ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಕೊನೆಗೂ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಘಟನೆ ನಡೆದು 100 ದಿನ ಕಳೆದಿದ್ರು ದರ್ಶನ್ ಯಾಕೆ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದರು. ಇದೀಗ ಚಾರ್ಜ್ ಶೀಟ್ ಸಲ್ಲಿಸಿ ಕೆಲ ದಿನಗಳ ಬಳಿಕ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಇನ್ನೂ ಕೆಲವು ಆರೋಪಿಗಳು ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಗಳು ತಿರಸ್ಕೃತಗೊಂಡಿವೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಎರಡನೇ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ದರ್ಶನ್ ಮಾತ್ರ ಈವರೆಗೆ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ಕೊನೆಗೂ ದರ್ಶನ್ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಪ್ರಕರಣದ ಆರೋಪ ಪಟ್ಟಿ ಸಲ್ಲಿಕೆಯಾಗಿ ಎರಡು ವಾರಕ್ಕೂ ಹೆಚ್ಚು ಸಮಯವಾಗಿದ್ದು, ತುಸು ಹೆಚ್ಚೇ ಸಮಯ ತೆಗೆದುಕೊಂಡು ದರ್ಶನ್, ತಮ್ಮ ವಕೀಲರ ಕಡೆಯಿಂದ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ…
Author: Prajatv Kannada
ಬಾಲಿವುಡ್ ನಟಿ ಕರೀನಾ ಕಪೂರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 44ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್ ಹಾಕಿದ್ದಾರೆ. ಕೆಂಪು ಬಣ್ಣದ ಗೌನ್‌ನಲ್ಲಿ ಸಖತ್ತಾಗಿ ಕರೀನಾ ಕಾಣಿಸಿಕೊಂಡಿದ್ದು ಈಕೆಗೆ 44 ವರ್ಷವಾ ಎಂದು ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಅಂದಹಾಗೆ ಕರೀನಾ ಬರ್ತ್‌ಡೇ ಜೊತೆಗೆ ಮತ್ತೊಂದು ಸಂತೋಷದ ಸುದ್ದಿ ಕೂಡಾ ಅಭಿಮಾನಿಗಳು ಹಬ್ಬ ಮಾಡೋಕೆ ಕಾರಣವಾಗಿದೆ. ಹೌದು, ಕರೀನಾ ಕಪೂರ್ ಬಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟು 25 ವರ್ಷವಾಗಿದೆ. ಈ ಹಿನ್ನೆಲೆ ಬಾಲಿವುಡ್‌ನಲ್ಲಿ ಕೆಕೆಕೆ ಫಿಲ್ಮ್ ಫೆಸ್ಟಿವಲ್ ಮಾಡೋಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಕೆಕೆಕೆ ಫಿಲ್ಮ್ ಫೆಸ್ಟಿವಲ್, 15 ನಗರಗಳಲ್ಲಿ 30 ಚಿತ್ರಮಂದಿರಗಳಲ್ಲಿ ವಿಶೇಷ ಚಲನಚಿತ್ರೋತ್ಸವ ನಡೆಸಲಾಗುತ್ತೆ. `ಜಬ್ ವಿ ಮೇಟ್’, `ಚಮೇಲಿ’, `ಹೀರೋಯಿನ್’ ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಮಾಡೆಲಿಂಗ್ ಹಾಗೂ ಸಿನಿಮಾ ರಂಗದಲ್ಲಿ ಈಗಲೂ ತೊಡಗಿಸಿಕೊಂಡಿರುವ ಕರೀನಾ ಫ್ಯಾಮಿಲಿ ಜೊತೆ ವಿಶೇಷವಾಗಿ ಬರ್ತಡೇ ಸೆಲೆಬ್ರೇಟ್ ಮಾಡಲಿದ್ದಾರೆ.
ಕಲಬುರ್ಗಿ:- ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡ್ಯಾಳ ಬಳಿ ಮಾಜಿ ಗ್ರಾಂ ಸದಸ್ಯ ವಿಶ್ವನಾಥ್ ಜಮಾದಾರ್ ಹತ್ಯೆ ಪ್ರಕರಣದ ಕೊಲೆ ಆರೋಪಿ ಲಕ್ಷ್ಮಣ ಪೂಜಾರಿ ಕಾಲಿಗೆ ಪೊಲೀಸ್ ಫೈರಿಂಗ್ ಮಾಡಿದ್ದಾರೆ. https://youtu.be/axHCupg23rA?si=V5YCOW0PseYFutxB ಪಿಎಸ್‌ಐ ಇಂದುಮತಿ ಅವರು, ಲಕ್ಷ್ಮಣ ಪೂಜಾರಿ ಬಲಗಾಲಿಗೆ ಪೈರಿಂಗ್ ಮಾಡಿದ್ದಾರೆ. ಕೊಲೆ ಕೇಸ್ ನಲ್ಲಿ ಗನ್ ರಿಕವರಿ ಸಲುವಾಗಿ ತೇರಳಿದ್ದ ವೇಳೆ ಪೊಲೀಸರ ಮೇಲೆ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಇನ್ನೂ ಕಳೆದ 13 ರಂದು ಆಳಂದ ತಾಲ್ಲೂಕಿನ ಖಾನಾಪುರ ಕ್ರಾಸ್ ಬಳಿ ಗ್ರಾಂ ಸದಸ್ಯ ವಿಶ್ವನಾಥ್ ಪೂಜಾರಿ ಮೇಲೆ ಮೂರು ಬಾರಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಇನ್ನೂ ಕೊಲೆ ಆರೋಪಿ ಲಕ್ಷ್ಮಣ್ ಪೂಜಾರಿ ಮೇಲೆ 11 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.
ಕಾರವಾರ: ಶಿರೂರು ಭೂ ಕುಸಿತದ ಬಳಿಕ ಗಂಗಾವಳಿ ನದಿಯಾಳದಲ್ಲಿ ಬಿದ್ದ ಟ್ರಕ್ ಕೊನೆಗೂ ಪತ್ತೆಯಾಗಿದೆ. https://youtu.be/a38nRMqEhX0?si=6VKoOKvMsIVRF0cb ಜುಲೈ 16 ರಂದು ಭೂ ಕುಸಿತ ಸಂಭವಿಸಿದ ಬಳಿಕ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ಗಂಗಾವಳಿ ನದಿಗೆ ಬಿದ್ದಿತ್ತು. ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್ ಪತ್ತೆ ಮಾಡಲು ಕಷ್ಟವಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್ ಪತ್ತೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು. ಈಗ ಟ್ರಕ್ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ಸಿಕ್ಕಿ ಬಿದ್ದಿದೆ. ಟ್ರಕ್ ಮೇಲೆ ಸಾಕಷ್ಟು ಕಲ್ಲು ಮತ್ತು ಮಣ್ಣುಗಳಿವೆ. ಹೀಗಾಗಿ ಮಣ್ಣು ಮತ್ತು ಕಲ್ಲುಗಳನ್ನು ತೆಗೆದು ಟ್ರಕ್ ಮೇಲಕ್ಕೆ ಎತ್ತಲು ಸಿದ್ಧತೆ ನಡೆಯುತ್ತಿದೆ. ಜುಲೈ 16 ರಂದು ಭೂಕುಸಿತ ಸಂಭವಿಸಿದಾಗ ಅರ್ಜುನ್ ಮರ ತುಂಬಿಸಿಕೊಂಡು ಟ್ರಕ್‌ನಲ್ಲಿ ಕೋಝಿಕ್ಕೋಡ್ ಕಡೆಗೆ ಹೋಗುತ್ತಿದ್ದರು.
ಬೆಂಗಳೂರು: ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿ ಕೊಬ್ಬು ಬಳಸಿದ ಪ್ರಕರಣ ತನಿಖೆ ಆಗಲಿ ಎಂದು ಸಚಿವ ಎಂ.ಬಿ ಪಾಟೀಲ್ಹೇ ಳಿದ್ದಾರೆ. https://youtu.be/a38nRMqEhX0?si=0PAA6S1r9DziTp95 ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕವಾಗಿ ಪಾವಿತ್ರ್ಯ ಹೊಂದಿರುವ ತಿರುಪತಿ ಲಡ್ಡುವಿಗೆ ಪ್ರಾಣಿ ಜನ್ಯ ಕೊಬ್ಬನ್ನು ಸೇರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ನಿಜವೇ ಆಗಿದ್ದಲ್ಲಿ ತುಂಬಾ ಆಘಾತಕಾರಿಯಾಗಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆದು, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದರು. ಮೊದಲೆಲ್ಲ ಕೆಎಂಎಫ್ ತಿರುಪತಿಗೆ ತುಪ್ಪ ಪೂರೈಸುತ್ತಿತ್ತು. ಆಗ ಕಲಬೆರಕೆ ಇತ್ಯಾದಿ ಏನೂ ಇರಲಿಲ್ಲ. ಈ ಬಗ್ಗೆ ನಾನು ಕೆಎಂಎಫ್ ಅಧ್ಯಕ್ಷರ ಜೊತೆ ಕೂಡ ಮಾತನಾಡಿದ್ದೇನೆ. ಯಾರೇ ಆದರೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು. ಈ ಪ್ರಕರಣ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದರು.
ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ಬಿಗ್ ಶಾಕ್ ಕೊಟ್ಟಿದೆ. ಈ ಬಗ್ಗೆ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಮೊಹಮ್ಮದ್ ಶಮಿ ಮಾತಾಡಿದ್ದಾರೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ನಲ್ಲಿ ಮುಂದಿನ ಸೀಸನ್ಗೆ ಇರ್ತಾರಾ? ಎಂಬ ಪ್ರಶ್ನೆಗೆ ಶಮಿ ಉತ್ತರ ಹೀಗಿತ್ತು. ಅದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಿರ್ಧಾರ ಎಂದು ಉತ್ತರ ಕೊಟ್ಟರು. ಕಳೆದ ಸಲ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿದ್ರು. ಈ ಸಲ ಕೂಡ ಹಾರ್ದಿಕ್ ಅವರೇ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಅವರನ್ನು ಉಳಿಸಿಕೊಳ್ಳಬೇಕಾ? ಬೇಡವೇ? ಅನ್ನೋದು ಫ್ರಾಂಚೈಸಿ ನಿರ್ಧಾರ. ಫ್ರಾಂಚೈಸಿಗಳು ಆಟಗಾರರ ಫ್ಯಾನ್ ಬೇಸ್ ನೋಡುತ್ತವೆ. ಯಾವಾಗಲೂ ಆಟಗಾರನ ಬಗ್ಗೆ ಯೋಚನೆ ಮಾಡುತ್ತವೆ. ಮುಂಬೈ ಇಂಡಿಯನ್ಸ್ ಮೈನ್ ಬೇಸ್ ರೋಹಿತ್ ಶರ್ಮಾ ಫ್ಯಾನ್ಸ್. ಹಾಗಾಗಿ ರೋಹಿತ್ ಮತ್ತೆ ಮುಂಬೈ ಕ್ಯಾಪ್ಟನ್ ಆಗಬಹುದು ಎಂದರು. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಕಪ್ ಗೆದ್ದಿದೆ. ಈ ಮುಂಬೈ ಇಂಡಿಯನ್ಸ್ಗೆ ಹೊಸ ಕ್ಯಾಪ್ಟನ್ ಹಾರ್ದಿಕ್…
ಅಪಘಾನಿಸ್ತಾನ ಕ್ರಿಕೆಟ್ ತಂಡ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದೆ. ಶುಕ್ರವಾರ (ಸೆಪ್ಟೆಂಬರ್ 20) ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ 177 ರನ್ ಗೆಲುವು ಸಾಧಿಸಿದ ಅಫಘಾನಿಸ್ತಾನ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ರೆಹಮಾನುಲ್ಲಾ ಗುರ್ಬಾಜ್ (105 ರನ್) ಹಾಗೂ ರಶೀದ್ ಖಾನ್ (19ಕ್ಕೆ5) ಅಫ್ಘಾನ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಮೊದಲ ಪಂದ್ಯದಲ್ಲಿ ಅಫಘಾನಿಸ್ತಾನ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಜೀವಂತವಾಗಿಸುವ ಲೆಕ್ಕಾಚಾರದಲ್ಲಿದ್ದ ಏಡೆನ್ ಮಾರ್ಕ್ರಮ್ ಪಡೆ, ರಶೀದ್ ಖಾನ್ (5 ವಿಕೆಟ್) ಹಾಗೂ ನಂಗೆಯಲಿಯಾ ಖರೋಟೆ (4 ವಿಕೆಟ್) ಅವರ ದಾಳಿಗೆ ಸಿಲುಕಿ 134 ರನ್‌ಗಳಿಗೆ ಆಲೌಟ್ ಆಗಿ ಆಘಾತ ಅನುಭವಿಸಿತು. ರೆಜಾ ಹಸನ್ ಔಟಾದ ನಂತರ ಎರಡನೇ ವಿಕೆಟ್‌ಗೆ ಜೊತೆಗೂಡಿದ ರೆಹಮಾನುಲ್ಲಾ ಗುಲ್ಬರ್ಜ್ (105 ರನ್, 10X4,3X6)…
ಮೈಸೂರು: ವಿಶ್ವವಿಖ್ಯಾತ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ ದಾಳಿ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದಾಳಿಗೆ ತತ್ತರಿಸಿದ ಕಂಜನ್ ಆನೆ ದಿಕ್ಕೆ ಕಾಣದಂತೆ ಅರಮನೆ ಆವರಣದಿಂದ ಹೊರ ಓಡಿದ್ದಾನೆ. https://youtu.be/pgx1cELbtcs?si=6HmSDtU7BPqICkin ಕಂಜನ್ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಬಿಡಿಸಿಕೊಂಡು ಅರಮನೆಯಾಚೆಗೆ ಬಂದಿರುವ ಹಾಗೂ ಅವನನ್ನು ಹಿಡಿದು ತರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿರುವ ದೃಶ್ಯಗಳೂ ಸೆರೆಯಾಗಿವೆ. ‘ಮಹೇಂದ್ರ’ ಆನೆಯು ಕಂಜನ್‌ನನ್ನು ನಿಯಂತ್ರಿಸಲು ಹಿಂದಿನಿಂದ ಓಡಿತು. ಜನರು ಆನೆ ಓಡಿಬರುವುದನ್ನು ನೋಡಿ ದಿಕ್ಕಾಪಾಲಾಗಿ ಓಡಿದರು. ದೊಡ್ಡಕೆರೆ ಮೈದಾನದ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿನ ವಾಹನಗಳನ್ನು ನೋಡುತ್ತಿದ್ದಂತೆ ಕಂಜನ್ ಬೆದರಿ ನಿಂತನು. ಮಾವುತರು ಕಾವಾಡಿಗರು ಸಮಾಧಾನ ಪಡಿಸಿದರು. ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಯು ರಾತ್ರಿ 8ರ ಸುಮಾರು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಅರಮನೆ ಆವರಣದ ಒಳಗೆ ಇದ್ದ ದಸರಾ ಆನೆ ಧನಂಜಯ ಏಕಾಏಕಿ ಮತ್ತೊಂದು ಆನೆ ಕಂಜನ್ ಮೇಲೆ ದಾಳಿ ಮಾಡಿ ಅಟ್ಟಾಡಿಸುವ…
ಬಾಗಲಕೋಟೆ: ಇತ್ತೀಚಿಗೆ ಈದ್ ಮಿಲಾದ್ ಮೆರಣಿಗೆಯಲ್ಲಿ ಪಾಕ್, ಪ್ಯಾಲಿಸ್ತಾನ್ ಧ್ವಜ ಹಿಡಿದು ಹಾರಾಡಿಸಿರುವ ಪ್ರಕರಣಗಳ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. https://youtu.be/NcDNpmxuV6A?si=hnCv0D4PWREvpu9A ಮಾಧ್ಯಮಗಳ ಬಳಿ ಮಾತನಾಡಿದ ಅವರು, ಇವತ್ತು ಇಡೀ ದೇಶದಲ್ಲಿ ವಿಶ್ವನಾಯಕ ನರೇಂದ್ರ ಮೋದಿ ಅಗಿದ್ದನ್ನು ಇಡೀ ವಿಶ್ವ ಮೆಚ್ಚುತ್ತೆ.ಆದರೆ, ವಿದೇಶಿಯ ಅನೇಕ ದ್ರೋಹಿ ಚಟುವಟಿಕೆಗಳು ಉಗ್ರಗಾಮಿ ಚಟುವಟಿಕೆಗಳು ಭಯೋತ್ಪಾದಕರಿಗೆ ಬೆಂಬಲ ಕೊಡುವ ಚಟುವಟಿಕೆಗಳು ಈ ದೃಷ್ಕೃತ್ಯಗಳಿಗೆ ಬೆಂಬಲ ಕೊಡ್ತಿದ್ದಾರೆ. ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ. ಹಾಗೆ ಬರೀ ಬಾಗಲಕೋಟೆ, ಬೆಳಗಾವಿ, ಮಂಗಳೂರ ಅನ್ಕೋಬೇಡಿ ಎಲ್ಲೆಲ್ಲಿ ಅವರಿಗೆ ಶಕ್ತಿ ಇದೆಯೋ ಅಲ್ಲೆಲ್ಲ ಮಾಡ್ತಾರೆ. ಇದನ್ನ ತಡೆಯುವುದು ಯಾರು? ರಾಜ್ಯ ಸರ್ಕಾರ ಸರ್ಕಾರ ಬರೀ ಮುಸ್ಲಿಂರಿಗೆ ನೆಮ್ಮದಿ ಕೊಡೋದಲ್ಲ. ಹಿಂದು, ಮುಸ್ಲಿಂ, ಕ್ರಿಶ್ಚನ್ ಸಮಾಜಕ್ಕೆ, ಕನ್ನಡಿಗರಿಗೆ ನೆಮ್ಮದಿ ಕೊಡಬೇಕು. ಈ ದಿಕ್ಕಿನಲ್ಲಿ ಸಿಎಂ ಪ್ರಯತ್ನ ಮಾಡಬೇಕು. ಗಲಭೆ ಆದಾಗ ಒಬ್ಬರು ಸಣ್ಣ ಘಟನೆ ಅಂತಾರೆ, ಇನ್ನೊಬ್ಬರು ಪ್ಲಾಗ್ ಹಿಡಿದು ಹೋಗೊದು ತಪ್ಪೇನು ಅಂತಾರೆ. ಮುಖ್ಯಮಂತ್ರಿಗಳು ಬಿಜೆಪಿ ಮೇಲೆ ಹಾಕ್ತಾರೆ ನಾನು…
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ದಿನಗಣನೆಗಳು ಶುರುವಾಗಿವೆ.2024ರ ದಸರಾ ಚಟುವಟಿಗಳ ಸಿದ್ದತೆ ಈಗಾಗಲೇ ಆರಂಭಗೊಂಡಿದ್ದು, ದಸರಾಗೆ ಅಕ್ಟೋಬರ್ 3ರಂದು ಚಾಲನೆ ಸಿಗಲಿದೆ. https://youtu.be/m4JIsdmM2vA?si=oNSIt2iqhRX1jA-s ಇದರ ನಡುವೆ ಇನ್ನೊಂದೆಡೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅ. 3 ರಿಂದ 20 ತನಕ ದಸರಾ ರಜೆ ಘೋಷಿಸಿದೆ. ಅ.3 ರಿಂದ 20ರ ತನಕ ಅಂದರೆ 17 ದಿನಗಳ ಕಾಲ ದಸರಾ ರಜೆ ಸಿಗಲಿದೆ. ಅ. 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ನಡೆಯಲಿದೆ. 2024-2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿತ್ತು. ಅದರ ನಿಯಮಾನುಸಾರದಂತೆ ರಜೆಗಳು ಘೋಷಣೆಯಾಗಿವೆ.