ಬೆಂಗಳೂರು: ಕರಾವಳಿ, ಮಲೆನಾಡು ಸೇರಿ ಉತ್ತರ ಒಳನಾಡಿನಲ್ಲಿಸೆಪ್ಟೆಂಬರ್ 24ರಿಂದ ಮತ್ತೆ ಮಳೆ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://youtu.be/ghIvcNP34Qs?si=8Vnl1saRctCQMU9C ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಒಣಹವೆ ಇತ್ತು. ಬೆಂಗಳೂರಿನ ಎಚ್ಎಎಲ್ನಲ್ಲಿ 31.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 31.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 30.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನು ಬೆಂಗಳೂರು ನಗರ ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಭಾಗಶಃ ಮೋಡ…
Author: Prajatv Kannada
ನೀರು ಕುಡಿಯಲು ಅಡುಗೆ ಮನೆಗೆ ಹೋದ ಮಹಿಳೆಯನ್ನು ದೈತ್ಯಾಕಾರದ ಹೆಬ್ಬಾವೊಂದು ಸುತ್ತಿಕೊಂಡಿದ್ದು, ಈ ವೇಳೆ ಮಹಿಳೆ ಹಾವಿನೊಂದಿಗೆ ಹೋರಾಟ ಮಾಡಿ ಕೊನೆಗೂ ತನ್ನನ್ನು ತಾನು ರಕ್ಷಿಸಿಕೊಂಡಿರುವ ಘಟನೆಯೊಂದು ಬ್ಯಾಂಕಾಕ್ ನಡೆದಿದೆ. ಥಾಯ್ಲೆಂಡ್ ಅರೋಮ್ ಅರುಣ್ರೋಜ್ ಎಂಬ ಮಹಿಳೆ ನೀರು ಕುಡಿಯಲು ಅಡುಗೆ ಮನೆಗೆ ಹೋಗಿದ್ದಾಳೆ. ಈ ವೇಳೆ ದೈತ್ಯಾಕಾರದ ಹೆಬ್ಬಾವು ಆಕೆಯನ್ನು ಸುತ್ತಿಕೊಂಡಿದೆ. ಸುಮಾರು 4-5 ಮೀಟರ್ ಉದ್ದದ ಹೆಬ್ಬಾವು ಆಕೆಯನ್ನು ಸುತ್ತಿಕೊಂಡಿದೆ. .ಮೈಗೆ ಹೆಬ್ಬಾವು ಸುತ್ತಿಕೊಂಡಿದೆ ಎಂದು ತಿಳಿದರು ಕೊಂಚವು ಹೆದರದ ನಹಿಳೆ ಹಾವಿನಿಂದ ಬಿಡುಗಡೆಯಾಗಲು ಸಾಕಷ್ಟು ಯತ್ನ ನಡೆಸಿದ್ದಾರೆ. ಈ ವೇಳೆ ಹಾವು ಅನೇಕ ಬಾರಿ ಕಚ್ಚಿದೆ. ಬಳಿಕ ಮಹಿಳೆ ಹಾವಿನ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು, ರಕ್ಷಣೆಗಾಗಿ ಕೂಗಿದ್ದಾರೆ. ಸುಮಾರು 2 ಗಂಟೆಗಳ ಕಾಲ ಹಾವಿನೊಂದಿಗೆ ಸೆಣೆಸಾಟ ನಡೆಸಿದ್ದಾಳೆ. ಸುಮಾರು ಒಂದೂವರೆ ಗಂಟೆಗಳ ಬಳಿಕ ಆಕೆಯ ಕೂಗಾಟ ಕೇಳಿಸಿಕೊಂಡ ಕೆಲವರು ರಕ್ಷಣೆಗೆ ಧಾವಿಸಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರಕ್ಷಣೆಗೆ ಬಂದ ಪೊಲೀಸರು ಮತ್ತು ಪ್ರಾಣಿ ನಿಯಂತ್ರಣ…
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಪ್ರಚಾರದ ವೇಳೆ ಯುವತಿಯೊಬ್ಬಳು ತುಂಬಿದ ಸಭೆಯಲ್ಲಿ ತನ್ನ ತೆರೆದ ಎದೆ ಪ್ರದರ್ಶನ ಮಾಡಿರುವ ಘಟನೆ ನಡೆದಿದ್ದು ಇದು ಸಾಕಷ್ಟು ಟೀಕೆಗೆ ಕಾರಣವಾಗಿದೆ. ಅಮೆರಿಕದ ಲಾಂಗ್ ಐಲೆಂಡ್ ನ Nassau Coliseum ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಪ್ರಚಾರದ ಭಾಷಣದಲ್ಲಿ ತೊಡಗಿದ್ದ ವೇಳೆ ಈ ಘಟನೆ ನಡೆದಿದೆ. ಟ್ರಂಪ್ ಭಾಷಣದ ವೇಳೆ ಯುವತಿ ತಾನು ಧರಿಸಿದ್ದ ಟೀ ಶರ್ಟ್ ಎತ್ತಿ ಎದೆಯನ್ನು ಪ್ರದರ್ಶಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಯುವತಿ ಕೃತ್ಯಕ್ಕೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಯುವತಿಯ ಅನುಚಿತ ವರ್ತನೆ ಹಿನ್ನಲೆಯಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಕರು ಆಕೆಯನ್ನು ಕಾರ್ಯಕ್ರಮದಿಂದ ಹೊರ ಹಾಕಿದ್ದು, ಹೊರಗೆ ಹೋದ ಮೇಲೂ ಕೂಡ ಆಕೆ ಅದೇ ಕೃತ್ಯವನ್ನು ಮುಂದುವರೆಸಿದ್ದಾಳೆ. ಟ್ರಂಪ್ ಪ್ರಚಾರದ ವೇಳೆ ಅನುಚಿತ ವರ್ತನೆ ತೋರಿದ ಯುವತಿಯನ್ನು 26 ವರ್ಷದ ಅವಾ ಲೂಯಿಸ್ ಎನ್ನಲಾಗುತ್ತಿದೆ. ಈಕೆ ರೂಪದರ್ಶಿಯಾಗಿದ್ದು, ಇಂತಹುದೇ ಕೃತ್ಯಗಳಿಂದ ಕುಖ್ಯಾತಿ…
ಜೊತೆಗೆ ಕೆಲಸ ಮಾಡಿಕೊಂಡಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಇದೀಗ ಜೈಲು ಸೇರಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆದಿದ್ದು ಇದೀಗ ನ್ಯಾಯಾಲಯ ಜಾನಿ ಮಾಸ್ಟರ್ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಜಾನಿ ಮಾಸ್ಟರ್ ವಿರುದ್ಧ ರಾಯದುರ್ಗ ಪೊಲೀಸರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ರು. ಪೊಲೀಸರ ಕೈಗೆ ಸಿಗದೆ ಓಡಾಡ್ತಿದ್ದ ಜಾನಿ ಮಾಸ್ಟರ್ನನ್ನು ಗೋವಾದಲ್ಲಿ ಬಂಧಿಸಿ, ಇಂದು ಮುಂಜಾನೆ ನನ್ನು ಹೈದಾರಾಬಾದ್ಗೆ ಕರೆತಂದು ನ್ಯಾಯಾಲಕ್ಕೆ ಹಾಜರು ಪಡಿಸಲಾಯಿತು. ಜಾನಿ ಮಾಸ್ಟರ್ನನ್ನು ಚೆರ್ಲಪಲ್ಲಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗುವುದು. ನ್ಯಾಯಾಂಗ ಬಂಧನದ ಅವಧಿಯಲ್ಲಿ ಪೊಲೀಸರು ವಿವರವಾಗಿ ತನಿಖೆ ನಡೆಸಲಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರಿಂದ ಜಾನಿ ಮಾಸ್ಟರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋವಾದ ಹೋಟೆಲ್ ನಲ್ಲಿದ್ದ ಜಾನಿ ಮಾಸ್ಟರ್ ನನ್ನು ಬಂಧಿಸಿದ ಪೊಲೀಸರು ಉಪ್ಪಾರಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ರು. ಪೊಲೀಸ್ ತನಿಖೆಯಲ್ಲಿ ಜಾನಿ ಮಾಸ್ಟರ್ ಕೆಲ ವಿಚಾರಗಳನ್ನು…
ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟ ವಿಜಯ್ ದೇವರಕೊಂಡ ಈಗ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ ಸ್ಟಾರ್ ನಟನಾಗಿ ಬೆಳೆದರು. ಆದರೆ ವಿಜಯ್ ದೇವರಕೊಂಡ ಆರಂಭದ ದಿನಗಳು ಸುಲಭವಾಗಿರಲಿಲ್ಲ. ಸಾಕಷ್ಟು ಸಮಸ್ಯೆ ಎದುರಿಸಿದರು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮ್ಮ ಆರಂಭದ ದಿನಗಳನ್ನು ವಿಜಯ್ ನೆನಪು ಮಾಡಿಕೊಂಡಿದ್ದಾರೆ. ವಿಜಯ್ ಮೊದಲು ನಟನೆ ಆರಂಭಿಸಿದ್ದು ನಾಟಕಗಳಲ್ಲಿ. ನಾಟಕಗಳಿಂದ ಸಿನಿಮಾಕ್ಕೆ ಬರುವ ಯೋಜನೆ ಹಾಕಿಕೊಂಡು ನಟನೆ ಆರಂಭಿಸಿದರಂತೆ ವಿಜಯ್, ನಾಟಕಗಳಲ್ಲಿ ಒಳ್ಳೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ವಿಜಯ್ ನಾಟಕ ಮಾಡುವಾಗ, ಪ್ರತಿ ಬಾರಿಯೂ ಇತರೆ ನಾಟಕ ನಿರ್ದೇಶಕರುಗಳು ತಮ್ಮ ಮುಂದಿನ ನಾಟಕದಲ್ಲಿ ನಟಿಸುವಂತೆ ವಿಜಯ್ ಬಳಿ ಕೇಳಿಕೊಳ್ಳುತ್ತಿದ್ದರಂತೆ. ಅದನ್ನು ಗಮನಿಸಿದ ವಿಜಯ್ ಗೆ ಸಿನಿಮಾಗಳಿಗೆ ಕಾಲಿಟ್ಟಾಗಲೂ ಇದೇ ಪರಿಸ್ಥಿತಿ ಇರುತ್ತದೆ ಎಂದುಕೊಂಡಿದ್ದರಂತೆ. ಆದರೆ ಅದು ಉಲ್ಟಾ ಹೊಡೆದಿದೆ. ಸಿನಿಮಾಗಳಲ್ಲಿ ನಟಿಸಲು ನಿರ್ಧರಿಸಿದಾಗ ಯಾರೂ ಅವಕಾಶ ನೀಡಲಿಲ್ಲವಂತೆ. ಆಡಿಷನ್…
ದೊಡ್ಡಬಳ್ಳಾಪುರ: ಬೆಳೆ ಸಮೀಕ್ಷೆ ಮಾಡಲು ಹೋದ ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದ ಖಾಸ್ ಬಾಗ್ ನ ಕೃಷ್ಣಪ್ಪ ನವರ ಜಮೀನಿನಲ್ಲಿ ನಡೆದಿದೆ. https://youtu.be/JPh6vKjvz4I?si=67vH-jzU-e2nTIkB ಸಿದ್ದೇನಾಯಕನಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ರಾಜೇಂದ್ರ ಬಾಬು ಹಲ್ಲೆಗೊಳಗಾದ ಗ್ರಾಮಲೆಕ್ಕಾಧಿಕಾರಿಯಾಗಿದ್ದು, ಬೆಳೆ ಸಮೀಕ್ಷೆ ನಡೆಸಲು ಮೊಬೈಲ್ ನಲ್ಲಿ ಪೋಟೋ ತೆಗೆಯುತ್ತಿದ್ದ ವೇಳೆ ಗ್ರಾಮಲೆಕ್ಕಾಧಿಕಾರಿ ಮೇಲೆ ಜಮೀನಿನ ಮಾಲಿಕನ ಮಗ ವಂಸತ್ ಕುಮಾರ್ ನಿಂದ ಹಲ್ಲೆ ಮಾಡಲಾಗಿದೆ. ತೆಂಗಿನ ಮೊಟ್ಟೆಯಿಂದ ಗ್ರಾಮಲೆಕ್ಕಾಧಿಕಾರಿ ತಲೆ ಕೈ ಎದೆ ಭಾಗಕ್ಕೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಕಂದಾಯ ಇಲಾಖೆ ಆದೇಶದಂತೆ ಪ್ರತಿ ಜಮೀನಿನ ಬೆಳೆ ಸಮೀಕ್ಷೆ ನಡೆಸಲು ಮೊಬೈಲ್ ಮೂಲಕ ಸ್ಥಳಕ್ಕೆ ಹೋಗಿ ಪೋಟೋ ಅಪ್ ಲೋಡ್ ಮಾಡಬೇಕು. ಆದ್ದರಿಂದ ಪೋಟೋ ತೆಗೆಯುವ ಸಂದರ್ಭದಲ್ಲಿ ಈ ವೇಳೆ ಪೋಟೊ ತೆಗೆದಿದ್ದು ಯಾಕೆ ಎಂದು ಏಕಾಏಕಿ ಹಲ್ಲೆ ಮಾಡಿದ್ದಾನೆ. ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಆರೋಪಿ ವಸಂತ್ ನನ್ನ ಬಂಧಿಸಿದ್ದು, ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಪ್ರಕರಣ…
ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರು ರಾಹೆ 50 ರಲ್ಲಿ ಭೀಕರ ಅಪಘಾತ ಸಂಭವಿಸಿದೆ. https://youtu.be/Fh5qtx1HELU?si=L7GVFcO7Ldt8YtV2 ವಾಯು ವಿಹಾರ ಮಾಡುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಆಲೂರು ಗ್ರಾಮದ ಸಿದ್ದಲಿಂಗಯ್ಯ (39) ಮೊಳಕಾಲ್ಮೂರು ತಾಲೂಕಿನ ದೇವಸಮುದ್ರದ ಕೊಟ್ರಯ್ಯ(26) ಮೃತಪಟ್ಟ ದುರ್ದೈವಿಗಳು ಆಗಿದ್ದು, ಮತ್ತೊಬ್ಬ ಹುಡೇಂ ಗ್ರಾಮದ ಶಿವಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಿಂದ ರಾಜಸ್ಥಾನದ ಕಡೆ ಹೊರಟಿದ್ದ ಲಾರಿ ಆಲೂರು ಗ್ರಾಮದ ರಾಹೆ.50 ರ ಬಳಿ ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಹರಿದಿದೆ. ಇನ್ನೂ ಘಟನೆ ಸಂಬಂಧ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೇಂದ್ರ ಪುರಸ್ಕೃತ ಪ್ರಾಯೋಜಕತ್ವ ಯೋಜನೆ ಸ್ಕಾಲರ್‌ಶಿಪ್ ತಂದೆ ಇಲ್ಲದ ಎಲ್ಲಾ ಮಕ್ಕಳಿಗೂ ಅನ್ವಯವಾಗುವುದಿಲ್ಲ. ನಿರ್ದಿಷ್ಟ ಮಾನದಂಡಗಳ ಮೂಲಕ ಮಾತ್ರ ಈ ಯೋಜನೆಯ ಫಲಾನುಭವಿಯಾಗಲು ಸಾಧ್ಯವಾಗುತ್ತದೆ. ಈ ಯೋಜನೆಯ ಮೂಲಕ ತಂದೆಯಿಲ್ಲದ ಮಕ್ಕಳ ಬ್ಯಾಂಕ್ ಖಾತೆಗೆ ಪ್ರತಿ ವರ್ಷ 24,000 ರೂಪಾಯಿಗಳ ಸ್ಕಾಲರ್‌ಶಿಪ್ ಸೌಲಭ್ಯವಿರುತ್ತದೆ, ಆದರೆ ಈ ವಿಷಯದ ಬಗ್ಗೆ ಅನೇಕ ಜನರಿಗೆ ತಿಳಿದೇ ಇಲ್ಲ. ಆದ್ದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದಂತಹ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಈ ತಕ್ಷಣ ಅರ್ಜಿಯನ್ನು ಸಲ್ಲಿಸಲು ತಿಳಿಸಿ ಎಂದು ಅಧಿಕೃತ ಸಹಿ ಇಲ್ಲದ ಅರ್ಜಿಯು ಸಾಮಾಜಿಕ ಜಾಲತಾಣದ ಮುಖಾಂತರ ಹರಿದಾಡುತ್ತಿದ್ದು, ಈ ಸುದ್ದಿಯು “ಸುಳ್ಳುಸುದ್ದಿ”ಯಾಗಿಗಿದೆ. ಈ ಯೋಜನೆಯಡಿಯಲ್ಲಿ ನಿರ್ದಿಷ್ಟ ಮಾನದಂಡಗಳು ಅನ್ವಯವಾಗುವ ಮಕ್ಕಳಿಗೆ ಮಾತ್ರವೇ ಸ್ಕಾಲರ್‌ಶಿಪ್ ಸಿಗಲಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟದ ಅಧ್ಯಕ್ಷರು ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ. ಈ ಯೋಜನೆಯಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಿಂದ(ಬಾಲಕರ/ಬಾಲಕಿಯರ ಬಾಲಮಂದಿರ ಮತ್ತು ವೀಕ್ಷಣಾಲಯ) ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದರೆ ಹಾಗೂ ವಿಸ್ತ್ರತ…
ರಾಯಚೂರು: ವಿಆರ್ಎಲ್ ಬಸ್ ಹರಿದು 125 ಕುರಿಗಳು ಮೃತಪಟ್ಟಿರುವ ಘಟನೆ ರಾಯಚೂರು ಹೊರವಲಯದ ಯರಮರಸ್ ಬೈಪಾಸ್ನಲ್ಲಿ ನಡೆದಿದೆ. ವಿಆರ್ಎಲ್ ಬಸ್ ಹೈದರಾಬಾದ್ನಿಂದ ಬೆಳಗಾವಿಗೆ ಹೊರಟಿತ್ತು. ತೆಲಂಗಾಣದ ಮಕ್ತಲ್ ಬಳಿಯ ಓಬಳಾಪುರಂ ಗ್ರಾಮದ ಮಲ್ಲೇಶ್ https://youtu.be/rmwQVMSABbA?si=sLqr0ACsk2DiQ-Y- ಸೀನಪ್ಪ ಮತ್ತು ಬಾಲರಾಜು ಎಂಬುವರಿಗೆ ಸೇರಿದ 150 ಕ್ಕೂ ಹೆಚ್ಚು ಕುರಿಗಳು ತೆಲಂಗಾಣದಿಂದ ರಾಯಚೂರು ಮಾರ್ಗವಾಗಿ ಬರುತ್ತಿದ್ದವು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿಆರ್ಎಲ್ ಬಸ್ ಕುರಿಗಳ ಮೇಲೆ ಹರಿದಿದೆ. ಘಟನೆಯಲ್ಲಿ 125 ಕುರಿಗಳು ಮೃತಪಟ್ಟಿವೆ, 18 ಕುರಿಗಳ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೋಲಿಸರಿಂದ ಭೇಟಿ ಪರಿಶೀಲನೆ ನಡೆಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ದಿನಗಣನೆಗಳು ಶುರುವಾಗಿವೆ.2024ರ ದಸರಾ ಚಟುವಟಿಗಳ ಸಿದ್ದತೆ ಈಗಾಗಲೇ ಆರಂಭಗೊಂಡಿದ್ದು, ದಸರಾಗೆ ಅಕ್ಟೋಬರ್ 3ರಂದು ಚಾಲನೆ ಸಿಗಲಿದೆ. https://youtu.be/Edf8uXYnV0E?si=A68DoKAhty7O9jRQ ದಸರಾ ಉದ್ಘಾಟಕರಾಗಿ ಸಾಹಿತಿ ಹಂ.ಪ.ನಾಗರಾಜಯ್ಯ ನೇಮಕ ದಸರಾ ಉದ್ಘಾಟಕರಾಗಿ ಹಂಪನಾ ನೇಮಿಸಿದ ರಾಜ್ಯ ಸರ್ಕಾರ ಅಕ್ಟೋಬರ್ 3ರಂದು ಮೈಸೂರಿನಲ್ಲಿ ನಡೆಯುವ ದಸರಾ ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಈ ಬಾರಿ ದಸರಾ ಉದ್ಘಾಟಿಸಲಿರುವ ಸಾಹಿತಿ ಹಂ.ಪ.ನಾಗರಾಜಯ್ಯ ಕರ್ನಾಟಕದ ನಾಡಹಬ್ಬ ಮೈಸೂರು ದಸರಾಗೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಮಹಾರಾಜರು ಮೊದಲು 414 ವರ್ಷಗಳ ಹಿಂದೆಯೇ ದಸರಾವನ್ನು ಆರಂಭಿಸಿದ್ದು ಶ್ರೀರಂಗಪಟ್ಟಣದಲ್ಲಿ. ಅಲ್ಲಿಂದ ಮೈಸೂರಿಗೆ ದಸರಾ ಸ್ಥಳಾಂತರಗೊಂಡು ಪ್ರತಿ ವರ್ಷ ನವರಾತ್ರಿ ಹಾಗೂ ವಿಜಯದಶಮಿಗಳು ಸಡಗರದಿಂದ ನಡೆದುಕೊಂಡು ಬಂದಿವೆ. ಕೆಲವೊಮ್ಮೆ ಅರಮನೆ ಆವರಣದಲ್ಲಿ ಸೀಮಿತರಾದರೂ ಹೆಚ್ಚು ದಸರಾಗಳು ಜಂಬೂಸವಾರಿ ಮೆರವಣಿಗೆಯೊಂದಿಗೆ ಬನ್ನಿಮಂಟಪದವರೆಗೂ ಸಾಗಿದೆ. ಈ ರೀತಿಯ ದಸರಾವನ್ನು ಗಣ್ಯರೊಬ್ಬರಿಂದ ಉದ್ಘಾಟಿಸುವ ಪರಂಪರೆ ಮೂರು ದಶಕದ ಹಿಂದೆಯೇ ಆರಂಭಗೊಂಡಿದೆ