ನೆಲಮಂಗಲ: ಭೀಕರ ಅಪಘಾತದಲ್ಲಿ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಜರುಗಿದೆ.ರಸ್ತೆಯಲ್ಲಿ ನರಲಾಡಿ ವೃದ್ಧ ವ್ಯಕ್ತಿ ಪ್ರಾಣಬಿಟ್ಟಿದ್ದಾರೆ.ಪಾದಚಾರಿ ವೃದ್ಧನ ಮೇಲೆ ಕಂಟೇನರ್ ಲಾರಿ ಹರಿದಿದೆ. ಕಂಟೇನರ್ ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ನರಲಾಡಿ ವೃದ್ಧ ಸಾವನ್ನಪ್ಪಿದ್ದಾರೆ. ತುಮಕೂರು ಕಡೆಯಿಂದ ದೊಡ್ಡಬಳ್ಳಾಪುರ ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಲಾರಿ ಹಾಗೂ ಚಾಲಕ ಡಾಬಸ್ ಪೇಟೆ ಪೋಲಿಸರ ವಶಕ್ಕೆ ಪಡೆದಿದ್ದಾರೆ.ಅಪಘಾತದಿಂದ ಸ್ಥಳದಲ್ಲಿ ಸಂಚಾರ ಅಸ್ತವ್ಯಸ್ತತೆ ಡಾಬಸ್ ಪೇಟೆ ಪೊಲೀಸರು ಹರಸಾಹಸಪಟ್ಟಿದ್ದಾರೆ. ಕೆಂಪರಂಗಯ್ಯ 75 ಆಗಳಕುಪ್ಪೆ ನಿವಾಸಿ ಮೃತ ಎನ್ನಲಾಗಿದೆ.
Author: Prajatv Kannada
ಚಿತ್ರದುರ್ಗ:- ಚಿತ್ರದುರ್ಗ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಖಾಸಗಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ. ಇಂದು ನಗರದಲ್ಲಿ ಗಾರ್ಮೆಂಟ್ಸ್ಗಳ ಮೇಲೆ ದಾಳಿ ಮಾಡಿದರು. ಈ ವೇಳೆ ಒಟ್ಟು 15 ಮಂದಿ ಶಂಕಿತ ಬಾಂಗ್ಲಾ ನುಸುಳುಕೋರರು ಪೊಲೀಸರು ವಶಕ್ಕೆ ಪಡೆದವರು. ಇವರಲ್ಲಿ ಶೇಕ್ ಶೈಪುರ್ ರೆಹಮಾನ್, ಸುಮನ್ ಹುಸೇನ್ ಎಂಬವರು ಬಾಂಗ್ಲಾದೇಶದಿಂದ ಅಕ್ರಮವಾಗಿ ದೇಶದೊಳಗೆ ನುಸಳಿರುವುದು ಪಕ್ಕಾ ಆಗಿದೆ. ವಶಕ್ಕೆ ಪಡೆದವರನ್ನು ಪೊಲೀಸರು ಚಿತ್ರದುರ್ಗದ ಕೋಟೆ, ಗ್ರಾಮಾಂತರ ಠಾಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಬಂಡಾರು ನೇತೃತ್ವದಲ್ಲಿ ವಿಚಾರಣೆ ಮಾಡಲಾಗುತ್ತಿದೆ.
ಗದಗ:- ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ಗದಗ ತಾಲೂಕಿನ ಹುಲಕೋಟಿ ಬಳಿ ಸರ್ವೀಸ್ ರಸ್ತೆಯಲ್ಲಿ ಜರುಗಿದೆ.ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವಳಿಗೆ ಗಾಯವಾಗಿದೆ. ಸಮೀರ್ ಗುಡಿಸಲುಮನಿ (21), ಉಳವೇಶ್ (15) ಮೃತ ದುರ್ದೈವಿಗಳು. ನೇತ್ರಾವತಿ ಹಿಂಬದಿಯ ಸವಾರಳಿಗೆ ಗಂಭೀರ ಗಾಯವಾಗಿದ್ದು, ಮೃತ ಉಳವೇಶ್ ಹೊಸಹಳ್ಳಿ ಗ್ರಾಮದ ನಿವಾಸಿ ಎನ್ನಲಾಗಿದೆ. ಮತ್ತೋರ್ವ ಮೃತ ವ್ಯಕ್ತಿ ಸಮೀರ್ ಹುಲಕೋಟಿ ನಿವಾಸಿ ಎನ್ನಲಾಗಿದೆ. ಗಾಯಾಳು ನೇತ್ರಾವತಿ ಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ:- ನಕ್ಸಲ್ ನಿಗ್ರಹ ಪಡೆ ಎನ್ಕೌಂಟರ್ಗೆ ನಕ್ಸಲ್ ನಾಯಕ ವಿಕ್ರಂ ಗೌಡ ಬಲಿ ಆಗಿದ್ದಾರೆ.ಜಿಲ್ಲೆಯಲ್ಲಿ ಗುಂಡಿನ ಮೊರೆತ ಕೇಳಿದೆ. ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ದಾನೆ. ನಕ್ಸಲ್ ನಾಯಕ ವಿಕ್ರಂ ಗೌಡ ಕಬ್ಬಿನಾಲೆ ಮೂಲದವನಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ಹೀಗಾಗಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಆರಂಭಿಸಿತ್ತು. ಕಬ್ಬಿನಾಲೆ ಅರಣ್ಯದಲ್ಲಿ ನಡೆದ ಎನ್ಕೌಂಟರ್ನೊಂದಿಗೆ ಉಡುಪಿ ಭಾಗದಲ್ಲಿ 13 ವರ್ಷಗಳ ನಂತರ ಗುಂಡಿನ ಮೊರತೆ ಕೇಳಿದಂತಾಗಿದೆ. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಅಷ್ಟರಲ್ಲಿ ನಕ್ಸಲರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ವಿಕ್ರಂ ಗೌಡ ಹತನಾದರೆ, ಉಳಿದ ನಕ್ಸಲರು ಪರಾರಿಯಾಗಿದ್ದಾರೆ. ನಕ್ಸಲರ ನೇತ್ರಾವತಿ ದಳದ ನಾಯಕ…
ಬಾಲಿವುಡ್ ನ ಖ್ಯಾತ ನಟ ಹಾಸ್ಯನಟ ಕೃಷ್ಣ ಅಭಿಷೇಕ್ ಅವರ ಪತ್ನಿ ನಟಿ ಕಾಶ್ಮೇರಾ ಶಾ ಅವರು ಅಮೆರಿಕದಲ್ಲಿದ್ದಾಗ ಅಪಘಾತಕ್ಕೀಡಾಗಿದ್ದಾರೆ. ಕಾರ್ ಸೀಟ್‌ನಲ್ಲಿ ರಕ್ತಸಿಕ್ತವಾದ ಫೋಟೋಗಳನ್ನು ಹಂಚಿಕೊಂಡಿರುವ ಕಾಶ್ಮೇರಾ ತಾನು ಬದುಕಿದ್ದು ದೊಡ್ಡ ಪವಾಡ ಎಂದಿದ್ದಾರೆ. ಅಲ್ಲದೆ ಅಪಘಾತದ ವೇಳೆ ಒಂಟಿಯಾಗಿದ್ದ ಕಾಶ್ಮೇರಾ ತನ್ನನ್ನು ಕಾಪಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪಘಾತದ ಬಗ್ಗೆ ಬರೆದುಕೊಂಡಿರುವ ಕಾಶ್ಮೇರಾ ಶಾ, ʼʼನನ್ನನ್ನು ಉಳಿಸಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು. ತುಂಬಾ ಕೆಟ್ಟ ಅಪಘಾತವಾಗಿತ್ತು. ಅದನ್ನು ನೆನಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಏನೋ ಕೆಟ್ಟದ್ದು ಸಂಭವಿಸಬಹುದಿತ್ತು. ಆದರೆ ಅಪಘಾತ ಅಷ್ಟೇ ಆಗಿದೆ. ಸಣ್ಣಪುಟ್ಟ ಗಾಯಗಳಾಗಿವೆʼʼ ಎಂದು ಹೇಳಿದ್ದಾರೆ. ʼʼಇಂತಹ ಸಂದರ್ಭದಲ್ಲಿ ನಾನು ನನ್ನ ಕುಟುಂಬವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆʼʼ ಎಂದು ಅವರು ಬರೆದುಕೊಂಡಿದ್ದಾರೆ. ಅವರ ಈ ಇನ್ಸ್‌ಸ್ಟಾಗ್ರಾಂ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಅವರ ಪತಿ ಕೃಷ್ಣ ಅವರು, ʼʼಕಾಶ್ಮೇರಾ ಈಗ ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆಯಿಲ್ಲʼʼ ಎಂದು ಹೇಳಿದ್ದಾರೆ. ಬಾಲಿವುಡ್ ಜನಪ್ರಿಯ ನಟ ಗೋವಿಂದ ಅವರು ಕೃಷ್ಣ ಅಭಿಷೇಕ್ ಅವರ…
ಲೇಡಿ ಸೂಪರ್ ಸ್ಟಾರ್ ನಯನತಾರಾ ಕತ್ತಿ ಹಿಡಿದು ಅಖಾಡಕ್ಕೆ ಇಳಿದಿದ್ದಾರೆ. ಹೌದು. ನಟಿ ನಯನತಾರಾ ಹುಟ್ಟುಹಬ್ಬದ ಪ್ರಯುಕ್ತ ‘ರಕ್ಕಯಿ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ನಟಿಯ ಲುಕ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ನಯನತಾರಾ ಹುಟ್ಟುಹಬ್ಬದ ಪ್ರಯುಕ್ತ ‘ರಕ್ಕಯಿ’ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿದೆ. ಅಳುವ ಮಗುವನ್ನು ಸಂತೈಸುವ ತಾಯಿಯಾಗಿ, ದುಷ್ಟರಿಗೆ ಸೆದೆಬಡೆಯುವ ಗಟ್ಟಿಗಿತ್ತಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಅಳುವ ಮಗುವನ್ನು ಸಂತೈಸುವ ತಾಯಿಯಾಗಿ, ದುಷ್ಟರ ಮುಂದೆ ನಟಿ ಉಗ್ರಾವತಾರ ತಾಳಿದ್ದಾರೆ. ಕತ್ತಿಯನ್ನು ಹಿಡಿದು ತನ್ನ ಮಗುವಿನ ತಂಟೆಗೆ ಬರುವ ದುಷ್ಟರ ಗುಂಪನ್ನು ಸಂಹಾರ ಮಾಡುವ ರೌದ್ರವತಾರಾ ತಾಳಿದ್ದಾರೆ ನಟಿ. ‘ರಕ್ಕಯಿ’ ತಾಯಿ ಸೆಂಟಿಮೆಂಟ್ ಇರುವ ಮಾಸ್ ಸಿನಿಮಾ ಆಗಿದೆ. ಸೆಂಥಿಲ್ ನಲ್ಲಸಾಮಿ ನಿರ್ದೇಶನದ ʼರಕ್ಕಯಿʼ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ತಮಿಳು ಜತೆಗೆ ಕನ್ನಡ, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಹಾಗೆ ನೋಡಿದರೆ ನಯನತಾರಾ ಆ್ಯಕ್ಷನ್ ದೃಶ್ಯಗಳಲ್ಲಿ…
ಬಿಪಿಎಲ್ ಕಾರ್ಡ್ ಯಾರಿಗೆ ಸಿಗಬೇಕೊ ಅವರಿಗೆ ಸಿಕ್ಕಿಲ್ಲ, ಅರ್ಹತೆ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿದೆ. ಹೀಗಾಗಿ ಮೊದಲು ಬಿಪಿಎಲ್ ಕಾರ್ಡ್‌ಗಳನ್ನು ಸರ್ಕಾರ ಪರಿಷ್ಕರಣೆ ಮಾಡಬೇಕು ಎಂದು ನಟ ಚೇತನ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಬೀದರ್ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಚೇತನ್, ಒಂದು ತಿಂಗಳ ಹಿಂದೆ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತಾರೆ ಎಂದಿದ್ದರು. ಆದರೆ ಇನ್ನೂ ಮಾಡಿಲ್ಲ. ಪರಿಷ್ಕರಣೆ ಮಾಡಿದರೆ ರೇಷನ್ ಕಾರ್ಡ್ ವಿಚಾರದಲ್ಲಿ ಏನಾಗಿದೆ ಎಂದು ಗೊತ್ತಾಗುತ್ತದೆ. ಆದರೆ ನಮಗೆ ಸಮಸ್ಯೆಯಾಗುತ್ತಿರುವುದು ಸರ್ಕಾರದ ನಿರಾಸಕ್ತಿ, ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಮನಸ್ಥಿತಿ ಸರ್ಕಾರದಲ್ಲಿ ಇಲ್ಲ ಎಂದು ಕಿಡಿಕಾರಿದ್ದಾರೆ. ಇದು ಬಿಟ್ಟು ಬರೀ ವೈಯಕ್ತಿಕ ಟೀಕೆ ಮಾಡುವುದೆ ಆಗಿದೆ. ವೈಯಕ್ತಿಕ ಪ್ರತಿಷ್ಠೆಗಾಗಿ ರಾಜಕೀಯ ಮಾಡಿದರೆ ಉತ್ತಮ ಕೆಲಸಗಳು ಆಗಲ್ಲ. ಉಳ್ಳವರ ಬಳಿ ಬಿಪಿಎಲ್ ಕಾರ್ಡ್‌ಗಳು ಇದ್ದರೆ, ಅದನ್ನು ಕಿತ್ತುಕೊಂಡು ಬಂದು ಇಲ್ಲದವರಿಗೆ ಸರ್ಕಾರ ನೀಡಬೇಕು. ಪರಿಷ್ಕರಣೆ ಜೊತೆಗೆ ರೇಷನ್ ಕಾರ್ಡ್‌ಗಳ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಜೈಲಿನಲ್ಲಿದ್ದರೂ ಜಾಗತಿಕ ಮಟ್ಟದಲ್ಲಿ ಕ್ರಿಮಿನಲ್ ಚಟುವಟಿಕೆ ನಡೆಸುತ್ತಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್‌ನನ್ನು ಅಮೆರಿಕದಲ್ಲಿ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. 2022 ರಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ, ಕಳೆದ ತಿಂಗಳು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆ ಸೇರಿದಂತೆ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ಅನ್ಮೋಲ್ ಆರೋಪಿಯಾಗಿದ್ದಾನೆ. ಈತನನ್ನು ಸೋಮವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗವು ಅನ್ಮೋಲ್ ನನ್ನು ಅಮೆರಿಕದಿಂದ ಮರಳಿ ಭಾರತಕ್ಕೆ ಕರೆತರಲು ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಆತನ ಬಂಧನಕ್ಕೆ ಮಹಾರಾಷ್ಟ್ರದ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಸಹ ಜಾರಿ ಮಾಡಿದೆ. ಜಾಗತಿಕ ಕಾನೂನು ಜಾರಿ ಸಂಸ್ಥೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಸಹ ಜಾರಿ ಮಾಡಿದೆ. ಪಂಜಾಬ್‌ನ ಫಾಜಿಲ್ಕಾ ಮೂಲದ ಅನ್ಮೋಲ್…
ಇತ್ತೀಚೆಗೆ ಲಂಡನ್‌ನಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನಾರ್ಥಾಂಪ್ಟನ್‌ಶೈರ್ ಪೊಲೀಸರು ಮಹಿಳೆಯ ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನವೆಂಬರ್ 14 ರಂದು ಕೊಲೆಯಾದ ಮಹಿಳೆಯನ್ನು 24 ವರ್ಷದ ಹರ್ಷಿತಾ ಬ್ರೆಲ್ಲಾ ಎಂದು ಗುರುತಿಸಲಾಗಿದೆ ಎಂದು ನಾರ್ಥಾಂಪ್ಟನ್‌ಶೈರ್ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ ಪೂರ್ವ ಲಂಡನ್‌ನಲ್ಲಿ ಬಿಟ್ಟು ಹೋಗಿದ್ದ ಕಾರಿನ ಬೂಟಿನಲ್ಲಿ ಹರ್ಷಿತಾ ಬ್ರೆಲ್ಲಾ ಅವರ ಮೃತದೇಹ ಪತ್ತೆಯಾಗಿದ್ದು, ಅವರ ಪತಿ ಪಂಕಜ್ ಲಂಬಾ ಅವರೇ ಪತ್ನಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪಂಕಜ್ ಲಂಬಾ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆಯೂ ಮಹಿಳೆ ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾಗಿದ್ದು, ಸೆಪ್ಟೆಂಬರ್ ಆರಂಭದಲ್ಲಿ ನಾರ್ಥಾಂಪ್ಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಕೌಟುಂಬಿಕ ಹಿಂಸಾಚಾರದಿಂದ ರಕ್ಷಣೆ ಆದೇಶ ತಂದಿದ್ದರು ಎಂದು ವರದಿಯಾಗಿದೆ. ಪೊಲೀಸರು ಹರ್ಷಿತಾ ಎಂಬ ಹೆಸರಿಸಿರುವ ಮಹಿಳೆಯ ಶವ ಪೂರ್ವ ಲಂಡನ್‌ನಲ್ಲಿ ಕಾರಿನಲ್ಲಿ ಪತ್ತೆಯಾದ ನಂತರ ಕೊಲೆ ತನಿಖೆ ಪ್ರಾರಂಭಿಸಿದ್ದು,…
ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿನಟನೆಯ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದೆ. ರಿಷಬ್ ಶೆಟ್ಟಿ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದು ನಿರೀಕ್ಷೆಗೂ ಮೀರಿ ಚಿತ್ರದ ಟೀಸರ್ ರಿಲೀಸ್ ಆಗಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನಿಂದ ಅಭಿಮಾನಿಗಳು ಸಿನಿಮಾಗಾಗಿ ಮತ್ತಷ್ಟು ಕುತೂಹಲದಿಂದ ಕಾಯುವಂತಾಗಿದೆ. ಕಾಂತಾರ ಚಾಪ್ಟರ್ 1 ಸಿನಿಮಾ ಟೀಸರ್ ಆರಂಭದಲ್ಲಿ ಕಾಂತಾರ ಸಿನಿಮಾದ ದೃಶ್ಯವಿದೆ. ಬೆಳಕಲ್ಲಿ ಕಣ್ಣ ಮುಂದೆ ಇರೋದೆಲ್ಲಾ ಕಾಣುತ್ತೆ ಆದ್ರೆ, ಇದು ಬೆಳಕಲ್ಲ ದರ್ಶನ. ಇದು ಹಿಂದೆ ನಡೆದಿದ್ದು, ಮುಂದೆ ನಡೆಯೋದನ್ನು ತೋರಿಸುವ ಬೆಳಕು, ಕಣ್ತದಾ.. ಎಂಬ ಅಶರೀರವಾಣಿ ಕೇಳಿ ಬರುತ್ತೆ. ಬಳಿಕ ಕಾಂತಾರ ಚಾಪ್ಟರ್ ಒನ್ ದೃಶ್ಯ ಬರಲಿದೆ. ಬೆಂಕಿಯಲ್ಲಿ ಬರೆದ ವೃತ್ತಾಕಾರದ ಕೆಳಗೆ ದೊಡ್ಡ ಗುಹೆ ಭಾಸವಾಗುತ್ತೆ. ಆ ಗುಹೆಯಲ್ಲಿ ರಕ್ತಸಿಕ್ತಕೊಂಡ ವ್ಯಕ್ತಿ ಇರುತ್ತಾನೆ. ಆತನೇ ನಟ ರಿಷಬ್ ಶೆಟ್ಟಿ, ಮೈತುಂಬಾ ರಕ್ತವಿರುತ್ತೆ. ಕೈಯನ್ನು ಬಿಗಿ ಮಾಡುವ, ಉಸಿರೆಳೆಯುವ ಸೀನ್ ಕೂಡ ಅದ್ಬುತ ಎನಿಸಿತ್ತು. ರುದ್ರಾಕ್ಷಿ…