Author: Prajatv Kannada

ಮೊಳಕಾಲ್ಮೂರು, ಸೆ.23 ವಿವಿಧ ಕಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ, ಇಬ್ಬರು ಅಂತಾರಾಜ್ಯ ಸಹೋದರ ಕಳ್ಳರನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಮೊಳಕಾಲ್ಮೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಉರುವಕೊಂಡ ಗ್ರಾಮದ ವಿ.ಮಹೇಶ(33) ಪ್ರಭಾಕರ(23) ಬಂಧಿತ ಆರೋಪಿಗಳುಇತ್ತೀಚೆಗೆ, ಪಟ್ಟಣದ ಕೋನಸಾಗರ ರಸ್ತೆಯ ಖಾಲಿ ನಿವೇಶನದಲ್ಲಿ ನಿಲ್ಲಿಸಿದ್ದ ಟಿಪ್ಪರ್ ನ್ನು ಕಳ್ಳರು ಕಳುವು ಮಾಡಿದ್ದರು. https://youtu.be/F3CkwsbZhD4?si=VcAYGEznWJH9AVp- ನಂತರ,ಮೊಳಕಾಲ್ಮೂರು ಪೊಲೀಸರು ದೂರು ದಾಖಲಿಸಿಕೊಂಡು,ಕಳ್ಳರನ್ನು ಸೆರೆ ಹಿಡಿಯಲು ಬಲೆ ಬೀಸಿದ್ದರು. ಸುಮಾರು 12 ಲಕ್ಷ ಮೌಲ್ಯದ ಟಿಪ್ಪರ್ ಲಾರಿ ಹಾಗೂ 1,80,000 ಮೌಲ್ಯದ ಬುಲೆಟ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಸಹೋದರರು ಆಂಧ್ರ ಪ್ರದೇಶ,ಬಳ್ಳಾರಿ, ವಿಜಯನಗರ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ,ಇಬ್ಬರೂ ಕಳ್ಳರು ಸೆರೆವಾಸ ಅನುಭವಿಸಿ ಇತ್ತೀಚೆಗೆ ಜೈಲಿಂದ ಬಿಡುಗಡೆಯಾಗಿದ್ದು, ಬಿಡುಗಡೆಯ ನಂತರವೂ, ತನ್ನ ಚಾಳಿಯನ್ನು ಮುಂದುವರಿಸಿ ಕಳ್ಳತನ ಎಸಗಿದ್ದಾರೆ. ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು , ಎಎಸ್‌ಪಿ ಕುಮಾರಸ್ವಾಮಿ ಹಾಗೂ ಡಿವೈಎಸ್ ಪಿ ರಾಜಣ್ಣ ಮಾರ್ಗದರ್ಶನದಲ್ಲಿ, ಸಿಪಿಐ ವಸಂತ ಸರೋದೆ…

Read More

ಧಾರವಾಡ: ಧಾರವಾಡ ತಾಲೂಕಿನ ಹಲವೆಡೆ ಭಾನುವಾರ ಭರ್ಜರಿ ಮಳೆಯಾಗಿದ್ದು, ಸಿಡಿಲಿಗೆ ಓರ್ವ ರೈತ ಬಲಿಯಾಗಿರುವ ಘಟನೆ ಧಾರವಾಡ ತಾಲೂಕಿನ ಹನುಮನಹಾಳ ಗ್ರಾಮದಲ್ಲಿ ನಡೆದಿದೆ. ಭೀಮನಗೌಡ ಮಲ್ಲನಗೌಡ ಪಾಟೀಲ (65) ಎಂಬುವವರೇ ಸಿಡಿಲಿಗೆ ಬಲಿಯಾದವರು. https://youtu.be/SFMl21vmJLI?si=5Q-LEVDGcA7nbxSb ಭೀಮನಗೌಡ ಅವರು ಆಕಳನ್ನು ತೆಗೆದುಕೊಂಡು ತಮ್ಮ ಹೊಲಕ್ಕೆ ಹೋಗಿ ಶೇಂಗಾ ಸೋಸುವ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ವಿಪರೀತ ಮಳೆಯಾಗಲು ಆರಂಭಿಸಿದ್ದರಿಂದ ಭೀಮನಗೌಡ ಅವರು ಆಕಳನ್ನು ತೆಗೆದುಕೊಂಡು ಮರಳಿ ಮನೆ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪಿಎಸ್ಐ ಭೇಟಿ ನೀಡಿ ಪರಿಶೀಲಿಸಿ, ದೂರು ದಾಖಲಿಸಿಕೊಂಡಿದ್ದಾರೆ. ನಂತರ ಭೀಮನಗೌಡ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

Read More

ಬಳ್ಳಾರಿ: ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ತೂಗುದೀಪ್‌ ಅವರನ್ನು ಭೇಟಿಯಾಗಲು ಅವರ ಪತ್ನಿ ವಿಜಯಲಕ್ಷ್ಮೀ ಆಗಮಿಸಿದ್ದಾರೆ. ಎರಡು ಬ್ಯಾಗ್‌ನಲ್ಲಿ ದರ್ಶನ್‌ ಅವರಿಗೆ ಬಟ್ಟೆ, ಡ್ರೈ ಫ್ರೂಟ್ಸ್‌, ತೆಗೆದುಕೊಂಡು ಬಂದಿದ್ದಾರೆ. ಜೈಲಿನ ಭದ್ರತಾ ಪರಿಶೀಲನೆ ಕೊಠಡಿಯಲ್ಲಿ ಬ್ಯಾಗ್ ಪರಿಶೀಲನೆ ನಡೆಸಿದ ಬಳಿಕ ದರ್ಶನ್ ಅವರಿದ್ದ ಕೊಠಡಿಗೆ ಪತ್ನಿ ತೆರಳಿದರು.  ವಿಜಯಲಕ್ಷ್ಮಿ ಜೊತೆ ಸುಶಾಂತ್ ನಾಯ್ಡು, ಆಪ್ತ ಹೇಮಂತ್ ಎಂಬವರು ಆಗಮಿಸಿದ್ದಾರೆ. https://youtu.be/exyqGAnvdEY?si=hAPvnNXqx6lRzBEq ಎ1 ಆಗಿರುವ ಪವಿತ್ರಾ ಗೌಡ ಮತ್ತು ಎ2 ದರ್ಶನ್​ ಕೂಡ ಜಾಮೀನಿಗಾಗಿ ಕಾಯುತ್ತಿದ್ದಾರೆ. ಅವರು ಕೂಡ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು ಇಬ್ಬರ ಜಾಮೀನು ಅರ್ಜಿಯ ವಿಚಾರಣೆ ಕೂಡ ಮುಂದೂಡಿಕೆ ಆಗಿದೆ. ಸೆಪ್ಟೆಂಬರ್​ 25ರಂದು ಪವಿತ್ರಾ ಗೌಡ ಜಾಮೀನು ಅರ್ಜಿ ಹಾಗೂ ಸೆಪ್ಟೆಂಬರ್​ 27ಕ್ಕೆ ದರ್ಶನ್​ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

Read More

ಮೈಸೂರು: ನದಿಗೆ ಹಾರಿ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ಘಟನೆ ನಡೆದಿದೆ. ನರಸೀಪುರ ಪಟ್ಟಣದ ಕಬಿನಿ ಮೇಲ್ಸೇತುವೆ ಬಳಿ ಕೇತಳ್ಳಿಗ್ರಾಮದ ಮಲ್ಲಿಕಾರ್ಜುನ್ ನದಿಗೆ ಹಾರಿದವರು.ಕೇತಳ್ಳಿ ಗ್ರಾಮದ ಮಲ್ಲೇಶ್ ಎಂಬುವರ ಪುತ್ರ ಮಲ್ಲಿಕಾರ್ಜುನ್‌ ಮೊಬೈಲ್, https://youtu.be/SFMl21vmJLI?si=L_vLimSK9wYIz1i3 ಬಟ್ಟೆಯನ್ನು ಸೇತುವೆ ಮೇಲೆ ಇಟ್ಟು ನದಿಗೆ ಹಾರಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ, ನುರಿತ ಈಜುಗಾರರಿಂದ ಯುವಕನ ಶವಕ್ಕಾಗಿ ತೀವ್ರ ಶೋಧ ನಡೆಸಿದ್ದಾರೆ. ಟಿ ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್​ ಹಾಗೂ ನಟಿ ಪವಿತ್ರಾ ಗೌಡ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಗಂಭೀರ ಪ್ರಕರಣ ಆದ್ದರಿಂದ ಅಷ್ಟು ಸುಲಭಕ್ಕೆ ಜಾಮೀನು ಸಿಗುತ್ತಿಲ್ಲ. ಇತ್ತೀಚೆಗಷ್ಟೇ ದರ್ಶನ್​ ಅವರು ಬೇಲ್​ ಸಲುವಾಗಿ ಅರ್ಜಿ ಸಲ್ಲಿಸಿದ್ದರು https://youtu.be/v6KQYRfts40?si=9qfOuUGuCiYbanx8 . ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್​ 27ಕ್ಕೆ ಮುಂದೂಡಲಾಗಿದೆ. ಸದ್ಯ ಅವರು ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಎ1 ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್​ 25ಕ್ಕೆ ಮುಂದೂಡಿಕೆ ಆಗಿದೆ. ಜಾಮೀನು ಪಡೆಯಲು ದರ್ಶನ್​ ಮತ್ತು ಪವಿತ್ರಾ ಗೌಡ ಇನ್ನಷ್ಟ ದಿನ ಕಾಯುವುದು ಅನಿವಾರ್ಯ ಆಗಿದೆ. ಅವರಿಬ್ಬರ ಜಾಮೀನು ಅರ್ಜಿ ವಿಚಾರಣೆಯ ದಿನಾಂಕವನ್ನು ಮುಂದೂಡಲಾಗಿದೆ. ಸೆಪ್ಟೆಂಬರ್​ 27ಕ್ಕೆ ದರ್ಶನ್​ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಪವಿತ್ರಾ ಗೌಡ ಜಾಮೀನು ಜಾಮೀನು ಅರ್ಜಿ ವಿಚಾರಣೆ ಸೆ.25ಕ್ಕೆ ಮುಂದೂಡಿಕೆಯಾಗಿದೆ.

Read More

ಬೆಂಗಳೂರಿಗರಿಗೆ ನೀರಿನ ಬರ ನೀಗಿಸಲು ಸರ್ಕಾರ ಮುಂದಾಗಿದೆ. ಇದರ್ ಮಧ್ಯ ಬೆಂಗಳೂರಿಗರಿಗೆ ನೀರಿದ ದರ ಏರಿಕೆ ಶಾಕ್ ಕೊಟ್ಟಿದೆ. ಹೌದು…ಕಾವೇರಿ ನೀರಿನ ದರ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸ್ವತಃ ಉಪಮುಖ್ಯಮಂತ್ರಿನಗರಾಭಿವೃದ್ಧಿ ಸಚಿವರೂ ಆದ ಡಿಕೆ ಶಿವಕುಮಾರ್ ಅವರೇ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. https://youtu.be/r4Xrdy3548A?si=61yyU2oKtLwHaft5 ಡಿಕೆ ಶಿವಕುಮಾರ್ ಅವರು ಇಂದು ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕು, ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಕಾವೇರಿ 5ನೇ ಹಂತದಲ್ಲಿ ನಿರ್ಮಿಸಲಾದ ಜಲರೇಚಕ ಯಂತ್ರಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾವೇರಿ ನೀರಿನ ದರವನ್ನು ಏರಿಕೆ ಮಾಡಲಾಗುತ್ತದೆ. ಯಾವಾಗಿನಿಂದ ನೀರಿನ ದರ ಏರಿಕೆ ಮಾಡುತ್ತೇವೆ ಎಂಬುದರ ಕುರಿತು ಶೀಘ್ರದಲ್ಲಿ ಹೇಳುತ್ತೆನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾವೇರಿನ ನೀರಿನ ದರ ಏರಿಕೆಯಾಗುವುದು ಪಕ್ಕಾ ಆದಂತಾಗಿದೆ.‌ ಇತ್ತೀಚೆಗೆ, ಬೆಂಗಳೂರು ನೀರು ಸರಬರಾಜು ಮಂಡಳಿಯು ನೀರಿನ ಶುಲ್ಕವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಅದರ ಬಗ್ಗೆ ಪ್ರತಿಕ್ರಿಯಿಸಿದ್ದ ಉಪ ಮುಖ್ಯಮಂತ್ರಿ ಡಿಕೆ…

Read More

ಧಾರವಾಡ: ಕೃಷಿ ಮೇಳ ಉದ್ಘಾಟನಾ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಕೃಷಿ ವಿಶ್ವವಿದ್ಯಾಲಯದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ವಿಶ್ವವಿದ್ಯಾಲಯ ಆಡಳಿತಾಧಿಕಾರಿಗಳು ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ರೈತರ ಶ್ರೇಯೋಭಿವೃದ್ಧಿ ಮತ್ತು ಕೃಷಿ ವಲಯದ ಬೆಳವಣಿಗೆಗೆ ಶ್ರಮಿಸಬೇಕು. https://youtu.be/4Ps-RDC3v8A?si=2tfxlZDTXxuh1oYE ನಮ್ಮ ನಿಮ್ಮ ಅಧಿಕಾರ ಶಾಶ್ವತವಲ್ಲ. ಇದ್ದಷ್ಟು ದಿನ ರೈತರಿಗಾಗಿ ಕೆಲಸ ಮಾಡಬೇಕು ಎಂದು ಕುಲಪತಿ ಡಾ. ಪಿ.ಎಲ್. ಪಾಟೀಲ ಅವರಿಗೆ ಸಲಹೆ ನೀಡಿದರು. ಭಾರತ ವಿಶ್ವದಲ್ಲಿ ಅತಿ ಹೆಚ್ಚು ನೀರಾವರಿ ವ್ಯವಸ್ಥೆ ಹೊಂದಿರುವ ದೇಶ. ಚೀನಾ- ಭಾರತದ ಜನಸಂಖ್ಯೆ ಸಮ ಸಮ ಇದೆ. ಚೀನಾದಲ್ಲಿ ನಮಗಿಂತ ಉಳುಮೆ ಭೂಮಿ ಕಡಿಮೆ ಇದೆ. ಆದರೂ ನಮಗಿಂತ 3 ಪಟ್ಟು ಹೆಚ್ಚು ಉತ್ಪಾದನೆ ಮಾಡುತ್ತಾರೆ. ಈ ಬಗ್ಗೆ ಸಂಶೋಧನೆ ಮಾಡುವುದು ಕೃಷಿ ವಿಶ್ವವಿದ್ಯಾಲಯದ ಕೆಲಸ ಆಗಬೇಕು. ಕೃಷಿ ವಿಜ್ಞಾನಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಕೃಷಿ ವಿಶ್ವವಿದ್ಯಾಲಯ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಜತೆಗೂಡಿ ಕೆಲಸ ಮಾಡುತ್ತಿಲ್ಲ. ಬಿತ್ತನೆ ಪ್ರಮಾಣ, ಯಾವ ಪ್ರದೇಶದಲ್ಲಿ ಯಾವ ಬೆಳೆ…

Read More

ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪ ಕುಟುಂಬ ರಾಜಕಾರಣ ವಿರುದ್ಧ ತೊಡೆ ತಟ್ಟಿರೋ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಇದೀಗ ಮತ್ತೊಂದು ಸಂಘಟನೆಗೆ ಮುಂದಾಗಿದ್ದಾರೆ. ವಿಜಯಪುರದಲ್ಲಿ ಬೆಂಬಲಿಗರೊಂದಿಗೆ ಸಭೆ ಸೇರಿ ಚರ್ಚಿಸಿ ಅಂತಿಮವಾಗಿ ಹಿಂದುತ್ವದ ಹೆಸರಿನಲ್ಲಿ ಸಂಘಟನೆ ಮಾಡೋದಾಗಿ ಘೋಷಿಸಿದ್ದಾರೆ. https://youtu.be/lu4wxiPy-5I?si=IoLlIIGHrcI6IGy5 ಈ ಕುರಿತಾದ ಕಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ… ಹೌದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪನವರ ನೇತೃತ್ವದಲ್ಲಿ ಸಭೆ ನಡೆಯಿತು. ವಿಜಯಪುರ ತಾಲೂಕಿನ ಮಹಲ್ ಐನಾಪುರ ಗ್ರಾಮದಲ್ಲಿರೋ ಹುಲಜಂತಿ ಮಠದ ಆವರಣದಲ್ಲಿ ನಡೆದ ಬೆಂಬಲಿಗರೊಂದಿಗೆ ಸಭೆ ನಡೆಸಿ ಮತ್ತೊಂದು ಹಿಂದುತ್ವದ ಹೆಸರಿನಲ್ಲಿ ಸಂಘಟನೆ ಮಾಡುವ ಉದ್ದೇಶ ದಿಂದ ಬೆಂಬಲಿಗರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ತೀರ್ಮಾನ, ಅಭಿಪ್ರಾಯ ಸಂಗ್ರಹದ ಬಳಿಕ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಘೋಷಿಸಿದರು ಸಭೆಯಲ್ಲಿ ಬಿಜೆಪಿ ಪಕ್ಷದಲ್ಲಿ ಬಿ ಎಸ್ ಯಡಿಯೂರಪ್ಪ ಅವರಿಂದ ಕೆಎಸ್ ಈಶ್ವರಪ್ಪರಿಗಾದ ಅನ್ಯಾಯ ಹಾಗೂ ಈ ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿದಾಗ ಅದರಿಂದ ಹಿಂದೆ ಸರಿದಿದ್ದೇ ಇಂದಿನ…

Read More

ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಅನುರ ಕುಮಾರ ಡಿಸಾನಾಯಕೆ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿಗಳ ಕಾರ್ಯದರ್ಶಿ ಕಚೇರಿಯಲ್ಲಿ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ 56 ವರ್ಷದ ಅನುರ ದೇಶದ ಆರ್ಥಿಕತೆ ಬಲಪಡಿಸುವ ಮತ್ತು ಭ್ರಷ್ಟಾಚಾರವನ್ನು ತೊಡೆದು ಹಾಕುವ ಭರವಸೆ ನೀಡಿದರು. ಶನಿವಾರ ನಡೆದ ಚುನಾವಣೆಯಲ್ಲಿ ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರಮುನ ಪಕ್ಷದ ವಿಶಾಲ ರಂಗದ ನ್ಯಾಷನಲ್ ಪೀಪಲ್ಸ್ ಪವರ್ ನಾಯಕ ಡಿಸಾನಾಯಕೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿದರು. ದೇಶ ಆರ್ಥಿಕ ಬಿಕ್ಕಟ್ಟು ಎದುರಿಸಿದ ನಂತರ 2022 ರಲ್ಲಿ ಸಾಮೂಹಿಕ ಪ್ರತಿಭಟನೆಯಿಂದ ಗೋಟಾಬಯ ರಾಜಪಕ್ಸೆ ಅವರನ್ನು ಪದಚ್ಯುತಗೊಳಿಸಿದ ನಂತರ ನಡೆದ ಮೊದಲ ಚುನಾವಣೆಯಾಗಿದೆ. ಪ್ರಮಾಣ ವಚನ ಸ್ವೀಕಾರ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಡಿಸಾನಾಯಕೆ, ಜನಾದೇಶವನ್ನು ಗೌರವಿಸಿದ್ದಕ್ಕಾಗಿ ಮತ್ತು ಅಧಿಕಾರದ ಶಾಂತಿಯುತ ಹಸ್ತಾಂತರವನ್ನು ಸುಗಮಗೊಳಿಸಿದ್ದಕ್ಕಾಗಿ ನಿರ್ಗಮಿತ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರಿಗೆ ಧನ್ಯವಾದ ಸಲ್ಲಿಸಿದರು. ಅಧ್ಯಕ್ಷೀಯ ಚುನಾವಣೆಯ ನಂತರ ದೇಶದಲ್ಲಿ…

Read More