Author: Prajatv Kannada

ನಾವು ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ದೇಶದ ಯಾವ ಲ್ಯಾಬ್‌ನಲ್ಲಾದರೂ ಪರೀಕ್ಷೆ ಮಾಡಲಿ ಎಂದು ಕೆಎಂಎಫ್  ಎಂಡಿ ಜಗದೀಶ್ ಹೇಳಿದ್ದಾರೆ. https://youtu.be/uuH3BGovAzs?si=tUVHNxtmJ7KK79Nc ತಿರುಮಲ ತಿರುಪತಿ ದೇವಾಲಯ ಲಡ್ಡು ವಿವಾದದ   ಕುರಿತು ‘ಪಬ್ಲಿಕ್‌ ಟಿವಿʼ ಜೊತೆ ಮಾತನಾಡಿದ ಅವರು, ರೈತರಿಂದ ನೇರವಾಗಿ ಹಾಲು ಖರೀದಿಸಿ, ರೈತರ ಪರವಾಗಿ ಕೆಲಸ ಮಾಡುವ ಸಂಸ್ಥೆ ನಮ್ಮದು. ಇಡೀ ದೇಶದಲ್ಲೇ ಅತ್ಯುತ್ತಮ ಲ್ಯಾಬ್ ವ್ಯವಸ್ಥೆ ಇರೋದು ನಮ್ಮಲ್ಲಿಯೇ. ಎನ್‌ಎಬಿಎಲ್‌ನಿಂದ ಮಾನ್ಯತೆ ಪಡೆದಿರೋ ಏಕೈಕ ಲ್ಯಾಬ್ ನಮ್ಮ ಕೆಎಂಎಫ್ ಸಂಸ್ಥೆಯಲ್ಲಿದೆ. ನಮ್ಮ ಲ್ಯಾಬ್‌ನಲ್ಲೇ ಟೆಸ್ಟ್ ಮಾಡುವ ಸೌಲಭ್ಯವಿದೆ ಎಂದರು. ನಾವು ಗುಣಮಟ್ಟದಲ್ಲಿ ರಾಜಿಯಾಗದೇ ಇರೋದಕ್ಕೆ ಕಾರಣವೇ ನಮ್ಮಲ್ಲಿರೋ ಸೌಲಭ್ಯ ಮತ್ತು ಸೌಕರ್ಯಗಳು. ಪ್ರತಿ ಹಂತದಲ್ಲೂ ಗುಣಮಟ್ಟದ ಪರೀಕ್ಷೆ ಮಾಡಿಯೇ ತುಪ್ಪದ ಉತ್ಪಾದನೆ ನಡೆಯಲಿದೆ. ಆಹಾರ ಗುಣಮಟ್ಟದ ಪರೀಕ್ಷೆಯನ್ನು ಮೈಸೂರು ಲ್ಯಾಬ್‌ನಲ್ಲಿ ಅಲ್ಲ ಯಾವುದೇ ಲ್ಯಾಬ್‌ನಲ್ಲಿ ಬೇಕಾದರೂ ಮಾಡಿಸಲಿ. ನಮ್ಮದು ಅತ್ಯುತ್ತಮ ಗುಣಮಟ್ಟದ ಪ್ರೊಡಕ್ಟ್ ಎಂದು ಹೇಳಿದರು. ನಂದಿನಿ ತುಪ್ಪದ ದರದ ಬದಲಾವಣೆ ಮಾಡುವ ಯೋಚನೆ ಇಲ್ಲ. ತಿರುಮಲದಿಂದ ಮತ್ತೆ…

Read More

ಬೆಂಗಳೂರು: ಜಾತಿ ನಿಂದನೆ ಹಾಗೂ ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಬಿಜೆಪಿ ಶಾಸಕ ಮುನಿರತ್ನಗೆ ಅತ್ಯಾಚಾರ ಪ್ರಕರಣ ಸಂಕಷ್ಟ ತಂದೊಡ್ಡಿದೆ. ಶುಕ್ರವಾರ ಬಂಧನಕ್ಕೊಳಗಾಗಿದ್ದ ಅವರನ್ನು ಇಂದು ಕೋರ್ಟ್​ಗೆ ಹಾಜರುಪಡಿಸಲಾಯಿತು. https://youtu.be/762jh2OXnmk?si=lpW3pqSlbKBs0x9c ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಶನಿವಾರ ಆದೇಶ ನೀಡಿದೆ. ಇದರೊಂದಿಗೆ ಅವರು ಮತ್ತೆ ಜೈಲು ಪಾಲಾಗಿದ್ದಾರೆ. ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಅವರು ಗುರುವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣ ಅವರನ್ನು ಸುತ್ತಿಕೊಂಡಿತ್ತು.

Read More

ಹಿಂಬದಿಯಿಂದ ಕಂಟೇನರ್  ಡಿಕ್ಕಿ ಹೊಡೆದ ಪರಿಣಾಮ ಈರುಳ್ಳಿ ತುಂಬಿದ್ದ ಟೆಂಪೋ  ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಬೆಂಗಳೂರು  ಹೊರವಲಯದ ನೆಲಮಂಗಲದ ಅಂಚೆಪಾಳ್ಯದ  ಬಳಿ ನಡೆದಿದೆ. https://youtu.be/762jh2OXnmk?si=FlftTtSwyvLb4kw_ ತುಮಕೂರು ಮಾರ್ಗವಾಗಿ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ತುಂಬಿದ ಟೆಂಪೋಗೆ ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಂದು ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಕಂಟೇನರ್ ಗುದ್ದಿದ ರಭಸಕ್ಕೆ ಟೆಂಪೋ ಪಲ್ಟಿಯಾಗಿದೆ. ಘಟನೆಯಲ್ಲಿ ಈರುಳ್ಳಿ ಟೆಂಪೋದಲ್ಲಿದ್ದ ಗಂಗಾಧರಪ್ಪ (55) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಮತ್ತೊಂದು ವಾಹನದ ಚಾಲಕ ಓಬಣ್ಣರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಟೆಂಪೋ ಪಲ್ಟಿಯಾಗಿದ್ದರಿಂದ ಕೆಲ ಜನರು ಈರುಳ್ಳಿ ತುಂಬಲು ಮುಗಿಬಿದ್ದ ಘಟನೆ ಕೂಡ ನಡೆದಿದೆ. ಸ್ಥಳಕ್ಕೆ ಬಂದ ನೆಲಮಂಗಲ ಸಂಚಾರಿ ಪೊಲೀಸರು ಎರಡೂ ವಾಹನಗಳನ್ನು ತೆರವು ಮಾಡಿದ್ದಾರೆ. ಈ ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ನಿಯಂತ್ರಿಸಿದ್ದಾರೆ.

Read More

ಏಕಕಾಲದಲ್ಲಿ ಹಲವುಪೇಜರ್‌ಗಳು, ವಾಕಿ-ಟಾಕಿಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಸಾಧನಗಳ ಸ್ಫೋಟಗೊಂಡ ಪರಿಣಾಮ 20 ಮಂದಿ ಮೃತಪಟ್ಟಿದ್ದು ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಲೆಬನಾನಿನ ಮಿಲಿಟರಿ ಹಿಜ್ಬುಲ್ಲಾದ ಹಲವಾರು ಸದಸ್ಯರು ಮೃತಪಟ್ಟಿದ್ದಾರೆ. ಈ ಸ್ಫೋಟಗಳ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ, ಆದರೆ ಇಸ್ರೇಲಿ ಗುಪ್ತಚರ ಸಂಸ್ಥೆಗಳು ಪೇಜರ್‌ಗಳು ಮತ್ತು ವಾಕಿ ಟಾಕಿಗಳನ್ನು ಹೇಗೆ ಮಾರಣಾಂತಿಕ ಅಸ್ತ್ರಗಳಾಗಿ ಪರಿವರ್ತಿಸಿದವು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ನಡುವೆ ಕೇರಳ ಮೂಲದ ಇದೀಗ ನಾರ್ವೆ ಪ್ರಜೆಯಾಗಿರುವ ವ್ಯಕ್ತಿಯ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದೆ. ಹಂಗೇರಿಯನ್ ಸುದ್ದಿ ವೆಬ್‌ಸೈಟ್ ಟೆಲೆಕ್ಸ್‌ನ ವರದಿಯ ಪ್ರಕಾರ, ನಾರ್ಟಾ ಗ್ಲೋಬಲ್ ಲಿಮಿಟೆಡ್ ಎಂಬ ಬಲ್ಗೇರಿಯನ್ ಕಂಪನಿಯು ಹಿಜ್ಬುಲ್ಲಾದ ಪೇಜರ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಈ ಕಂಪನಿಯನ್ನು ನಾರ್ವೇಜಿಯನ್ ಪ್ರಜೆ ರಿನ್ಸನ್ ಜೋಸ್ ಸ್ಥಾಪಿಸಿದರು. ಜೋಸ್ ಕೇರಳದ ವಯನಾಡಿನಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಅಲ್ಲಿಂದ ಎಂಬಿಎ ಮುಗಿಸಿ ನಾರ್ವೆಗೆ ಹೋದರು. ರಿನ್ಸನ್ ತಂದೆ ಜೋಸ್ ಅಂಗಡಿಯೊಂದರಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು, ಅವರನ್ನು ಆ…

Read More

ಏಲಕ್ಕಿಯ ಸುವಾಸನೆ ನಾವು ಸ್ವಲ್ಪ ದೂರದಲ್ಲಿದ್ದರೂ ನಮ್ಮ ಮೂಗಿಗೆ ಬಡಿಯುತ್ತದೆ. ಅಡುಗೆ ಎಲ್ಲೂ ಕೂಡ ಇದರ ಬಳಕೆಯಿಂದ ಆಹಾರದ ರುಚಿ ಮತ್ತು ಪರಿಮಳ ಹೆಚ್ಚಾಗುತ್ತದೆ. ಇದಕ್ಕೆ ಅನುಗುಣವಾಗಿಯೇ ಏಲಕ್ಕಿಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ನಮಗೆ ಲಭ್ಯವಿವೆ. ಹಾಗಾಗಿಯೇ ಏಲಕ್ಕಿಗೆ ಆಯುರ್ವೇದ ಪದ್ಧತಿಯಲ್ಲಿ ಕೂಡ ಒಂದು ವಿಶೇಷ ಸ್ಥಾನಮಾನವಿದೆ. ಏಲಕ್ಕಿಯ ಉಪಯೋಗದಿಂದ ಹಲವು ಬಗೆಯ ಕಾಯಿಲೆಗಳು ಮತ್ತು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ಮನೆಯಲ್ಲಿನ ಹಿರಿಯರು ಹೇಳುತ್ತಾರೆ. ಭಯ ದುರ್ವಾಸನೆಯನ್ನು ದೂರ ಮಾಡುವುದರ ಜೊತೆಗೆ ಜೀರ್ಣಾಂಗಕ್ಕೆ ಸಂಬಂಧ ಪಟ್ಟ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಏಲಕ್ಕಿಯಿಂದ ಇಲ್ಲವಾಗುತ್ತವೆ. ಏಲಕ್ಕಿಯಲ್ಲಿ ಆಂಟಿ – ಮೈಕ್ರೋಬಿಯಲ್ ಚಟುವಟಿಕೆ ಕೂಡಿರುವ ಕಾರಣ ಆಹಾರದಲ್ಲಿ ಇದರ ಬಳಕೆಯಿಂದ ಸಾಕಷ್ಟು ಬಗೆಯ ಬ್ಯಾಕ್ಟೀರಿಯ ಮತ್ತು ಪಂಗಸ್ ಕಣಗಳು ಕೊಲ್ಲಲ್ಪಡುತ್ತವೆ. ಒಂದು ಅಧ್ಯಯನ ಹೇಳುವ ಪ್ರಕಾರ ‘ ಕಾರ್ಡಮಮ್ ಎಸೆನ್ಶಿಯಲ್ ಆಯಿಲ್ ‘ ಬ್ಯಾಕ್ಟೇರಿಯಾ ಗಳನ್ನು ಮತ್ತು ಪಂಗಸ್ ರೋಗಾಣುಗಳನ್ನು ಕೊಲ್ಲುವುದರಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಂಶೋಧಕರು…

Read More

ನಾವು ಬೆಳಿಗ್ಗೆ ಎದ್ದಾಗ ಮಾಡುವ ಒಂದು ಸಣ್ಣ ಕೆಲಸ ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ಬೆಳಿಗ್ಗೆ ಎದ್ದಾಗ ಕೆಲವು ವಿಷಯಗಳನ್ನು ನೋಡುವುದು ಅಶುಭ ಎಂದು ವಾಸ್ತು ಹೇಳುತ್ತದೆ. ನಮ್ಮ ಇಡೀ ದಿನ ಚೆನ್ನಾಗಿ ಇರಬೇಕು ಎಂದರೆ ನಾವು ಎದ್ದಾಕ್ಷಣ ಮನಸಿಗೆ ಹಿತ ಎನ್ನಿಸುವಂತೆ ಇರಬೇಕು. ನಮ್ಮಲ್ಲಿ ಎಷ್ಟೇ ನೋವಿದ್ದರೂ ಕೂಡ ಬೆಳಗ್ಗೆ ಮಾಡುವ ಈ ಕೆಲಸಗಳು ಎಲ್ಲಾ ನೋವುಗಳನ್ನು ಮರೆಸುತ್ತದೆ. ಇದರಿಂದ ನೀವು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು. ಮುಂಜಾನೆ ಎದ್ದಾಕ್ಷಣ ಯಾವ ಕೆಲಸ ಮಾಡಬೇಕು..? ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದುಕೊಳ್ಳಲು ಮುಂಜಾನೆ ಏನು ಮಾಡಬೇಕು..? ಸಂತೋಷದ ಜೀವನಕ್ಕಾಗಿ ಮುಂಜಾನೆ ತಪ್ಪದೇ ಹೀಗೆ ಮಾಡಿ. ​ನಿದ್ರೆಯಿಂದ ಎದ್ದಾಗ: ರಾತ್ರಿ ನಿದ್ರೆಯಿಂದ ಎಚ್ಚೆತ್ತುಕೊಳ್ಳುತ್ತಿದ್ದಂತೆಯೇ ಕೂಡಲೇ ಕಣ್ಣುಗಳನ್ನು ತೆರಯದಿರಿ. ಕಣ್ಣು ತೆರೆಯುವ ಮೊದಲು ದಿನ ಪೂರ್ತಿ ಒಳ್ಳೆಯ ಸಂಗತಿ ಸಂಭವಿಸುವುದು, ಒಳ್ಳೆಯ ಸಂಗತಿಯನ್ನು ನೋಡುತ್ತೇನೆ, ಒಳ್ಳೆಯದನ್ನು ಮಾಡುತ್ತೇನೆ ಎನ್ನುವುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ನಂತರ ಕಣ್ಣುಗಳನ್ನು ತೆರೆಯುತ್ತಾ ಎರಡು ಅಂಗೈಗಳನ್ನು ಜೋಡಿಸಿಕೊಂಡು…

Read More

ಸೂಪರ್‌ಸ್ಟಾರ್ ರಜನಿಕಾಂತ್ ಸದ್ಯ ಕೂಲಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಸಿನಿಮಾದ ಸಿನಿಮಾದ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ರಜನಿಕಾಂತ್ ವಿಮಾನ ನಿಲ್ದಾಣದಲ್ಲಿ ಆಗಮಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಲ್ಲಿ ನಟನಿಗೆ ರಾಜಕೀಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಮಾಧ್ಯಮದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ವೈರಲ್ ವಿಡಿಯೋದಲ್ಲಿ, ರಜನಿಕಾಂತ್ ಹಗಲು ಹೊತ್ತಿನಲ್ಲಿ ಚೆನ್ನೈ ವಿಮಾನ ನಿಲ್ದಾಣದಿಂದ ಹೊರಬರುವುದನ್ನು ಕಂಡುಬಂದಿದೆ. ಇವತ್ತು ರಾತ್ರಿ ನಡೆಯುವ ವೆಟ್ಟೈಯಾನ್ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಯಾರು ಬರುತ್ತಾರೆ ಎಂದು ಪತ್ರಕರ್ತರೊಬ್ಬರು ಕೇಳಿದರು. ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ಖಚಿತವಿಲ್ಲ ಸಾರ್’ ಎಂದರು. ಮತ್ತೊಂದೆಡೆ, ಉಪಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ಪ್ರಮಾಣ ವಚನ ಸ್ವೀಕರಿಸುವ ವರದಿಗಳ ಬಗ್ಗೆ ರಜನಿಕಾಂತ್ ಅವರ ಅಭಿಪ್ರಾಯಗಳನ್ನು ಮತ್ತೊಬ್ಬ ವರದಿಗಾರ ಕೇಳಿದರು. ಈ ಪ್ರಶ್ನೆಯನ್ನು  ಕೇಳಿದ ತಲೈವಾ ವರದಿಗಾರನ ಮೇಲೆ ಕೋಪಗೊಂಡು, “ರಾಜಕೀಯ ಪ್ರಶ್ನೆಗಳನ್ನು ಕೇಳಬೇಡಿ ಎಂದಿಲ್ವಾ ಎಂದು ಗರಂ ಆದರು. ಅದೇನೇ…

Read More

ಸೂರ್ಯೋದಯ: 06:08, ಸೂರ್ಯಾಸ್ತ : 06:09 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ: ಚೌತಿ ನಕ್ಷತ್ರ: ಭರಣಿ ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ರಾ .8:13 ನಿಂದ ರಾ.9:41 ತನಕ ಅಭಿಜಿತ್ ಮುಹುರ್ತ: ಬೆ.11:45 ನಿಂದ ಮ.12:33 ತನಕ ಮೇಷ ರಾಶಿ: ಗಂಡ ಹೆಂಡತಿ ಲವಲವಿಕೆಯ ದಿನ,ಉದ್ಯಮ ಉತ್ಪನ್ನಗಳ ಮಾರಾಟ ಜಾಲದಲ್ಲಿ ಮೋಸ ಸಂಭವ, ಗೃಹಿಣಿಯರ ಸ್ವಂತ ವ್ಯಾಪಾರಗಳಿಂದ ಧನ ಲಾಭ ಹಾಗೂ ಮುನ್ನಡೆ ಸಾಧಿಸಲಿದ್ದೀರಿ, ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆ ಉದ್ಯಮದಾರರ ಮನಸ್ಸಿನಲ್ಲಿ ಒಂದು ಕೆಲಸ ತುಂಬಾ ದಿನದಿಂದ ಕಾಡುತ್ತಿದ್ದು ಇಂದು ಸಕಾಲ ಗೊಳ್ಳಲಿದೆ, ಪ್ರೇಮಿಗಳ ಬಾಂಧವ್ಯ ಉತ್ತಮಗೊಳ್ಳಲಿದೆ, ಆರೋಗ್ಯದಲ್ಲಿ ಸುಧಾರಣೆ, ಆಸ್ತಿ ಲೋಪ ದೋಷ ನಿವಾರಣೆ, ಕುಟುಂಬದ ಜವಾಬ್ದಾರಿ ನಿಮ್ಮ…

Read More

ತಿರುಪತಿ: ತಿಮ್ಮಪ್ಪನ ಮಹಾಪ್ರಸಾದ ಲಡ್ಡುನಲ್ಲಿ  ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಸಿಎಂ ಆರೋಪಕ್ಕೆ ಪೂರಕವಾಗಿ ಟಿಟಿಡಿ  ಇಓ ಶ್ಯಾಮಲರಾವ್ ಹೇಳಿಕೆ ನೀಡಿದ್ದಾರೆ. ತಮಿಳುನಾಡು  ಮೂಲದ ಎಆರ್ ಫುಡ್ಸ್ ಸರಬರಾಜು ಮಾಡಿದ ತುಪ್ಪ  ಕಲಬೆರಕೆಯಿಂದ ಕೂಡಿತ್ತು. ತಕ್ಷಣವೇ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ ಇದೇ ವೇಳೆ, ಲಡ್ಡುಗೆ ಬಳಸುವ ತುಪ್ಪದ ಗುಣಮಟ್ಟ ಪರೀಕ್ಷೆಗೆ ಟಿಟಿಡಿ ಸ್ವಂತ ಲ್ಯಾಬ್ ಹೊಂದಿಲ್ಲ. ಅಧಿಕಾರಿಗಳು ಈ ಹಿಂದೆ ಪರೀಕ್ಷೆ ಮಾಡಿರಲಿಲ್ಲ. ಬರೀ 411 ರೂಪಾಯಿಗೆ ಕೆಜಿ ತುಪ್ಪ ಸರಬರಾಜು ಮಾಡಿದ್ದಾರೆ. ಈ ದರಕ್ಕೆ ಉತ್ತಮ ಗುಣಮಟ್ಟದ ತುಪ್ಪ ಪೂರೈಕೆ ಸಾಧ್ಯನಾ ಎಂದು ಎಂದು ಶ್ಯಾಮಲರಾವ್ ಪ್ರಶ್ನಿಸಿದ್ದಾರೆ. ದೇಗುಲದ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತಲು ಅವರಂತೂ, ಕಳೆದ ಐದು ವರ್ಷದಿಂದ ಈ ಮಹಾ ಪಾಪ ನಡೆಯುತ್ತಿತ್ತು ಎಂದು ಆಪಾದಿಸಿದ್ದಾರೆ. ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪಿಸುವಂತೆ ಕೇಂದ್ರವನ್ನು ಡಿಸಿಎಂ ಪವನ್ ಕಲ್ಯಾಣ್ ಆಗ್ರಹಿಸಿದ್ದಾರೆ. ಆಡಳಿತಾರೂಢ ಟಿಡಿಪಿ ನಾಯಕರೆಲ್ಲಾ ಜಗನ್ ವಿರುದ್ಧ…

Read More

ಖ್ಯಾತ ನಟ ಶಶಿಕುಮಾರ್ ಪುತ್ರ ಆದಿತ್ಯ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದು ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಆದಿತ್ಯ ನಟನೆಯ ಮೂರನೇ ಸಿನಿಮಾ ಸೆಟ್ಟೇರಿದ್ದು ಚಿತ್ರಕ್ಕೆ ರಾಶಿ ಎಂದು ಟೈಟಲ್ ಇಡಲಾಗಿದೆ. ಧುವನ್ ಫಿಲ್ಮ್ಸ್​ ಲಾಂಛನದಲ್ಲಿ ಅಖಿಲೇಶ್ ‘ರಾಶಿ’ ಸಿನಿಮಾ ನಿರ್ಮಾಣ ಆಗುತ್ತಿದ್ದು, ವಿಜಯ್ ಪಾಳೇಗಾರ್ ನಿರ್ದೇಶನ ಮಾಡುತ್ತಿದ್ದಾರೆ. ಲವ್​ಸ್ಟೋರಿ ಕಥಾ ಹಂದರದ ಈ ಚಿತ್ರಕ್ಕೆ ಹಲವು ಗಣ್ಯರು ಸಾಥ್ ನೀಡಿದ್ದಾರೆ. ಆದಿತ್ಯ ಅವರ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು ಆದಿತ್ಯಗೆ ಜೋಡಿಯಾಗಿ ಸಮೀಕ್ಷಾ ಕಾಣಿಸಿಕೊಳ್ತಿದ್ದಾರೆ. ನಟ ಶಶಿಕುಮಾರ್, ರಾಜ್ಯಸಭಾ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷರಾದ ಜಿ.ಎಸ್.ಚಂದ್ರಶೇಖರ್, ಬೆಂಗಳೂರು ಪೊಲೀಸ್ ಉಪ ಆಯುಕ್ತ ಸಿದ್ದರಾಜು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಸ್. ಚಿದಂಬರ್ ಸೇರಿದಂತೆ ಅನೇಕ ಗಣ್ಯರು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಆದಿತ್ಯ ಶಶಿಕುಮಾರ್ ಅವರು ಹೀರೋ ಆಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದು. ಈ ಚಿತ್ರದ…

Read More