ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ನ ಬೆಂಗಳೂರು ನಗರಾಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು ಮತ್ತು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರು ಕೂಡ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಶನ್ ಹೈಕೋರ್ಟ್ ಎತ್ತಿ ಹಿಡಿದಿದೆ. ಹೀಗೆ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ತೀರ್ಪಿನಲ್ಲಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ಕಪಾಳ ಮೋಕ್ಷ ಮಾಡಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು ಮತ್ತು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರು ತಿಳಿಸಿದರು. ಅಂದ್ರೆ ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ತಮ್ಮ ಕುಟುಂಬಕ್ಕೆ ನೆರವಾಗುವ ರೀತಿಯಲ್ಲಿ ಮುಖ್ಯಂತ್ರಿಯಾಗಿ ಪ್ರಭಾವದ ದುರ್ಬಳಕೆ ಮಾಡಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ತನ್ನ ಆದೇಶದಲ್ಲಿ ತಿಳಿಸಿದೆ. ಸಿಎಂ ಶ್ರೀಮತಿ ಅವರ…
Author: Prajatv Kannada
ಯಾದಗಿರಿ:- ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಯಾದಗಿರಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದಲ್ಲಿ FIR ದಾಖಲಾಗಿದೆ. ಶಹಾಪುರ ಗಣೇಶ ವಿಸರ್ಜನಾ ಶೋಭಾ ಯಾತ್ರೆ ವೇಳೆ ಪ್ರತಾಪ್ ಸಿಂಹ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. https://youtu.be/eImE8CRHLFA?si=jpvuaZZQWe6HDzVc ಇದೇ 21ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾ ಯಾತ್ರೆಯಲ್ಲಿ ಪ್ರತಾಪ್ ಸಿಂಹ ಭಾಗಿಯಾಗಿ ಭಾಷಣ ಮಾಡಿದ್ದರು. ಆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರನ್ನು ಉದ್ದೇಶಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪ ಅವರ ಮೇಲಿದೆ. ಇನ್ನೂ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಪ್ರತಾಪ್ ಸಿಂಹ, ಗಣೇಶ ವಿಸರ್ಜನೆ ವೇಳೆ ಎಲ್ಲಾ ಕಡೆ ಕಲ್ಲುತೂರಾಟ ಮಾಡುವ ಪ್ರವೃತ್ತಿ ಕಾಣಿಸುತ್ತಾ ಇದೆ. ಕಲ್ಲು ಹೊಡೆಯುವ ಪ್ರವೃತ್ತಿ ಮುಸ್ಲಿಮರಿಗೆ ಮಾತ್ರ ಯಾಕೆ ಬರುತ್ತದೆ? ಹಿಂದುಗಳು ಎಲ್ಲರೂ ಕೈಯಲ್ಲಿ ಒಂದೊಂದು ಕಲ್ಲು ಹಿಡಿದುಕೊಂಡರೆ ನಿಮ್ಮ ಕಥೆ ಏನು ಆಗುತ್ತದೆ ಗೊತ್ತೇ ಎಂದು ಪ್ರಶ್ನಿಸಿದ್ದರು. ಪರಮಾಣು ಬಾಂಬ್ ಸಿದ್ಧಪಡಿಸುವುದನ್ನು ಕಂಡುಹಿಡಿದ ಹಿಂದುಗಳಿಗೆ ಪೆಟ್ರೋಲ್ ಬಾಂಬ್ ತಯಾರಿಸಲು ಬರುವುದಿಲ್ಲವೇ? ಟಾಂಗಾಗಳು,…
ಕಾರವಾರ:- ಭ್ರಷ್ಟಾಚಾರ ಕೇಸ್ ಗೆ ಸಂಬಧಪಟ್ಟಂತೆ ಶಿರಸಿ ಬಿಜೆಪಿ ನಾಯಕಿಗೆ 1 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸಲಾಗಿದೆ. https://youtu.be/thHxGd_Eq1Y?si=hRQyO6ODvv6FawAA ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ್ ಈ ತೀರ್ಪು ನೀಡಿದ್ದಾರೆ. ಉಷಾ ಹೆಗಡೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೊದಲು ಶ್ರೀನಗರ ಪಂಚಾಯತ್ ವತಿಯಿಂದ ನಡೆದ ಸಭೆ ಸಮಾರಂಭಗಳಿಗೆ ಅಂಗನವಾಡಿ ಕಾರ್ಯಕರ್ತೆಯಾಗಿ ಹಾಜರಾಗಿದ್ದರು. ಜಿ.ಪಂ.ಸದಸ್ಯತ್ವದ ಅಧಿಕಾರದಲ್ಲಿದ್ದಾಗ ಜ.2011 ರಿಂದ ನ.2012 ರವರೆಗೆ ಅಂಗನವಾಡಿ ಕಾರ್ಯಕರ್ತೆಯೆಂದು ಸರ್ಕಾರದಿಂದ ಗೌರವಧನ 88,630 ರೂ. ಪಡೆದುಕೊಂಡಿದ್ದಾರೆ. ಒಟ್ಟು ಎರಡು ಹುದ್ದೆಗಳನ್ನು ಹೊಂದಿದ್ದು, ಜನಪ್ರತಿನಿಧಿಯಾದ ನಂತರವೂ ಅಂಗನವಾಡಿ ಕಾರ್ಯಕರ್ತೆಯೆಂದು ಗೌರವಧನ ಪಡೆದು, ಸರ್ಕಾರಕ್ಕೆ ಮೋಸ ಮಾಡಿದ್ದಾಗಿ ಆರೋಪಿಸಲಾಗಿತ್ತು. ಉಷಾ ರವೀಂದ್ರ ಹೆಗಡೆ ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ಜಿಲ್ಲಾ ಪಂಚಾಯತ್ ಬದನಗೋಡ ಕ್ಷೇತ್ರದ ಸದಸ್ಯತ್ವ ಹುದ್ದೆಯನ್ನು ಸರಿಯಾಗಿ ನಿಭಾಯಿಸದೇ ಹಾಗೂ ಅಂಗನವಾಡಿ ಕರ್ತವ್ಯದಲ್ಲಿಯೂ ಸರಿಯಾಗಿ ಹಾಜರಿರದೇ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಾಜರಾತಿ…
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಂಧನವಾಗಿರೋ ನಟ ದರ್ಶನ್ ಗೆ ಟೆನ್ಷನ್ ಶುರುವಾಗಿದ್ದು ಒಂದಾದ ಮೇಲೊಂದು ಬಿಟ್ಟು ಬಿಡದೆ ಕಾಡ್ತಿರೋ ಸಮಸ್ಯೆ ಅದರ ಮಧ್ಯೆ ಐಟಿ ಸುಳಿಯಲ್ಲಿ ಸಿಲುಕಿದ ನಟ ದರ್ಶನ್ https://youtu.be/dR7rlkFHJ8U?si=J3LYj3lZUgcnlky1 ಹೌದು.. ನಾಳೆ ಮತ್ತು ನಾಳೆದ್ದು ದರ್ಶನ್ ವಿಚಾರಣೆಗೆ ಕೋರ್ಟ್ ನಿಂದಲೇ ಅನುಮತಿ ಪಡೆದು ಸೆಪ್ಟಂಬರ್ 26 ಮತ್ತು 27 ನೇ ತಾರೀಖು ವಿಚಾರಣೆಗೆ 57 ಸಿಸಿಹೆಚ್ ಕೋರ್ಟ್ ಅನುಮತಿ ನೀಡಿದೆ. ಮನೆಯಲ್ಲಿ ಸಿಕ್ಕ ಹಣ ಮತ್ತು ಕೊಲೆ ಕೇಸ್ ನಲ್ಲಿ ಬಳಸಲಾದ ಹಣದ ಮೂಲ ಪತ್ತೆಗೆ ಮುಂದಾದ ಐಟಿ ಬಳ್ಳಾರಿ ಜೈಲಲ್ಲೇ ನಟ ದರ್ಶನ್ ನನ್ನ ಎರಡು ದಿನ ವಿಚಾರಣೆ ಮಾಡಲಿರೋ ಐಟಿ ಆಫೀಸರ್ಸ್ ಈ ಮೂಲಕ ಹಣ ಕೊಟ್ಟಿರೋ ಮೋಹನ್ ರಾಜ್, ಹಾಗೂ ಡೆವಿಲ್ ನಿರ್ದೇಶಕ ಸೇರಿದಂತೆ ಕೆಲ ನಿರ್ಮಾಪಕರ ವಿಚಾರಣೆ ಹಾಗೆ ಆರ್ ಆರ್ ನಗರದ ಮನೆಯಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ಸಾಧ್ಯತೆ..
ಬೆಂಗಳೂರು: ಸಿಎಂ ರಾಜೀನಾಮೆ ನೀಡುವ ಅಗತ್ಯವಿಲ್ಲ ನಾನು ಕೂಡ ಸ್ಪಷ್ಟಪಡಿಸುತ್ತಿದ್ದೇನೆ 40 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಯಾವುದೇ ಆರೋಪ ಇರಲಿಲ್ಲ ಈಗ ಅಹಜವಾಗಿ ಅವರಿಗೆ ನೋವಾಗುತ್ತದೆ..ಡಬಲ್ ಬೆಂಚ್ ನಲ್ಲಿ ಈಗ ಪ್ರಶ್ನೆ ಮಾಡ್ತೇವೆ ಎಂದು ಗೃಹ ಸಚಿವ ಡಾ.ಜಿ. https://youtu.be/PY30cY8x87A?si=f_gvtoWvfYj5vA7A ಪರಮೇಶ್ವರ್ ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯಪಾಲರು ಸಚಿವ ಸಂಪುಟದ ನಿರ್ಣಯ ಪಾಲಿಸಬೇಕೆಂಬ ಮಾತಿದೆ ವಿವೇಚನೆ ಬಳಸಬಹುದು ಎಂದೂ ಹೇಳಿದೆ -ಡಾ.ಜಿ.ಪರಮೇಶ್ವರ್ ಕೋರ್ಟ್ ತೀರ್ಪಿನಿಂದ ರಾಜ್ಯಪಾಲರಿಗೆ ಬಲ ಬಂದಿದೆ ಎನ್ನಬಹುದು ಆದ್ರೆ ಇದು ಎಲ್ಲರಿಗೂ ಅನ್ವಯ ಅಗಬೇಕಿತ್ತು ಎಂದು ಹೇಳಿದರು. ಸಿಎಂ ವಿರುದ್ದ ತನಿಖೆಗೆ ಹೈಕೋರ್ಟ್ ಆದೇಶ ವಿಚಾರ ಬಗ್ಗೆಯೂ ಮಾತನಾಡಿ, ಮುಡಾ ಪ್ರಕರಣದಲ್ಲಿ ಸಿಎಂ ಯಾವುದಕ್ಕೂ ಸಹಿ ಹಾಕಿಲ್ಲ ಅವರ ಪಾತ್ರ ಇಲ್ಲ ಅಂತಾ ನ್ಯಾಯಾಲಯಕ್ಕೆ ಹೋಗಿದ್ವಿ.ಆದರೆ ನಮಗೆ ಹಿನ್ನಡೆ ಆಗಿದೆನ್ಯಾಯಾಲಯ ತೀರ್ಪನ್ನ ನಾವು ಗೌರವಿಸುತ್ತೇವೆಸಿಎಂ ರಾಜೀನಾಮೆ ಕೊಡುವ ಅಗತ್ಯ ಇಲ್ಲನಮಗೆ ಖಂಡಿತವಾಗಿ ನ್ಯಾಯ ಸಿಕ್ಕಿಲ್ಲ,ಸಮಾಧಾನ ಆಗಿಲ್ಲ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತೀರ್ಪು ಏನ್ ಬರುತ್ತೋ ಗೊತ್ತಿಲ್ಲ ನೋಡೋಣ ಎಂದರು.…
ಬೆಂಗಳೂರು: ಗಣೇಶ ಕೂಡಿಸುವ ವಿಚಾರವಾಗಿ ಬೆಂಗಳೂರಿನ ಶ್ರೀನಿವಾಸನಗರದಲ್ಲಿ ಎರಡು ಗ್ಯಾಂಗ್ ನಡುವೆ ಗಲಾಟೆ ನಡೆದಿದೆ. ಘಟನೆಗೆ ಸಂಬಂಧಿಸಿದ ಒಟ್ಟು ಎಂಟು ಜನ ಆರೋಪಿಗಳನ್ನು ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. https://youtu.be/sdtTAgRGWBw?si=cqQS0ZKV_Xx8o3W4 ವಿಶ್ವಾಸ್ ಹಾಗೂ ಸುಹಾಸ್ ಎಂಬುವರು ರಸ್ತೆ ಮಧ್ಯೆ ಯಾಕೆ ಗಣೇಶ ಇಟ್ಟಿದ್ದರು. ರಸ್ತೆ ಮಧ್ಯೆ ಯಾಕೆ ಗಣೇಶ ಇಟ್ಟಿದ್ದಿರಾ ಚಂದನ್ ಪ್ರಶ್ನಿಸಿದ್ದನು. ಈ ವಿಚಾರವಾಗಿ ರೌಡಿಶೀಟರ್ ಚಂದನ್ ಹಾಗೂ ಪ್ರದೀಪ್ ಗ್ಯಾಂಗ್ ನಡುವೆ ನಡೆದಿದ್ದ ಗಲಾಟೆ ನಡೆದಿದೆ. ಸೆಪ್ಟೆಂಬರ್ 22ರ ಮಧ್ಯರಾತ್ರಿ ಗಲಾಟೆ ನಡೆದಿದೆ. ಚಂದನ್, ದೀಪಕ್, ರಕ್ಷಿತ್, ಪ್ರದೀಪ್, ವಿಶ್ವಾಸ್, ಸುಹಾಸ್, ಚಿರಾಗ್ ಬಂಧಿತರು.
ನವದೆಹಲಿ: ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್ ಮತ್ತು ಬೆಡ್‍ರೂಮ್‍ನ ಬಲ್ಬ್‍ಗಳಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕರಣ್ ಮನೆ ಮಾಲೀಕನ ಮಗನಾಗಿದ್ದು, ಕಟ್ಟಡದ ಇನ್ನೊಂದು ಮಹಡಿಯಲ್ಲಿ ವಾಸವಾಗಿದ್ದ. ಸಿವಿಲ್ ಸರ್ವೀಸ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಹಿಳೆ ಶಕರ್‍ಪುರದ ಬಾಡಿಗೆಗೆ ಇದ್ದರು. ಮಹಿಳೆ ಇತ್ತೀಚೆಗೆ ಉತ್ತರ ಪ್ರದೇಶದ ತನ್ನ ಊರಿಗೆ ತೆರಳುವಾಗ ಮನೆಯ ಕೀಯನ್ನು ಅವನ ಬಳಿ ಕೊಟ್ಟು ಹೋಗಿದ್ದಳು. ಈ ವೇಳೆ ಆರೋಪಿ, ಮಹಿಳೆ ವಾಸವಿದ್ದ ಮನೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಅಪೂರ್ವ ಗುಪ್ತಾ ಅವರು, ಮಹಿಳೆ ಇತ್ತೀಚೆಗೆ ತನ್ನ ವಾಟ್ಸಪ್ ಖಾತೆಯಲ್ಲಿ ಕೆಲವು ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದ್ದಳು. ಬಳಿಕ ಆಕೆಯ ವಾಟ್ಸಪ್ ಖಾತೆಯನ್ನು ಬೇರೆ ಲ್ಯಾಪ್‍ಟಾಪ್‍ನಲ್ಲಿ ಬಳಕೆ ಮಾಡುತ್ತಿರುವುದು ತಿಳಿದು ಬಂದಿತ್ತು. ಬಳಿಕ ಆಕೆ ತಕ್ಷಣ ಲಾಗ್ ಔಟ್ ಮಾಡಿದ್ದಳು. ಬಳಿಕ ತನ್ನನು ಯಾರೋ ಕಣ್ಗಾವಲಿನಲ್ಲಿಟ್ಟಿದ್ದಾರೆ ಎಂದು ಶಂಕಿಸಿ…
ಈ ಸುವಾಸನೆಯುಕ್ತ ಹೂವುಗಳನ್ನು ಚರ್ಮದ ರೋಗಗಳು, ಗಾಯಗಳು ಮತ್ತು ಹುಣ್ಣುಗಳಂಥ ವಿವಿಧ ರೋಗಗಳಿಗೆ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ವಾಕರಿಕೆ, ಜ್ವರ, ತಲೆತಿರುಗುವಿಕೆ, ಕೆಮ್ಮು ಮೊದಲಾದ ಸಮಸ್ಯೆಗೆ ಚಿಕಿತ್ಸೆ ನೀಡಲು ಚಂಪಾ ಹೂವಿನ ಕಷಾಯ ಬಳಸಲಾಗುತ್ತದೆ. ಹೌದು ಸಂಪಿಗೆ ಹೂವಿನಲ್ಲಿ ಕೆಂಡ ಸಂಪಿಗೆ, ಚೈನಾ ಸಂಪಿಗೆ, ಗಂಧದ ಬಣ್ಣದ ಸಂಪಿಗೆ, ಕಾಡು ಸಂಪಿಗೆ, ನಾಗ ಸಂಪಿಗೆ, ನಾಗಲಿಂಗ ಸಂಪಿಗೆ ಹೀಗೆ ತರಹೇವಾರಿ ಕಾಣಬಹುದು. ಆದರೆ ಇವೆಲ್ಲ ಸುವಾಸಿತ ಹೂ ಪ್ರಕಾರಗಳ ಪೈಕಿ ಔಷಧೀಯ ಗುಣಗಳು ಹೆಚ್ಚಾಗಿರುವುದು ಕೆಂಡಸಂಪಿಗೆಯಲ್ಲಿಯೇ. ಈ ಸುವಾಸನೆಯುಕ್ತ ಸಂಪಿಗೆ ಹೂವುಗಳನ್ನು ಚರ್ಮದ ರೋಗಗಳು, ಗಾಯಗಳು ಮತ್ತು ಹುಣ್ಣುಗಳಂಥ ವಿವಿಧ ರೋಗಗಳ ಚಿಕಿತ್ಸೆಗೆ ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ. ವಾಕರಿಕೆ, ಜ್ವರ, ತಲೆತಿರುಗುವಿಕೆ, ಕೆಮ್ಮು ಮೊದಲಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಚಂಪಾ ಹೂವಿನ ಕಷಾಯ ಬಳಸಲಾಗುತ್ತದೆ. * ಕಣ್ಣಿನ ಆರೈಕೆಗೆ ಸುಲಭದ ಮನೆಮದ್ದು: ಕೆಂಡ ಸಂಪಿಗೆ ಹೂವಿನ ಎರಡು ಎಲೆಯನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ದಿನವೂ ಕಣ್ಣು ತೊಳೆಯುವುದರಿಂದ ಕಣ್ಣಿನ ಅನೇಕ ಕಾಯಿಲೆಗಳು…
ಸಿಂಪಲ್ಲಾಗಿ ತೂಕ ಇಳಿಸಿಕೊಳ್ತೀನಿ ಎಂದು ನಿರ್ಧಾರ ಮಾಡಿದವರಿಗೆ ಎಳನಿರೇ ಬೆಸ್ಟ್. ಹೇಗೆ ಅಂತೀರಾ ಈ ಸ್ಟೋರಿ ನೋಡಿ. ಏಳನೀರನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು. ಹಾಗಿದ್ದರೆ ಅದರಲ್ಲಿ ಯಾವ್ಯಾವ ಪೌಷ್ಟಿಕಾಂಶಗಳಿವೆ? ತೂಕ ನಷ್ಟಕ್ಕೆ ಅದು ಹೇಗೆ ಸಹಕಾರಿ ಹಾಗೂ ಅದನ್ನು ಹೇಗೆ ಸೇವಿಸಿದರೆ ಉತ್ತಮ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ ಎಳನೀರು ಕಡಿಮೆ ಕ್ಯಾಲೋರಿಗಳು ಮತ್ತು ಕೊಬ್ಬನ್ನು ಹೊಂದಿರುತ್ತದೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೋಡಿಯಂನಂತಹ ಎಲೆಕ್ಟ್ರೋಲೈಟ್‌ಗಳಿಂದ ತುಂಬಿರುವ ಎಳನೀರು ಜಲಸಂಚಯನ ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನು, ಎಳನೀರು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಇದು ನೈಸರ್ಗಿಕವಾಗಿ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಇದು ಪ್ರತಿ ಕಪ್‌ಗೆ ಕೇವಲ 46 ಕ್ಯಾಲೊರಿಗಳನ್ನು ಹೊಂದಿರುತ್ತದೆ. ನಾವು ಆರೋಗ್ಯಕರವಾಗಿರಲು ದೇಹವನ್ನು ಹೈಡ್ರೀಕರಿಸುವುದು ಮುಖ್ಯ. ಹಾಗೆಯೇ ಎಳನೀರು ಕಳೆದುಹೋದ ದ್ರವಗಳನ್ನು ಮರುಪೂರಣಗೊಳಿಸಲು ಮತ್ತು ಜಲಸಂಚಯನ ಮಟ್ಟವನ್ನು…
ಲಕ್ನೋ: ಶಂಖ್ ಏರ್ ಎಂಬ ಹೊಸ ವಿಮಾನಯಾನ ಸಂಸ್ಥೆ ಗಗನಕ್ಕೇರಲು ಸಿದ್ಧವಾಗಿದ್ದು, ಇದು ಉತ್ತರ ಪ್ರದೇಶದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ. ಶಂಖ್ ಏರ್ ವಿಮಾನಯಾನ ಸಂಸ್ಥೆಯು ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮೋದನೆ ಪಡೆದುಕೊಂಡಿದ್ದು, ಭಾರತದ ವಾಯುಯಾನ ಕ್ಷೇತ್ರದಲ್ಲಿ ಹೊಸ ಪ್ರವೇಶಕ್ಕಾಗಿ ಸಜ್ಜಾಗಿದೆ. ಈ ಮೂಲಕ ಚೊಚ್ಚಲ ಹೆಜ್ಜೆಯನ್ನು ಇಡಲು ಶಂಖ್ ವಿಮಾನಯಾನ ಸಂಸ್ಥೆ ಸಿದ್ಧವಾಗಿದೆ. ಇದು ಉತ್ತರಪ್ರದೇಶದ ಲಕ್ನೋ ಮತ್ತು ನೋಯ್ಡಾದಲ್ಲಿ ಕೇಂದ್ರಗಳನ್ನು ಹೊಂದಿದೆ. ಶಂಖ್ ಏರ್ ಇದು ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಜೊತೆಗೆ ಅಂತರರಾಜ್ಯಗಳಿಗೂ ಸೇವೆ ಸಲ್ಲಿಸಲು ಸಿದ್ಧವಾಗಿದೆ. ಇದು ಪ್ರಮುಖ ನಗರಗಳನ್ನು ಸಂಪರ್ಕಿಸುವುದು, ಕಡಿಮೆ ಪ್ರದೇಶಗಳಲ್ಲಿ ವಾಯು ಸಂಪರ್ಕವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆಈ ವಿಮಾಂನಯಾನ ಸಂಸ್ಥೆಯು ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ 63 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ ಮತ್ತು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಶಂಖ್ ಏರ್ ಹೊಚ್ಚ ಹೊಸ ಬೋಯಿಂಗ್ 737-800…