ದೊಡ್ಡಬಳ್ಳಾಪುರ: ಬೆಳೆ ಸಮೀಕ್ಷೆ ಮಾಡಲು ಹೋದ ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದ ಖಾಸ್ ಬಾಗ್ ನ ಕೃಷ್ಣಪ್ಪ ನವರ ಜಮೀನಿನಲ್ಲಿ ನಡೆದಿದೆ. https://youtu.be/JPh6vKjvz4I?si=67vH-jzU-e2nTIkB ಸಿದ್ದೇನಾಯಕನಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ರಾಜೇಂದ್ರ ಬಾಬು ಹಲ್ಲೆಗೊಳಗಾದ ಗ್ರಾಮಲೆಕ್ಕಾಧಿಕಾರಿಯಾಗಿದ್ದು, ಬೆಳೆ ಸಮೀಕ್ಷೆ ನಡೆಸಲು ಮೊಬೈಲ್ ನಲ್ಲಿ ಪೋಟೋ ತೆಗೆಯುತ್ತಿದ್ದ ವೇಳೆ ಗ್ರಾಮಲೆಕ್ಕಾಧಿಕಾರಿ ಮೇಲೆ ಜಮೀನಿನ ಮಾಲಿಕನ ಮಗ ವಂಸತ್ ಕುಮಾರ್ ನಿಂದ ಹಲ್ಲೆ ಮಾಡಲಾಗಿದೆ. ತೆಂಗಿನ ಮೊಟ್ಟೆಯಿಂದ ಗ್ರಾಮಲೆಕ್ಕಾಧಿಕಾರಿ ತಲೆ ಕೈ ಎದೆ ಭಾಗಕ್ಕೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಕಂದಾಯ ಇಲಾಖೆ ಆದೇಶದಂತೆ ಪ್ರತಿ ಜಮೀನಿನ ಬೆಳೆ ಸಮೀಕ್ಷೆ ನಡೆಸಲು ಮೊಬೈಲ್ ಮೂಲಕ ಸ್ಥಳಕ್ಕೆ ಹೋಗಿ ಪೋಟೋ ಅಪ್ ಲೋಡ್ ಮಾಡಬೇಕು. ಆದ್ದರಿಂದ ಪೋಟೋ ತೆಗೆಯುವ ಸಂದರ್ಭದಲ್ಲಿ ಈ ವೇಳೆ ಪೋಟೊ ತೆಗೆದಿದ್ದು ಯಾಕೆ ಎಂದು ಏಕಾಏಕಿ ಹಲ್ಲೆ ಮಾಡಿದ್ದಾನೆ. ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಆರೋಪಿ ವಸಂತ್ ನನ್ನ ಬಂಧಿಸಿದ್ದು, ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಪ್ರಕರಣ…
Author: Prajatv Kannada
ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರು ರಾಹೆ 50 ರಲ್ಲಿ ಭೀಕರ ಅಪಘಾತ ಸಂಭವಿಸಿದೆ. https://youtu.be/Fh5qtx1HELU?si=L7GVFcO7Ldt8YtV2 ವಾಯು ವಿಹಾರ ಮಾಡುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಆಲೂರು ಗ್ರಾಮದ ಸಿದ್ದಲಿಂಗಯ್ಯ (39) ಮೊಳಕಾಲ್ಮೂರು ತಾಲೂಕಿನ ದೇವಸಮುದ್ರದ ಕೊಟ್ರಯ್ಯ(26) ಮೃತಪಟ್ಟ ದುರ್ದೈವಿಗಳು ಆಗಿದ್ದು, ಮತ್ತೊಬ್ಬ ಹುಡೇಂ ಗ್ರಾಮದ ಶಿವಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಿಂದ ರಾಜಸ್ಥಾನದ ಕಡೆ ಹೊರಟಿದ್ದ ಲಾರಿ ಆಲೂರು ಗ್ರಾಮದ ರಾಹೆ.50 ರ ಬಳಿ ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಹರಿದಿದೆ. ಇನ್ನೂ ಘಟನೆ ಸಂಬಂಧ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೇಂದ್ರ ಪುರಸ್ಕೃತ ಪ್ರಾಯೋಜಕತ್ವ ಯೋಜನೆ ಸ್ಕಾಲರ್‌ಶಿಪ್ ತಂದೆ ಇಲ್ಲದ ಎಲ್ಲಾ ಮಕ್ಕಳಿಗೂ ಅನ್ವಯವಾಗುವುದಿಲ್ಲ. ನಿರ್ದಿಷ್ಟ ಮಾನದಂಡಗಳ ಮೂಲಕ ಮಾತ್ರ ಈ ಯೋಜನೆಯ ಫಲಾನುಭವಿಯಾಗಲು ಸಾಧ್ಯವಾಗುತ್ತದೆ. ಈ ಯೋಜನೆಯ ಮೂಲಕ ತಂದೆಯಿಲ್ಲದ ಮಕ್ಕಳ ಬ್ಯಾಂಕ್ ಖಾತೆಗೆ ಪ್ರತಿ ವರ್ಷ 24,000 ರೂಪಾಯಿಗಳ ಸ್ಕಾಲರ್‌ಶಿಪ್ ಸೌಲಭ್ಯವಿರುತ್ತದೆ, ಆದರೆ ಈ ವಿಷಯದ ಬಗ್ಗೆ ಅನೇಕ ಜನರಿಗೆ ತಿಳಿದೇ ಇಲ್ಲ. ಆದ್ದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದಂತಹ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಈ ತಕ್ಷಣ ಅರ್ಜಿಯನ್ನು ಸಲ್ಲಿಸಲು ತಿಳಿಸಿ ಎಂದು ಅಧಿಕೃತ ಸಹಿ ಇಲ್ಲದ ಅರ್ಜಿಯು ಸಾಮಾಜಿಕ ಜಾಲತಾಣದ ಮುಖಾಂತರ ಹರಿದಾಡುತ್ತಿದ್ದು, ಈ ಸುದ್ದಿಯು “ಸುಳ್ಳುಸುದ್ದಿ”ಯಾಗಿಗಿದೆ. ಈ ಯೋಜನೆಯಡಿಯಲ್ಲಿ ನಿರ್ದಿಷ್ಟ ಮಾನದಂಡಗಳು ಅನ್ವಯವಾಗುವ ಮಕ್ಕಳಿಗೆ ಮಾತ್ರವೇ ಸ್ಕಾಲರ್‌ಶಿಪ್ ಸಿಗಲಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟದ ಅಧ್ಯಕ್ಷರು ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ. ಈ ಯೋಜನೆಯಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಿಂದ(ಬಾಲಕರ/ಬಾಲಕಿಯರ ಬಾಲಮಂದಿರ ಮತ್ತು ವೀಕ್ಷಣಾಲಯ) ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದರೆ ಹಾಗೂ ವಿಸ್ತ್ರತ…
ರಾಯಚೂರು: ವಿಆರ್ಎಲ್ ಬಸ್ ಹರಿದು 125 ಕುರಿಗಳು ಮೃತಪಟ್ಟಿರುವ ಘಟನೆ ರಾಯಚೂರು ಹೊರವಲಯದ ಯರಮರಸ್ ಬೈಪಾಸ್ನಲ್ಲಿ ನಡೆದಿದೆ. ವಿಆರ್ಎಲ್ ಬಸ್ ಹೈದರಾಬಾದ್ನಿಂದ ಬೆಳಗಾವಿಗೆ ಹೊರಟಿತ್ತು. ತೆಲಂಗಾಣದ ಮಕ್ತಲ್ ಬಳಿಯ ಓಬಳಾಪುರಂ ಗ್ರಾಮದ ಮಲ್ಲೇಶ್ https://youtu.be/rmwQVMSABbA?si=sLqr0ACsk2DiQ-Y- ಸೀನಪ್ಪ ಮತ್ತು ಬಾಲರಾಜು ಎಂಬುವರಿಗೆ ಸೇರಿದ 150 ಕ್ಕೂ ಹೆಚ್ಚು ಕುರಿಗಳು ತೆಲಂಗಾಣದಿಂದ ರಾಯಚೂರು ಮಾರ್ಗವಾಗಿ ಬರುತ್ತಿದ್ದವು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿಆರ್ಎಲ್ ಬಸ್ ಕುರಿಗಳ ಮೇಲೆ ಹರಿದಿದೆ. ಘಟನೆಯಲ್ಲಿ 125 ಕುರಿಗಳು ಮೃತಪಟ್ಟಿವೆ, 18 ಕುರಿಗಳ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೋಲಿಸರಿಂದ ಭೇಟಿ ಪರಿಶೀಲನೆ ನಡೆಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ದಿನಗಣನೆಗಳು ಶುರುವಾಗಿವೆ.2024ರ ದಸರಾ ಚಟುವಟಿಗಳ ಸಿದ್ದತೆ ಈಗಾಗಲೇ ಆರಂಭಗೊಂಡಿದ್ದು, ದಸರಾಗೆ ಅಕ್ಟೋಬರ್ 3ರಂದು ಚಾಲನೆ ಸಿಗಲಿದೆ. https://youtu.be/Edf8uXYnV0E?si=A68DoKAhty7O9jRQ ದಸರಾ ಉದ್ಘಾಟಕರಾಗಿ ಸಾಹಿತಿ ಹಂ.ಪ.ನಾಗರಾಜಯ್ಯ ನೇಮಕ ದಸರಾ ಉದ್ಘಾಟಕರಾಗಿ ಹಂಪನಾ ನೇಮಿಸಿದ ರಾಜ್ಯ ಸರ್ಕಾರ ಅಕ್ಟೋಬರ್ 3ರಂದು ಮೈಸೂರಿನಲ್ಲಿ ನಡೆಯುವ ದಸರಾ ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಈ ಬಾರಿ ದಸರಾ ಉದ್ಘಾಟಿಸಲಿರುವ ಸಾಹಿತಿ ಹಂ.ಪ.ನಾಗರಾಜಯ್ಯ ಕರ್ನಾಟಕದ ನಾಡಹಬ್ಬ ಮೈಸೂರು ದಸರಾಗೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಮಹಾರಾಜರು ಮೊದಲು 414 ವರ್ಷಗಳ ಹಿಂದೆಯೇ ದಸರಾವನ್ನು ಆರಂಭಿಸಿದ್ದು ಶ್ರೀರಂಗಪಟ್ಟಣದಲ್ಲಿ. ಅಲ್ಲಿಂದ ಮೈಸೂರಿಗೆ ದಸರಾ ಸ್ಥಳಾಂತರಗೊಂಡು ಪ್ರತಿ ವರ್ಷ ನವರಾತ್ರಿ ಹಾಗೂ ವಿಜಯದಶಮಿಗಳು ಸಡಗರದಿಂದ ನಡೆದುಕೊಂಡು ಬಂದಿವೆ. ಕೆಲವೊಮ್ಮೆ ಅರಮನೆ ಆವರಣದಲ್ಲಿ ಸೀಮಿತರಾದರೂ ಹೆಚ್ಚು ದಸರಾಗಳು ಜಂಬೂಸವಾರಿ ಮೆರವಣಿಗೆಯೊಂದಿಗೆ ಬನ್ನಿಮಂಟಪದವರೆಗೂ ಸಾಗಿದೆ. ಈ ರೀತಿಯ ದಸರಾವನ್ನು ಗಣ್ಯರೊಬ್ಬರಿಂದ ಉದ್ಘಾಟಿಸುವ ಪರಂಪರೆ ಮೂರು ದಶಕದ ಹಿಂದೆಯೇ ಆರಂಭಗೊಂಡಿದೆ
2024ರಲ್ಲಿ ವಿಶ್ವಾದ್ಯಂತದ ಟಾಪ್ 2% ವಿಜ್ಞಾನಿಗಳ ಪ್ರತಿಷ್ಠಿತ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಎಂಟು ಪ್ರಾಧ್ಯಾಪಕರು ಸ್ಥಾನ ಪಡೆದುಕೊಂಡಿದ್ದಾರೆ. https://youtu.be/rmwQVMSABbA?si=K1Y6Zi0FEBEQnthn ಯುಎಸ್‌ಎ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ನೆದರ್ಲ್ಯಾಂಡ್‌ನ ಎಲ್ಸೆವಿಯರ್ ಪಬ್ಲಿಷಿಂಗ್‌ನಿಂದ ವಾರ್ಷಿಕವಾಗಿ ಸೂಚ್ಯಂಕಗಳನ್ನು ಸಂಕಲಿಸಿ ಅದರ ಆಧಾರದ ಮೇಲೆ ಪ್ರಾಧ್ಯಾಪಕರನ್ನು ಗುರುತಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ, ಭೌತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ ಮತ್ತು ಗಣಿತ ವಿಭಾಗಗಳಿಗೆ ಸೇರಿದ ಪ್ರಾಧ್ಯಾಪಕರುಗಳನ್ನು ಗುರುತಿಸಿ ಗೌರವಿಸಲಾಗಿದೆ. ಚಂದ್ರಶೇಖರಯ್ಯ ಡಿ.ಎಸ್, ದೇವಿ ಎಲ್.ಗೋಮತಿ, ರುದ್ರಯ್ಯ ಎನ್, ಶಿವಕುಮಾರ್, ಸಿ.ಶ್ರೀನಿವಾಸ್, ಕುಂಬಿನರಸಯ್ಯ ಎಸ್, ಈರಯ್ಯ ಬಿ, ಮತ್ತು ವಿಷ್ಣು ಕಾಮತ್ ಅವರು ಸ್ಥಾನ ಪಡೆದಿದ್ದಾರೆ. ವಿಶ್ವವಿದ್ಯಾನಿಲಯಗಳ ಪೈಕಿ ಬೆಂಗಳೂರು ವಿಶ್ವವಿದ್ಯಾನಿಲಯ ರಾಜ್ಯದ ವಿಶ್ವವಿದ್ಯಾನಿಲಯಗಳಿಂದ ಹೆಚ್ಚಿನ ಸಂಖ್ಯೆಯ ಪ್ರಾಧ್ಯಾಪಕರನ್ನು ಹೊಂದಿದ್ದು, ಮತ್ತೊಮ್ಮೆ ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ.
ಕೋಲಾರ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬೈರತಿ ಸುರೇಶ್ ರವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಶಾಖೆ ವತಿಯಿಂದ ದಲಿತರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ನಾಗನಾಳ ಮುನಿಯಪ್ಪ ಮಾತನಾಡಿ ಜಿಲ್ಲಾಧಿಕಾರಿಗಳು ಜಿಲ್ಲೆಗೆ ಬಂದಾಗಿನಿಂದ ಒಂದು ಕಡೆ ದಲಿತರನ್ನ ಸೇರಿಸಿ ನಮ್ಮ ಸಮಸ್ಯೆಗಳನ್ನ ಆಲಿಸಿಲ್ಲ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಹೋದಾಗ ಸರಿಯಾಗಿ ಸ್ಪಂದಿಸಿಲ್ಲ ಈ ಕಾರಣಕ್ಕಾಗಿ ಯಾವುದೇ ಸಮಸ್ಯೆ ಬಗೆ ಬಗೆಹರೆದಿಲ್ಲ ಎಂದು ಉಸ್ತುವಾರಿ ಮಂತ್ರಿಗಳ ಗಮನಕ್ಕೆ ತಂದರು. ಮನವಿಗೆ ಸ್ಪಂದಿಸಿದ ಜಿಲ್ಲಾ ಉಸುವಾರಿ ಸಚಿವರು ಕೂಡಲೇ ಜಿಲ್ಲಾಧಿಕಾರಿಗಳನ್ನು ಕರೆಸಿ, ಎಲ್ಲಾ ದಲಿತ ಸಂಘಟನೆಗಳ ಸಭೆಯನ್ನ ಕರೆದು ಅವರ ಸಮಸ್ಯೆಗಳನ್ನು ಆಲಿಸಲು ಸೂಚನೆ ನೀಡಿದರು. ಆದಷ್ಟು ಬೇಗ ಸಭೆ ಏರ್ಪಡಿಸಿ ಸರ್ವೆ ನಂಬರ್ ಗಳನ್ನು ಗುರುತಿಸಿ ಅದರಲ್ಲೂ ದಲಿತರ ಜಮೀನುಗಳ ಪೋಡಿಯನ್ನು ಬೇಗನೆ ಮಾಡಲು ಸೂಚಿಸಿದರು ಹಾಗೂ ಜಿಲ್ಲೆಯಾದ್ಯಂತ ಸರ್ಕಾರಿ…
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗುರುವಾರ ಕೊಂಚ ಏರಿಕೆ ಕಂಡಿದೆ. ಇತ್ತೀಚೆಗಷ್ಟೇ 57 ಸಾವಿರ ರೂ. ಗಡಿ ದಾಟಿದ್ದ ಅಡಿಕೆ ಧಾರಣೆ ಇದೀಗ ಕೊಂಚ ಕುಸಿತ ಕಂಡಿದೆ. ಕೆಲವು ಜಿಲ್ಲೆಗಳಲ್ಲಿ ಅಡಿಕೆ ಬೆಲೆ ಉತ್ತಮ ಸ್ಥಿತಿಯಲ್ಲಿದೆ. https://youtu.be/Edf8uXYnV0E?si=dZEOE02pCdYQrzMk ಅಡಿಕೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸವಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 45,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ. ಬಂಟ್ವಾಳ ಅಡಿಕೆ ಧಾರಣೆ ಕೋಕೋ ₹12500 ₹25000 ಹೊಸ ವೆರೈಟಿ ₹27500 ₹40500 ಹಳೆ ವೆರೈಟಿ ₹48000 ₹53000 ಪುತ್ತೂರು ಅಡಿಕೆ ಧಾರಣೆ ಕೋಕೋ ₹11000 ₹25000 ಹೊಸ ವೆರೈಟಿ ₹33500 ₹40500…
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರೇ ನಿರ್ದೇಶಿಸಿ ನಟಿಸಿರುವ ʻಯುಐʼ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಟೀಸರ್, ಸಾಂಗ್ಸ್‌ನಿಂದ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. https://youtu.be/kL0pOchnf8w?si=0B_lbPI4rXIv1RWC ಉಪ್ಪಿ ಅವರೇ ನಿರ್ದೇಶಿಸಿ ನಟಿಸಿದ್ದ ‘ಉಪೇಂದ್ರ’ ಸಿನಿಮಾ ರೀರಿಲೀಸ್ ಆಗಿದೆ. ರೀರಿಲೀಸ್ ಆಗ್ತಿದ್ದಂತೆ ಮೊದಲ ಶೋನಲ್ಲೇ ಅಭಿಮಾನಿಗಳೊಂದಿಗೆ ಕುಳಿತು ಉಪೇಂದ್ರ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಉಪೇಂದ್ರ ಸಿನಿಮಾಗೆ 25 ವರ್ಷ ಆದ ಹಿನ್ನೆಲೆಯಲ್ಲಿ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ರೀರಿಲೀಸ್ ಆಗಿದೆ. ಬೆಳ್ಳಂಬೆಳಗೆ 6 ಗಂಟೆ ಸುಮಾರಿಗೆ ನಟ ಉಪೇಂದ್ರ ಮೊದಲ ಶೋವನ್ನು ಅಭಿಮಾನಿಗಳೊಂದಿಗೆ ಥಿಯೇಟರ್‌ನಲ್ಲಿ ಕುಳಿತು ವೀಕ್ಷಣೆ ಮಾಡಿದ್ದಾರೆ. ಇದರಿಂದ ಉಪ್ಪಿ ಅಭಿಮಾನಿಗಳೂ ಫುಲ್ ಖುಷ್ ಆಗಿದ್ದಾರೆ. ಉಪ್ಪಿ ಥಿಯೇಟರ್‌ಗೆ ಬರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಮಳೆಗರೆದಿದ್ದಾರೆ. ಹೌದು. ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್‌ನಲ್ಲಿ ಉಪ್ಪಿ ಏನೋ ದೊಡ್ಡದಾಗಿಯೇ ಪ್ಲ್ಯಾನ್…
ಸೂರ್ಯೋದಯ: 06:08, ಸೂರ್ಯಾಸ್ತ : 06:10 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ:ತೃತೀಯ ನಕ್ಷತ್ರ: ಅಶ್ವಿನಿ, ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ರಾ .8:16 ನಿಂದ ರಾ .9:42 ತನಕ ಅಭಿಜಿತ್ ಮುಹುರ್ತ: ಬೆ.11:45 ನಿಂದ ಮ.12:33 ತನಕ ಮೇಷ ರಾಶಿ: ಬಾಕಿ ಇರುವ ಹಣಕಾಸಿನವ್ಯವಹಾರ ಪೂರ್ಣಗೊಳ್ಳಲಿವೆ, ರಾಜಕಾರಣಿಗಳ ಪ್ರಯತ್ನ ಫಲಪ್ರದ, ಜೀವನ ಸಂಗಾತಿ ಸಿಗುವಳು,ಈ ರಾಶಿಯವರಿಗೆ ಈ ಬಾರಿ ಬಂಪರ್ ಕೊಡುಗೆ,ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಸಿಹಿಸುದ್ದಿ, ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟದಲ್ಲಿ ಗಣನೀಯ ಏರಿಕೆ. ಭೂಮಿ ಖರೀದಿ ಅಥವಾ ಭೂಮಿ ಮಾರಾಟ ಬಯಸುವರಿಗೆ…