ವಿಂಟೇಜ್ ಜ್ಯುವೆಲರಿಗಳಲ್ಲಿ ಇದೀಗ ಕಾಸಗಲದ ಹರಳಿನ ಕಿವಿಯೋಲೆಗಳು ಟ್ರೆಂಡಿಯಾಗಿವೆ. ಹಾಗೆಂದು ಈ ವಿನ್ಯಾಸದ ಕಿವಿಯೋಲೆಗಳ ಸ್ಟೈಲಿಂಗ್ ಹೊಸತೇನಲ್ಲ. ಅಜ್ಜಿ ಕಾಲದ ಆಂಟಿಕ್ ವಿನ್ಯಾಸದಲ್ಲಿ ಬಹಳ ಕಾಲ ಪ್ರಚಲಿತದಲ್ಲಿದ್ದ ಕಿವಿಯೋಲೆಗಳಿವು. ಧರಿಸಿದಾಗ ನೋಡಲು ಪಕ್ಕಾ ಟ್ರೆಡಿಷನಲ್ ಲುಕ್ ನೀಡುವ ಈ ಕಾಸಗಲದ ಸ್ಟಡ್ಸ್, ಈ ಫೆಸ್ಟಿವ್ ಸೀಸನ್‌ನಲ್ಲಿ, ಅದರಲ್ಲೂ ವಿಂಟೇಜ್ ಜ್ಯುವೆಲರಿ ಕೆಟಗರಿಯಲ್ಲಿ ಮಹಿಳೆಯರ ಮನವನ್ನು ಗೆದ್ದಿವೆ. ಅಂದಹಾಗೆ, ಕಿವಿಗೆ ಅಗಲವಾದ ಓಲೆಯನ್ನು ಧರಿಸುವುದು ರಾಜ-ಮಹಾರಾಜರ ಕಾಲದಿಂದಲೇ ಇದೆ. ಅಗಲವಾದ ಓಲೆ ಧರಿಸುವ ಮಹಿಳೆಯರು ಶ್ರೀಮಂತರು ಅಥವಾ ಗಣ್ಯ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತಿತ್ತು. ಅದರಲ್ಲೂ ಹರಳಿನ ಅಗಲವಾದ ಓಲೆಗಳನ್ನು ಧರಿಸುವ ಮಾನಿನಿಯರಿಗೆ ಹೆಚ್ಚು ಗೌರವ ನೀಡಲಾಗುತ್ತಿತ್ತು. ಕಾಲ ಕ್ರಮೇಣ, ಈ ಫ್ಯಾಷನ್ ಸೈಡಿಗೆ ಸರಿಯಿತು. ಪ್ರತಿಷ್ಠೆಯ ಸಂಕೇತವಾಗಿದ್ದ, ಈ ಶೈಲಿಯ ಕಾಸಗಲದ ಓಲೆಗಳು ಬರಬರುತ್ತಾ ಮತ್ತೊಮ್ಮೆ ಫ್ಯಾಷನ್‌ಗೆ ಸೇರಿಕೊಂಡಿತು. ಜೊತೆಗೆ ಒಂದಿಷ್ಟು ಬದಲಾವಣೆಗಳೊಂದಿಗೆ ವಿಂಟೇಜ್ ಜ್ಯುವೆಲರಿ ಕೆಟಗರಿಯಲ್ಲಿ ಮರು ಎಂಟ್ರಿ ನೀಡಿತು. ಅದರಲ್ಲೂ, ಯುವತಿಯರನ್ನು ಸೆಳೆಯತೊಡಗಿತು. ಭೂ ಚಕ್ರದಂತಹ ವಿನ್ಯಾಸ, ಹೂಗಳ ವಿನ್ಯಾಸ, ಚಕ್ರದೊಳಗೆ…
Author: Prajatv Kannada
ಪೂರ್ವ ಇರಾನ್‌ನ ಗಣಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ 50 ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸ್ಫೋಟದ ವೇಳೆ ಗಣಿಯೊಳಗೆ ಕೆಲಸ ಮಾಡುತ್ತಿದ್ದ ಹಲವು ಕಾರ್ಮಿಕರು ಇನ್ನೂ ಒಳಗೇ ಸಿಲುಕಿರಬಹುದು ಎಂಬ ಶಂಕೆ ಇದ್ದು, ಅವರ ರಕ್ಷಣೆಗಾಗಿ ಬಿರುಸಿನ ಕಾರ್ಯಾಚರಣೆ ನಡೆಯುತ್ತಿದೆ. ಇರಾನ್ ರಾಜಧಾನಿ ಟೆಹ್ರಾನ್‌ನ ಆಗ್ನೇಯಕ್ಕೆ ಸುಮಾರು 540 ಕಿಮೀ (335 ಮೈಲಿ) ದೂರದಲ್ಲಿ ಈ ಸ್ಫೋಟ ಸಂಭವಿಸಿದೆ. ತಬಾಸ್‌ನಲ್ಲಿರುವ ಮದಂಜೂ ಕಂಪನಿಯು ನಡೆಸುತ್ತಿರುವ ಕಲ್ಲಿದ್ದಲು ಗಣಿಯಲ್ಲಿ ಮಿಥೇನ್ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವರದಿಯ ಪ್ರಕಾರ ಶನಿವಾರ ರಾತ್ರಿ, ಭಾರತೀಯ ಕಾಲಮಾನ 9:00 ಗಂಟೆಗೆ ಹಠಾತ್ ಅನಿಲ ಸೋರಿಕೆ ಸಂಭವಿಸಿಸಿದೆ. ಈ ವೇಳೆ ಗಣಿ B ಮತ್ತು C ಎರಡು ಬ್ಲಾಕ್‌ಗಳಲ್ಲಿ ಕನಿಷ್ಠ 69 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಸ್ಫೋಟದಿಂದಾಗಿ ಕನಿಷ್ಠ 50 ಮಂದಿ ಸತ್ತಿದ್ದಾಗಿ ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ…
ಮೊಸರು ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸುವುದರಿಂದ ಶೀತ ಮತ್ತು ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ. ಹೊಟ್ಟೆಯ ಸಮಸ್ಯೆಗಳು, ವಾಕರಿಕೆ, ಮಲಬದ್ಧತೆ ಮತ್ತು ವಾಯು ಮುಂತಾದ ಸಮಸ್ಯೆಗಳನ್ನು ನಿವಾರಿಸಲು, ಪ್ರತಿದಿನ ಒಂದು ಬಟ್ಟಲು ಮೊಸರು ಮತ್ತು ಬೆಲ್ಲವನ್ನು ಸೇವಿಸಿ ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಗುಣಪಡಿಸಬಹುದು. ತೂಕ ಇಳಿಸಿಕೊಳ್ಳಲು ಮೊಸರು ಮತ್ತು ಬೆಲ್ಲವನ್ನು ಸೇವಿಸಿ. ಇದು ದೇಹದಲ್ಲಿ ಪೋಷಕಾಂಶಗಳ ಕೊರತೆಯನ್ನು ತಡೆಯುತ್ತದೆ. ಮೊಸರನ್ನು ವಿಟಮಿನ್ ಸಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮೊಸರು ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ದೇಹದಲ್ಲಿನ ರಕ್ತಹೀನತೆ ಹೋಗಲಾಡಿಸಲು ಬೆಲ್ಲವನ್ನು ಸೇವಿಸಬಹುದು. ಬೆಲ್ಲವು ರಕ್ತದ ಕೊರತೆ ನೀಗಿಸಲು ಸಹಾಯ ಮಾಡುತ್ತದೆ. ಮೊಸರನ್ನು ಬೆಲ್ಲದೊಂದಿಗೆ ಬೆರೆಸಿ ಪ್ರತಿದಿನ ಸೇವಿಸಿದರೆ ರಕ್ತಹೀನತೆ ಸುಲಭವಾಗಿ ನಿವಾರಣೆಯಾಗುತ್ತದೆ.
geಕಿರಣ್ ರಾವ್ ನಿರ್ದೇಶನದ, ಆಮಿರ್ ಖಾನ್ ನಿರ್ಮಾಣದ ‘ಲಾಪತಾ ಲೇಡಿಸ್’ ಸಿನಿಮಾ ‘ಆಸ್ಕರ್ 2025’ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಈ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆಯಿತು. ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ಮತ್ತೊಂದಷ್ಟು ಮಂದಿ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಲಾಪತಾ ಲೇಡಿಸ್ ಸಿನಿಮಾ ಅಧಿಕೃತವಾಗಿ ಆಸ್ಕರ್ ಗೆ ಎಂಟ್ರಿಕೊಟ್ಟಿದೆ. ‘ಲಾಪತಾ ಲೇಡಿಸ್’ ಸಿನಿಮಾ ಮಹಿಳೆಯರ ಸಬಲೀಕರಣದ ಬಗ್ಗೆ ಇದ್ದು, ಚಿತ್ರದಲ್ಲಿ ನಿಶಾಂಶಿ ಗೋಯಲ್, ಪ್ರತಿಭಾ ರಾಂತಾ, ಸ್ಪರ್ಶ್ ಶ್ರೀವಾಸ್ತವ, ಚಾಯಾ ಕದಮ್, ರವಿ ಕಿಶನ್ ನಟಿಸಿದ್ದಾರೆ. ‘ಲಾಪತಾ ಲೇಡಿಸ್’ ಸಿನಿಮಾ ಆಸ್ಕರ್ ಗೆಲ್ಲಬೇಕು ಎಂಬುದು ಕಿರಣ್ ರಾವ್ ಅವರ ಕನಸಾಗಿದೆ. ಈ ಕನಸಿನ ಒಂದು ಹಂತವನ್ನು ಅವರು ಏರಿದ್ದಾರೆ. ‘ಲಾಪತಾ ಲೇಡಿಸ್’ ‘ಅತ್ಯುತ್ತಮ ವಿದೇಶಿ ಸಿನಿಮಾ’ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಚೆನ್ನೈನ್ನಲ್ಲಿ ‘ಭಾರತ ಫಿಲ್ಮ್ ಫೆಡರೇಷನ್’ ಸದಸ್ಯರು ಈ ಘೋಷಣೆ ಮಾಡಿದ್ದಾರೆ. ಈಗ ನಡೆಯಲಿರುವುದು 97ನೇ ಸಾಲಿನ ಅಕಾಡೆಮಿ ಅವಾರ್ಡ್ಸ್…
ಮೊದಲನೇ ಬಾರಿಗೆ ಮೆಕ್ಕೆಜೋಳಕ್ಕೆ ಬಂಪರ್ ಬೆಲೆ ಬಂದಿದ್ದು, ರೈತರ ಮುಖದಲ್ಲಿ ಸಂತಸವನ್ನು ತಂದಿದೆ. ಕೋಳಿಯ ಆಹಾರ ಸೇರಿದಂತೆ ಕೆಲವು ಉದ್ಯಮಗಳಿಗೆ ಮಾತ್ರವೇ ಸೀಮಿತವಾಗಿದ್ದ ಮೆಕ್ಕೆಜೋಳದಿಂದ ಈಗ ಎಥೆನಾಲ್ ಉತ್ಪಾದನೆಯನ್ನು ಮಾಡಲಾಗುತ್ತಿದ್ದು, ಇದರ ಪರಿಣಾಮವಾಗಿ ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಳವಾಗಿದೆ. https://youtu.be/k8XqHnVNFGQ?si=MrT286Dx7aj_vlId ಒಂದು ಕ್ವಿಂಟಲ್ ಮೆಕ್ಕೆಜೋಳವು ಕೊಪ್ಪಳ ಮಾರುಕಟ್ಟೆಯಲ್ಲಿ 2,950 ರೂಪಾಯಿಗೆ ಮಾರಾಟವಾಗಿದ್ದು, ಈ ಹಿಂದೆ ಇದ್ದ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಮೆಕ್ಕೆಜೋಳಕ್ಕೆ ಬೆಂಬಲದ ಬೆಲೆಯನ್ನು ನೀಡುವಂತೆ ರೈತರು ಒತ್ತಾಯಿಸುತ್ತಿದ್ದರು. ಪ್ರಸ್ತುತ ಕೇಂದ್ರ ಸರ್ಕಾರವು 2330 ರೂ. ಬೆಂಬಲ ಬೆಲೆಯನ್ನು ಘೋಷಿಸಿದ್ದು, ಇದಕ್ಕಿಂತ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಮೆಕ್ಕೆಜೋಳ ಬೆಲೆ 2 ಸಾವಿರ ರೂಪಾಯಿ ಆಸುಪಾಸಿನಲ್ಲಿರುತ್ತಿತ್ತು. ರಾಜ್ಯದ 10 ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಉತ್ಪಾದನೆ ಮಾಡಲು ಅನುಮತಿಯನ್ನು ನೀಡಿದ್ದು, ಪ್ರತಿನಿತ್ಯ 70 ಸಾವಿರ ಕ್ವಿಂಟಲ್ ಮೆಕ್ಕೆಜೋಳವು ಬೇಕಾಗಬಹುದು ಎಂದು ಮಾಹಿತಿಯನ್ನು ತಿಳಿಸಲಾಗಿದೆ. ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಹಿಂದಿಗಿಂತಲೂ ಉತ್ತಮವಾದ ದರವು ಬಂದಿದೆ. ಬೇರೆ ಉದ್ಯಮಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಬೆಲೆಯನ್ನು ನಿಯಂತ್ರಣ ಮಾಡಲಾಗಿದೆ.…
ಅತ್ಯಂತ ಖ್ಯಾತ ರಿಯಾಲಿಟಿ ಶೋ ‘ಬಿಗ್ ಬಾಸ್ 18’ ಗಾಗಿ ಕಾಯ್ತಿದ್ದ ಫ್ಯಾನ್ಸ್ ಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಬರಲಿರುವ ಬಿಗ್ ಬಾಸ್ ಸೀಸನ್ ರ 18ರ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 6 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ‘ಬಿಗ್ ಬಾಸ್ 18’ ಆರಂಭವಾಗಲಿದೆ. ‘ಬಿಗ್ ಬಾಸ್ OTT 3’ ಮುಗಿದ ನಂತರ ಅಭಿಮಾನಿಗಳು ‘ಬಿಗ್ ಬಾಸ್ 18’ ಗಾಗಿ ಕಾಯ್ತಿದ್ದರು. ಸ್ವಲ್ಪ ಸಮಯದ ಹಿಂದೆ ಪ್ರೋಮೋ ಬಂದಿತ್ತು. ಆದರೆ ದಿನಾಂಕ ಘೋಷಣೆ ಮಾಡಿರಲಿಲ್ಲ. ‘ಬಿಗ್ ಬಾಸ್ 18’ ರ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 6 ರಂದು ನಡೆಯಲಿದೆ. ಅಂದೇ ಸ್ಪರ್ಧಿಗಳನ್ನು ಅಂತಿಮ ಹೆಸರು ಬಹಿರಂಗವಾಗಲಿದೆ. ಕಲರ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೋಮೋ ಹಂಚಿಕೊಳ್ಳಲಾಗಿದೆ. ಅದರ ಶೀರ್ಷಿಕೆ ಹೀಗಿದೆ, ‘ಈ ಬಾರಿ ಮನೆಯಲ್ಲಿ ಭೂಕಂಪ ಆಗಲಿದೆ. ಏಕೆಂದರೆ ಬಿಗ್‌ಬಾಸ್‌ನಲ್ಲಿ ಸಮಯದ ಉತ್ಸಾಹ ಇರುತ್ತದೆ. ಅಕ್ಟೋಬರ್ 6 ರಂದು ರಾತ್ರಿ 9 ಗಂಟೆಗೆ ‘ಬಿಗ್ ಬಾಸ್ 18’ ಗ್ರ್ಯಾಂಡ್…
ಬೆಂಗಳೂರು:-ರಾಜಧಾನಿ ಬೆಂಗಳೂರಿನ ರಾಜಾಜಿನಗರದ ಆರನೇ ಬ್ಲಾಕ್ ನಲ್ಲಿ, ಕಳೆದ ಒಂದು ವರ್ಷದಿಂದ ಸರಿಯಾಗಿ ಕುಡಿಯಲು ನೀರು ಬರ್ತಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಸ್ಥಳೀಯ ನಿವಾಸಿಗಳು, ಮಹಿಳೆಯರು, ಮಕ್ಕಳು ಖಾಲಿ ಬಿಂದಿಗೆ, ಬಕೀಟ್ಗಳನ್ನಿಡಿದು ಬೇಕೆ ಬೇಕು ನೀರು ಬೇಕು ಎಂದು ಧಿಕ್ಕಾರ ಕೂಗಿ ತಮ್ಮ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://youtu.be/dpzCBP2ayVg?si=SfsedijY0TPczDaf ಏರಿಯಾದ ಯಾವ ಮನೆಯ ವಾಟರ್ ಸಂಪ್ ನೋಡಿದ್ರು ಖಾಲಿ ಖಾಲಿಯಾಗಿದೆ. ಇಡೀ ಏರಿಯಾಗೆ ಎರಡೋ, ಮೂರೋ ಬೋರ್ ವೆಲ್ ಗಳಿವೆ. ಆದರೆ ಯಾವ ಬೋರ್ ವೆಲ್ ನಲ್ಲೂ ಸರಿಯಾಗಿ ನೀರು ಬರೋದಿಲ್ಲ. ಈ ಏರಿಯಾಗೆ ಕಾವೇರಿ ನೀರು ಬಂದ್ರು ಅದು ಐದು ನಿಮಿಷ ಕೂಡ ಬರಲ್ಲ. ನೀರು ಬಂದ್ರು ಕೊಳಚೆ ನೀರು ಮಿಕ್ಸ್ ಆಗಿ ಬರ್ತಿದೆ, ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ರು ಸಮಸ್ಯೆ ಮಾತ್ರ ಬಗೆಹರಿತಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಐದು ರುಪಾಯಿ ಕಾಯಿನ್ ನೀರು ತಂದು ವಾಷ್ ರೂಮ್ ಗೆ ಹೋಗುವ ದುಸ್ಥಿತಿ ಬಂದಿದೆ. ಸ್ನಾನ ಮಾಡಲು…
ಬೆಂಗಳೂರು:- ಅಂಗನವಾಡಿ ಕಾರ್ಯಕರ್ತರು ತಮ್ಮ ಮೇಲಾಗುತ್ತಿರುವ ಧೋರಣೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. https://youtu.be/5s36o_gmP_g?si=qwaFrphl3a3WHGxx ಸರ್ಕಾರದಿಂದ ಸಂಬಳವು ಸರಿಯಾಗಿ ಬರ್ತಿಲ್ಲ, ಮೊಟ್ಟೆ ಖರೀದಿಸಿದ ಹಣವು ಬರ್ತಿಲ್ಲ. ಇದರ ನಡುವೆ ಇದೀಗ ಕಾರ್ಯಕರ್ತೆಯರೇ ತಮ್ಮ ಸ್ವಂತ ಹಣದಲ್ಲಿ ತರಕಾರಿ ಖರೀದಿ ಮಾಡಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸುವ ಸ್ಥಿತಿ ಎದುರಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಉಪ್ಪಿಟ್ಟಿನ ಪೌಡರ್, ಸಾಂಬಾರ್ ಪೌಡರ್ ವಿತರಣೆ ಮಾಡಲಾಗುತ್ತಿದೆ. ನೀರಿನಲ್ಲಿ ಕಲಸಿ ಅಡುಗೆ ಮಾಡಿ ಕೊಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ಕಳಪೆ ಗುಣಮಟ್ಟದ ಉಪ್ಪಿಟ್ಟು ತಿನ್ನಲು ಪುಟ್ಟ ಮಕ್ಕಳು ಪರದಾಡುತ್ತಿದ್ದಾರೆ. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ಸ್ವಂತ ಹಣದಲ್ಲಿ ತರಕಾರಿ ತಂದು ಅಡುಗೆ ಮಾಡುತ್ತಿದ್ದೇವೆ ಎಂದು ಕಾರ್ಯಕರ್ತೆಯರು ತಿಳಿಸಿದ್ದಾರೆ. ಈರುಳ್ಳಿ , ಟೊಮೇಟೊ, ಮೆಣಸಿನಕಾಯಿ ಇಲ್ಲದೆ ಉಪ್ಪಿಟ್ಟು, ಸಾಂಬಾರ್ ಮಾಡಿ ಎಂದು ಸರ್ಕಾರ ಹೇಳುತ್ತಿದೆ. ಎರಡು ವರ್ಷಗಳಿಂದ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ತರಕಾರಿ ವಿತರಣೆ ನಿಲ್ಲಿಸಿದೆ. ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನ ವಿತರಣೆ ಮಾಡುತ್ತಿದೆ. ಕಳಪೆ ಗುಣಮಟ್ಟದ ಉಪ್ಪಿಟ್ಟು…
ಜೂನಿಯರ್ ಎನ್ಟಿಆರ್ ಹಾಗೂ ಜಾನ್ವಿ ಕಪೂರ್ ಕಾಂಬಿನೇಷನ್ ನ ಬಹು ನಿರೀಕ್ಷಿತ ದೇವರ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕೊನೆ ಕ್ಷಣದಲ್ಲಿ ರದ್ದಾಗಿದೆ. ಕೆಲವೇ ಸಾವಿರ ಜನರು ನಡೆಯುವ ಜಾಗದಲ್ಲಿ ದೊಡ್ಡ ಮಟ್ಟದಲ್ಲಿ ಜನರು ಸೇರಿದ್ದರಿಂದ ಅದನ್ನು ಕ್ಯಾನ್ಸಲ್ ಮಾಡಲಾಯಿತು. ಭಾರೀ ರಾದ್ದಾಂತ ನಡೆದಿದ್ದರಿಂದ ಬಂದ ಸೆಲೆಬ್ರಿಟಿಗಳು ತೊಂದರೆ ಅನುಭವಿಸಬೇಕಾಯಿತು. ಘಟನೆ ಬಗ್ಗೆ ನಟ ಜೂನಿಯರ್ ಎನ್ಟಿಆರ್ ಪ್ರತಿಕ್ರಿಯಿಸಿದ್ದಾರೆ. ‘ದೇವರ ಈವೆಂಟ್ ಕ್ಯಾನ್ಸಲ್ ಆಗಿದೆ ಎಂದು ತಿಳಿದು ಬೇಸರ ಆಯಿತು. ಈ ಇವೆಂಟ್ಗಾಗಿ ನಾನು ಕಾದಿದ್ದೆ. ನಾನು ನಿಮ್ಮೊಂದಿಗೆ ಸಮಯ ಕಳೆಯಲು ಮತ್ತು ದೇವರ ಬಗ್ಗೆ ಅನೇಕ ಆಸಕ್ತಿದಾಯಕ ವಿವರಗಳನ್ನು ಹಂಚಿಕೊಳ್ಳಲು ಕಾದಿದ್ದೆ. ಈ ಸಿನಿಮಾಗಾಗಿ ಹಾಕಿದ ಶ್ರಮದ ಬಗ್ಗೆ ತಿಳಿಸಲು ಕಾದಿದ್ದೆ. ಆದರೆ, ಭದ್ರತೆಯ ಕಾರಣದಿಂದ ಈ ಕಾರ್ಯಕ್ರಮ ನಡೆಯಲಿಲ್ಲ. ನಿಮಗಿಂತ ಹೆಚ್ಚು ನೋವು ನನಗೆ ಆಗಿದೆ. ಈ ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ್ದಕ್ಕೆ ನಿರ್ಮಾಪಕರು ಹಾಗೂ ಸಂಘಟಕರನ್ನು ಬಯ್ಯೋದು ತಪ್ಪು’ ಎಂದಿದ್ದಾರೆ. ‘ದೇವರ’ ಈವೆಂಟ್ಗೆ ಫ್ಯಾನ್ಸ್ ಕಾದಿದ್ದರು. ಕಳೆದ ಆರು…
ಚೆನ್ನೈ: ಖಿನ್ನತೆಯಿಂದ ಬಳಲುತ್ತಿದ್ದ 38 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಚೆನ್ನೈನ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ತಿಕೇಯನ್ ತನಗೆ ತಾನೇ ವಿದ್ಯುತ್ ಪ್ರವಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಪತ್ನಿ ಗುರುವಾರ ಲೈವ್ ವೈರ್‌ಗೆ ಸಿಕ್ಕು ಬಿದ್ದಿರುವುದನ್ನು ಕಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮೂಲತಃ ತಮಿಳುನಾಡಿನ ತೇಣಿ ಜಿಲ್ಲೆಯವರಾದ ಕಾರ್ತಿಕೇಯನ್, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದರು. ಕಳೆದ 15 ವರ್ಷಗಳಿಂದ ಚೆನ್ನೈನ ಸಾಫ್ಟ್‌ವೇರ್ ಸಂಸ್ಥೆಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿದ್ದ. ಇತ್ತೀಚೆಗೆ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ. ಕಾರ್ತಿಕೇಯನ್ ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದ ಎಂದು ಕೆಲವು ವರದಿಗಳು ಹೇಳಿವೆ. ಆದರೆ ಕುಟುಂಬ ಮತ್ತು ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಪೊಲೀಸ್ ಅಧಿಕಾರಿಯೊಬ್ಬರು, ನಾವು ಆತ್ಮಹತ್ಯೆಗೆ ಕಾರಣವನ್ನು ತನಿಖೆ ಮಾಡುತ್ತಿದ್ದೇವೆ. ಅವರು ಇತ್ತೀಚೆಗೆ ಹೊಸ ಕಂಪನಿಗೆ ಶಿಫ್ಟ್ ಆಗಿದ್ದರು. ಡೆತ್‌ನೋಟ್‌ನಲ್ಲಿ, ಅವರು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಸಂದೇಶವನ್ನು ಬರೆದಿದ್ದಾರೆ. ಘಟನೆ ವೇಳೆ…