ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭಕ್ಕೆ ಇನ್ನೆನ್ನೂ ಕೆಲವೇ ಕೆಲವು ದಿನಗಳ ಮಾತ್ರವೇ ಭಾಕಿ ಇದೆ. ಇದೇ ಸೆಪ್ಟೆಂಬರ್ 29ರಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂದ ಆಗಲಿದೆ. ಈ ಮಧ್ಯೆ ಬಿಗ್ಬಾಸ್ ಸೀಸನ್ 11ರ ಮತ್ತೊಂದು ಪ್ರೋಮೋ ರಿಲೀಸ್ ಆಗಿದ್ದು ಪ್ರೋಮೋದಲ್ಲಿ ಬೆನ್ನಿಗೆ ಚೂರಿ ಹಾಕೋರು ಮುಂದೆ ಸ್ನೇಹಿತರಾಗಬಹುದು ಎಂದು ಸುದೀಪ್ ಹೇಳಿದ್ದಾರೆ. ಬಹುನಿರೀಕ್ಷಿತ ಕನ್ನಡದ ಬಿಗ್ಬಾಸ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದೆ. ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್ಬಾಸ್ ತಂಡ ತೆರೆ ಮರೆ ಹಿಂದೆ ಎಲ್ಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ. ಈಗ ಕಲರ್ಸ್ ಕನ್ನಡ ತನ್ನ ಅಧಿಕೃತ ಖಾತೆಯಲ್ಲಿ ಬಿಗ್ಬಾಸ್ ಪ್ರೋಮೋಗಳನ್ನು ಬಿಡುಗಡೆ ಮಾಡುವ ಮೂಲಕ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದ್ದಾರೆ. ಮೊದಲ ಸೀಸನ್ನಿಂದ ಹಿಡಿದು ಹತ್ತು ಸೀಸನ್ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಪ್ರತಿ ಸೀಸನ್ನಲ್ಲಿ ಭಿನ್ನ ವಿಭಿನ್ನವಾಗಿರೋ ಲೋಗೋಗಳು ಅನಾವರಣ ಆಗುತ್ತಲೇ ಇರುತ್ತೆ. ಆದರೆ ಈ ಬಾರಿಯ ಬಿಗ್ಬಾಸ್ ಲೋಗೋದಲ್ಲಿ ಒಂದು ಕಡೆ ಬೆಂಕಿ, ಮತ್ತೊಂದು…
Author: Prajatv Kannada
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ 100 ದಿನಗಳ ಬಳಿಕ ಕೊನೆಗೂ ಬೇಲ್ ಗೆ ಅರ್ಜಿ ಸಲ್ಲಿಸಿದ್ದಾರೆ. 57ನೇ ಸಿಸಿಹೆಚ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಸೋಮವಾರ ವಿಚಾರಣೆ ನಡೆಯಲಿದೆ. ಈ ಮಧ್ಯೆ ಮೀನಾ ತೂಗುದೀಪರವರು ಬಳ್ಳಾರಿ ಜೈಲಿಗೆ ಕರೆ ಮಾಡಿ ಮಗನೊಂದಿಗೆ ಮಾತಾಡಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ದೂರವಾಣಿ ಕರೆ ಮಾಡುವ ಮೂಲಕ ಮೀನಾ ತೂಗುದೀಪ ಧೈರ್ಯ ತುಂಬಿದ್ದಾರೆ. ಯಾವುದೇ ಆತಂಕ ಬೇಡ ರಾಜರಾಜೇಶ್ವರಿ ಆಶೀರ್ವಾದ ಇದೆ ಎಂದು ಹೇಳಿದ್ದಾರೆ. ಅಲ್ಲದೆ ನಮ್ಮ ಬಳಿ ಸ್ಟ್ರಾಂಗ್ ವಕೀಲರಿದ್ದಾರೆ ಬೇಲ್ ಸಿಗುತ್ತೆ ಅಂತಾ ದರ್ಶನ್‌ಗೆ ದೈರ್ಯ ತುಂಬಿದ್ದಾರೆ. ಪ್ರಿಸನ್ ಕಾಲ್ ಸಿಸ್ಟಮ್ ಅಡಿಯಲ್ಲಿ 5 ನಿಮಿಗಳ ಕಾಲ ದರ್ಶನ್ ತಾಯಿಯೊಂದಿಗೆ ಮಾತನಾಡಿದ್ದಾರೆ. ಕೆಟ್ಟ ಘಳಿಗೆಯಿಂದ ಘಟನೆ ನಡೆದು ಹೋಗಿದೆ ಧೈರ್ಯವಾಗಿರು ಎಂದು ಮೀನ ತೂಗುದೀಪ ಹೇಳಿದ್ದಾರೆ. ಬಳಿಕ ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ತಾಯಿಯೊಂದಿಗೆ ದರ್ಶನ್ ಭಾವುಕನಾಗಿ ಮಾತನಾಡಿದ್ದಾರೆ. ಬೇಲ್ ಅರ್ಜಿ ಸಲ್ಲಿಕೆ ಬಳಿಕ ತಾಯಿ ಜೊತೆಗೆ…
ಖ್ಯಾತ ಜಯಂ ರವಿ ಇತ್ತೀಚೆಗೆ ಪತ್ನಿ ಆರತಿಗೆ ಡಿವೋರ್ಸ್ ನೀಡ್ತಿರೋದಾಗಿ ಘೋಷಿಸಿದ್ದಾರೆ. ಬೆಂಗಳೂರು ಮೂಲದ ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗೆ ಜಯಂ ರವಿ ರಿಲೇಶನ್ ಹೊಂದಿದ್ದಾರೆ ಎಂಬ ಊಹಾಪೋಹಗಳ ನಡುವೆ, ನಟಿ ಖುಷ್ಬೂ ಸುಂದರ್ ಇತ್ತೀಚೆಗೆ ಪತಿ- ಪತ್ನಿ ಅನುಬಂಧದ ಬಗ್ಗೆ ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದಾರೆ. ಖುಷ್ಭೂ ಮಾಡಿರುವ ಪೋಸ್ಟ್ ಪರೋಕ್ಷವಾಘಿ ಜಯಂ ರವಿ ಕುರಿತು ಎನ್ನಲಾಗುತ್ತಿದೆ. ಒಬ್ಬ ನಿಜವಾದ ವ್ಯಕ್ತಿ ಕುಟುಂಬದ ಘನತೆಗೋಸ್ಕರ ಏನು ಬೇಕಾದರೂ ಮಾಡುತ್ತಾನೆ. ತನ್ನ ಕುಟುಂಬವನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ಪ್ರೀತಿಸಿದವರ ಅವಶ್ಯಕತೆ, ಆಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಾನೆ. ಮದುವೆಯ ಜೀವನದಲ್ಲಿ ಏರಿಳಿತಗಳು ಸಹಜ. ಚಿಕ್ಕ ಚಿಕ್ಕ ತಪ್ಪುಗಳು ನಡೆಯುತ್ತವೆ. ಜೀವನದ ಪ್ರಯಾಣದಲ್ಲಿ, ಪ್ರತಿ ಮದುವೆಯು ಅದರ ಏರಿಳಿತಗಳನ್ನು ಎದುರಿಸುತ್ತದೆ. ಪ್ರೀತಿ ಆಗಾಗ ಕಮ್ಮಿ ಆಗಬಹುದು. ಆದರೆ ಗೌರವ, ಮರ್ಯಾದೆ ಕಮ್ಮಿ ಆಗಬಾರದು. ಪುರುಷ ತನ್ನ ಪತ್ನಿಗೆ ಸರಿಯಾಗಿ ಗೌರವ ಕೊಡಬೇಕು ಎಂದು ಖುಷ್ಭೂ ಬರೆದುಕೊಂಡಿದ್ದಾರೆ. ನಿಜವಾದ ಪುರುಷನು ತನ್ನ ಮಕ್ಕಳನ್ನು ಹೆರುವ ಮಹಿಳೆಯನ್ನು ಗೌರವಿಸುತ್ತಾನೆ. ಯಾರ…
ಜೊತೆ ಜೊತೆಯಲಿ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ನಟಿ ಮೇಘಾ ಶೆಟ್ಟಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತಿಯಲ್ಲೂ ತೊಡಗಿಕೊಂಡಿರುವ ನಟಿ ಆಗಾಗ ಫೋಟೋ ಶೂಟ್ ಗಳ ಮೂಲಕವು ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ನಟಿ ಮೇಘಾ ಶೆಟ್ಟಿ ಆಗಾಗ ತಮ್ಮ ಫೋಟೋ ಶೂಟ್ ಮೂಲಕವು ಸದ್ದು ಮಾಡ್ತಿರ್ತಾರೆ. ಇದೀಗ ಮೇಘಾ ಶೆಟ್ಟಿ ಕೇರಳ ಕುಟ್ಟಿಯಂತೆ ಸೀರೆಯುಟ್ಟು ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ. ಗೋಲ್ಡ್ ಬಾರ್ಡರ್ ಇರುವ ಕೇರಳ ಸೀರೆಯುಟ್ಟು ನಟಿ ಮೇಘಾ ಶೆಟ್ಟಿ ಮಿಂಚಿದ್ದಾರೆ. ಇತ್ತೀಚಿಗಷ್ಟೇ ಓಣಂ ಹಬ್ಬ ಕೂಡ ಮುಗಿದೆ. ಈಗ ಕೇರಳ ಸ್ಟೈಲ್ ಸೀರೆಯುಟ್ಟ ಫೋಟೋವನ್ನು ಶೇರ್ ಮಾಡಿದ್ದಾರೆ. ಚೆಂದದ ಸೀರೆಯುಟ್ಟ ಮೇಘಾ ಶೆಟ್ಟಿ ಗೊಂಬೆಯಂತೆ ಕಾಣುತ್ತಿದ್ದು, ಫೋಟೋ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಮೇಘಾ ಶೆಟ್ಟಿ, ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಲೇಟೆಸ್ಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಮೇಘಾ ಶೆಟ್ಟಿ ಕೇರಳ…
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈದ್ ಮತ್ತು ಮೊಹರಂ ಹಬ್ಬದ ಸಂದರ್ಭದಲ್ಲಿ ಉಚಿತವಾಗಿ ಎರಡು ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ. ಮೆಂಧಾರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಬ್ದುಲ್ಲಾ, ಮುಫ್ತಿ ಮತ್ತು ನೆಹರು-ಗಾಂಧಿ ಕುಟುಂಬವು 90ರ ದಶಕದಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹರಡಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಯೋತ್ಪಾದನೆ ಕೊನೆಯಾಗಿದೆ. ಇಲ್ಲಿನ ಯುವಕರ ಕೈಗೆ ಕಲ್ಲುಗಳ ಬದಲಾಗಿ ಲ್ಯಾಪ್‌ಟಾಪ್ ನೀಡಲಾಗಿದೆ ಎಂದರು. ಅಬ್ದುಲ್ಲಾ, ಮುಫ್ತಿ , ಮತ್ತು ನೆಹರು-ಗಾಂಧಿ ಕುಟುಂಬ ಈ ಮೂರು ಕುಟುಂಬಗಳು ಇಲ್ಲಿ ಪ್ರಜಾಪ್ರಭುತ್ವವನ್ನು ನಿಲ್ಲಿಸಿದ್ದವು. ಈ ಚುನಾವಣೆಯು ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಮೂರು ಕುಟುಂಬಗಳ ಆಡಳಿತವನ್ನು ಕೊನೆಗೊಳಿಸಲಿದೆ. 2014 ರಲ್ಲಿ ಮೋದಿ ಸರ್ಕಾರ ಬರದಿದ್ದರೆ ಇಲ್ಲಿ ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಇಲ್ಲಿ 35 ವರ್ಷ ಆಳಿತು. ಭಯೋತ್ಪಾದನೆ ಹೆಚ್ಚಾಯಿತು. 40…
ನವದೆಹಲಿ: ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಸೆಪ್ಟೆಂಬರ್ 30 ರಂದು ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 5,000 ಗಂಟೆಗಳ ಯುದ್ಧ ವಿಮಾನ ಹಾರಾಟದ ಅನುಭವ ಹೊಂದಿರುವ ಅಮರ್ ಪ್ರೀತ್ ಸಿಂಗ್ ಪ್ರಸ್ತುತ ವಾಯುಪಡೆಯ ವೈಸ್ ಚೀಫ್ ಆಫ್ ದಿ ಏರ್ ಸ್ಟಾಫ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ನಿವೃತ್ತರಾದ ನಂತರ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಐಎಎಫ್ ಆಯೋಜಿಸಿದ್ದ ಬಹುರಾಷ್ಟ್ರೀಯ ಯುದ್ಧ ವಿಮಾನಗಳ ಕಸರತ್ತು `ತರಂಗ್ ಶಕ್ತಿ’ ಆಯೋಜಿಸುವಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಅಕ್ಟೋಬರ್ 27, 1964 ರಂದು ಜನಿಸಿದ ಏರ್ ಮಾರ್ಷಲ್ ಸಿಂಗ್ ಅವರು ಡಿಸೆಂಬರ್ 1984 ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಪೈಲಟ್ ಸ್ಟ್ರೀಮ್‍ಗೆ ನಿಯೋಜಿಸಲ್ಪಟ್ಟರು. ಸುಮಾರು 40 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆಯಲ್ಲಿ, ವಿವಿಧ ಕಮಾಂಡ್, ಮತ್ತು ವಿದೇಶಿ ನೇಮಕಾತಿಯಲ್ಲೂ ಸೇವೆ ಸಲ್ಲಿಸಿದ್ದಾರೆ. ಸಿಂಗ್ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಡಿಫೆನ್ಸ್ ಸರ್ವಿಸಸ್ ಸ್ಟಾಫ್…
ಬೀದರ್:-ಜಿಲ್ಲೆ ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದಲ್ಲಿ ಗಂಡನೋರ್ವ ತನ್ನ ಹೆಂಡತಿ ಜೊತೆ ಸಂಬಂಧ ಹೊಂದಿದ್ದ ಯುವಕನ ಮಾರ್ಮಾಂಗವನ್ನೇ ಕಟ್ ಮಾಡಿರೋ ಘಟನೆ ಜರುಗಿದೆ. ಸುನೀಲ್ ಎಂಬಾತನ ಮರ್ಮಾಂಗಕ್ಕೆ ಕಟ್ ಮಾಡಲಾಗಿದೆ. ನಿನ್ನೆ ರಾತ್ರಿ ಆಂಟಿ ನೋಡಲು ಮನೆ ಬಳಿ ತೆರಳಿದ್ದಾಗ ಸುನಿಲ್ ಲಾಕ್ ಆಗಿದ್ದ. ಈ ವೇಳೆ ಯುವಕನ ಮೇಲೆ ಹಲ್ಲೆ ನಡೆಸಿದ ಮಹಿಳೆ ಪತಿ, ಆತನ ಮರ್ಮಾಂಗವನ್ನೇ ಕಟ್ ಮಾಡಿ ಅನೈತಿಕ ಸಂಬಂದಕ್ಕೆ ಬ್ರೇಕ್ ಹಾಕಿದ್ದಾನೆ. ಇದೀಗ ಮಹಿಳೆ ಪತಿ ವಿರುದ್ದ ಮುನ್ನಾಏಖೇಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಆರೆಸ್ಟ್ ಮಾಡಲಾಗಿದೆ. ಗಾಯಾಳು ಸುನಿಲ್ ತನ್ನ ಮರ್ಮಾಂಗದ ಜೊತೆ ಬೀದರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರವಾರ:- ಬೆಳ್ಳಂಬೆಳಗ್ಗೆ ಮಹಾರಾಷ್ಟ್ರದ ಪುಣೆಯ ಉದ್ಯಮಿ ವಿನಾಯಕ ನಾಯ್ಕ ಎಂಬುವವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೊಣ ಗ್ರಾಮದ ಮನೆಯಲ್ಲಿ ಜರುಗಿದೆ. ದುಷ್ಕರ್ಮಿಗಳು ವಿನಾಯಕ ದಂಪತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು ಪತಿ ವಿನಾಯಕ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಗೆ ಗಂಭೀರ ಗಾಯಗಳಾಗಿವೆ. ಮಹಿಳೆಯನ್ನ ಕಾರವಾರ ಜಿಲ್ಲಾಸ್ಪತ್ರೆಗೆ ರವಾನೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊಲೆ ಯಾರೂ ಮಾಡಿದ್ರು ಮತ್ತು ಯಾಕೆ ಮಾಡಿದ್ರು ಎಂಬುವುದು ತಿಳಿದುಬಂದಿಲ್ಲ. ಚಿತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪತ್ನಿ ಸಮೇತ ಪುಣೆಯಲ್ಲಿ ವಾಸವಾಗಿದ್ದ ವಿನಾಯಕ್ ಅವರು ಕಳೆದ ವಾರ ಗ್ರಾಮ ದೇವರ ಜಾತ್ರೆಗೆಂದು ಕಾರವಾರಕ್ಕೆ ಬಂದಿದ್ದರು. ಇಂದು ಬೆಳಗ್ಗೆ ಪುಣೆಗೆ ಹೋಗುವುದಾಗಿ ಸ್ನೇಹಿತರಿಗೆ ತಿಳಿಸಿದ್ದರು. ಬೆಳಗಿನ ಜಾವ ಮಚ್ಚಿನಿಂದ ದಾಳಿ ನಡೆಸಿ ಕೊಲೆ ಮಾಡಿರುವುದು ಸಾಕಷ್ಟು ಅನುಮಾನ ಹುಟ್ಟುವಂತೆ ಮಾಡಿದೆ.
ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳವಾಗಿದ್ದು, ಇನ್ನು ಮೂರ್ನಾಲ್ಕು ದಿನಗಳು ಇದೇ ರೀತಿ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಸಿಲಿಕಾನ್ ಸಿಟಿಯಲ್ಲಿ ಮಳೆಗಾಲದಲ್ಲೂ ಬೇಸಿಗೆ ಅನುಭವವಾಗುತ್ತಿದ್ದು, ನಗರದಲ್ಲಿ ಬಿಸಿಲಿನ ಗರಿಷ್ಠ ಉಷ್ಣಾಂಶ 32 ಡಿಗ್ರಿಯವರೆಗೂ ದಾಟಿದೆ. ಇನ್ನು ಬಿಸಿಲಿನ ಜೊತೆಗೆ ಬಿಸಿಗಾಳಿಯ ಅನುಭವವು ಆಗುತ್ತಿದ್ದು, ಈ ಬಿಸಿಲಿನಿಂದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ. ಸಧ್ಯ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಬೆಳಗ್ಗಿನ ಜಾವದ ವೇಳೆ ಚಳಿಯ ಅನುಭವ, ಮಧ್ಯಾಹ್ನ ಬಿಸಿಲಿನ ಅನುಭವ ಸಂಜೆಯಾಗುತ್ತಿದ್ದಂತೆ ಮಳೆಯ ವಾತಾವರಣ ಕಂಡುಬರುತ್ತಿದೆ. ಇದೇ ವಾತಾವರಣ ಇನ್ನು ಒಂದು ವಾರ ಕಂಡುಬರಲಿದ್ದು, ಮಕ್ಕಳನ್ನ ಮಧ್ಯಾಹ್ನದ ವೇಳೆ ಬಿಸಿಲಿಗೆ ಬಿಡದಂತೆ ಎಚ್ಚರವಹಿಸಲು ಹವಾಮಾನ ಇಲಾಖೆ ತಜ್ಞರು ಹೇಳ್ತಿದ್ದಾರೆ.
ಬೆಂಗಳೂರು :- ತಿಮ್ಮಪ್ಪನ ಲಡ್ಡು ವಿವಾದ ಬೆನ್ನಲ್ಲೇ ಅಲರ್ಟ್ ಆಗಿರುವ ಆರೋಗ್ಯ ಇಲಾಖೆ, ಕರ್ನಾಟಕದ ವಿವಿಧ ಕಂಪನಿಗಳಲ್ಲಿ ತುಪ್ಪ ಪರೀಕ್ಷಿಸಲು ನಿರ್ಧಾರ ಮಾಡಿದೆ.ಕರ್ನಾಟಕದಲ್ಲಿ ತಯಾರಾಗುವ ಮತ್ತು ಮಾರಾಟ ಮಾಡುತ್ತಿರುವ ವಿವಿಧ ಕಂಪನಿಯ ತುಪ್ಪಗಳನ್ನು ಪರೀಕ್ಷೆ ನಡೆಸುವಂತೆ ಸಚಿವ ದಿನೇಶ್ ಗುಂಡೂರಾವ್ ರಾಜ್ಯ ಆಹಾರ ಸುರಕ್ಷಿತ ಹಾಗೂ ಗುಣಮಟ್ಟ ಇಲಾಖೆಗೆ ಆದೇಶಿಸಿದ್ದಾರೆ. ತ್ವರಿತಗತಿಯಲ್ಲಿ ವಿವಿಧ ಕಂಪನಿಗಳ ತುಪ್ಪದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ. ವರದಿ ಬಂದ ಬಳಿಕ ಇವುಗಳಲ್ಲಿ ಕಲಬೆರಕೆ ಕಂಡು ಬಂದಲ್ಲಿ, ಕೂಡಲೇ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಸಚಿವರ ಆದೇಶ ಬೆನ್ನಲ್ಲೇ ವಿವಿಧ ಕಂಪನಿಗಳ ತುಪ್ಪದ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಜೊತೆಗೆ ರಾಜ್ಯದ ದೇವಸ್ಥಾನಗಳಲ್ಲಿ ತುಪ್ಪದಿಂದ ತಯಾರಾಗುವ ಪ್ರಸಾದಗಳ ಮಾದರಿಯನ್ನೂ ಆಹಾರ ಇಲಾಖೆ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ತಯಾರಿ ನಡೆಸಿದೆ. ತಿರುಪತಿ ಲಡ್ಡುವಿಗೂ ಕೋಲಾರ ಹಾಲು ಒಕ್ಕೂಟಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ತಿರುಪತಿ ಲಡ್ಡುವಿನ ಸ್ವಾದದ ಹಿಂದೆ ಕೋಲಾರ ಹಾಲು ಒಕ್ಕೂಟದ ಶುದ್ದ ತುಪ್ಪದ…