ಫ್ರಾನ್ಸ್ ಈಗ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸಾರ್ವಜನಿಕ ಕೊರತೆಯನ್ನು ಎದುರಿಸುತ್ತಿದೆ ಎಂದು ಹೊಸದಾಗಿ ನೇಮಕ ಗೊಂಡಿರುವ ಆರ್ಥಿಕ ಸಚಿವ ಆಂಟೊಯಿನ್ ಅರ್ಮಾಂಡ್ ಹೇಳಿದ್ದಾರೆ. ಈ ಹೇಳಿಕೆಯ ಮೂಲಕ ಹೊಸ ವಿತ್ತ ಸಚಿವರು, ಫ್ರಾನ್ಸ್ ನ ಆರ್ಥಿಕ ಸ್ಥಿತಿಯನ್ನು ಮರಳಿ ಹಳಿಗೆ ತರುವುದಕ್ಕೆ ಸಂಪತ್ಭರಿತ ಹಾಗೂ ದೊಡ್ಡ ಉದ್ಯಮಿಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ಸಾಧ್ಯತೆಗಳ ಸುಳಿವನ್ನು ನೀಡಿದ್ದಾರೆ. ಆಂಟೊಯಿನ್ ಅರ್ಮಾಂಡ್ ಅವರು ಸರ್ಕಾರದ ಮಿತಿಮೀರಿದ ವೆಚ್ಚವನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಒಕ್ಕೂಟಗಳು ಮತ್ತು ಮೇಲಧಿಕಾರಿಗಳ ಸಂಸ್ಥೆಗಳನ್ನು ಒಳಗೊಂಡಂತೆ ಆರ್ಥಿಕತೆಗೆ ಸಂಬಂಧಪಟ್ಟವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ಸರ್ಕಾರದ ಮಿತಿಮೀರಿದ ವೆಚ್ಚ ರಾಷ್ಟ್ರೀಯ ಉತ್ಪಾದನೆಯ ಶೇ.5.6ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ತಲುಪುವ ಸಾಧ್ಯತೆ ಇದ್ದು, ಇದು ಯುರೋಪಿಯನ್ ಯೂನಿಯನ್ ಮಿತಿಯ 2 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. “ಕಳೆದ 50 (ವರ್ಷಗಳಲ್ಲಿ) ಒಂದು ಅಥವಾ ಎರಡು ಬಿಕ್ಕಟ್ಟಿನ ವರ್ಷಗಳನ್ನು ಹೊರತುಪಡಿಸಿ, ನಮ್ಮ ಇತಿಹಾಸದಲ್ಲಿ ನಾವು ಅತ್ಯಂತ ಕೆಟ್ಟ ಕೊರತೆಯನ್ನು ಹೊಂದಿದ್ದೇವೆ” ಎಂದು ಅರ್ಮಾಂಡ್ ಬ್ರಾಡ್‌ಕಾಸ್ಟರ್ ಫ್ರಾನ್ಸ್…
Author: Prajatv Kannada
ಬಾಲಿವುಡ್ ನಟಿ ಐಶ್ವರ್ಯ ರೈ ಇಂದಿಗೂ ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಐಶ್ವರ್ಯಾಗೆ ಸಾಕಷ್ಟು ಆಫರ್ ಗಳು ಬರ್ತಿದ್ದು ಅಳೆದು ತೂಗಿ ಅವುಗಳನ್ನು ಸೆಲೆಕ್ಟ್ ಮಾಡುತ್ತಿದ್ದಾರೆ. ಸದ್ಯ ಐಶ್ವರ್ಯಾ ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಕೆಂಪು ಬಣ್ಣದ ಬಟ್ಟೆ ತೊಟ್ಟು ಬೆಕ್ಕಿನ ನಡಿಗೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಪ್ಯಾರಿಸ್ ನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಅಮ್ಮನ ಜೊತೆ ಆರಾಧ್ಯ ಕೂಡ ತೆರಳಿದ್ದರು. ಆರಾಧ್ಯ ಜೊತೆಗೆ ಐಶ್ವರ್ಯ ರೈ ಹಾಗೂ ಇತರರು ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ತಮ್ಮ ವೈವಾಹಿಕ ಜೀವನದ ಕೆಲವೊಂದು ಸುದ್ದಿಗಳ ನಡುವೆಯೂ ಐಶ್ವರ್ಯಾ ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಮಿಂಚಿದ್ದಾರೆ. ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಏನೂ ಸರಿಯಿಲ್ಲ. ಇನ್ನೇನು ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ. ಎಲ್ಲವೂ ಮುಗಿಯಿತು. ಹೀಗೆ ಹಲವು ತಿಂಗಳುಗಳಿಂದಲೂ ಸುದ್ದಿ ಹಬ್ಬುತ್ತಲೇ ಇದೆ. ಆದರೆ, ಈಗ ನೋಡಿದ್ರೆ, ಐಶ್ವರ್ಯ ರೈ ತಮ್ಮ ವೆಡ್ಡಿಂಗ್ ರಿಂಗ್ ಧರಿಸಿಕೊಂಡೇ ಫ್ಯಾಷನ್ ವೀಕ್‌ನಲ್ಲಿ ವಾಕ್ ಮಾಡಿರೋದು ಸಾಕಷ್ಟು ಕುತೂಹಲಕ್ಕೆ…
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಪತ್ತೆಯಾಗಿರುವುದು ಕೋಲಾಹಲ ಎಬ್ಬಿಸಿದೆ. ಲಡ್ಡು ಮಾಡಲು ಬಳಸಲಾದ ತುಪ್ಪದಲ್ಲಿ ದನದ ಕೊಬ್ಬು ಪತ್ತೆಯಾಗಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿತರಣೆಯಾಗುತ್ತಿರುವ ಪ್ರಸಾದದ ಸ್ವಚ್ಛತೆ ಬಗ್ಗೆ ಸ್ಥಳೀಯ ಸರ್ಕಾರ ಹಾಗೂ ದೇವಾಲಯದ ಆಡಳಿತ ಮಂಡಳಿಗಳು ಜಾಗೃತೆಯಾಗಿವೆ. ಇನ್ನು ಕೆಲವರು ಈ ವಿಷಯವಾಗಿ ತಮಗೆ ತೋಚಿದಂತೆ ಹೇಳಿಕೆಗಳನ್ನು ನೀಡುತ್ತಿದ್ದು, ತಿರುಪತಿ ಮಾತ್ರವೇ ಅಲ್ಲ, ಬೇರೆ ಕೆಲವು ದೇವಾಲಯಗಳ ಪ್ರಸಾದಗಳಲ್ಲಿಯೂ ಇಂಥಹಾ ಕಲಬೆರೆಕೆ ಸಾಮಾನ್ಯ ಎಂಬ ಹೇಳಿಕೆಗಳು ಕೇಳಿ ಬರ್ತಿದೆ. ಇದೀಗ ನಿರ್ದೇಶಕ ಮೋಹನ್ ಜಿ ನೀಡಿದ ಹೇಳಿಕೆ ಆಧರಿಸಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಇದೀಗ ತಮಿಳು ನಿರ್ದೇಶಕರೊಬ್ಬರನ್ನು ದೇವಾಲಯದ ಪ್ರಸಾದದ ಕುರಿತಾಗಿನ ಹೇಳಿಕಗೆ ತಿರುಚಿ ಪೊಲೀಸರು ಬಂಧಿಸಿದ್ದಾರೆ. ‘ಬಕಾಸುರನ್’, ‘ದ್ರೌಪದಿ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿ ಚರ್ಚೆಯಲ್ಲಿರುವ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಅವರನ್ನು ತಿರುಚಿ ಪೊಲೀಸರು ಬಂಧಿಸಿದ್ದಾರೆ. ಪಳನಿ ದೇವಾಲಯದ ಪ್ರಸಾದದ ಕುರಿತಾದ ಹೇಳಿಕೆ ನೀಡಿದ್ದಕ್ಕಾಗಿ…
ಚಿತ್ರದುರ್ಗ: ರಾಜ್ಯದ ಮುಡಾ ಹಗರಣದ ವಿಚಾರಕ್ಕೆ ಹೈಕೋರ್ಟ್ ನೀಡಿರುವ ತೀರ್ಪು ನಿರೀಕ್ಷಿತ ತೀರ್ಪು ಎಂದು ಗೋವಿಂದ ಕಾರಜೋಳ ಹೇಳಿದರು. ಅವರು ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ ಮಾತಾಡುತ್ತಾ, ಸಿದ್ದರಾಮಯ್ಯ ಅವರು ತಪ್ಪು ಮಾಡಿದ್ದು, ಅಂಗೈನ ಹುಣ್ಣಿನಂತೆ ಸ್ಪಷ್ಟವಾಗಿ ಕಾಣುತ್ತದೆ. https://youtu.be/C02aQvQlbho?si=3Sa-JMJAnvOFlgB- ಆದರೆ ಅವರು ಭಂಡತನದಿಂದ ಸಮರ್ಥನೆ ಮಾಡಿಕೊಳ್ಳೋದು ಹಾಗೂ ಬೇರೆಯವರ ಆಡಳಿತದಲ್ಲಿ ತಪ್ಪುಗಳಾಗುವೆ ಎಂದು ಬೊಟ್ಟು ಮಾಡಿ ತಮಗೆ ತಾವೇ ಕಳಂಕವನ್ನು ಹಚ್ಚಿಕೊಂಡಿದ್ದಾರೆ. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕೌಟುಂಬಿಕ ಲಾಭಕ್ಕಾಗಿ ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಅವರು ಬಲಿಯಾಗಿ ರಾಜೀನಾಮೆ ಕೊಡಲೇ ಬೇಕಾದ ಪರಿಸ್ಥಿತಿ ಬಂದೊದಗಿದೆ. ಕಾಂಗ್ರೆಸ್ ನವರೇ ತಂದಿರುವ ಪಾರದರ್ಶಕ ಕಾಯ್ದೆ , ಬೇರೆಯವರಿಗಾಗಿ ಹೆಣೆದಿರುವ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಕಾನೂನಿನ ಕ್ರಮ ಎದುರಿಸುವಂತ ಸ್ಥಿತಿ ಬಂದಿದೆ. ಇಂದಿನ ಹೈಕೋರ್ಟ್ ತೀರ್ಪು ಮಾಹಿತಿ ಹಕ್ಕು ಹೋರಾಟಗಾರರಿಗೆ ಸಿಕ್ಕ ಜಯ. ಇಂದು ಸಿದ್ದರಾಮಯ್ಯ ಗೌರವದಿಂದ ರಾಜೀನಾಮೆ ಕೊಡುವಂತೆ ಆಗ್ರಹಿಸಿದರು.ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ರಾಜ್ಯದಲ್ಲಿ ಅಪಾದನೆಗಳು ಬಂದಾಗ ಮುಖ್ಯ ಮಂತ್ರಿಗಳು ರಾಜೀನಾಮೆ ಕೊಟ್ಟ ಇತಿಹಾಸವೂ ನಮ್ಮ ಮುಂದಿದೆ. ರಾಮಕೃಷ್ಣ ಹೆಗಡೆಅವರು…
ಮೈಸೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿ ವಜಾಗೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ https://youtu.be/Ez6Y2HSPBTc?si=qbHx509nnGSHMpCg ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ದೇಶದ ಕಾನೂನು ಎಷ್ಟು ಗಟ್ಟಿಯಾಗಿದೆ ಅನೋದು ಕೋರ್ಟ್ ಇಂದಿನ ಆದೇಶದಿಂದ ಖಾತ್ರಿಯಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನೋದು ಸಹ ಇದರಿಂದ ಜನ ಅರ್ಥಮಾಡಿ ಕೊಂಡಿದ್ದಾರೆ. ಈ ದೇಶದ ಕಾನೂನನ್ನು ಧಿಕ್ಕರಿಸಿ ಮಾಡುವ ಯಾವುದೇ ಪ್ರಯತ್ನಗಳು ಸಹ ಸಾಂದರ್ಭಿಕವಾಗಿ ತತಕ್ಷಣಕ್ಕೆ ಅವರಿಗೆ ಒಳ್ಳೆಯದಾಗಬಹುದು. ಆದ್ರೆ ದೀರ್ಘಕಾಲವಾಗಿ ಇರಲ್ಲ. ಕಾನೂನನ್ನು ಮುರಿಯುವವರಿಗೆ, ವಿರೋಧಿಸುವವರಿಗೆ ನ್ಯಾಯ ಸಿಗ್ಲಲ ಅನ್ನೋದನ್ನ ಹೈಕೋರ್ಟ್ ಆದೇಶ ಎತ್ತಿಹಿಡಿದಿದೆ ಎಂದು ಹೇಳಿದರು.
ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. https://youtu.be/IYEpl3y0qKM?si=ypFXv0C3fgT3YOLY ನರಸಪ್ಪ (65) ತೋಟದಲ್ಲಿ ಗಾಂಜಾ ಬೆಳೆದಿದ್ದ ಬಂಧಿತ ಆರೋಪಿಯಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಅಪೇಗೌಡನ ಪಾಳ್ಯ ಗ್ರಾಮದ ತೋಟದಲ್ಲೇ ಗಾಂಜಾ ಬೆಳೆದು ಮಾರಾಟ ಮಾಡ್ತಿದ್ದನುಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಬಂಧಿತನಿಂದ ಒಂದು ಲಕ್ಷ 67500 ರು ಮೌಲ್ಯದ 16 ಕೆಜಿ 800 ಗ್ರಾಂ ಗಾಂಜಾ ವನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮೈಸೂರಿನ ಅರಮನೆ ಆವರಣಕ್ಕೆ ಪ್ರತಿದಿನವೂ ಹಲವು ಅನಾಮಿಕರು ಬಂದು ಆನೆ ಸೊಂಡಿಲು, ದಂತಗಳನ್ನು ಹಿಡಿದು ಪೋಸ್ ಕೊಡುತ್ತಾ ರೀಲ್ಸ್ ಮಾಡುತ್ತಿದ್ದಾರೆ. ಆನೆಗಳ ಮುಂದೆ ಫೋಟೊಶೂಟ್‌ಗಾಗಿ ಅರಣ್ಯ ಅಧಿಕಾರಿಗಳು ಅನುಮತಿ ಕೊಡುವ ಮೂಲಕ ಆನೆಗಳ ವಿಚಾರದಲ್ಲಿ ಅರಣ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರಿದಂತಿದೆ. https://youtu.be/wGkC-L2whhw?si=bDHYfOBef2HVRhEF ಮೊನ್ನೆಯಷ್ಟೆ ಎರಡು ಆನೆಗಳ ನಡುವೆ ಕಾಳಗ ನಡೆದು ಆತಂಕ ಸೃಷ್ಟಿಸಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತಂತೆ ಕಾಣುತ್ತಿಲ್ಲ. ಈ ಹಿಂದೆ ಕೂಡ ಆನೆ ಮುಂದೆ ಫೋಟೋ ತೆಗೆದಿದ್ದರಿಂದ ಹಲವು ಅವಾಂತರ ಸೃಷ್ಟಿಯಾಗಿತ್ತು. ಆದರ, ಈಗ ಕೆಲವರ ರೀಲ್ಸ್ ಶೋಕಿಗೆ ದಸರಾ ಆನೆಗಳ ಬಳಕೆ ಹೆಚ್ಚಾಗಿದೆ. ಅರಣ್ಯ ಅಧಿಕಾರಿಗಳು ದುಡ್ಡಿಗೆ ಮಣಿದರಾ ಅಥವಾ ಒತ್ತಡಕ್ಕೆ ಮಣಿದರಾ ಎಂಬ ಪ್ರಶ್ನೆ ಮೂಡಿದೆ. ಆದರೆ, ದಿನ ನಿತ್ಯ ಅರಮನೆ ಆವರಣದ ಅನಾಮಿಕ ವ್ಯಕ್ತಿಗಳ ರೀಲ್ಸ್ ಶೋಕಿ ಮಾತ್ರ ಹೆಚ್ಚಾಗಿದೆ. ರೀಲ್ಸ್ ಹೆಸರಿನಲ್ಲಿ ಅರಣ್ಯ ಅಧಿಕಾರಿಗಳು ದುಡ್ಡು ಮಾಡುತ್ತಿದ್ದಾರೆ ಎಂಬ ಮಾತು ಜೋರಾಗಿದೆ.
ಮೈಸೂರು: ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಐದು ವರ್ಷದ ಮಗು ಮೃತಪಟ್ಟಿರುವ ಘಟನೆ ಮೈಸೂರಿನ ಇಲವಾಲದ ಬಳಿ ನಡೆದಿದೆ. https://youtu.be/wGkC-L2whhw?si=JsWq2MBw6A2gIZb4 ಲಿಖಿತ್ ಮೃತ ಪಟ್ಟ ಮಗು. ಇಲವಾಲದ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು, ಬೈಕ್‌ಗೆ ಹಿಂಬದಿಯಿಂದ ಬಂದು ಕಾರು ಗುದ್ದಿದಿದೆ. ಘಟನೆಯಲ್ಲಿ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆಮಗು ಕಳೆದುಕೊಂಡು ಪೋಷಕರ ರೋಧನೆ ಮುಗಿಲು ಮಟ್ಟಿದೆ. ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಪ್ಟೆಂಬರ್ 27ರಂದು ತನ್ನ ವಾರ್ಷಿಕ ಮಹಾಸಭೆ ನಡೆಸಲಿದ್ದು, ಇದರ ಬೆನ್ನಲ್ಲೇ ಸೆಪ್ಟೆಂಬರ್ 28ರಂದು (ಶನಿವಾರ) ಬೆಂಗಳೂರಿನಲ್ಲಿ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅನ್ನು ಉದ್ಘಾಟನೆ ಮಾಡಲಿದೆ ಎಂಬುದು ಬೆಳವಣಿಗೆಗೆ ಹತ್ತಿರದ ಮೂಲಗಳಿಂದ ಖಾತ್ರಿಯಾಗಿದೆ. https://youtu.be/ZkSp1S1Q-5k?si=AOSj8vlKiWLO_Vfi ನೂತನ ಅತ್ಯಾಧುನಿಕ ಕ್ರಿಕೆಟ್ ಅಕಾಡೆಮಿಯ ಉದ್ಘಾಟನೆಯನ್ನು ಬಿಸಿಸಿಐ ಖಾತ್ರಿ ಪಡಿಸಿದೆ ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ ಈ ಕುರಿತಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಅಧಿಕೃತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಬಿಸಿಸಿಐ ಕಾರ್ಯದರ್ಶಿ ಸ್ಥಾನ ಬಿಟ್ಟಿರುವ ಜಯ ಶಾ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರಾಗಿ ನವೆಂಬರ್ 1ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಇ-ಮೇಲ್ ಸೂಕ್ತವಾಗಿದೆ ಎಂದು ಭಾವಿಸಿದ್ದೇನೆ. ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಸೆಪ್ಟೆಂಬರ್ 28ರಂದು ಉದ್ಘಾಟಿಸಲಾಗುತ್ತಿದ್ದು, ಈ ಮೂಲಕ ನಿಮ್ಮನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸುತ್ತಿದ್ದೇನೆ. ನೂತನ ಎನ್‌ಸಿಎ ಆವರಣದಲ್ಲಿ 3 ಸುಸಜ್ಜಿತ ಕ್ರಿಕೆಟ್ ಗ್ರೌಂಡ್ ಕಾಣಬಹುದು. 45 ಪ್ರಾಕ್ಟೀಸ್…
ಬೆಂಗಳೂರು: ತನ್ನ ಬಳಿ ರಾಯಲ್ ಎನ್ ಫೀಲ್ಡ್ ಬೈಕ್ ಇಲ್ಲ ಅಂತ ಮತ್ತೊಬ್ಬರ ಬೈಕ್ ಗೆ ಬೆಂಕಿ ಹಚ್ಚಿದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ಗಾಡಿಗಳಿಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿ ಪೀಣ್ಯ ಪೊಲೀಸರಿಂದ ಪುಲಕೀತ್ (25) ಎಂಬಾತನ ಬಂಧನ ಮಾಡಲಾಗಿದೆ. https://youtu.be/227Yw8lji24?si=lUXDTsSTXSM5MIgC ಕಳೆದ 19 ರಂದು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದ ಆರೋಪಿ ಪಿಜಿ ಮುಂದೆ ನಿಲ್ಲಿಸಿದ್ದ ರಾಯಲ್ ಎನ್ ಫೀಲ್ಡ್ ಸೇರಿ ಮೂರು ಬೈಕ್ ಗಳಿಗೆ ಬೆಂಕಿ ಪೆಟ್ರೋಲ್ ಕದ್ದು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದ ಆರೋಪಿ ಎಚ್ ಎಂ ಟಿ ಲೇಔಟ್ನ ಪಿಜಿಯೊಂದರೆ ಮುಂದೆ ನಿಲ್ಲಿಸಿದ್ದ ಬೈಕ್ ಗಳು ಈ ಸಂಬಂಧ ದೀಪಾಂಶು ಅಗರ್ ವಾಲ್ ಎಂಬಾತ ದೂರು ನೀಡಿದ್ದ ಸಿಸಿಟಿವಿ ಆಧರಿಸಿ ಆರೋಪಿಯನ್ನ ಬಂಧಿಸಿದ ಪೀಣ್ಯ ಪೊಲೀಸರು