರು: ಮುಡಾ ಹಗರಣ ವಿಚಾರವಾಗಿ ಜಟಾಪಟಿ ಜೋರಾಗುತ್ತಿದೆ. ಬೀದಿ ಹೋರಾಟವೇ ನಡೆದಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪ್ರತಿಪಕ್ಷಗಳು ರಣಕಹಳೆ ಮೊಳಗಿಸಿವೆ. ಮುಖ್ಯಮಂತ್ರಿ ಪರ ಸಾಲು ಸಾಲು ಸಚಿವರು ಅಖಾಡಕ್ಕಿಳಿದಿದ್ದಾರೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿದೆ. https://youtu.be/RJt8D_2-y6s?si=hoFZ4-zqon8rQmn_ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ SP ಉದೇಶ್ ನೇತೃತ್ವದಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಆರ್‌ಪಿಸಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಎಂದು ಕೋರ್ಟ್ ಆದೇಶ ನೀಡಿತ್ತು. ಅದೇ ಕಾಯ್ದೆಯಡಿ ಇದೀಗ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಯಾವೆಲ್ಲಾ ಸೆಕ್ಷನ್ ದಾಖಲು ಮಾಡಲಾಗಿದೆ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.