Author: Prajatv Kannada

ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಹೈಕಮಾಂಡ್ ಅವರ ಪರ ಇದ್ದರೂ ಈ ಸ್ಥಾನದಲ್ಲಿ ಮುಂದುವರಿಯಲು ಬರಲ್ಲ‌. ರಾಜೀನಾಮೆ ಕೊಡದಿದ್ದರೆ ರಾಜ್ಯದಲ್ಲಿ ಮಾತ್ರವಲ್ಲ. ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡ್ತೀವಿ ಅಂತ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಗುಡುಗಿದರು https://youtu.be/eImE8CRHLFA?si=Z2Vz5NcZzH54r3A3 ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ  ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ದೇಶದ ಕಾನೂನು ಎಷ್ಟು ಗಟ್ಟಿಯಾಗಿದೆ ಅನೋದು ಕೋರ್ಟ್‌ ಇಂದಿನ ಆದೇಶದಿಂದ ಖಾತ್ರಿಯಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನೋದು ಸಹ ಇದರಿಂದ ಜನ ಅರ್ಥಮಾಡಿಕೊಂಡಿದ್ದಾರೆ. ಈ ದೇಶದ ಕಾನೂನನ್ನು ಧಿಕ್ಕರಿಸಿ ಮಾಡುವ ಯಾವುದೇ ಪ್ರಯತ್ನಗಳು ಸಹ ಸಾಂದರ್ಭಿಕವಾಗಿ ತತಕ್ಷಣಕ್ಕೆ ಅವರಿಗೆ ಒಳ್ಳೆಯದಾಗಬಹುದು. ಆದ್ರೆ ದೀರ್ಘಕಾಲವಾಗಿ ಇರಲ್ಲ. ಕಾನೂನನ್ನು ಮುರಿಯುವವರಿಗೆ, ವಿರೋಧಿಸುವವರಿಗೆ ನ್ಯಾಯ ಸಿಗ್ಲಲ ಅನ್ನೋದನ್ನ ಹೈಕೋರ್ಟ್‌ ಆದೇಶ…

Read More

ಕೋಲಾರ : ಕೋಲಾರ ನಗರದ ಹೊರವಲಯದ ಟಮಕ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪತ್ತೆಯಾಗಿದ್ದ ಸೂಟ್​ಕೇಸ್‌ ಕೆಲ ಹೊತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಸೂಟ್​ಕೇಸ್​ನಿಂದ ಅಲಾರಾಂ ರೀತಿಯ ಶಬ್ದ ಬರುತ್ತಿದ್ದ ಹಿನ್ನೆಲೆಯಲ್ಲಿ ಬಾಂಬ್​ ಇರಬಹುದು ಎಂದು ಸ್ಥಳೀಯರು ಹೆದರಿ ಪೊಲೀಸರಿಗೆ ಮಾಹಿತಿಯನ್ನು‌ ನೀಡಿದರು. ಈ ವಿಚಾರ ತಿಳಿಯುತ್ತಿದ್ದಂತೆ ಗಲ್​ಪೇಟೆ ಠಾಣೆ ಪೊಲೀಸರು, ಎಸ್​ಪಿ ನಿಖಿಲ್​, ಹೆಚ್ಚುವರಿ ಎಸ್​ಪಿ ರವಿಶಂಕರ್ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಭೇಟಿ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದರು. ಬಳಿಕ, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದಾಗ, ಅದು ಕ್ರೌನ್​ ಕಂಪನಿಯ ಸೂಟ್​​ಕೇಸ್​​​ ಎಂದು ತಿಳಿಯಿತು. ಸೆನ್ಸಾರ್​ ಸೂಟ್​ಕೇಸ್ ಆಗಿದ್ದು, ಯಾರೋ ಲಾಕರ್​ ಪಾಸ್ವರ್ಡ್​ ಅನ್ನು ತಪ್ಪಾಗಿ ​ ಹಾಕಿದ್ದರಿಂದ ಶಬ್ದ ಬಂದಿದೆ ಎಂದು ಮಾಹಿತಿ ನೀಡಿದರು.

Read More

ಬೆಂಗಳೂರು:- ಬೆಂಗಳೂರು ಮಹಾಲಕ್ಷ್ಮೀ ಕೊಲೆ ಸಾವಿನ ಮನೆಯಲ್ಲಿ ಹಲವರ ಬೆರಳಚ್ಚು ಗುರುತು ಪತ್ತೆ ಆಗಿದ್ದು ಹೊರ ರಾಜ್ಯಗಳಲ್ಲೂ ಪೊಲೀಸರು ತಲಾಶ್ ನಡೆಸಿದ್ದಾರೆ. ಆರೋಪಿಯ ಪತ್ತೆಗೆ ಪೊಲೀಸರು ಹೊರ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿರುವಾಗಲೇ ಹಲವು ವಿಚಾರಗಳು ಬಹಿರಂಗಗೊಂಡಿವೆ. ಮಹಾಲಕ್ಷ್ಮೀಯನ್ನು 50 ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿ ಇಟ್ಟು, ಆರೋಪಿ ಪರಾರಿಯಾಗಿದ್ದಾನೆ. ಕೊಲೆಯಾದ ಮಹಾಲಕ್ಷ್ಮೀ ಮನೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಆರೋಪಿಯ ಗುರುತಿಗಾಗಿ ಶೋಧ ನಡೆಸಿದಾಗ ಹಲವರ ಬೆರಳಚ್ಚು ಗುರುತು ಪತ್ತೆಯಾಗಿವೆ. ಈ ಮೂಲಕ, ಮಹಾಲಕ್ಷ್ಮೀಯನ್ನು ಹಲವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಈ ನಡುವೆ ಮಹಾಲಕ್ಷ್ಮಿಯ ತಾಯಿ ಮೀನಾ ಕೊಟ್ಟಿರುವ ದೂರಿನಲ್ಲಿ ಹಲವು ಸಂಗತಿಗಳು ಬಯಲಾಗಿವೆ. ಮೀನಾ ಅವರಿಗೆ ನಾಲ್ವರು ಮಕ್ಕಳು. ಈ ಪೈಕಿ ಮೊದಲ ಮಗಳು ಲಕ್ಷ್ಮೀ. ಲಕ್ಷ್ಮೀ, ಸೈಯದ್ ಇಮ್ರಾನ್ ಎಂಬುವುರ ಜೊತೆ ಲವ್ ಮ್ಯಾರೇಜ್ ಆಗಿದ್ದು, ಶಾಹೀದಾ ಬುಷುರ ಅಂತ ಹೆಸರು ಬದಲಿಸಿಕೊಂಡಿದ್ದಾಳೆ. ಕೊಲೆಯಾದ ಈ ಮಹಾಲಕ್ಷ್ಮೀ ಎರಡನೇ ಮಗಳು. ಹೇಮಂತ್ ದಾಸ್ ಎಂಬುವುರ ಜೊತೆ…

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಗಣೇಶನ ಶಾಪ ತಟ್ಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಅರ್ಜಿಯನ್ನು ಹೈಕೋರ್ಟ್ ಎತ್ತಿಹಿಡಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಹಲವೆಡೆ ಗಣೇಶ ಮೆರವಣಿಗೆ ಮಾಡೋಕೆ ಅವಕಾಶ ಕೊಡಲಿಲ್ಲ. ಹಿಂದೂಗಳಿಗೆ ಕಿರುಕುಳ ಕೊಟ್ಟಿದ್ದಾರೆ. ಹಿಂದೂಗಳ ಶಾಪದಿಂದ ಸಿಎಂಗೆ ಈ ರೀತಿ ಆಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ಮೊದಲನೇ ಜಯವಾದರೆ, ಸಿಎಂ ವಿರುದ್ಧದ ತೀರ್ಪು ಎರಡನೇ ಜಯವಾಗಿದೆ. ಕಾಂಗ್ರೆಸ್‍ನವರು ರಾಜಭವನದ ಮೇಲೆ ಇಲ್ಲ ಸಲ್ಲದ ಅಪಾದನೆ ಮಾಡಿದ್ದರು. ಗವರ್ನರ್ ವಿರುದ್ಧ ಅವಹೇಳನಕಾರಿ ಮಾತಾಡಿದ್ದರು. ಈಗ ಕಾಂಗ್ರೆಸ್ ರಾಜ್ಯದ ಜನರ ಮುಂದೆ ಕ್ಷಮೆ ಕೇಳಬೇಕು. ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದ ಜನತೆಗೆ ಕಾಂಗ್ರೆಸ್ ಒಳ್ಳೆದು ಮಾಡುತ್ತೆ ಎಂಬ ನಂಬಿಕೆ ಇತ್ತು. ಈಗ ಆ ನಂಬಿಕೆ ಹೋಗಿದೆ. ಭ್ರಷ್ಟಾಚಾರದ ಕಾಂಗ್ರೆಸ್, ಭ್ರಷ್ಟಾಚಾರದ ಸರ್ಕಾರ ಎಂದು ಜನರಿಗೆ ಗೊತ್ತಾಗಿದೆ. ನಾವು ರಾಜೀನಾಮೆ ಕೇಳೊದು…

Read More

ಬೆಂಗಳೂರು: ಪ್ರಸಿದ್ಧ ತಿರುಪತಿ ತಿರುಮಲ ಲಡ್ಡು ಪ್ರಸಾದ ಕಲಬೆರಕೆ ಬೆನ್ನಲ್ಲೆ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೀಗ ತಿಮ್ಮಪ್ಪನ ಸನ್ನಿಧಿಗೆ ಎರಡು ಟ್ರಕ್‌ಗಳಲ್ಲಿ ಕೆಎಂಎಫ್ (KMF- Karnataka Milk Federation) ಶುದ್ಧ ನಂದಿನಿ ತುಪ್ಪ ಆಗಮಿಸಿದೆ. ತಿರುಪತಿ (Tirupati) ತಿರುಮಲ ಲಡ್ಡು ಪ್ರಸಾದ ಕಲಬೆರಕೆ ಬೆನ್ನಲ್ಲೆ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದ್ದು, ಎರಡು ಟ್ರಕ್‌ಗಳಲ್ಲಿ ತಿರುಪತಿಗೆ ಕೆಎಂಎಫ್ ತುಪ್ಪ ಬಂದಿದೆ. ಒಂದು ಟ್ರಕ್ ಯಲಹಂಕ ಮದರ್ ಡೈರಿಯಿಂದ (Yalahanka Mother Dairy) ಹಾಗೂ ಚನ್ನರಾಯಪಟ್ಟಣದಿಂದ (Channarayapattana) ಮತ್ತೊಂದು ಟ್ರಕ್‌ನಲ್ಲಿ ತುಪ್ಪ ಸರಬರಾಜಾಗಿದೆ. ಸುಮಾರು 26 ಟನ್ ತುಪ್ಪ 2 ಟ್ರಕ್‌ಗಳಲ್ಲಿ ಆಗಮಿಸಿದ್ದು, ಲಡ್ಡು ವಿವಾದದ ಮಧ್ಯೆ ಕೆಎಂಎಫ್ ನಂದಿನಿ ತುಪ್ಪ ಸರಬರಾಜಾಗಿದೆ. ಸದ್ಯ ತಿರುಪತಿಗೆ ಆಗಮಿಸಿರುವ ಟ್ರಕ್‌ಗಳು ಮಂಗಳವಾರ ರಾತ್ರಿ ತಿರುಮಲಕ್ಕೆ ತಲುಪಲಿವೆ. ಇದರ ಬೆನ್ನಲ್ಲೇ ಮತ್ತಷ್ಟು ನಂದಿನಿ ತುಪ್ಪ ಪೂರೈಸುವಂತೆ ಕೆಎಂಎಫ್‌ಗೆ ಟಿಟಿಡಿ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ತಿರುಪತಿ ಲಡ್ಡು ವಿವಾದದ ಬಳಿಕ ಕೆಎಂಎಫ್ ನಂದಿನಿ ತುಪ್ಪದ ಸುರಕ್ಷತಾ…

Read More

ಬೆಂಗಳೂರು:- ಪೀಣ್ಯ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಪಿಜಿ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.25 ವರ್ಷದ ಪುಲ್ಕಿತ್ ಬಂಧಿತ ಆರೋಪಿ. ಈತ ಪೀಣ್ಯಾದ ಹೆಚ್‌ಎಂಟಿ ಲೇಔಟ್‌ನ ಪಿಜಿಯೊಂದರ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದ್ದ. ಸೆ.19ರಂದು ಬೈಕ್‌ನಿಂದಲೇ ಪೆಟ್ರೋಲ್ ತೆಗೆದು ಅದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಇಷ್ಟು ಮಾತ್ರವಲ್ಲದೇ ಬೈಕ್‌ಗೆ ಹೊತ್ತಿಕೊಂಡ ಬೆಂಕಿಯಿಂದಲೇ ಸಿಗರೇಟ್‌ಗೆ ಬೆಂಕಿ ಹಚ್ಚಿ ಧಮ್ ಹೊಡೆದು ಎಸ್ಕೇಪ್ ಆಗಿದ್ದ. ಬುಲೆಟ್ ಬೈಕ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಮೂರು ಬೈಕ್‌ಗಳು ಬೆಂಕಿಗೆ ಆಹುತಿಯಾಗಿತ್ತು. ಬೈಕ್ ಬೆಂಕಿಗಾಹುತಿಯಾದ ಬಳಿಕ ಬುಲೆಟ್ ಬೈಕ್ ಸವಾರ ದೀಪಾಂಶು ಎಂಬವರು ಈ ಬಗ್ಗೆ ಪೀಣ್ಯಾ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದ್ದ ಪುಲ್ಕಿತ್‌ನನ್ನು ಪೀಣ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಲವು ದಿನಗಳಿಂದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಖರೀದಿಸುವ ಆಸೆಯನ್ನು ಪುಲ್ಕಿತ್ ಹೊಂದಿದ್ದ. ಬುಲೆಟ್ ಖರೀದಿಗೆ ಹಣ ಹೊಂದಿಸಲಿಕ್ಕೆ ಆಗದಿದ್ದಾಗ…

Read More

ಶ್ರೀನಗರ: ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಚುನಾವಣೆಯಲ್ಲಿ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. 6 ಜಿಲ್ಲೆಗಳ 26 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ ಪೀರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಶ್ರೀನಗರ, ಬುದ್ಗಾಮ್, ರಾಜೌರಿ, ಪೂಂಚ್, ಗಂದರ್ಬಾಲ್ ಮತ್ತು ರಿಯಾಸಿ ಸೇರಿದಂತೆ ಒಟ್ಟು 26 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 25.78 ಲಕ್ಷ ಮತದಾರರು, 239 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಒಟ್ಟು 3,502 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಇವುಗಳಲ್ಲಿ 1,056 ಮತಗಟ್ಟೆಗಳು ನಗರ ಪ್ರದೇಶದಲ್ಲಿ ಮತ್ತು 2,446 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಪಾರದರ್ಶಕ ಚುನಾವಣೆಗಾಗಿ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬಿಜೆಪಿ (BJP) ಜಮ್ಮು ಮತ್ತು ಕಾಶ್ಮೀರ ಮುಖ್ಯಸ್ಥ ರವೀಂದರ್ ರೈನಾ, ಪ್ರದೇಶ ಕಾಂಗ್ರೆಸ್ (Congress) ಸಮಿತಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ, ಸೇರಿದಂತೆ ಪ್ರಮುಖ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಮೊದಲ ಹಂತ…

Read More

ರೇಣುಕಾಸ್ವಾಮಿ ಪ್ರಕರಣದ ಮೂವರು ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದೆ. ಪ್ರಕರಣದ ಎ15 ಆರೋಪಿ ಕಾರ್ತಿಕ್, ಎ16 ಕೇಶವಮೂರ್ತಿ ಹಾಗೂ ಎ17 ನಿಖಿಲ್ ನಾಳೆ ತುಮಕೂರು ಕಾರಾಗೃಹದಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಕೇಸ್​ನಲ್ಲಿ ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್ ಈ ಮೂವರಿಗೂ ಹೈಕೋರ್ಟ್​ ಜಾಮೀನು ನೀಡಿತ್ತು. ಆರೋಪಿಗಳಿಗೆ ಸೆಪ್ಟೆಂಬರ್ 23 ರಂದು ಜಾಮೀನು ನೀಡಿದ್ದರು ಜೈಲಿನಿಂದ ಇನ್ನು ಬಿಡುಗಡೆ ಆಗಿರಲಿಲ್ಲ. ಇದಕ್ಕೆ ಕಾರಣ ನ್ಯಾಯಾಲಯದ ಆದೇಶ ಪ್ರತಿಯು ತುಮಕೂರು ಕಾರಾಗೃಹದ ಜೈಲು ಅಧಿಕಾರಿಗಳನ್ನ ತಲುಪಿರಲಿಲ್ಲ. ಹೀಗಾಗಿ ಮೂವರು ಇನ್ನು ಜೈಲಿನಲ್ಲೇ ಉಳಿದುಕೊಂಡಿದ್ದಾರೆ. ಮೂವರು ಆರೋಪಿಗಳು ಇಂದು ಜೈಲಿನಿಂದ ಬಿಡುಗಡೆ ಆಗುವುದು ಬಹುತೇಕ ಅನುಮಾನವಾಗಿದೆ. ಹೀಗಾಗಿ ಎಲ್ಲ ಪ್ರಕ್ರಿಯೆ ಮುಗಿಸಿ ಬಿಡುಗಡೆ ಆಗಬೇಕಿದೆ. ಸದ್ಯ 17 ಆರೋಪಿಗಳ ಪೈಕಿ ಮೂವರಿಗೆ ಮಾತ್ರ ಜಾಮೀನು ನೀಡಲಾಗಿದೆ. ಎ16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್​​ನಿಂದ ಬೇಲ್ ಸಿಕ್ಕರೇ, ಎ15 ಆರೋಪಿ ಕಾರ್ತಿಕ್ ಹಾಗೂ ಎ17 ಆರೋಪಿ ನಿಖಿಲ್​ಗೆ 57ನೇ ಸಿಸಿಹೆಚ್ ನ್ಯಾಯಾಲಯ ಜಾಮೀನು ಮಂಜೂರು…

Read More

ತೆಲುಗು ಯೂಟ್ಯೂಬ್ರ್ ಹರ್ಷ ಸಾಯಿ ವಿರುದ್ಧ ಯುವತಿಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದಾರೆ. ಹರ್ಷ ಸಾಯಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾರೆ. ಜೊತೆಗೆ ನನ್ನ ನಗ್ನ ಫೋಟೋ ಕ್ಲಿಕ್ಕಿಸಿ, ಬ್ಲ್ಯಾಕ್​ಮೇಲ್ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮುಂಬೈ ಮೂಲದ ಯುವತಿ ನಟಿಯಾಗಿದ್ದು ಕೆಲ ವರ್ಷಗಳ ಹಿಂದೆ ಹೈದರಾಬಾದ್​ಗೆ ಸಿನಿಮಾ ಅವಕಾಶಕ್ಕೆ ಬಂದಿದ್ದರು. ಬಳಿಕ ತೆಲುಗು ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದರು. ಖಾಸಗಿ ಪಾರ್ಟಿಯಲ್ಲಿ ಹರ್ಷಸಾಯಿಯನ್ನ ಭೇಟಿಯಾಗಿದ್ದು, ಬಳಿಕ ಇಬ್ಬರ ಮಧ್ಯೆ ಸ್ನೇಹ ಬೆಳೆದು ಸಲುಗೆಯಿಂದ ಇರುತ್ತಿದ್ದರು. ಆದರೆ ಹರ್ಷ ಸಾಯಿ ಮದುವೆ ಆಗುವುದಾಗಿ ಹೇಳಿ, ತನ್ನನ್ನು ಬಳಸಿಕೊಂಡಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾರೆ. ಅಲ್ಲದೇ ಯುವತಿಯ ನಗ್ನ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡಿ ಕೋಟಿ ಲೆಕ್ಕದಲ್ಲಿ ಹಣ ವಸೂಲಿ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಈ ಬಗ್ಗೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬ್‌ ಸ್ಟಾರ್ ಹರ್ಷ ಸಾಯಿ ಹಾಗೂ ಇವರ ತಂದೆ…

Read More

ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸಲಾಗುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರುವುದು ಪತ್ತೆಯಾಗಿದ್ದ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಯಾರೇ ಆಗಲಿ ಶಿಕ್ಷೆಗೆ ಒಳಪಡುತ್ತಾರೆ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಪವನ್ ಕಲ್ಯಾಣ್, ‘ಸನಾತನ ಧರ್ಮ ರಕ್ಷಣಾ ಬೋರ್ಡ್’ ಅನ್ನು ರಾಷ್ಟ್ರಮಟ್ಟದಲ್ಲಿ ಸ್ಥಾಪನೆ ಮಾಡಬೇಕೆಂದು ಸಹ ಹೇಳಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಪ್ರಕಾಶ್ ರೈ, ‘ಆತಂಕವನ್ನು ಹೆಚ್ಚು ಮಾಡಬೇಡಿ, ದೇಶದಲ್ಲಿ ಈಗಿರುವ ಕೋಮು ಗಲಭೆ ಸಾಕು’ ಎಂದಿದ್ದರು. ಪ್ರಕಾಶ್ ರೈ ಹೇಳಿಕೆ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದ ಪವನ್ ಕಲ್ಯಾಣ್, ‘ಪ್ರಕಾಶ್ ರೈ ಅವರೇ ನೀವು ಪಾಠ ಕಲಿಯಬೇಕಿದೆ. ನಿಮ್ಮ ಬಗ್ಗೆ ಗೌರವ ಇದೆ. ಆದರೆ ಪ್ರಕಾಶ್ ರೈ ಮಾತ್ರವಲ್ಲ ಜಾತ್ಯಾತೀತರು ಎಂದು ಹೇಳಿಕೊಳ್ಳುವ ಎಲ್ಲರೂ ಪಾಠ ಕಲಿಯಬೇಕಿದೆ. ಜಾತ್ಯಾತೀತತೆಯ ಹೆಸರಲ್ಲಿ ನೀವು ಹದ್ದುಗಳನ್ನು ಮೀರುತ್ತಿದ್ದೀರಿ. ನಾವು ತೀವ್ರ…

Read More