ಬೆಂಗಳೂರು: ಬಿಬಿಎಂಪಿ ಆಟದ ಮೈದಾನದ ಗೇಟ್ ಬಿದ್ದು ಮೃತಪಟ್ಟ ಬಾಲಕ ನಿರಂಜನ್ ನಿವಾಸಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ಪೋಷಕರಿಗೆ 10 ಲಕ್ಷ ಮೊತ್ತದ ಪರಿಹಾರದ ಚೆಕ್ ವಿತರಿಸಿದರು. https://youtu.be/SJACGG3vIxM?si=a0-qEDuppEoSdpR5 ಮಲ್ಲೇಶ್ವರಂನ ಬಾಲಕನ ನಿವಾಸಕ್ಕೆ ಶಿವಕುಮಾರ್ ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಬಿಬಿಎಂಪಿ ಆಟದ ಮೈದಾನದಲ್ಲಿ ಗೇಟ್ ಬಿದ್ದು ಮೃತಪಟ್ಟ ಬಾಲಕನ ಮನೆಗೆ ನಮ್ಮ ಮಂತ್ರಿಗಳು ಹಾಗೂ ಶಾಸಕರು ಬಂದು ಸಾಂತ್ವನ ಹೇಳಿದ್ದರು. ನಾನು ಅವರ ಮನೆಗೆ ಬಂದು ಬಾಲಕನ ತಂದೆ ತಾಯಿ ಭೇಟಿ ಮಾಡಿದೆ. ಬಿಬಿಎಂಪಿ ವತಿಯಿಂದ 5 ಲಕ್ಷ ಹಾಗೂ ಪಕ್ಷದ ವತಿಯಿಂದ (ಬ್ಲಾಕ್ ಕಾಂಗ್ರೆಸ್) 5 ಲಕ್ಷ ಪರಿಹಾರ ಸೇರಿ ಒಟ್ಟು 10 ಲಕ್ಷದ ಚೆಕ್ ನೀಡಲಾಗಿದೆ. ಮೃತಪಟ್ಟ ಬಾಲಕನ ನೇತ್ರವನ್ನು ಕುಟುಂಬದವರು ದಾನ ಮಾಡಿ ನಮಗೆ ಮಾದರಿಯಾಗಿದ್ದಾರೆ. ಬಡತನವಿದ್ದರೂ ಸಮಾಜ ಹಾಗೂ ದೇಶಕ್ಕೆ ಕಾಣಿಕೆ ನೀಡುವ ತೀರ್ಮಾನವನ್ನು…
Author: Prajatv Kannada
ದೇಶದ ಆರ್ಥಿಕ ಬಲವರ್ಧನೆಗೆ ‘ಮೇಕ್ ಇನ್ ಇಂಡಿಯಾ’:ಎಂದಿರುವ ಪ್ರಧಾನಿ ಮೋದಿ,ಇದಕ್ಕೆ ನಿಮ್ಮ ಅಭಿಪ್ರಾಯವೇನು..? ಭಾರತ ಪ್ರಕಾಶಿಸುತ್ತಿದೆ ಭಾರತ ವಿಕಸಿತವಾಗುತ್ತಿದೆ 50-50
ಮೋನಾಲಿಸಾ” ಎಂಬ ಪ್ರಸಿದ್ಧ ಚಿತ್ರ ರಚಿಸಿದವರು ಯಾರು..? ಪಾಬ್ಲೊ ಪಿಕಾಸೋ ವಿಲಿಯಂ ಬ್ಲೇಕ್ ರೆಂಬ್ರಾಂಟ್ ಲಿಯೊನಾರ್ಡೊ ಡಾ ವಿಂಚಿ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮೇಲೆ ಹೈಕೋರ್ಟ್ ತನಿಖೆಗೆ ಆದೇಶ ಹಿನ್ನೆಲೆಯಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡುವಂತೆ ನಿನ್ನೆಯಿಂದ ಆಗ್ರಹ ವ್ಯಕ್ತವಾಗಿದ್ದು ಹೀಗಾಗಿ ಇಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಸಿಎಂ ಮನೆ ಮುತ್ತಿಗೆ ಯತ್ನ ನಡೆಸಿದ್ದಾರೆ. https://youtu.be/KKlZ_fSZ9-w?si=JOt3Qn4cjfpzQc2f ಸಿಎಂ ಕಾವೇರಿ ನಿವಾಸ, ಕೃಷ್ಣಾಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರು ಈ ವೇಳೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಸಿಎಂ ಮನೆ ಮುತ್ತಿಗೆ ಯತ್ನ ನಡೆಸಿದ್ದು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಪ್ರತಿಭಟನೆ ಗೊತ್ತಗ್ತಿದ್ದಂತೆ ಫುಲ್ ಅಲರ್ಟ್ ಆದ ಪೊಲೀಸರು ಕುಮಾರ ಕೃಪಾ ಗೆಸ್ಟ್ ಹೌಸ್ ಬಳಿಯೇ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಯುವಮೋರ್ಚಾ ಕಾರ್ಯಕರ್ತರನ್ನು ಬಂಧಿಸಿ, ಸ್ಥಳದಿಂದ ಕರೆದೊಯ್ದ ಪೊಲೀಸರು
ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಸಿನಿಮಾ ಆಸ್ಕರ್ ಗೆ ಎಂಟ್ರಿಕೊಟ್ಟಿದೆ. ಈ ಬೆನ್ನಲ್ಲೇ ಬಾಲಿವುಡ್ ನಟ ರಣ್‌ದೀಪ್ ಹೂಡಾ ನಟಿಸಿ, ನಿರ್ದೇಶಿಸಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರವು ಅಧಿಕೃತವಾಗಿ 2025ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ‘ಸ್ವಾತಂತ್ರ್ಯ ವೀರ್ ಸಾವರ್ಕರ್’ಚಿತ್ರವು ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನಗಾಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ರಣ್‌ದೀಪ್ ಹೂಡಾ ಜೊತೆ ಬಾಲಿವುಡ್ ನಟಿ ಅಂಕಿತಾ ಲೋಖಂಡೆ ನಟಿಸಿದ್ದರು. ಈ ಚಿತ್ರ ಕಳೆದ ವರ್ಷ 2024ರಲ್ಲಿ ತೆರೆಕಂಡಿತ್ತು. ಆಸ್ಕರ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಚಿತ್ರದ ನಿರ್ಮಾಪಕ ಸಂದೀಪ್ ಈ ಖುಷಿಯ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಂತಸದ ಜೊತೆ ಹೆಮ್ಮೆ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಗೌರವ ಹಾಗೂ ವಿನಮ್ರತೆ, ನಮ್ಮ ಸಿನಿಮಾ ‘ಸ್ವಾತಂತ್ರ‍್ಯ ವೀರ್ ಸಾವರ್ಕರ್’ ಅಧಿಕೃತವಾಗಿ ಆಸ್ಕರ್‌ಗೆ ಆಯ್ಕೆಯಾಗಿದೆ. ಈ ಚಿತ್ರವನ್ನು ಗುರುತಿಸಿದ ‘Film Federation Of India’ ತಂಡಕ್ಕೆ ಧನ್ಯವಾದಗಳು. ನಮ್ಮನ್ನು ಬೆಂಬಲಿಸಿದವರಿಗೂ ಧನ್ಯವಾದಗಳು ಎಂದಿದ್ದಾರೆ.
ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಸಾಕಷ್ಟು ಜನರ ಜನಪ್ರಿಯತೆ ಕೂಡ ಹೆಚ್ಚಾಗಿದೆ. ಅದರಂತೆ ನಿರೂಪಕಿ ಚೈತ್ರಾ ವಾಸುದೇವನ್ ಕೂಡ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಿರೂಪಕಿ ಜಿಮ್ ನಲ್ಲಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿರುವ ಚೈತ್ರಾ ವಾಸುದೇವರನ್ ಅವರು ಸಾಕಷ್ಟು ಹಿಂಬಾಲಕರನ್ನು ಪಡೆದಿದ್ದಾರೆ. ಅವರ ಹೊಸ ಫೋಟೋಗಳು ಗಮನ ಸೆಳೆದಿವೆ. ನಿತ್ಯ ಜಿಮ್ ನಲ್ಲಿ ಬೆವರಿಳಿಸುವ ಚೈತ್ರಾ ವಾಸುದೇವನ್ ಅಲ್ಲಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಶೇರ್ ಮಾಡಿದ್ದಾರೆ. ಚೈತ್ರಾ ಅವರು ಬೈಸೆಪ್ಸ್ ತೋರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಬಾಡಿ ಬಿಲ್ಡರ್ ರೀತಿಯಲ್ಲಿ ದೇಹವನ್ನು ಶೇಪ್ ಮಾಡಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳು ಕಾಡಿದೆ. ಈ ಫೋಟೋ ಗಮನ ಸೆಳೆದಿದೆ. ‘ಪವರ್ ವುಮನ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ನೀವು ನಿಜಕ್ಕೂ ಸ್ಫೂರ್ತಿದಾಯಕ ಮಹಿಳೆ’ ಎಂದು ಕೆಲವರು…
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. https://youtu.be/dXNHyySr274?si=CVSbJbrr-JYS7zLf ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ನ ಬೆಂಗಳೂರು ನಗರಾಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ರಮೇಶ್ ಗೌಡ ಮಾತನಾಡಿ, ಸಿಎಂ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ಷಡ್ಯಂತ್ರ ಮಾಡ್ತಿದೆ ಅಂತಾ ಹೇಳ್ತಾ ಇದ್ದಾರೆ. ಪಾದಯಾತ್ರೆ ರಾಜಕೀಯ ದುರುದ್ದೇಶದಿಂದ ಮಾಡುತ್ತಿದ್ದಾರೆಂದು ಸಿಎಂ ಹೇಳಿದ್ರು. ನ್ಯಾಯಾಲಯ ಅವರ ವಿರುದ್ದ ತೀರ್ಪು ನೀಡಿದೆ. ಬಿಜೆಪಿ ಜೆಡಿಎಸ್‌ಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಹೇಳ್ತಾ ಇದ್ರಿ. ನಿಮಗೆ ನೈತಿಕತೆ ಇದ್ರೆ ರಾಜೀನಾಮೆ ಕೊಡಿ ಎಂದು ಸವಾಲು ಹಾಕಿದರು. ರಾಜಭವನ ದುರುಪಯೋಗ ಮಾಡಿಕೊಳ್ತಾ ಇದ್ದಾರೆ ಅಂತ ಹೇಳ್ತಾ ಇದ್ರಿ. ಈಗ ನ್ಯಾಯಾಲಯ ಮುಡಾ ವಿಚಾರವಾಗಿ ತನಿಖೆ ಆಗಬೇಕು ಅಂತ ಹೇಳುತ್ತಿದೆ. ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಎಂದು ಒತ್ತಾಯಿಸಿದರು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ…
ಬೆಂಗಳೂರು: ಹೈಕೋರ್ಟ್ ತೀರ್ಪಿನ ಬಳಿಕ ಸಿದ್ದರಾಮಯ್ಯ ವೀಕ್ ಆಗಿಲ್ಲ, ಗುಂಡುಕಲ್ಲು ಇದ್ದ ಹಾಗೆ ಇದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. https://youtu.be/eT972AScRK4?si=QPDz-zWIJNi6-ACm ಈ ಬಗ್ಗೆ ಮಾಧ್ಯಮದವರಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆ ಕೊಡಬೇಕು ಎಂಬ ಮಾತು ಕೇಳಿ ಬರ್ತಿದೆ. ನಾವು ನ್ಯಾಯಕ್ಕಾಗಿ ಹೈಕೋರ್ಟ್‌ಗೆ ಹೋಗಿದ್ದೆವು. ಸಿಎಂ ಪಾತ್ರ ಮುಡಾ ಪ್ರಕರಣದಲ್ಲಿ ಏನೂ ಇಲ್ಲ. ಅವರಿಂದ ಯಾವುದೇ ಅಧಿಕಾರ ದುರುಪಯೋಗ ಆಗಿಲ್ಲ. ಆದರೆ ಕೋರ್ಟಿನಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ. ಮುಂದೆ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಿದೆ. ಡಬಲ್ ಬೆಂಚ್‌ನಲ್ಲಿ ಇದರ ಬಗ್ಗೆ ಪ್ರಶ್ನೆ ಮಾಡುತ್ತೇವೆ. ಮುಖ್ಯಮಂತ್ರಿಗಳು ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು. ವಿಚಾರಣೆ ವೇಳೆ ಸಿಎಂ ಪಾತ್ರ ಏನು ಎಂದು ನ್ಯಾಯಾಧೀಶರೇ ಕೇಳಿದರು. ಆಗ ಇದರ ವಿಚಾರವಾಗಿ ತೀರ್ಪಿನಲ್ಲಿ ಹೇಳಿಲ್ಲ. ಕಾನೂನಾತ್ಮಕ ಹೋರಾಟ ಮುಂದುವರೆಸುತ್ತೇವೆ. ಸಿಎಂಗೆ 40 ರಿಂದ 45 ವರ್ಷ ರಾಜಕೀಯ ಜೀವನದಲ್ಲಿ ಯಾವುದೇ ಆಪಾದನೆ ಇರಲಿಲ್ಲ. ಇದು ರಾಜಕೀಯ ಪ್ರೇರಿತ ಅನ್ನೋ ನೋವಾಗಿದೆ. ರಾಜ್ಯಪಾಲರು ಕ್ಯಾಬಿನೆಟ್ ನಿರ್ಣಯ…