ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಧಿಕೃತವಾಗಿ ಬ್ರಿಕ್ಸ್ ಕರೆನ್ಸಿ ಬ್ಯಾಂಕ್ ನೋಟನ್ನು ಅನಾವರಣಗೊಳಿಸಿದ್ದು, ಇದನ್ನು ಡಾಲರ್ ಗೆ ಪರ್ಯಾಯವಾಗಿ ಬಳಸಲು ಸೂಚಿಸಿದ್ದಾರೆ. ಯುಎಸ್ ಡಾಲರ್ ನ್ನು ರಾಜಕೀಯ ಅಸ್ತ್ರವಾಗಿ ಬಳಸುವುದನ್ನು ತಡೆಯಲು ಪರ್ಯಾಯ ಅಂತರಾಷ್ಟ್ರೀಯ ಪಾವತಿ ವ್ಯವಸ್ಥೆ ರೂಪಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬ್ರಿಕ್ಸ್ ಶೃಂಗಸಭೆಯಲ್ಲಿ ಕರೆ ನೀಡಿದ್ದರು. ರಷ್ಯಾದ ಕಜಾನ್ನಲ್ಲಿ ನಡೆದ ಶೃಂಗಸಭೆಯಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಕರೆನ್ಸಿಗಳ ಆಧಾರದ ಮೇಲೆ ಸ್ವತಂತ್ರ ಪಾವತಿ ವ್ಯವಸ್ಥೆಯನ್ನು ರಚಿಸುವ ಜಂಟಿ ಘೋಷಣೆಯನ್ನು ಅಂಗೀಕರಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೃಂಗಸಭೆಯಲ್ಲಿ ಮಾತನಾಡುತ್ತಾ, ಡಾಲರ್ ನ್ನು ಅಸ್ತ್ರವಾಗಿ ಬಳಸವುದನ್ನು ನಾವು ನೋಡಿದ್ದು, ಇದು ದೊಡ್ಡ ತಪ್ಪು ಎಂದು ನಾನು ಭಾವಿಸುತ್ತೇನೆ. ರಷ್ಯಾ ಮತ್ತು ಚೀನಾ ನಡುವಿನ ಸುಮಾರು 95% ವ್ಯಾಪಾರವು ಈಗ ರಷ್ಯಾದ ಕರೆನ್ಸಿ ರೂಬಲ್ಸ್ ಮತ್ತು ಚೀನಾದ ಯುವಾನ್ ಮೂಲಕವೇ ನಡೆಸಲ್ಪಡುತ್ತದೆ ಎಂದು ಹೇಳಿದ್ದಾರೆ. ಇನ್ನು ವಿಶ್ವ ಆರ್ಥಿಕತೆಯನ್ನು ಡಾಲರ್ ನಿಂದ ಮುಕ್ತಗೊಳಿಸುವ ಕ್ರಮ ಬ್ರೆಝಿಲ್, ಭಾರತ…
Author: Prajatv Kannada
ಫಿಲಿಪೈನ್ಸ್ ನಲ್ಲಿ ಸಂಭವಿಸುತ್ತಿರುವ ಟ್ರಾಮಿ ಚಂಡಮಾರುತ ವಿನಾಶ ಉಂಟು ಮಾಡಿದೆ. ಇದರಿಂದ ಜನ ಜೀವ ಅಸ್ತವ್ಯಸ್ಥವಾಗಿದ್ದು ಹಲವರು ಮನೆ, ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಚಂಡಮಾರುತವು ಕನಿಷ್ಠ 26 ಜನರನ್ನ ಬಲಿ ತೆಗೆದುಕೊಂಡಿದೆ. ಟ್ರಾಮಿ ಚಂಡಮಾರುತ್ತಕ್ಕೆ 1,50,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆಯುವಂತಾಗಿದೆ. ಟ್ರಾಮಿ ಚಂಡಮಾರುತವು ಧಾರಾಕಾರ ಮಳೆಗೆ ಕಾರಣವಾಗಿದ್ದು ಇದರಿಂದ ಹಲವೆಡೆ ವ್ಯಾಪಕ ಪ್ರವಾಹ ಮತ್ತು ಭೂಕುಸಿತ ಉಂಟಾಯಿತು. ಪ್ರವಾಹದಿಂದಾಗಿ ಕಾರುಗಳು ರಸ್ತೆಗಳಲ್ಲಿ ಕೊಚ್ಚಿಹೋಗಿವೆ. ಇನ್ನು ಶಾಲಾ- ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ಉಷ್ಣವಲಯದ ಚಂಡಮಾರುತ ಟ್ರಾಮಿ ಈಶಾನ್ಯ ಪ್ರಾಂತ್ಯಕ್ಕೆ ಅಪ್ಪಳಿಸಿದ ನಂತರ ಲಕ್ಷಾಂತರ ಜನರನ್ನು ಉಳಿಸಲು ರಕ್ಷಣಾ ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. ಮನೆಗಳ ಛಾವಣಿಯಲ್ಲಿ ಸಿಲುಕಿರುವ ಜನರನ್ನು ಮೋಟಾರು ದೋಣಿಗಳ ಸಹಾಯದಿಂದ ರಕ್ಷಿಸಲಾಗುತ್ತಿದೆ. ಇಫುಗಾವೊ ಪರ್ವತ ಪ್ರಾಂತ್ಯದ ಅಗುನಾಲ್ಡೊ ನಗರದಲ್ಲಿ ಗಂಟೆಗೆ 95 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿತ್ತು. ಪ್ರವಾಹ ಮತ್ತು ಭೂಕುಸಿತದಿಂದಾಗಿ ಬಿಕೋಲ್ ಪ್ರದೇಶವು ಕೆಟ್ಟದಾಗಿ ಪರಿಣಾಮ ಬೀರಿದೆ. ಪ್ರವಾಹದ ನೀರಿನಲ್ಲಿ ಮುಳುಗಿ…
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಆತ್ಮಾಹುತಿ ಬಾಂಬರ್‌ಗಳು ಸೇರಿದಂತೆ 9 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ. ಗುಪ್ತಚರ ಮಾಹಿತಿ ಮೇರೆಗೆ ಸೇನೆಯ ಪ್ರಾಂತ್ಯದ ಬಜೌರ್ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಕಾರ್ಯಾಚರಣೆ ನಡೆಸಿತು ಎಂದು ಸೇನೆಯ ಮಾಧ್ಯಮ ವಿಭಾಗದ ಸಾರ್ವಜನಿಕ ಸಂಪರ್ಕದ ಆಂತರಿಕ ಸೇವೆ ತಿಳಿಸಿದೆ. ಆತ್ಮಾಹುತಿ ಬಾಂಬರ್ ಗಳು ಹಾಗೂ ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ 9 ಮಂದಿ ಭಯೋತ್ಪಾದಕರು ಹತರಾಗಿದ್ದಾರೆ. ಇವರಲ್ಲಿ ಮೋಸ್ಟ್ ವಾಂಟೆಂಡ್ ಉಗ್ರರು ಹಾಗೂ ಇಬ್ಬರು ಆತ್ಮಾಹುತಿ ಬಾಂಬರ್‌ಗಳು ಸೇರಿದ್ದಾರೆ. ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಇವರು ಸಕ್ರಿಯರಾಗಿದ್ದರು ಎಂದು ಐಎಸ್‌ಪಿಆರ್ ಪ್ರಕಟಣೆಯಲ್ಲಿ ತಿಳಿಸಿದೆ. ಭಯೋತ್ಪಾದಕರಿಂದ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಸೇನೆ ಹೇಳಿದೆ.
ಕಳೆದ ನಾಲ್ಕು ವಾರಗಳ ಹಿಂದೆ ಆರಂಭವಾದ ಬಿಗ್ ಬಾಸ್ ಸೀಸನ್ 11 ಮೊದಲ ವಾರಕ್ಕೆ ಭರ್ಜರಿ ಟಿಆರ್‌ಪಿ ಕಂಡಿತ್ತು. ಆದರೆ ಇದೀಗ ಬಿಗ್ ಬಾಸ್ ಟಿಆರ್ ಪಿ ಕುಸಿದಿದೆ. ಜಗದೀಶ್ ಇದ್ದ ಕಾರಣಕ್ಕೆ ಬಿಗ್ ಬಾಸ್‌ಗೆ ಒಳ್ಳೆಯ ಟಿಆರ್‌ಪಿ ಸಿಕ್ಕಿತ್ತು ಎಂಬುದು ಕೆಲವರ ಅಭಿಪ್ರಾಯ. ಇದರ ಜೊತೆಗೆ ಈ ಮೊದಲು ಟಿಆರ್ ಪಿ ನಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದ ಪುಟ್ಟಕ್ಕನ ಮಕ್ಕಳು ಕಳೆದ ಕೆಲ ವಾರಗಳಿಂದ ಕುಸಿತ ಕಂಡಿತ್ತು. ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮತ್ತೆ ಮೊದಲ ಸ್ಥಾನಕ್ಕೆ ಬಂದಿದೆ. ಒಪನಿಂಗ್ ದಿನ 9+ ಟಿಆರ್‌ಪಿ ಪಡೆದು ಮೊದಲ ಸ್ಥಾನ ಪಡೆದುಕೊಂಡಿತು. ಶನಿವಾರ ಬಿಗ್ ಬಾಸ್‌ಗೆ 7.3 ಟಿಆರ್‌ಪಿ ಸಿಕ್ಕಿದೆ. ಭಾನುವಾರ 6.9 ಟಿಆರ್‌ಪಿ ಸಿಕ್ಕಿದೆ. ವಾರದ ದಿನಗಳಲ್ಲಿ 7.0 ಟಿಆರ್‌ಪಿ ಸಿಕ್ಕಿದೆ. ವಾರಾಂತ್ಯದ ಟಿಆರ್ಪಿಯಲ್ಲಿ ಸಾಕಷ್ಟು ಕುಸಿತ ಕಂಡಿದೆ. ಇನ್ನು ಈ ವಾರದಿಂದ ಕೂಡ ಅಷ್ಟೇನೂ ಸಂಚಿಕೆ ಚೆನ್ನಾಗಿ ಆಗುತ್ತಿಲ್ಲ ಎನ್ನುವುದು ಕೆಲವರ ಅಭಿಪ್ರಾಯ.…
ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಪುಷ್ಪ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಹಲವು ಭಾರಿ ರಿಲೀಸ್ ಡೇಟ್ ಮುಂದೂಡಿದ್ದ ಚಿತ್ರತಂಡ ಇದೀಗ ಕೊನೆಗೂ ಸಿನಿಮಾ ರಿಲೀಸ್ ಮಾಡೋಕೆ ಮುಂದಾಗಿದೆ. ಇದೇ ಡಿಸೆಂಬರ್ 5ರಂದು ಬಿಡುಗಡೆ ಆಗಲಿದ್ದು, ಸದ್ಯ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಪುಷ್ಪಾ 2 ಸಿನಿಮಾ ರಿಲೀಸ್ ಗೂ ಮುನ್ನವೇ 420 ಕೋಟಿ ರೂ. ಕಲೆಕ್ಷನ್ ಮಾಡಿದ್ದು ಈ ಬಗ್ಗೆ ಸಿನಿಮಾದ ನಿರ್ಮಾಪಕರೇ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾದ ನಿರ್ಮಾಪಕರು ಮತ್ತು ವಿತರಕರು ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ‘ಈವರೆಗಿನ ಬೇರೆಲ್ಲ ಸಿನಿಮಾಗಳಿಂತ ಅತಿ ಹೆಚ್ಚಿನ ಮೊತ್ತಕ್ಕೆ ಪ್ರೀ-ರಿಲೀಸ್ ಬಿಸ್ನೆಸ್ ಆಗಿದೆ. ಬಿಡುಗಡೆ ಬಳಿಕ ಆರಾಮಾಗಿ 1000 ಕೋಟಿ ರೂಪಾಯಿ ಬಿಸ್ನೆಸ್ ಆಗಲಿದೆ’ ಎಂದು ಪುಷ್ಪಾ 2 ಸಿನಿಮಾದ ಮೇಲೆ ಭರವಸೆ ನೀಡಿದ್ದಾರೆ. ನಿರ್ಮಾಪಕರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಆಗಸ್ಟ್ ತಿಂಗಳಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ…
40 ವರ್ಷಗಳ ಸುದೀರ್ಘ ಕನಸನ್ನು ನಟ ಜಗ್ಗೇಶ್ ನನಸು ಮಾಡಿಕೊಂಡಿದ್ದಾರೆ. 1980ರಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟ ಜಗೇಶ್ ಇದೀಗ ತಮ್ಮದೆ ಹೆಸರಿನ ಸ್ಟುಡಿಯೋ ಆರಂಭಿಸಿದ್ದಾರೆ. ಸಹೋದರ ಕೋಮಲ್ ನಿರ್ಮಾಣದ ಯಲಾಕುನ್ನಿ ಸಿನಿಮಾದ ಎಲ್ಲ ಕೆಲಸ ‘ಜಗ್ಗೇಶ್ ಸ್ಟುಡಿಯೊಸ್’ ನಲ್ಲಿ ನಡೆಯುತ್ತಿದೆ. ಅಂದ ಹಾಗೆ ಈ ಸ್ಟುಡಿಯೋಗೆ ಜಗ್ಗೇಶ್ ಪತ್ನಿ ಪರಿಮಳ ನೀಡಿದ ಸಲಹೆಯಂತೆ ‘ಜಗ್ಗೇಶ್ ಸ್ಟುಡಿಯೊಸ್’ ಎಂದು ಹೆಸರು ಇಟ್ಟಿದ್ದಾರೆ. ನನ್ನ ಚಿಕ್ಕ ಮಗ ಯತಿರಾಜನ ಕನಸಿನ ಪ್ರಾಜೆಕ್ಟ್ ಈ ಸ್ಟುಡಿಯೋ’ ಎಂದು ಜಗ್ಗೇಶ್ ಹೇಳಿದ್ದಾರೆ. ‘ಗಾಂಧಿನಗರದಲ್ಲಿ ಒಂದು ಸ್ಟುಡಿಯೋದಲ್ಲಿ ಎನ್.ಎಸ್. ರಾವ್ ಅವರು ಡಬ್ಬಿಂಗ್ ಮಾಡುತ್ತಾ ಇದ್ದದ್ದು ನೋಡಿ ನಾನು ಇಂಪ್ರೆಸ್ ಆಗಿದ್ದೆ. ಆ ಸ್ಟುಡಿಯೋಗೆ ಆ ಸಮಯದಲ್ಲಿ 8.9 ಲಕ್ಷ ರೂಪಾಯಿ ಖರ್ಚು ಆಗಿತ್ತು ಎಂಬುದು ಗ್ರೇಟ್. ನನ್ನ ಸಿನಿಮಾ ಬದುಕಿನ ವರ್ಣ ರಂಜಿತ ಜರ್ನಿಗೆ ಚಾಮುಂಡೇಶ್ವರಿ ಸ್ಟುಡಿಯೋ ದೊಡ್ಡ ಪಾತ್ರ ವಹಿಸುತ್ತದೆ. ‘ಬಂಡ ನನ್ನ ಗಂಡ’ ಮೂಲಕ ನಾನು ಹೀರೋ ಆದೆ. ಆ ಸಮಯ ಶಂಕರನಾಗ್ ಅವರು ಸಂಕೇತ್…
ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಕಣ ರಂಗೇರಿದೆ. ಟ್ರಂಪ್ ಹಾಗೂ ಹ್ಯಾರಿಸ್ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ದೇಶ ಮುನ್ನಡೆಸಲು ಡೊನಾಲ್ಡ್ ಟ್ರಂಪ್ ಅಸಮರ್ಥ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯೂ ಆಗಿರುವ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಾಗ್ದಾಳಿ ನಡೆಸಿದ್ದಾರೆ. ‘ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗ ಸೇನಾ ಮುಖ್ಯಸ್ಥರಾಗಿದ್ದ ಜಾನ್ ಕೆಲ್ಲಿ ಮಂಗಳವಾರ ಹೇಳಿದ್ದಂತೆ, ಟ್ರಂಪ್ ಅವರಿಗೆ ಅಡಾಲ್ಫ್ ಹಿಟ್ಲರ್ ಬಳಿ ಇದ್ದಂತಹ ಸೇನಾ ಅಧಿಕಾರಿಗಳು ಬೇಕಿದ್ದರು. ಅಮೆರಿಕ ಸಂವಿಧಾನಕ್ಕೆ ಬದ್ಧವಾಗಿರುವಂತಹ ಸೇನೆ ಅವರಿಗೆ ಬೇಕಿರಲಿಲ್ಲ; ತಮಗೆ ನಿಷ್ಠವಾಗಿ ಇರುವಂತಹ ಸೇನೆ ಬೇಕಿತ್ತು’ ಎಂದು ಕಮಲಾ ಟೀಕಿಸಿದ್ದಾರೆ. ತಮ್ಮವರೇ ಆದ ಅಮೆರಿಕನ್ನರನ್ನು ಒಳಗಿನ ಶತ್ರುಗಳು ಎಂದು ಕಳೆದೊಂದು ವಾರದಲ್ಲಿ ಟ್ರಂಪ್ ಪದೇಪದೆ ಕರೆದಿದ್ದಾರೆ. ಅಮೆರಿಕ ಪ್ರಜೆಗಳ ಮೇಲೆ ಎರಗಲು ಸೇನೆಯನ್ನು ಬಳಸುವುದಾಗಿಯೂ ಹೇಳಿದ್ದಾರೆ. ಅವರೊಬ್ಬ ಸರ್ವಾಧಿಕಾರಿ ಹಾಗೂ ಅಂತಹ ಮನಃಸ್ಥಿತಿಯವರನ್ನೇ ಬೆಂಬಲಿಸುತ್ತಾರೆ ಎನ್ನುವುದಕ್ಕೆ ಈ ಮಾತುಗಳು ಪುಷ್ಟಿ ನೀಡುತ್ತವೆ ಎಂದು ಹೇಳಿದ್ದಾರೆ.
ರಷ್ಯಾದ ಕಜಾನ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸಭೆಗೆ ‘ಹೆಚ್ಚು ಮಹತ್ವ’ ದೊರೆತಿದೆ ಎಂದು ಚೀನಾ ಹೇಳಿದೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಸಂಬಂಧಿಸಿ ಸಾಮಾನ್ಯ ವಿಚಾರಗಳ ಕುರಿತು ಉಭಯ ನಾಯಕರು ಒಪ್ಪಂದಕ್ಕೆ ಬಂದಿರುವ ಕಾರಣ ಈ ಸಭೆಗೆ ಮಹತ್ವ ಬಂದಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಲಿನ್ ಜಿಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಮೋದಿ, ಷಿ ಮಾತುಕತೆಯನ್ನು ಚೀನಾ ಯಾವ ರೀತಿ ವಿಶ್ಲೇಷಿಸುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ, ‘ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಭಾರತದೊಂದಿಗೆ ತಾನು ಕೆಲಸ ಮಾಡಲು ಸಿದ್ಧ ಎಂಬ ತನ್ನ ನಿಲುವನ್ನು ಚೀನಾ ಮತ್ತೊಮ್ಮೆ ಸ್ಪಷ್ಟಪಡಿಸಿದೆ’ ಎಂದು ಉತ್ತರಿಸಿದರು. ‘ಪರಸ್ಪರರಲ್ಲಿ ವಿಶ್ವಾಸ ಹೆಚ್ಚಳ, ಸಂವಹನ ಮತ್ತು ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಚೀನಾ ಸಿದ್ಧವಿದೆ. ಭಾರತದೊಂದಿಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಂಡು ದ್ವಿಪಕ್ಷೀಯ ಸಂಬಂಧಗಳನ್ನು ಪುನಃ ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವುದಕ್ಕೂ ಸಿದ್ಧವಿದೆ’ ಎಂದರು.
ಬೆಟ್ಟದ ನೆಲ್ಲಿಕಾಯಿಯ ರುಚಿಯನ್ನು ಬಲ್ಲದವರು ಯಾರೂ ಇಲ್ಲ. ಆರ್ಯುವೇದ ವಿಜ್ಞಾನದಲ್ಲಂತೂ ನೆಲ್ಲಿಕಾಯಿಗೆ ಬಹಳ ಮಹತ್ವವಿದೆ. ಶತ ಶತಮಾನಗಳಿಂದಲೂ ನೆಲ್ಲಿಕಾಯಿಗಳನ್ನು ಔಷಧಿಯ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ.ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡಂಟ್ ಗುಣಗಳು ಮತ್ತು ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ನೆಲ್ಲಿಕಾಯಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ , ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮುಂಬರುವ IPL ಗೂ ಮುನ್ನ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬರಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ ರಿಷಬ್ ಖರೀದಿಸಲು ಉಳಿದ ಪ್ರಾಂಚೈಸಿಗಳು ಮುಗಿ ಬೀಳುವ ಸಾಧ್ಯತೆ ಇದೆ.ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲು ಮುಂದಾಗಿರುವುದೇಕೆ ಎಂಬುದೇ ಪ್ರಶ್ನೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಕೆಲ ಫ್ರಾಂಚೈಸಿಗಳಿಂದ ಪಂತ್ ಬಂದಿರುವ ಬಿಗ್ ಆಫರ್ಗಳು. ಹೀಗೆ ಎಡಗೈ ದಾಂಡಿಗನ ಮೇಲೆ ಕಣ್ಣಿಟ್ಟಿರುವ ಫ್ರಾಂಚೈಸಿಗಳ ಪೈಕಿ ಅಗ್ರಸ್ಥಾನದಲ್ಲಿರುವುದ ಚೆನ್ನೈ ಸೂಪರ್ ಕಿಂಗ್ಸ್ ಎಂಬುದು ವಿಶೇಷ. ಐಪಿಎಲ್ ಮೆಗಾ ಹರಾಜಿನ ಸುದ್ದಿಯ ಬೆನ್ನಲ್ಲೇ ರಿಷಭ್ ಪಂತ್ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ಮಾತುಕತೆ ನಡೆಸಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯಾಗಿ ಅವರನ್ನು ನೇಮಿಸಿಕೊಳ್ಳಲು ಸಿಎಸ್ಕೆ ಆಸಕ್ತಿವಹಿಸಿದ್ದು, ಹೀಗಾಗಿ ಪಂತ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬರುತ್ತಿರುವ ಸುದ್ದಿಯ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾರ್ಗೆಟ್ ಲಿಸ್ಟ್ನಲ್ಲೂ ರಿಷಭ್ ಪಂತ್…