ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. https://youtu.be/IYEpl3y0qKM?si=ypFXv0C3fgT3YOLY ನರಸಪ್ಪ (65) ತೋಟದಲ್ಲಿ ಗಾಂಜಾ ಬೆಳೆದಿದ್ದ ಬಂಧಿತ ಆರೋಪಿಯಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಅಪೇಗೌಡನ ಪಾಳ್ಯ ಗ್ರಾಮದ ತೋಟದಲ್ಲೇ ಗಾಂಜಾ ಬೆಳೆದು ಮಾರಾಟ ಮಾಡ್ತಿದ್ದನುಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಬಂಧಿತನಿಂದ ಒಂದು ಲಕ್ಷ 67500 ರು ಮೌಲ್ಯದ 16 ಕೆಜಿ 800 ಗ್ರಾಂ ಗಾಂಜಾ ವನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Author: Prajatv Kannada
ಮೈಸೂರಿನ ಅರಮನೆ ಆವರಣಕ್ಕೆ ಪ್ರತಿದಿನವೂ ಹಲವು ಅನಾಮಿಕರು ಬಂದು ಆನೆ ಸೊಂಡಿಲು, ದಂತಗಳನ್ನು ಹಿಡಿದು ಪೋಸ್ ಕೊಡುತ್ತಾ ರೀಲ್ಸ್ ಮಾಡುತ್ತಿದ್ದಾರೆ. ಆನೆಗಳ ಮುಂದೆ ಫೋಟೊಶೂಟ್‌ಗಾಗಿ ಅರಣ್ಯ ಅಧಿಕಾರಿಗಳು ಅನುಮತಿ ಕೊಡುವ ಮೂಲಕ ಆನೆಗಳ ವಿಚಾರದಲ್ಲಿ ಅರಣ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರಿದಂತಿದೆ. https://youtu.be/wGkC-L2whhw?si=bDHYfOBef2HVRhEF ಮೊನ್ನೆಯಷ್ಟೆ ಎರಡು ಆನೆಗಳ ನಡುವೆ ಕಾಳಗ ನಡೆದು ಆತಂಕ ಸೃಷ್ಟಿಸಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತಂತೆ ಕಾಣುತ್ತಿಲ್ಲ. ಈ ಹಿಂದೆ ಕೂಡ ಆನೆ ಮುಂದೆ ಫೋಟೋ ತೆಗೆದಿದ್ದರಿಂದ ಹಲವು ಅವಾಂತರ ಸೃಷ್ಟಿಯಾಗಿತ್ತು. ಆದರ, ಈಗ ಕೆಲವರ ರೀಲ್ಸ್ ಶೋಕಿಗೆ ದಸರಾ ಆನೆಗಳ ಬಳಕೆ ಹೆಚ್ಚಾಗಿದೆ. ಅರಣ್ಯ ಅಧಿಕಾರಿಗಳು ದುಡ್ಡಿಗೆ ಮಣಿದರಾ ಅಥವಾ ಒತ್ತಡಕ್ಕೆ ಮಣಿದರಾ ಎಂಬ ಪ್ರಶ್ನೆ ಮೂಡಿದೆ. ಆದರೆ, ದಿನ ನಿತ್ಯ ಅರಮನೆ ಆವರಣದ ಅನಾಮಿಕ ವ್ಯಕ್ತಿಗಳ ರೀಲ್ಸ್ ಶೋಕಿ ಮಾತ್ರ ಹೆಚ್ಚಾಗಿದೆ. ರೀಲ್ಸ್ ಹೆಸರಿನಲ್ಲಿ ಅರಣ್ಯ ಅಧಿಕಾರಿಗಳು ದುಡ್ಡು ಮಾಡುತ್ತಿದ್ದಾರೆ ಎಂಬ ಮಾತು ಜೋರಾಗಿದೆ.
ಮೈಸೂರು: ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಐದು ವರ್ಷದ ಮಗು ಮೃತಪಟ್ಟಿರುವ ಘಟನೆ ಮೈಸೂರಿನ ಇಲವಾಲದ ಬಳಿ ನಡೆದಿದೆ. https://youtu.be/wGkC-L2whhw?si=JsWq2MBw6A2gIZb4 ಲಿಖಿತ್ ಮೃತ ಪಟ್ಟ ಮಗು. ಇಲವಾಲದ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದು, ಬೈಕ್‌ಗೆ ಹಿಂಬದಿಯಿಂದ ಬಂದು ಕಾರು ಗುದ್ದಿದಿದೆ. ಘಟನೆಯಲ್ಲಿ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆಮಗು ಕಳೆದುಕೊಂಡು ಪೋಷಕರ ರೋಧನೆ ಮುಗಿಲು ಮಟ್ಟಿದೆ. ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಪ್ಟೆಂಬರ್ 27ರಂದು ತನ್ನ ವಾರ್ಷಿಕ ಮಹಾಸಭೆ ನಡೆಸಲಿದ್ದು, ಇದರ ಬೆನ್ನಲ್ಲೇ ಸೆಪ್ಟೆಂಬರ್ 28ರಂದು (ಶನಿವಾರ) ಬೆಂಗಳೂರಿನಲ್ಲಿ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅನ್ನು ಉದ್ಘಾಟನೆ ಮಾಡಲಿದೆ ಎಂಬುದು ಬೆಳವಣಿಗೆಗೆ ಹತ್ತಿರದ ಮೂಲಗಳಿಂದ ಖಾತ್ರಿಯಾಗಿದೆ. https://youtu.be/ZkSp1S1Q-5k?si=AOSj8vlKiWLO_Vfi ನೂತನ ಅತ್ಯಾಧುನಿಕ ಕ್ರಿಕೆಟ್ ಅಕಾಡೆಮಿಯ ಉದ್ಘಾಟನೆಯನ್ನು ಬಿಸಿಸಿಐ ಖಾತ್ರಿ ಪಡಿಸಿದೆ ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ ಈ ಕುರಿತಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಅಧಿಕೃತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಬಿಸಿಸಿಐ ಕಾರ್ಯದರ್ಶಿ ಸ್ಥಾನ ಬಿಟ್ಟಿರುವ ಜಯ ಶಾ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರಾಗಿ ನವೆಂಬರ್ 1ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಇ-ಮೇಲ್ ಸೂಕ್ತವಾಗಿದೆ ಎಂದು ಭಾವಿಸಿದ್ದೇನೆ. ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಸೆಪ್ಟೆಂಬರ್ 28ರಂದು ಉದ್ಘಾಟಿಸಲಾಗುತ್ತಿದ್ದು, ಈ ಮೂಲಕ ನಿಮ್ಮನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸುತ್ತಿದ್ದೇನೆ. ನೂತನ ಎನ್‌ಸಿಎ ಆವರಣದಲ್ಲಿ 3 ಸುಸಜ್ಜಿತ ಕ್ರಿಕೆಟ್ ಗ್ರೌಂಡ್ ಕಾಣಬಹುದು. 45 ಪ್ರಾಕ್ಟೀಸ್…
ಬೆಂಗಳೂರು: ತನ್ನ ಬಳಿ ರಾಯಲ್ ಎನ್ ಫೀಲ್ಡ್ ಬೈಕ್ ಇಲ್ಲ ಅಂತ ಮತ್ತೊಬ್ಬರ ಬೈಕ್ ಗೆ ಬೆಂಕಿ ಹಚ್ಚಿದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ಗಾಡಿಗಳಿಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿ ಪೀಣ್ಯ ಪೊಲೀಸರಿಂದ ಪುಲಕೀತ್ (25) ಎಂಬಾತನ ಬಂಧನ ಮಾಡಲಾಗಿದೆ. https://youtu.be/227Yw8lji24?si=lUXDTsSTXSM5MIgC ಕಳೆದ 19 ರಂದು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದ ಆರೋಪಿ ಪಿಜಿ ಮುಂದೆ ನಿಲ್ಲಿಸಿದ್ದ ರಾಯಲ್ ಎನ್ ಫೀಲ್ಡ್ ಸೇರಿ ಮೂರು ಬೈಕ್ ಗಳಿಗೆ ಬೆಂಕಿ ಪೆಟ್ರೋಲ್ ಕದ್ದು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದ ಆರೋಪಿ ಎಚ್ ಎಂ ಟಿ ಲೇಔಟ್ನ ಪಿಜಿಯೊಂದರೆ ಮುಂದೆ ನಿಲ್ಲಿಸಿದ್ದ ಬೈಕ್ ಗಳು ಈ ಸಂಬಂಧ ದೀಪಾಂಶು ಅಗರ್ ವಾಲ್ ಎಂಬಾತ ದೂರು ನೀಡಿದ್ದ ಸಿಸಿಟಿವಿ ಆಧರಿಸಿ ಆರೋಪಿಯನ್ನ ಬಂಧಿಸಿದ ಪೀಣ್ಯ ಪೊಲೀಸರು
ಮಲಗಿದ ತಕ್ಷಣವೇ ಉತ್ತಮ ನಿದ್ರೆ ಬರಬೇಕಾದರೆ ಈ ಕೆಳಗೆ ನೀಡಿರುವ ಕೆಲವು ಸರಳ ಟಿಪ್ಸ್‌ಗಳನ್ನು ಫಾಲೋ ಮಾಡಿ.. ರಾತ್ರಿ ಊಟ ಮಿಸ್ ಮಾಡ್ಬೇಡಿ: ರಾತ್ರಿಯ ಊಟವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡ್ಬೇಡಿ, ಒಂದು ವೇಳೆ ರಾತ್ರಿ ಊಟ ಮಾಡದೆ ಮಲಗಿದರೆ ನಿದ್ದೆ ಬರುವುದಿಲ್ಲ. ಹಾಗಂತ ಹೇಗಬೇಕೋ ಹಾಗೆ ಊಟ ಮಾಡಬಾರದು, ಊಟ ಮಿತವಾಗಿ, ಸಮತೋಲನದಿಂದ ಕೂಡಿರಬೇಕು. ಸುಲಭವಾಗಿ ಜೀರ್ಣಿಸಿಕೊಳ್ಳುವಂತೆ ಇರಬೇಕು. ಮಲಗುವ ಮುನ್ನ ಮಾಂಸದೂಟ ಸೇವಿಸಬೇಡಿ: ಮಾಂಸದಲ್ಲಿ ಪ್ರೋಟಿನ್‌ಗಳು ಸಮೃದ್ಧವಾಗಿರುತ್ತವೆ. ಆದ್ದರಿಂದ ರಾತ್ರಿ ಊಟಕ್ಕೆ ಮಾಂಸ ಸೇವಿಸಿದರೆ ಅರ್ಜೀಣದಿಂದಾಗಿ ನಿದ್ರೆ ಬಾರದಿರಬಹುದು. ರಾತ್ರಿ ಮಲಗುವ ಮುನ್ನ ಮಾಂಸ ಸೇವಿಸಬೇಡಿ. ಮದ್ಯ, ಧೂಮಪಾನ ಮಾಡಬೇಡಿ: ಆಲ್ಕೋಹಾಲ್ ಎರಡು ಹಂತದಲ್ಲಿ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲ ವರದಿಗಳ ಪ್ರಕಾರ ಮದ್ಯ ಸೇವಿಸಿದ ತಕ್ಷಣ ನಿದ್ರೆ ಬರುತ್ತದೆ. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಸಮಸ್ಯೆಗಳನ್ನು ಉಂಟಾಗುವ ಸಾಧ್ಯತೆ ಇದೆ. ಟೀ, ಕಾಫಿ ಸೇವಿಸಬೇಡಿ: ಮಲಗುವ ಮುನ್ನ ಯಾವುದೇ ಕಾರಣಕ್ಕೂ ಟೀ, ಕಾಫಿ ಕುಡಿಯಬೇಡಿ. ಇದರಿಂದ…
ಮಧ್ಯಪ್ರದೇಶ:- ಮಧ್ಯಪ್ರದೇಶದ ರೇವಾದಲ್ಲಿ ಬೈಕ್ನಲ್ಲಿ ಹೋಗುವಾಗ ಕೆಸರು ತಾಗಿದ್ದಕ್ಕೆ ಅವಮಾನ ಮಾಡಿದ್ದ ವಿದ್ಯಾರ್ಥಿನಿ ಮೇಲೆ ವ್ಯಕ್ತಿ ಹಾಗೂ ಅವನ ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಜರುಗಿದೆ ಸೆಪ್ಟೆಂಬರ್ 22ರಂದು ಕಾಲೇಜು ವಿದ್ಯಾರ್ಥಿನಿ ಮೊಬೈಲ್ನ್ನು ಅಂಗಡಿಗೆ ರಿಪೇರಿಗೆ ಕೊಡಲೆಂದು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ವಿಚಾರಣೆ ವೇಳೆ, ಪ್ರಮುಖ ಆರೋಪಿ ಕಿಶನ್ ಕೋಲ್, ತನ್ನ ಬೈಕ್ನಲ್ಲಿ ಸಾಕಷ್ಟು ಕೆಸರು ಇರುವ ರಸ್ತೆಯಲ್ಲಿ ಹೋಗುತ್ತಿದ್ದೆವು, ರಸ್ತೆಬದಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕೆಸರು ತಾಗಿತ್ತು. ಅಷ್ಟೆಲ್ಲಾ ಜನರ ಎದುರು ತನಗೆ ಅವಮಾನ ಮಾಡಿದ್ದಳು ಎಂದು ಆರೋಪಿ ಹೇಳಿದ್ದು, ಇದರಿಂದ ತನಗೆ ಮುಜುಗರ ಉಂಟಾಯಿತು ಎಂದಿದ್ದಾನೆ. ಅವಮಾನದಿಂದ ಕೋಪಗೊಂಡ ಆರೋಪಿಗಳು ಸಂತ್ರಸ್ತೆಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 22 ರಂದು ಕಿಶನ್ ಕೋಲ್ ಮತ್ತು ಆತನ ಸ್ನೇಹಿತ ಸಂತಲಾಲ್ ಆಕೆಯನ್ನು ಅಪಹರಿಸಿ ಪೊದೆಗಳ ಹಿಂದೆ ಕರೆದೊಯ್ದು ಅಲ್ಲಿ ಅಪರಾಧ ಎಸಗಿದ್ದರು. ಘಟನೆಯ ಬಗ್ಗೆ ವಿದ್ಯಾರ್ಥಿನಿ ತನ್ನ…
ಕೊಪ್ಪಳ: ಯಾವುದೇ ಕಾರಣಕ್ಕೂ ಬಿಜೆಪಿಯವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಭವಿಷ್ಯ ನುಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೆಡವಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಆದರೆ, ಅದು ಆಗದ ಕೆಲಸ. ಬಿಜೆಪಿಯವರು ಯಾವಾಗ ಪೂರ್ಣ ಬಹುಮತದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. https://youtu.be/ZkSp1S1Q-5k?si=BQmVM7H-jlnlqvRh ಅವರಿಗೆ ರಾಜ್ಯದ ಮತದಾರರು ಆಶೀರ್ವಾದ ಮಾಡಿಯೇ ಇಲ್ಲ. ಆದರೆ, ಅಡ್ಡ ದಾರಿ ಹಿಡಿದು ಅಧಿಕಾರಕ್ಕೆ ಬಂದಿದ್ದಾರೆ ಎಂದರು. ಈಗ 136 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸರ್ಕಾರ ರಚನೆ ಮಾಡಲಾಗಿದೆ. ಈ ಸರ್ಕಾರವನ್ನು ಕೆಡುವ ಲೆಕ್ಕಾಚಾರ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯವರು ಇನ್ನು ಹತ್ತು ವರ್ಷ ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು. ತಿರುಪತಿ ಲಡ್ಡು ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ತಪ್ಪು. ದೇಶದಾದ್ಯಂತ ಭಕ್ತರು ಇದ್ದಾರೆ. ಪ್ರಸಾದ ಸ್ವೀಕಾರ ಮಾಡುತ್ತಾರೆ. ಅವರ ಭಾವನೆಗೆ ಧಕ್ಕೆ ಮಾಡುವುದು ಸರಿಯಲ್ಲ. ಆದರೆ, ನಂದಿನಿ ತುಪ್ಪ ಮಾತ್ರ ಶುದ್ಧವಾಗಿರುವ ತುಪ್ಪವಾಗಿದೆ. ರಾಜ್ಯದಲ್ಲಿ ಎಲ್ಲಿಯೂ…
ಮಂಡ್ಯ ತಾಲ್ಲೂಕಿನ ಕಲ್ಲಹಳ್ಳಿ-ಕೋಣನಹಳ್ಳಿ ಹಾಗೂ ಬೂದನೂರು ಕೆರೆಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಹಾಗೂ ಬೋಟಿಂಗ್ ಪಾಯಿಂಟ್ ಮತ್ತು ಜಲಕ್ರೀಡೆಗಳನ್ನು ಅಳವಡಿಸುವ ಸಂಬಂಧ ಶಾಸಕ ಗಣಿಗ ರವಿಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದರು. https://youtu.be/WVPEvsazfSQ?si=VAwKdFq-XFpTFUCq ಬೂದನೂರು ಕೆರೆ ವೀಕ್ಷಣೆ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದಾರ, ಕಾನೀನಿದ ಕಾರ್ಯಪಾಲಕ ಎಂಜಿನಿಯರ್ ನಂಜುಂಡೇಗೌಡ ಸೇರಿದಂತೆ ಅಧಿಕಾರಿಗಳು ಹಾಗೂ ಜಲತಜ್ಞರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಶಾಸಕ ರವಿಕುಮಾರ್’ಗೌಡ ಅವರು, ಬೂದನೂರು ಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ.ಅದರಲ್ಲಿ ಕೆರೆ ಏರಿ ಮೇಲೆ ವಾಕಿಂಗ್ ಪಾಥ್, ಕೆರೆ ಕಳೆ ತೆಗೆದು ದ್ವೀಪನಿರ್ಮಾಣ ಮಾಡಿ ಜಲಕ್ರೀಡೆ, ಬೋಟಿಂಗ್ ನಡೆಸಲು ಕ್ರಮ ವಹಿಸಲಾಗುತ್ತಿದೆ ಎಂದರು. ಕೆರೆ ಅಭಿವೃದ್ಧಿ ಮೂಲಕ ಸ್ಥಳೀಯವಾಗಿ ಉದ್ಯೋಗಸೃಷ್ಟಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದ ಅವರು, ಅಧಿಕಾರಿಗಳು ಕೂಡಲೇ ಕ್ರಿಯಾಯೋಜನೆ ತಯಾರಿಸಲು ಸೂಚಿಸಿದರು. ಈ ವೇಳೆ ಗ್ರಾಮದ ಮುಖಂಡರಾದ ಶೇಖರ್, ಚಂದ್ರಶೇಖರ್, ಅಂಕೇಶ್, ಚಂದ್ರಣ್ಣ, ಮಧುಕುಮಾರ್ ಸೇರಿದಂತೆ ಹಲವರಿದ್ದರು
ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಡಾ ಪ್ರಕರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕ್ರಮ ಪ್ರಶ್ನಿಸಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. https://youtu.be/oqAnjR7IRGU?si=L5jtJR-CU7e2a-_5 ಈ ವಿಚಾರದಲ್ಲಿ ಕೋರ್ಟ್ ನೀಡುವ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ. ಒಂದೊಮ್ಮೆ ತೀರ್ಪು ಸಿಎಂ ಸಿದ್ದರಾಮಯ್ಯ ಪರವಾಗಿ ಬಂದರೆ ಅವರ ಕುರ್ಚಿ ಸೇಫ್ ಆಗಲಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ರಾಜಕೀಯವಾಗಿ ಸಂಕಷ್ಟಕ್ಕೆ ಈಡಾಗಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಯಾವುದಕ್ಕೂ ಇರಲಿ ಎಂದು ತೀರ್ಪು ಬಂದ ಕೂಡಲೇ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ. ರಾಜ್ಯದ ಬೆಳವಣಿಗೆಗಳ ಮೇಲೆ ಎಐಸಿಸಿ ತೀವ್ರ ನಿಗಾ ಇರಿಸಿದೆ. ಹೈಕೋರ್ಟ್ ತೀರ್ಪು ಬಳಿಕ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ನಿರೀಕ್ಷೆಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳಿವೆ. ಮುಂದಿನ ಲೆಕ್ಕಾಚಾರಗಳನ್ನು ಹಾಕಿಕೊಂಡೇ ದೋಸ್ತಿಗಳು ಮುಂದೇನು ಮಾಡಬೇಕೆಂದು ರಣತಂತ್ರ ರೂಪಿಸಿವೆ. ಕೋರ್ಟ್ ತೀರ್ಪು ಸಿದ್ದರಾಮಯ್ಯಗೆ ವ್ಯತಿರಿಕ್ತವಾಗಿ ಬಂದರೆ ಮತ್ತೊಂದು ಹಂತದ ಹೋರಾಟ ಪ್ಲಾನ್ ಮಾಡಿಕೊಂಡಿವೆ. ನಿರಂತರ…