ಕಲಬುರಗಿ: ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪೋತಂಗಲ್ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೇ ಪೆಟ್ರೋಲ್ ಸುರಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. https://youtu.be/8Y_FPlGZW2A?si=pwzhb2ZWiwu9xKoB ಪಾಂಡಪ್ಪ ಕೋರ್ವನ್ (45) ಮೃತ ದುರ್ಧೈವಿಯಾಗಿದ್ದು, ಬೆಳೆ ಬೆಳೆಯಲು ಬ್ಯಾಂಕ್ ಹಾಗೂ ಖಾಸಗಿ ಆಗಿ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದರುಅದಲ್ಲದೆ ನಿರಂತರವಾಗಿ ಸುರಿದ ಮಳೆಯಿಂದ ಜಮೀನಿನಲ್ಲಿದ್ದ ತೊಗರಿ ಸಂಪೂರ್ಣ ನಾಶವಾಗಿತ್ತು. ಇತ್ತ ಬ್ಯಾಂಕ್ ಅಧಿಕಾರಿಗಳ ಸಾಲದ ಕಿರುಕುಳ ತಾಳಲಾರದೇ ಮನೆಯಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಸಂಬಂಧ ಸುಲೇಪೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Author: Prajatv Kannada
ಕೆಲಸದ ಒತ್ತಡದಿಂದ ಮನನೊಂದು ಗ್ರಾಮ ಲೆಕ್ಕಿಗರು ಅನಿರ್ದಿಷ್ಟಾವಧಿಯ ಧರಣಿ ಆರಂಭಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. https://youtu.be/93-M9xYz1e8?si=2X7mlpRW5nH6Ve97 ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ರಾಜ್ಯಾದ್ಯಂತ ಇರುವ ಗ್ರಾಮ ಲೆಕ್ಕಿಗರಿಗೆ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿಲ್ಲ ಮತ್ತು ತಾಂತ್ರಿಕ ಕೆಲಸಗಳ ಒತ್ತಡ ಹೆಚ್ಚಾಗುತ್ತಿದ್ದು, ಮೊಬೈಲ್ ಆ‌್ಯಪ್ ಮೂಲಕ ಕೆಲಸ ನಿರ್ವಹಿಸಲು ಯಾವುದೇ ಸೌಲಭ್ಯವಿಲ್ಲ ಹಾಗು ಅಂತರ್ಜಿಲ್ಲಾ ವರ್ಗಾವಣೆ ಕಳೆದ ಐದಾರು ವರ್ಷಗಳಿಂದ ಆಗಿಲ್ಲ ಕಾರ್ಯದ ಒತ್ತಡದಿಂದಾಗಿ ಈಗಾಗಲೇ 40 ಕ್ಕೂ ಹೆಚ್ಚು ಗ್ರಾಮಲೆಕ್ಕಿಗರು ಸಾವನಪ್ಪಿದ್ದಾರೆ ಕೂಡಲೇ ಸರ್ಕಾರ ತಮ್ಮ ಸಹಾಯಕ್ಕೆ ಮುಂದಾಗಬೇಕು ಇಲ್ಲದಿದ್ದಲ್ಲಿ ಅನಿರ್ದಿಷ್ಟಾವಧಿಯ ಪ್ರತಿಭಟನೆ ಮುಂದುವರಿಸಬೇಕಾಗುತ್ತದೆ ಎಂದು ವಿಲೇಜ್ ಅಕೌಂಟೆಂಟ್ ಗಳು ಪ್ರತಿಭಟನೆ ನಡೆಸಿದರು. ಈ ವೇಳೆ ಅಥಣಿ ಶಾಸಕ ಲಕ್ಷ್ಮಣ ಸವದಿ ಪ್ರತಿಭಟನಾ ನಿರತರ ಮನ ಒಳೈಸುವ ಪ್ರಯತ್ನ ಮಾಡಿದರಲ್ಲದೆ ಗ್ರಾಮಲೆಕ್ಕಿಗರ ಮೂಲಭೂತ ಸೌಲಭ್ಯಗಳ ಕೊರತೆ,ಹಾಗೂ ಅಗತ್ಯ ಇರುವ ತುರ್ತು ಸ್ಪಂದನೆಯ ಕುರಿತು ಸರ್ಕಾರದ ಗಮನ ಸೆಳೆಯುವದಾಗಿ ಭರವಸೆ ನೀಡಿದರು
ಬಳ್ಳಾರಿ: ಯಂಗ್ ಟೈಗರ್ ಅಭಿನಯದ ದೇವರ ಚಲನಚಿತ್ರವು ಶುಕ್ರವಾರ ಮುಂಜಾನೆ ಪ್ರದರ್ಶನ ಹಿನ್ನೆಲೆ ಯಲ್ಲಿ ಸಾವಿರಾರು ಅಭಿಮಾನಿಗಳು ಸಂಜೆ ಇಂದಲೇ ಥಿಯೇಟರ್ ಬಳಿ ಜಮಾಯಿಸಿದರು. ಮಧ್ಯರಾತ್ರಿ 1 ಗಂಟೆಗೆ ಚಲನಚಿತ್ರ ಪ್ರದರ್ಶನ ಕಾಣುವ ಹಿನ್ನೆಲೆಯಲ್ಲಿ ರಾತ್ರಿ 12 ಗಂಟೆಗೆ ಗೇಟ್ ತೆರೆಯಲು ತಡಮಾಡುತ್ತಿದ್ದಾರೆ ಎಂದು. https://youtu.be/93-M9xYz1e8?si=75KXIOGn_D_5ZuYw ಎಲ್ಲಾ ಅಭಿಮಾನಿಗಳು ಆಕ್ರೋಶಗೊಂಡು ಒಂದೇ ಸಮನೆ ಅಲುಗಾಡಿಸಿ ಗೇಟ್ ಮುರಿದು ಚಲನಚಿತ್ರ ನೋಡಲು ಚಿತ್ರಮಂದಿರದ ಒಳಗಡೆ ಓಡಿದರು. ಅಭಿಮಾನಿಗಳನ್ನು ಕಂಟ್ರೋಲ್ ಮಾಡಲು ಚಿತ್ರಮಂದಿರ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಇನ್ನೂ ಚಿತ್ರಮಂದಿರದ ಮುರಿದ ಗೇಟನ್ನು ರಾತ್ರೋರಾತ್ರಿ ಚಿತ್ರಮಂದಿರದ ಸಿಬ್ಬಂದಿ ರೆಡಿಮಾಡಿಸಿದರು.
ಕೋಲಾರ: ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ನಂಬಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವತಿಯನ್ನು ನಂಬಿಗಾನಹಳ್ಳಿ ಗ್ರಾಮದ ನಿವಾಸಿ 22 ವರ್ಷದ ದೀಪ್ತಿ ಎಂದು ಗುರುತಿಸಲಾಗಿದೆ. https://youtu.be/8atHBwtL7FM?si=N_KEnCpE-k1EJ85P ಕಿಡ್ನಿ ಸ್ಟೋನ್ ಕಾರಣ ಯುವತಿ ಬುಧವಾರ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆಯನ್ನು ಗುರುವಾರ ಮಾಡುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ವೈದ್ಯರು ಸಂಜೆ 5 ಗಂಟೆ ಸುಮಾರಿನಲ್ಲಿ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಪೋಷಕರಿಗೆ ಮಾಹಿತಿ ನೀಡಿದ್ದಾರೆ.ಆಸ್ಪತ್ರೆಯ ವೈದ್ಯರ ವಿರುದ್ಧ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವೈದ್ಯರ ನಿರ್ಲಕ್ಷ್ಯವೇ ಆಕೆಯ ಸಾವಿಗೆ ಕಾರಣ ಎಂದಿದ್ದಾರೆ. ಜೊತೆಗೆ ವೈದ್ಯರು ನೀಡಿದ್ದ ಅನಸ್ತೇಶಿಯಾ ಡೋಸ್ ಹೆಚ್ಚಾಗಿ ಮೃತಪಟ್ಟಿದ್ದಾಳೆಂದು ಪೋಷಕರು ಆರೋಪಿಸಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ
ಮೈಸೂರು: ಮಹಿಷಾ ದಸರಾದಿಂದ ಮೈಸೂರು ಹೆಸರೇ ಬದಲಾಗಿದೆ. ಮಹಿಷ ದಸರಾ ಆಚರಣಾ ಸಮಿತಿ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಬದಲಿಗೆ ಮಹಿಷೂರು, ಚಾಮುಂಡಿಬೆಟ್ಟ ಬದಲಿಗೆ ಮಹಿಷಾ ಬೆಟ್ಟ ಎಂದು ಹೆಸರು ಮುದ್ರಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. https://youtu.be/8atHBwtL7FM?si=ACMqZ24MVOSFvIu1 ಇದೇ ತಿಂಗಳು 29 ರಂದು ಮಹಿಷಾ ದಸರಾ ನಡೆಸಲು ಸಮಿತಿ ಉದ್ದೇಶಿಸಿದೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿ ನಂತರ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮಹಿಷಾ ದಸರಾ ಹೆಸರಿನಲ್ಲಿ ಈಗಾಗಲೇ ಸಂಘರ್ಷ ಶುರುವಾಗಿದೆ. ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತದೋ ಚಾಮುಂಡಿಯ ಭಕ್ತರ ಕೈ ಮೇಲಾಗುತ್ತದೋ ನೋಡಿಯೇ ಬಿಡೋಣ ಎಂದು ಮಹಿಷ ದಸರಾ ಆಚರಣೆ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಜೈಲೋ ಅಥವಾ ಬೇಲು ಸಿಗಬಹುದು ಎಂದು ಗೊತ್ತಾಗಲಿದೆ. https://youtu.be/Qj-YuO3xgz8?si=jvyiM_T_Erbb1P-x ಹೌದು .. ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆಯಲಿರೋ ಜಾಮೀನು ಅರ್ಜಿ ವಿಚಾರಣೆ ನಟ ದರ್ಶನ್, ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್, ಪವಿತ್ರಾಗೌಡ , ಲಕ್ಷ್ಮಣ್, ನಾಗರಾಜ್, ವಿನಯ್, ರವಿಶಂಕರ್ ಹಾಗೂ ಪವನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಆರೋಪಿಗಳು. ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾಗೌಡ, ಎ2 ಆರೋಪಿಯಾಗಿರುವ ದರ್ಶನ್ ಇಂದು ದರ್ಶನ್ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಸಾಧ್ಯತೆ. ಎಸ್ ಪಿಪಿ ಪ್ರಸನ್ನ ಕುಮಾರ್ ರಿಂದ ಆಕ್ಷೇಪಣೆ ಸಲ್ಲಿಕೆ ಜಾಮೀನು ಅರ್ಜಿ ಸಂಬಂಧ ಈಗಾಗಲೇ ಪೊಲೀಸರಿಗೆ ನೋಟಿಸ್ ನೀಡಿರುವ ಕೋರ್ಟ್ ಇಂದು 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಲಿರೋ ಕೋರ್ಟ್
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ತೋಟದಲ್ಲಿ ತೋಗರಿ ಬೆಳೆ ನಡುವೆ ಗಾಂಜಾ ಬೆಳೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಗೆದ್ದಲಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ನಾರಾಯಣಸ್ವಾಮಿ ಬಂದಿತ ಆರೋಪಿಯಾಗಿದ್ದಾರೆ. ಗಾಂಜಾ ಮಾರಿ ಹೆಚ್ಚಿನ ಹಣ ಮಾಡಬಹುದು ಅಂತ ಬೆಳೆದಿದ್ದನು. ಖಚಿತ ಮಾಹಿತಿ ಮೆರೆಗೆ ಇನ್ಸಪೇಕ್ಟರ್ ಸಾಧಿಕ್ ಪಾಷ ದಾಳಿ ನಡೆಸಿ 8 ಕೆಜಿ 700 ಗ್ರಾಂ ತೂಕದ ಗಾಂಜಾ ಗಿಡಗಳು ವಶಕ್ಕೆ ಪಡೆದಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ತಡರಾತ್ರಿ ಸ್ಪಾಟ್ ಮಹಜರು ನಡೆಸಿದ ಎಸ್ ಐ ಟಿ, ಪೋರೆನ್ಸಿಕ್ ಟೀಂ ಯಶವಂತಪುರ ಬಳಿಯ ಜೆಪಿ ಪಾರ್ಕ್ ಎದುರಗಡೆಯ ಗೋದಾಮು ಆ ಗೋದಾಮಿನ ಎರಡನೇ ಪ್ಲೋರ್ ನಲ್ಲಿ ಅತ್ಯಾಚಾರ ವಾಗಿದೆ ಎಂದು ದೂರು ನೀಡಿದ್ದ ಸಂತ್ರಸ್ತೆ https://youtu.be/Qj-YuO3xgz8?si=ZufYt_M7kpGH-HXC ಶಾಸಕ ಮುನಿರತ್ನ ನನ್ನ ಕರೆದೋಯ್ದ ಸ್ಪಾಟ್ ಮಹಜರು ಹಾಗೆ ಹೇಳಿಕೆಗಳನ್ನ ದಾಖಲಿಸಿ ಕೊಂಡು, ಚಿತ್ರೀಕರಣ ಮಾಡಿಕೊಂಡ ಟೀಂ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಎಸ್ ಐ ಟಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದ್ದು ಪ್ರಕರಣದಲ್ಲಿ ಏಳು ಜನರ ವಿರುದ್ಧ ದೂರು ದಾಖಲಾಗಿದೆ ಆರು ಜನರ ವಿಚಾರಕಣೆ ನಡೆಸಲಾಗುತ್ತಿದೆ, ಅಗತ್ಯ ಬಿದ್ರೆ ಅರೆಸ್ಟ್ ಮಾಡುತ್ತೇವೆ ಎಂದ ಅಧಿಕಾರಿಗಳುತನಿಖೆ ಚುರುಕು ಗೊಳಿಸಿದ ಎಸ್ ಐಟ ಅಧಿಕಾರಿಗಳು 12 ದಿನಗಳಕಾಲ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಎಸ್ ಐ ಟಿ. ಸಂತ್ರಸ್ತ ಮಹಿಳೆಯನ್ನು ಕರೆದುಕೊಂಡು ಬಂದು ಗೋದಾಮಿನಲ್ಲಿ ಸ್ಪಾಟ್ ಮಹಜರು ಮಾಡಿದ್ರು
ಸ್ಯಾಂಡಲ್ ವುಡ್ ನ ಖ್ಯಾತ ನಟ ದುನಿಯಾ ವಿಜಯ್ ಇದೀಗ ನಿರ್ದೇಶಕನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಸಲಗ ಹಾಗೂ ಭೀಮಾ ಸಿನಿಮಾ ಹಿಟ್ ಆದ ಬಳಿಕ ಇದೀಗ ಮತ್ತೋರ್ವ ಖ್ಯಾತ ನಟನಿಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ತಮ್ಮ ಹೊಸ ಸಿನಿಮಾಗೆ ”ಸಿಟಿ ಲೈಟ್ಸ್” ಎಂದು ಟೈಟಲ್ ಇಟ್ಟಿದ್ದಾರೆ. ವಿಜಯ್ ಕುಮಾರ್ ಪುತ್ರಿ ಮೋನಿಷಾ ವಿಜಯ್ ಕುಮಾರ್ ನಟಿಸುತ್ತಿರುವ ಚೊಚ್ಚಲ ಚಿತ್ರವಿದು. ಕೆಲ ದಿನಗಳ ಹಿಂದೆ ಸಿಟಿ ಲೈಟ್ಸ್ ಅನೌನ್ಸ್ ಆಗಿದ್ದು, ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ತಮ್ಮ ಮಗಳ ಸಿನಿಮಾ ನಿರ್ದೇಶನದ ಮಾಡುತ್ತಿದ್ದು ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಈ ಹಿಂದೆ ಸಲಗ ಹಾಗೂ ಭೀಮ ಅಂಥಹ ಮಾಸ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ವಿಜಯ್, ವಿನಯ್ ರಾಜ್ ಕುಮಾರ್ ಜೊತೆಗೆ ಮಗಳು ಮೋನಿಷಾಳನ್ನು ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡಲು ರೆಡಿಯಾಗಿದ್ದಾರೆ. ಭೀಮ ಬಿಡುಗಡೆ ಸಂದರ್ಭ ದುನಿಯಾ ವಿಜಯ್ ಅವರು ವಿನಯ್ ರಾಜ್ಕುಮಾರ್ ಅವರನ್ನು ಸಕಲೇಶಪುರದ ಕಾಡಿಗೆ ಕರೆದುಕೊಂಡು…
ಸಾವನ್ನಪ್ಪಿದ್ದಾನೆಂದು ತಿಳಿದು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾದ ವೇಳೆಯೇ ಆ ವ್ಯಕ್ತಿ ನಾನು ಬದುಕಿದ್ದೇನೆಂದು ಹೇಳಿ ಎದ್ದು ಕುಳಿತ ಘಟನೆ ಬಿಹಾರದಲ್ಲಿ ನಡೆದಿದೆ . ಹೌದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು ಪೋಸ್ಟ್ಮಾರ್ಟಮ್ಗೆ ಕರೆದೊಯ್ಯುವಾಗ ವ್ಯಕ್ತಿ ಎಚ್ಚರಗೊಂಡು ಸ್ಟ್ರೆಚರ್ ಮೇಲೆ ಹತ್ತಿ ನಿಂತಿದ್ದ ಘಟನೆ ಬಿಹಾರದಲ್ಲಿ ನಡೆದಿದೆ. ರಾಕೇಶ್ ಕುಮಾರ್ ಎನ್ನುವ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಬಂದಾಗ ನೆಲದ ಮೇಲೆ ಬಿದ್ದಿರುವುದು ಕಂಡಿತ್ತು, ದೇಹದ ಚಲನೆ ಇರಲಿಲ್ಲ. ಅವರಿಗೆ ಹೃದಯಾಘಾತವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು ಎಂದು ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಬಯಾಸ್ ಪ್ರಸಾದ್ ಹೇಳಿದರು. ಈ ಮಧ್ಯೆ ವೈದ್ಯರು ನಾಡಿ ಮಿಡಿತವನ್ನೂ ನೋಡದೆ ಆತ ಸತ್ತಿದ್ದಾನೆಂದು ಘೋಷಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಆ ಸಮಯದಲ್ಲಿ ಆತ ಎಚ್ಚರಗೊಂಡಿದ್ದು ನಾನು ಬದುಕಿದ್ದೇನೆ ಎಂದು ತಿಳಿಸಿದ್ದಾನೆ. ಬಳಿಕ ಆವ್ಯಕ್ತಿಯನ್ನ ವಿಚಾರಣೆಗೆಂದು ಕರೆದೊಯ್ದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾತ್ ರೂಂ ಕ್ಲೀನ್ ಮಾಡಲು ಹೋದಾಗ ಈ ವ್ಯಕ್ತಿ ಕ್ಲೀನರ್ ಗೆ ಸಿಕ್ಕಿದ್ದರು, ನಾನು ಔಷಧಿ ಖರೀದಿಸಲು…