Author: Prajatv Kannada

ಸೂರ್ಯೋದಯ: 06:08, ಸೂರ್ಯಾಸ್ತ : 06:07 ಶಾಲಿವಾಹನ ಶಕೆ :1946, ಸವಂತ್ 2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ: ಷಷ್ಠಿ ನಕ್ಷತ್ರ: ರೋಹಿಣಿ ರಾಹು ಕಾಲ: 07:30 ನಿಂದ 09:00 ತನಕ ಯಮಗಂಡ:10:30 ನಿಂದ 12:00 ತನಕ ಗುಳಿಕ ಕಾಲ: 01:30 ನಿಂದ 03:00 ತನಕ ಅಮೃತಕಾಲ: ರಾ .7:02 ನಿಂದ ರಾ .8:35 ತನಕ ಅಭಿಜಿತ್ ಮುಹುರ್ತ: ಬೆ.11:44 ನಿಂದ ಮ.12:32 ತನಕ ಮೇಷ ರಾಶಿ ಉದ್ಯೋಗದಲ್ಲಿ ವರ್ಗಾವಣೆಯಿಂದ ಸಂತಸ, ಕ್ರೀಡಾಕೂಟದ ಪಟುಗಳಿಗೆ ಸಿಹಿಸುದ್ದಿ,ನೀನು ತುಂಬಾ ಪ್ರಯತ್ನಿಸುತ್ತಿದ್ದೀರಿ ಆದರೆ ಅದೃಷ್ಟ ಕೈಕೊಡುತ್ತಿದೆ, ಉದ್ಯೋಗ ಸಂದರ್ಶನ, ಸರಕಾರಿ ಉದ್ಯೋಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತುಂಬಾ ಹತ್ತಿರಕ್ಕೆ ಬಂದು ನಿರಾಶೆ ಮೂಡಲಿದೆ, ನಿಮ್ಮ ತಾಳ್ಮೆ ಮತ್ತು ಧೈರ್ಯ ಪರೀಕ್ಷೆ ನಡೆಯುತ್ತಿದೆ. ಇಂದು ಆತ್ಮಸ್ಥೈರ್ಯಹೆಚ್ಚಾಗುತ್ತದೆ. ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಏರು-ಪೇರು ಸಂಭವ. ಹಣಕಾಸಿನ…

Read More

ಉತ್ತರ ಪ್ರದೇಶ:- ಇಲ್ಲಿನ ಬಾಗ್​ಪತ್​ನಲ್ಲಿ ಕೋತಿಗಳು ಬಾಲಕಿ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಯತ್ನವನ್ನು ತಪ್ಪಿಸಿರುವ ಘಟನೆ ಜರುಗಿದೆ. https://youtu.be/5cL07380dOE?si=cR1wmGIEcHjMIT3U 6 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಕೋತಿಗಳ ಗುಂಪೊಂದು ಆ ವ್ಯಕ್ತಿಯ ಮೇಲೆ ದಾಳಿ ನಡೆಸಿವೆ. ಯುಕೆಜಿ ವಿದ್ಯಾರ್ಥಿನಿ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿ ಪೋಷಕರಿಗೆ ಈ ವಿಚಾರವನ್ನು ವಿವರಿಸಿದ್ದಾಳೆ. ಕೋತಿಗಳು ತನ್ನ ಪ್ರಾಣವನ್ನು ಉಳಿಸಿರುವುದಾಗಿ ಹೇಳಿದ್ದಾಳೆ. ಸೆಪ್ಟೆಂಬರ್ 20ರಂದು ಬಾಗ್​ಪತ್​ನ ದೌಲಾ ಗ್ರಾಮದಲ್ಲಿ ಘಟನೆ ನಡೆದಿದೆ, ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್​​ಗಳಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪರಾರಿಯಾಗಿದ್ದ ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ. ಪೊಲೀಸರ ಪ್ರಕಾರ ಆರೋಪಿ ಬಾಲಕಿಯನ್ನು ಅಪಹರಿಸಿ, ಒಂದೆಡೆ ಕರೆದೊಯ್ದು ಆಕೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ್ದರು. ಇದ್ದಕ್ಕಿದ್ದಂತೆ ಕೋತಿಗಳು ಸ್ಥಳಕ್ಕೆ ಬಂದಿದ್ದವು, ಆ ಕೋತಿಗಳನ್ನು ನೋಡಿ ಆರೋಪಿ ಪರಾರಿಯಾಗಿದ್ದಾನೆ ಗ್ರಾಮದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಆರೋಪಿ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ದೃಶ್ಯಾವಳಿಗಳಿಂದ ಆರೋಪಿ ಪತ್ತೆಗೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ…

Read More

ತಿರುಪತಿ ತಿಮ್ಮಪ್ಪನ ಪ್ರಸಾದಕ್ಕೆ ಪ್ರಾಣಿ ಕೊಬ್ಬು ಮಿಕ್ಸ್​ ಆಗಿದ್ದ ವಿಚಾರ ಕೋಟ್ಯಂತರ ಭಕ್ತರ ನಂಬಿಕೆಯನ್ನೇ ಘಾಸಿಗೊಳಿಸಿದೆ. ಹಾಗಾಗಿಯೇ ಟಿಟಿಡಿ ಆಗಮಶಾಸ್ತ್ರ ಪಂಡಿತರ ಮೊರೆ ಹೋಗಿದೆ. ಆದರೂ ಕೂಡ ತಿಮ್ಮಪ್ಪನ ಮಹಾ ಪ್ರಸಾದ ಲಡ್ಡುಗೆ ಮತ್ತೆ ಬೇಡಿಕೆ ಹೆಚ್ಚಿದೆ. https://youtu.be/koI5wwjnh1g?si=SEJJjjF0-ncLD5mx ಲಡ್ಡು ತಯಾರಿಯಲ್ಲಿ ಅಪಚಾರ ನಡೆದಿದೆ ಎಂಬ ಆರೋಪಗಳ ನಡುವೆಯೂ ತಿಮ್ಮಪ್ಪನ ಪ್ರಸಾದವನ್ನು ಪರಮವಿತ್ರ ಎಂದೇ ಭಕ್ತರು ಪರಿಗಣಿಸಿದ್ದಾರೆ. ಇದಕ್ಕೆ ಲಡ್ಡು ಮಾರಾಟದ ಲೆಕ್ಕವೇ ಸಾಕ್ಷಿಯಾಗಿದೆ. ಸೆ. 19 ರಂದು 2.69 ಲಕ್ಷ, 20 ರಂದು 2.16 ಲಕ್ಷ, 21 ರಂದು 2.66 ಲಕ್ಷ ಲಡ್ಡುಗಳನ್ನು ಟಿಟಿಡಿ ಮಾರಾಟ ಮಾಡಿದೆ. ಅಂದ ಹಾಗೇ, ಲಡ್ಡು ಅಪಚಾರ ಸಂಬಂಧ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಾಳೆ ಮಹಾಶಾಂತಿ ಯಾಗ ನಿರ್ವಹಿಸಲು ಟಿಟಿಡಿ ಅಧಿಕಾರಿಗಳು ಶರವೇಗದ ಸಿದ್ಧತೆಗಳನ್ನು ನಡೆಸಿದ್ದಾರೆ. ಶುಭ ರೋಹಿಣಿ ನಕ್ಷತ್ರದಲ್ಲಿ ಮೊದಲಿಗೆ ಮಹಾಶಾಂತಿ ಹೋಮ ನಿರ್ವಹಿಸಿ ನಂತರ ವಾಸ್ತು ಹೋಮವನ್ನು ಆಗಮ ಪಂಡಿತರು ನೆರವೇರಿಸಲಿದ್ದಾರೆ. ಅಂತಿಮವಾಗಿ ಪಂಚಗವ್ಯಗಳಿಂದ ಸಂಪ್ರೋಕ್ಷಣೆ ಮಾಡಲಿದ್ದಾರೆ. ಮ್ಮಪ್ಪನ ಆರ್ಜಿತ ಸೇವೆಗಳಿಗೆ…

Read More

ರಾಮನಗರ:- ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕ ದುರ್ಮರಣ ಹೊಂದಿದ ಘಟನೆ ಕನಕಪುರ ತಾಲೂಕಿನ ದೊಡ್ಡಮುದವಾಡಿ ಗ್ರಾಮದ ಬಳಿ ಜರುಗಿದೆ. https://youtu.be/aVAmB5CjjUU?si=0umVHn2hWywHF5Q0 ಇಂದು ಬೆಳ್ಳಂಬೆಳಗ್ಗೆ ನಿದ್ರೆ ಮಂಪರಿನಲ್ಲಿದ್ದ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿದ್ದಾನೆ. ಡಿಕ್ಕಿಯಾಗಿರುವ ರಭಸಕ್ಕೆ ವಿನಯ್ ಎಂಬ ಯುವಕ ಸ್ಥಳದಲ್ಲೇ ಮೃತ ಪಟ್ಟಿದ್ದು, ಅನಿಕೇತ್ ಎಂಬವನಿಗೆ ಗಂಭೀರ ಗಾಯವಾಗಿದೆ. ಕಾರಿನಲ್ಲಿದ್ದವರು ಬೆಂಗಳೂರಿನ ಇಟ್ಟಮಡು ನಿವಾಸಿಗಳಾಗಿದ್ದು, ವೀಕೆಂಡ್ ಹಿನ್ನೆಲೆ ರೆಸಾರ್ಟ್‌ಗೆ ಬಂದಿದ್ದರು. ಹಿಂತಿರುಗಿ ಹೋಗುವಾಗ ಅಪಘಾತ ಸಂಭವಿಸಿದೆ. ಸ್ಥಳೀಯರು ಗಾಯಾಳುವನ್ನ ಹಾರೋಹಳ್ಳಿಯ ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಚಾಮರಾಜನಗರ: ಕಾರಿನೊಳಗೆ ವ್ಯಕ್ತಿ ಶವ ಪತ್ತೆಯಾದ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಜರುಗಿದೆ. ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಸ್ ನಿಲ್ದಾಣ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆಯಾಗಿದೆ. https://youtu.be/3iKQVeLwD1o?si=2AFpErWKd4dP-uSY ಸುಮಾರು 40 ರಿಂದ 45 ವರ್ಷದ ವಯಸ್ಸಿನ ಶವ ಇದಾಗಿದ್ದು, ಸ್ವಿಪ್ಟ್ ಕಾರಿನ ಹಿಂಬದಿ ಸೀಟ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕಾರಿನ ಡೋರ್ ನಿಂದ ರಕ್ತ ಕೆಳಗಡೆ ಸುರಿದು ವಾಸನೆ ಬಂದದ್ದನ್ನು ಸಾರ್ವಜನಿಕರು ಗಮನಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿರುವ ಶವ ಬನಿಯನ್ ಹಾಗೂ ಚಡ್ಡಿ ಧರಿಸುತ್ತದೆ. ದೇಹವು ಕೊಳೆತು ದುರ್ವಾಸನೆ ಬರುತ್ತಿದೆ. ಇದು ಕೊಲೆ ಎಂದು ಶಂಕಿಸಲಾಗಿದೆ. ಸಿಪಿಐ ಶಿವಮಾದಯ್ಯ, ಎಸ್‌ಐ ಸುಪ್ರೀತ್, ಕ್ರೈಂ ಪಿಎಸ್‌ಐ ಚಲುವರಾಜು ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಿಮಿಸಿ ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಾಯಚೂರು: ಮಠಮಾನ್ಯಗಳು, ದೇವಾಲಯಗಳು, ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು ಎಂದು ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಒತ್ತಾಯಿಸಿದ್ದಾರೆ. ರಾಯಚೂರಿನಲ್ಲಿ ರಾಷ್ಟ್ರಧರ್ಮ ಪಾಲನಾ ಸಮಿತಿ ರಚನೆ ವಿಚಾರವಾಗಿ ಮಾತನಾಡಿದ ಮಂತ್ರಾಲಯ ಶ್ರೀಗಳು, https://youtu.be/rf2xFm78uSM?si=x_32dSqYJ9wzC0ho ಸ್ವಾತಂತ್ರ್ಯ ಪೂರ್ವದಲ್ಲಿ ಆಯಾ ದೇವಸ್ಥಾನ, ಮಠಗಳ ಆಯಾ ಶಿಷ್ಯರು, ಭಕ್ತರ, ಸಮುದಾಯ ಮುಖಂಡರ ನೇತೃತ್ವದಲ್ಲಿ ನಿರ್ವಹಣೆ, ಕಾರ್ಯಚಟುವಟಿಕೆ ನಡೆಯುತ್ತಿತ್ತು. ಈಗ ಲೌಕಿಕ ಕಾನೂನುಗಳಿಂದ ಇದೆಲ್ಲಾ ಸರ್ಕಾರದ ವಶದಲ್ಲಿ ಹೋಗಿದೆ. ಸರ್ಕಾರದ ರಾಜಕೀಯ ಹಿನ್ನೆಲೆಯಲ್ಲಿ ತಿರುಪತಿ ಲಡ್ಡುವಿನ ಪ್ರಕರಣದಂತ ತೊಂದರೆಗಳು ಆಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆಯಾ ಪ್ರಾಂತದ ಮಠ, ದೇವಾಲಯಗಳು ಅಲ್ಲಿನ ಜನರ ನೇತೃತ್ವದಲ್ಲಿ ನಡೆಯಬೇಕು. ಇದಕ್ಕೆ ಸನಾತನ ಧರ್ಮ‌ ಪರಿರಕ್ಷಣ ಸಂಬಂಧ ಯೋಜನೆಯನ್ನ ನಾವು ಕೂಡ ಬೆಂಬಲಿಸುತ್ತೇವೆ. ನಮ್ಮ ಊರಿನ ಆಚಾರ-ಸಂಪ್ರದಾಯ ಬಗ್ಗೆ ಬೇರೆ ಯಾರೋ ಬಂದು ಹೇಳುವುದಲ್ಲಾ. ನಮ್ಮ ಊರಿನ ಹಿರಿಯರು, ಸಮುದಾಯದ ಹಿರಿಯರು, ವಿದ್ವಾಂಸರು, ಮಠಾಧೀಶರ ನೇತೃತ್ವದಲ್ಲಿ ನಡೆಯಬೇಕು ಎಂದಿದ್ದಾರೆ. ಮುಜರಾಯಿ ಇಲಾಖೆಯಿಂದ ಮಠ ಮಾನ್ಯಗಳು, ದೇವಾಲಯ,…

Read More

ಬೆಂಗಳೂರು: ನಂದಿನಿ ತುಪ್ಪ ಹೊರತುಪಡಿಸಿ, ರಾಜ್ಯದಲ್ಲಿ ಮಾರಾಟವಾಗುತ್ತಿರುವ ಉಳಿದ ತುಪ್ಪದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅದರ ಗುಣಮಟ್ಟ ಕಾಪಾಡಲು ಪರಿಶೀಲನೆ ಮಾಡಬೇಕು https://youtu.be/koI5wwjnh1g?si=ZBTOg–ksB6v_lgt ಪ್ರಸಾದಗಳ ಸ್ಯಾಂಪಲ್ ಪರಿಶೀಲನೆ ಅಲ್ಲ, ನೇರವಾಗಿ ತುಪ್ಪದ ಪರಿಶೀಲನೆ ಮಾಡಬೇಕು ಎಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ರಾಜ್ಯದಲ್ಲಿ ಬಳಸುತ್ತಿರುವ ತುಪ್ಪದ ಬಗ್ಗೆ ತಪಾಸಣೆ ಮಾಡಲು ನಮ್ಮ ಆಹಾರ ಸುರಕ್ಷತಾ ಆಯುಕ್ತರಿಗೆ ಹೇಳಿದ್ದೇನೆ. ಈಗಾಗಲೇ ಸ್ಯಾಂಪಲ್ ಕಲೆಕ್ಟ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ತಿರುಪತಿಯಲ್ಲಿ  ಆದ ರೀತಿ ಕೊಬ್ಬಿನ ಅಂಶಗಳು ಇಲ್ಲಿ ಬಳಕೆಯಾಗುತ್ತಿರುವ ತುಪ್ಪದಲ್ಲಿ ಇದೆಯಾ ಎಂದು ನೋಡುತ್ತಿದ್ದೇವೆ. ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ತುಪ್ಪ ಬರುತ್ತದೆ. ಎಲ್ಲಾ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರಿಶೀಲಿಸಲು ಹೇಳಿದ್ದೇನೆ ಎಂದು ತಿಳಿಸಿದರು. ಪ್ರಸಾದದ ಪರಿಶೀಲನೆ ನಾವು ಮಾಡುತ್ತಿಲ್ಲ. ಬೇರೆ ಪದಾರ್ಥಗಳಲ್ಲಿ ಕಲಬೆರಕೆ ಆಗುವ ಸಾಧ್ಯತೆ ಕಡಿಮೆ. ಆದರೆ ಆಂಧ್ರ ಮುಖ್ಯಮಂತ್ರಿ ತುಪ್ಪದಲ್ಲಿ ಬೇರೆ…

Read More

ಬೆಂಗಳೂರು: ತಿರುಪತಿ ಪ್ರಸಾದದ ವಿಷಯದಲ್ಲಿ ನಡೆದ ಅಪವಿತ್ರ ಶುದ್ಧಿಗಾಗಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರಭಾರತಿ ಮಹಾಸ್ವಾಮಿಗಳು ಉಪವಾಸ ಹಾಗೂ ಮೌನ ವ್ರತ ಮಾಡಲಿದ್ದಾರೆ. https://youtu.be/k8XqHnVNFGQ?si=f4jCxQg66ws8CRhM ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಹಾಗೂ ಮೀನಿನ ಎಣ್ಣೆ ಕಲಬೆರಕೆ ಅಪವಿತ್ರ ಶುದ್ಧಿಗಾಗಿ ಶ್ರೀಗಳು ಮೂರು ದಿನಗಳ ಕಾಲ ಉಪವಾಸ ಹಾಗೂ ಮೌನ ವ್ರತ ಕೈಗೊಳ್ಳಲಿದ್ದಾರೆ. ಆಗಿರುವ ಅಪಚಾರಕ್ಕೆ ಸಾರ್ವಜನಿಕರು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಶ್ರೀಗಳು ಕರೆ ನೀಡಿದ್ದಾರೆ. ಯಾವುದೇ ಪುರೋಹಿತರ ಅಗತ್ಯವಿಲ್ಲದೇ ಸಾರ್ವಜನಿಕರು ಮನೆಯಲ್ಲಿಯೇ ಮೂರು ರೀತಿಯ ಸರಳ ಪ್ರಾಯಶ್ಚಿತ್ತ ವಿಧಾನ ಮಾಡಿಕೊಳ್ಳುವ ವಿಧಾನವನ್ನು ಸೂಚಿಸಿದ್ದಾರೆ.

Read More

ಮೈಸೂರು: ದಸರಾ ಆನೆಗಳ ಮುಂದೆ ಫೋಟೊ, ಸೆಲ್ಫಿ ತೆಗೆದುಕೊಳ್ಳವವರಿಗೆ ಕಡಿವಾಣ ಹಾಕಬೇಕು ಎಂದು ಮೈಸೂರಿನಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಅರಮನೆ ಆವರಣದಲ್ಲಿ ಕಂಜನ್ ಮತ್ತು ಧನಂಜಯ್ ಆನೆಗಳ ಜಗಳ ವಿಚಾರವಾಗಿ ಮಾತನಾಡಿ, ಬಹಳ ಗಂಭೀರವಾದ ಘಟನೆ ನಡೆದಿದೆ. ಆನೆಗಳ ಗಲಾಟೆ ವಿಡಿಯೋ ನೋಡಿದ್ದೇನೆ. ಇದು ಜನರಿಂದ ಆಗಿರುವುದಲ್ಲ ಎಂದು ವರದಿ ಬಂದಿದೆ. ಭದ್ರತೆಯನ್ನು ಇನ್ನಷ್ಟು ಹೆಚ್ಚು ಮಾಡಬೇಕು. ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಆನೆಗಳ ಮುಂದೆ ಫೋಟೊ, ವಿಡಿಯೋ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಅವಕಾಶ ಕೊಡಬಾರದು ಎಂದರು.ಮಹಿಷಾ ದಸರಾ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಂವಿಧಾನ ದೃಷ್ಟಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಡಿದರೆ ತೊಂದರೆ ಇಲ್ಲ. ಯಾರಿಗೂ ಯಾವುದೇ ರೀತಿಯ ಹಾನಿಯಾಗದ ರೀತಿ ಕಾರ್ಯಕ್ರಮ ಮಾಡಿಕೊಳ್ಳಬಹುದು. ಅದನ್ನ ಯಾರು ನಿಲ್ಲಿಸಲು ಸಾಧ್ಯವಿಲ್ಲ. ತಾಯಿ ಚಾಮುಂಡೇಶ್ವರಿಯಲ್ಲಿ ನಂಬಿಕೆಯಿಟ್ಟ ಎಲ್ಲರೂ ಮತ್ತು ಧರ್ಮದಲ್ಲಿ ನಂಬಿಕೆ ಇಟ್ಟ ಎಲ್ಲರ ಭಾವನೆಗೆ ಧಕ್ಕೆಯಾಗದ ರೀತಿ ಮಾಡಿಕೊಳ್ಳಿ ಎಂದು ಹೇಳಿದರು. ಚಾಮುಂಡಿ ಬೆಟ್ಟದಲ್ಲಿ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆಗೆ…

Read More

2024ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮಾಡೆಲ್ ರಿಯಾ ಸಿಂಘಾ ಮುಡಿಗೇರಿಸಿಕೊಂಡಿದ್ದಾರೆ.  19 ವರ್ಷದ ಯುವತಿ ರಿಯಾ ರಾಜಸ್ಥಾನದ ಜೈಪುರದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಿಸಿದ್ದರು. ರಿಯಾ ಸಿಂಘಾ 2024ರ ಇಂಟರ್‌ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಗುಜರಾತ್​​​​​ ಮೂಲಕ ರಿಯಾ ಸಿಂಘಾ ಮಿಸ್​​​ ಯೂನಿವರ್ಸ್​​ ಇಂಡಿಯಾ ಕಿರೀಟ ಗೆದ್ದ ಬಳಿಕ ಮಾತನಾಡಿದ್ದು, ‘ಇಂದು ಪ್ರಶಸ್ತಿ ಗೆದ್ದ ನಂತರ ನಾನು ಕೃತಜ್ಞನಾಗಿದ್ದೇನೆ. ಈ ಮಟ್ಟಕ್ಕೆ ಬರಲು ತುಂಬಾ ಕಷ್ಟಪಟ್ಟಿದ್ದೇನೆ. ಅಲ್ಲಿ ನಾನು ಕಿರೀಟಕ್ಕೆ ಅರ್ಹನೆಂದು ಪರಿಗಣಿಸಿದೆ. ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ’ ಎಂದರು. ಬಾಲಿವುಡ್​ ನಟಿ ಊರ್ವಶಿ ರೌಟೇಲರವರು ರಿಯಾರವರಿಗೆ ಕಿರೀಟ ತೊಡಿಸಿದರು. ಬಳಿಕ ಮಾತನಾಡಿದ ಅವರು, ‘ಎಲ್ಲಾ ಹುಡುಗಿಯರ ಭಾವನೆಗಳ ಬಗ್ಗೆ ತಿಳಿದಿದೆ. ವಿಜೇತರು ಅದ್ಭುತವಾಗಿದ್ದಾರೆ. ವಿಶ್ವ ಸುಂದರಿಯ ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶವನ್ನು ಉತ್ತಮವಾಗಿ ಪ್ರತಿನಿಧಿಸುತ್ತಾರೆ ಎಂದು ಹೇಳಿದ್ದಾರೆ. ಊರ್ವಶಿ ರೌತೆಲಾ ಅವರೇ ಭಾನುವಾರ ರಾಜಸ್ಥಾನದ ಜೈಪುರದಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯ…

Read More