Author: Prajatv Kannada

2024ರಲ್ಲಿ ವಿಶ್ವಾದ್ಯಂತದ ಟಾಪ್ 2% ವಿಜ್ಞಾನಿಗಳ ಪ್ರತಿಷ್ಠಿತ ಪಟ್ಟಿಯಲ್ಲಿ  ಬೆಂಗಳೂರು ವಿಶ್ವವಿದ್ಯಾನಿಲಯದ   ಎಂಟು ಪ್ರಾಧ್ಯಾಪಕರು ಸ್ಥಾನ ಪಡೆದುಕೊಂಡಿದ್ದಾರೆ. https://youtu.be/rmwQVMSABbA?si=K1Y6Zi0FEBEQnthn ಯುಎಸ್‌ಎ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ನೆದರ್ಲ್ಯಾಂಡ್‌ನ ಎಲ್ಸೆವಿಯರ್ ಪಬ್ಲಿಷಿಂಗ್‌ನಿಂದ ವಾರ್ಷಿಕವಾಗಿ ಸೂಚ್ಯಂಕಗಳನ್ನು ಸಂಕಲಿಸಿ ಅದರ ಆಧಾರದ ಮೇಲೆ ಪ್ರಾಧ್ಯಾಪಕರನ್ನು ಗುರುತಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ, ಭೌತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ ಮತ್ತು ಗಣಿತ ವಿಭಾಗಗಳಿಗೆ ಸೇರಿದ ಪ್ರಾಧ್ಯಾಪಕರುಗಳನ್ನು ಗುರುತಿಸಿ ಗೌರವಿಸಲಾಗಿದೆ. ಚಂದ್ರಶೇಖರಯ್ಯ ಡಿ.ಎಸ್, ದೇವಿ ಎಲ್.ಗೋಮತಿ, ರುದ್ರಯ್ಯ ಎನ್, ಶಿವಕುಮಾರ್, ಸಿ.ಶ್ರೀನಿವಾಸ್, ಕುಂಬಿನರಸಯ್ಯ ಎಸ್, ಈರಯ್ಯ ಬಿ, ಮತ್ತು ವಿಷ್ಣು ಕಾಮತ್ ಅವರು ಸ್ಥಾನ ಪಡೆದಿದ್ದಾರೆ. ವಿಶ್ವವಿದ್ಯಾನಿಲಯಗಳ ಪೈಕಿ ಬೆಂಗಳೂರು ವಿಶ್ವವಿದ್ಯಾನಿಲಯ ರಾಜ್ಯದ ವಿಶ್ವವಿದ್ಯಾನಿಲಯಗಳಿಂದ ಹೆಚ್ಚಿನ ಸಂಖ್ಯೆಯ ಪ್ರಾಧ್ಯಾಪಕರನ್ನು ಹೊಂದಿದ್ದು, ಮತ್ತೊಮ್ಮೆ ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ.

Read More

ಕೋಲಾರ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬೈರತಿ ಸುರೇಶ್ ರವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಶಾಖೆ ವತಿಯಿಂದ ದಲಿತರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ನಾಗನಾಳ ಮುನಿಯಪ್ಪ ಮಾತನಾಡಿ ಜಿಲ್ಲಾಧಿಕಾರಿಗಳು ಜಿಲ್ಲೆಗೆ ಬಂದಾಗಿನಿಂದ ಒಂದು ಕಡೆ ದಲಿತರನ್ನ ಸೇರಿಸಿ ನಮ್ಮ ಸಮಸ್ಯೆಗಳನ್ನ ಆಲಿಸಿಲ್ಲ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಹೋದಾಗ ಸರಿಯಾಗಿ ಸ್ಪಂದಿಸಿಲ್ಲ ಈ ಕಾರಣಕ್ಕಾಗಿ ಯಾವುದೇ ಸಮಸ್ಯೆ ಬಗೆ ಬಗೆಹರೆದಿಲ್ಲ ಎಂದು ಉಸ್ತುವಾರಿ ಮಂತ್ರಿಗಳ ಗಮನಕ್ಕೆ ತಂದರು. ಮನವಿಗೆ ಸ್ಪಂದಿಸಿದ ಜಿಲ್ಲಾ ಉಸುವಾರಿ ಸಚಿವರು ಕೂಡಲೇ ಜಿಲ್ಲಾಧಿಕಾರಿಗಳನ್ನು ಕರೆಸಿ, ಎಲ್ಲಾ ದಲಿತ ಸಂಘಟನೆಗಳ ಸಭೆಯನ್ನ ಕರೆದು ಅವರ ಸಮಸ್ಯೆಗಳನ್ನು ಆಲಿಸಲು ಸೂಚನೆ ನೀಡಿದರು. ಆದಷ್ಟು ಬೇಗ ಸಭೆ ಏರ್ಪಡಿಸಿ ಸರ್ವೆ ನಂಬರ್ ಗಳನ್ನು ಗುರುತಿಸಿ ಅದರಲ್ಲೂ ದಲಿತರ ಜಮೀನುಗಳ ಪೋಡಿಯನ್ನು ಬೇಗನೆ ಮಾಡಲು ಸೂಚಿಸಿದರು ಹಾಗೂ ಜಿಲ್ಲೆಯಾದ್ಯಂತ ಸರ್ಕಾರಿ…

Read More

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗುರುವಾರ ಕೊಂಚ ಏರಿಕೆ ಕಂಡಿದೆ. ಇತ್ತೀಚೆಗಷ್ಟೇ 57 ಸಾವಿರ ರೂ. ಗಡಿ ದಾಟಿದ್ದ ಅಡಿಕೆ ಧಾರಣೆ ಇದೀಗ ಕೊಂಚ ಕುಸಿತ ಕಂಡಿದೆ. ಕೆಲವು ಜಿಲ್ಲೆಗಳಲ್ಲಿ ಅಡಿಕೆ ಬೆಲೆ ಉತ್ತಮ ಸ್ಥಿತಿಯಲ್ಲಿದೆ. https://youtu.be/Edf8uXYnV0E?si=dZEOE02pCdYQrzMk ಅಡಿಕೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸವಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 45,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ. ಬಂಟ್ವಾಳ ಅಡಿಕೆ ಧಾರಣೆ ಕೋಕೋ ₹12500 ₹25000 ಹೊಸ ವೆರೈಟಿ ₹27500 ₹40500 ಹಳೆ ವೆರೈಟಿ ₹48000 ₹53000 ಪುತ್ತೂರು ಅಡಿಕೆ ಧಾರಣೆ ಕೋಕೋ ₹11000 ₹25000 ಹೊಸ ವೆರೈಟಿ ₹33500 ₹40500…

Read More

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ  ಅವರೇ ನಿರ್ದೇಶಿಸಿ ನಟಿಸಿರುವ ʻಯುಐʼ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಟೀಸರ್, ಸಾಂಗ್ಸ್‌ನಿಂದ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. https://youtu.be/kL0pOchnf8w?si=0B_lbPI4rXIv1RWC ಉಪ್ಪಿ ಅವರೇ ನಿರ್ದೇಶಿಸಿ ನಟಿಸಿದ್ದ ‘ಉಪೇಂದ್ರ’ ಸಿನಿಮಾ ರೀರಿಲೀಸ್‌ ಆಗಿದೆ. ರೀರಿಲೀಸ್‌ ಆಗ್ತಿದ್ದಂತೆ ಮೊದಲ ಶೋನಲ್ಲೇ ಅಭಿಮಾನಿಗಳೊಂದಿಗೆ ಕುಳಿತು ಉಪೇಂದ್ರ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಉಪೇಂದ್ರ ಸಿನಿಮಾಗೆ 25 ವರ್ಷ ಆದ ಹಿನ್ನೆಲೆಯಲ್ಲಿ ಬೆಂಗಳೂರಿನ  ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ರೀರಿಲೀಸ್‌ ಆಗಿದೆ. ಬೆಳ್ಳಂಬೆಳಗೆ 6 ಗಂಟೆ ಸುಮಾರಿಗೆ ನಟ ಉಪೇಂದ್ರ ಮೊದಲ ಶೋವನ್ನು ಅಭಿಮಾನಿಗಳೊಂದಿಗೆ ಥಿಯೇಟರ್‌ನಲ್ಲಿ ಕುಳಿತು ವೀಕ್ಷಣೆ ಮಾಡಿದ್ದಾರೆ. ಇದರಿಂದ ಉಪ್ಪಿ ಅಭಿಮಾನಿಗಳೂ ಫುಲ್‌ ಖುಷ್‌ ಆಗಿದ್ದಾರೆ. ಉಪ್ಪಿ ಥಿಯೇಟರ್‌ಗೆ ಬರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಮಳೆಗರೆದಿದ್ದಾರೆ. ಹೌದು. ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್‌ನಲ್ಲಿ ಉಪ್ಪಿ ಏನೋ ದೊಡ್ಡದಾಗಿಯೇ ಪ್ಲ್ಯಾನ್…

Read More

ಸೂರ್ಯೋದಯ: 06:08, ಸೂರ್ಯಾಸ್ತ : 06:10 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ:ತೃತೀಯ ನಕ್ಷತ್ರ: ಅಶ್ವಿನಿ, ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ರಾ .8:16 ನಿಂದ ರಾ .9:42 ತನಕ ಅಭಿಜಿತ್ ಮುಹುರ್ತ: ಬೆ.11:45 ನಿಂದ ಮ.12:33 ತನಕ ಮೇಷ ರಾಶಿ: ಬಾಕಿ ಇರುವ ಹಣಕಾಸಿನವ್ಯವಹಾರ ಪೂರ್ಣಗೊಳ್ಳಲಿವೆ, ರಾಜಕಾರಣಿಗಳ ಪ್ರಯತ್ನ ಫಲಪ್ರದ, ಜೀವನ ಸಂಗಾತಿ ಸಿಗುವಳು,ಈ ರಾಶಿಯವರಿಗೆ ಈ ಬಾರಿ ಬಂಪರ್ ಕೊಡುಗೆ,ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಸಿಹಿಸುದ್ದಿ, ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟದಲ್ಲಿ ಗಣನೀಯ ಏರಿಕೆ. ಭೂಮಿ ಖರೀದಿ ಅಥವಾ ಭೂಮಿ ಮಾರಾಟ ಬಯಸುವರಿಗೆ…

Read More

ಅನೇಕರು ಪ್ರತಿ ದಿನ ಜೇನುತುಪ್ಪ ಸೇವನೆ ಮಾಡ್ತಾರೆ. ಬೆಳಿಗ್ಗೆ ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯುವವರಿದ್ದಾರೆ. ಆದ್ರೆ ರುಚಿ ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣ ನೀಡಿ, ಮಿತಿಗಿಂತ ಹೆಚ್ಚು ಜೇನುತುಪ್ಪ ಸೇವನೆ ಮಾಡುವುದು ಒಳ್ಳೆಯದಲ್ಲ. ಇಂದು ಜೇನು ತುಪ್ಪವನ್ನು ಯಾರಿ ಸೇವನೆ ಮಾಡ್ಬಾರದು ಎಂಬುದನ್ನು ಹೇಳ್ತೇವೆ. ಜೇನುತುಪ್ಪದಅಡ್ಡಪರಿಣಾಮಗಳು : ಹಲ್ಲಿನಸಮಸ್ಯೆ : ಪ್ರತಿ ದಿನ ಜೇನು ತುಪ್ಪ ಸೇವನೆ ಮಾಡುವವರಿಗೆ ಎಷ್ಟು ಪ್ರಮಾಣದಲ್ಲಿ ಜೇನು ತುಪ್ಪ ತಿನ್ನಬೇಕು ಎಂಬುದು ಗೊತ್ತಿರಬೇಕು. ಹೆಚ್ಚಿನ ಪ್ರಮಾಣದಲ್ಲಿ ಜೇನು ತುಪ್ಪ ಸೇವನೆ ಮಾಡಿದ್ರೆ ಹಲ್ಲಿನ ಸಮಸ್ಯೆ ಶುರುವಾಗುತ್ತದೆ. ಹಲ್ಲು ಮತ್ತು ವಸಡು ಹಾಳಾಗುವ ಅಪಾಯ ಹೆಚ್ಚಾಗಿರುತ್ತದೆ. ಅತಿಯಾಗಿ ಜೇನುತುಪ್ಪ ಸೇವನೆಯನ್ನು ಎಂದಿಗೂ ಮಾಡಬಾರದು. ಹಾಗೆಯೇ ಜೇನು ತುಪ್ಪ ಸೇವನೆ ಮಾಡಿದ ನಂತ್ರ ಸರಿಯಾಗಿ ಬಾಯಿ ತೊಳೆಯುವ, ಹಲ್ಲುಜ್ಜುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಜೇನುತುಪ್ಪದಿಂದಈರೋಗಿಗಳುದೂರವಿರಿ : ಜೇನುತುಪ್ಪದಲ್ಲಿ ಕಂಡುಬರುವ ಸಕ್ಕರೆ ಯ ಮುಖ್ಯ ಮೂಲವೆಂದರೆ ಫ್ರಕ್ಟೋಸ್. ಇದನ್ನು ಗಮನದಲ್ಲಿಟ್ಟುಕೊಂಡು ಜೇನು ತುಪ್ಪ ಸೇವನೆ ಮಾಡ್ಬೇಕು. ಕೊಬ್ಬಿನ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ…

Read More

ಮನೆಯಲ್ಲಿ ಬಳಸುವ ವಿವಿಧ ಬಗೆಯ ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡ ಒಂದು. ಕೆಲವೊಂದು ಸಿಹಿ ಪದಾರ್ಥಗಳಲ್ಲಿ ಕಡ್ಡಾಯವಾಗಿ ಲವಂಗಗಳನ್ನು ಹಾಕಲಾಗುತ್ತದೆ. ಅದೇ ರೀತಿ ಮಸಾಲೆ ಹೊಂದಿರುವ ಅಡುಗೆಗಳಲ್ಲಿ ಲವಂಗ ಇದ್ದೇ ಇರುತ್ತದೆ. ಅಪಾರವಾದ ವಿಟಮಿನ್ ಅಂಶಗಳು, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಒಳಗೊಂಡಿರುವ ಲವಂಗ ನಮಗೆ ವಿಧವಿಧವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಲವಂಗಗಳನ್ನು ನೀರಿನಲ್ಲಿ ನೆನೆ ಹಾಕುವುದರಿಂದ ಅವುಗಳ ರುಚಿ ಹೆಚ್ಚಾಗುತ್ತದೆ ಮತ್ತು ಅವುಗಳಿಂದ ಪೂರ್ಣ ಪ್ರಮಾಣದಲ್ಲಿ ನಾವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ಲವಂಗಗಳು ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳನ್ನು ನಾಶಪಡಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ. ಇವು ನಮ್ಮ ಆಕ್ಸಿಡೆಟಿವ್ ಒತ್ತಡವನ್ನು ದೂರ ಮಾಡುವುದರ ಜೊತೆಗೆ ನಮ್ಮ ಜೀವಕೋಶಗಳನ್ನು ಹಾನಿಯಾಗುವುದರಿಂದ ರಕ್ಷಿಸುತ್ತವೆ ಲವಂಗಗಳು ನಮ್ಮ ದೇಹದ ಉರಿಯುತವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತವೆ. ನಮ್ಮ ಮೂಳೆಗಳಿಗೆ ಸಂಬಂಧಪಟ್ಟಂತೆ ಕಂಡುಬರುವ ಆರ್ಥ್ರೈಟಿಸ್ ಮತ್ತು ವಿವಿಧ ಬಗೆಯ ಕೀಲು ಹಾಗೂ ಮಾಂಸ…

Read More

ಹೈದರಾಬಾದ್‌: ತಿರುಪತಿ ದೇವಸ್ಥಾನದಲ್ಲಿ  ಭಕ್ತರಿಗೆ ಪ್ರಸಾದವಾಗಿ ನೀಡಿದ ಲಡ್ಡುಗಳಲ್ಲಿ  ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ   ಇದೆ ಎಂದು ಲ್ಯಾಬ್ ವರದಿ ದೃಢಪಡಿಸಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಸ್ವತಃ ಆಂಧ್ರ ಪ್ರದೇಶ ಸಿಎಂ ನಾಯ್ಡು ಆರೋಪಿಸಿದ ಬೆನ್ನಲ್ಲೇ, ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದ್ದು ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ಸಮಿತಿಯನ್ನು ದೇವಸ್ಥಾನದ ಆಡಳಿತ ಸ್ಥಾಪಿಸಿದೆ. ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು  ಆರೋಪಿಸಿದ್ದರು. ಡಾ.ಸುರೇಂದ್ರನಾಥ್, ಡಾ.ವಿಜಯ್ ಭಾಸ್ಕರ್ ರೆಡ್ಡಿ, ಡಾ.ಸ್ವರ್ಣಲತಾ ಮತ್ತು ಡಾ.ಮಹದೇವನ್ ಅವರನ್ನೊಳಗೊಂಡ ನಾಲ್ಕು ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಜೆ ಶ್ಯಾಮಲಾ ರಾವ್ ಗುರುವಾರ ತಿಳಿಸಿದ್ದಾರೆ.

Read More

ಶ್ರೀನಿವಾಸಪುರ : ಅಪರಿಚಿತ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಕ್ಕಿ ಪಿಕ್ಕಿ ಕ್ರಾಸ್ ಸಮೀಪ ಈ ಘಟನೆ ನಡೆದಿದ್ದು.‌ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನ ತಲೆ ದೇಹ ಬೆರ್ಪಟ್ಟಿದೆ.‌ ಮೃತ ವ್ಯಕ್ತಿ ಆಂಧ್ರಪ್ರದೇಶದ ಚೀಕಲಬೈಲು ಗ್ರಾಮದ ಗುಣಶೇಖರ್ (28),ದ್ವಿಚಕ್ರ ವಾಹನ ಸವಾರ ರಾಯಲ್ಪಾಡು ನಿಂದ ಅಂದ್ರಪ್ರದೇಶದಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ‌ ಸಂಭವಿಸಿದೆ‌ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Read More

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಸಾಮಾಜಿಕ ಕಳಕಳಿ ಅಂಗವಾಗಿ ಮಹಾವೀರ ಲಿಂಬ್ ಸೆಂಟ‌ರ್ ಸಹಯೋಗದಲ್ಲಿ ಕೃತಕ ಕಾಲು ಜೋಡಣೆ ಶಿಬಿರ ನಡೆಯಿತು. ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಲಿಂಬ್‌ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ, ಚೇರ್ಮನ್ ಗೌತಮ ಗುಲೇಚಾ, ಲಿಂಗರಾಜ ಪಾಟೀಲ, ಕೌಸ್ತುಭ ಸಂಶೀಕರ, ಪ್ರವಿಣ ಬನ್ಸಾಲಿ, ಭೂಪೇಂದ್ರ ಸಕಾರಿಯಾ, ಡಾ. ಶಿವಾನಂದ, ಡಾ. ಅಸದುಲ್ಲ, ಭುಜಬಲಿ ಮಾಲಗತ್ತಿ, ರೋಹಿತ ಬೇದ್, ಆನಂದಸಿಂಗ್‌ ಮೊಕಾಶಿ, ಶಿವಪ್ರಸಾದ ಲಕಮನಹಳ್ಳಿ, ಜಯಂತಿಲಾಲ್ ಗುಲೇಚಾ ಇದ್ದರು.

Read More