ಮನೆಯಲ್ಲಿ ಬಳಸುವ ವಿವಿಧ ಬಗೆಯ ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡ ಒಂದು. ಕೆಲವೊಂದು ಸಿಹಿ ಪದಾರ್ಥಗಳಲ್ಲಿ ಕಡ್ಡಾಯವಾಗಿ ಲವಂಗಗಳನ್ನು ಹಾಕಲಾಗುತ್ತದೆ. ಅದೇ ರೀತಿ ಮಸಾಲೆ ಹೊಂದಿರುವ ಅಡುಗೆಗಳಲ್ಲಿ ಲವಂಗ ಇದ್ದೇ ಇರುತ್ತದೆ. ಅಪಾರವಾದ ವಿಟಮಿನ್ ಅಂಶಗಳು, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಒಳಗೊಂಡಿರುವ ಲವಂಗ ನಮಗೆ ವಿಧವಿಧವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಲವಂಗಗಳನ್ನು ನೀರಿನಲ್ಲಿ ನೆನೆ ಹಾಕುವುದರಿಂದ ಅವುಗಳ ರುಚಿ ಹೆಚ್ಚಾಗುತ್ತದೆ ಮತ್ತು ಅವುಗಳಿಂದ ಪೂರ್ಣ ಪ್ರಮಾಣದಲ್ಲಿ ನಾವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ಲವಂಗಗಳು ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳನ್ನು ನಾಶಪಡಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ. ಇವು ನಮ್ಮ ಆಕ್ಸಿಡೆಟಿವ್ ಒತ್ತಡವನ್ನು ದೂರ ಮಾಡುವುದರ ಜೊತೆಗೆ ನಮ್ಮ ಜೀವಕೋಶಗಳನ್ನು ಹಾನಿಯಾಗುವುದರಿಂದ ರಕ್ಷಿಸುತ್ತವೆ ಲವಂಗಗಳು ನಮ್ಮ ದೇಹದ ಉರಿಯುತವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತವೆ. ನಮ್ಮ ಮೂಳೆಗಳಿಗೆ ಸಂಬಂಧಪಟ್ಟಂತೆ ಕಂಡುಬರುವ ಆರ್ಥ್ರೈಟಿಸ್ ಮತ್ತು ವಿವಿಧ ಬಗೆಯ ಕೀಲು ಹಾಗೂ ಮಾಂಸ…
Author: Prajatv Kannada
ಹೈದರಾಬಾದ್: ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡಿದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂದು ಲ್ಯಾಬ್ ವರದಿ ದೃಢಪಡಿಸಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಸ್ವತಃ ಆಂಧ್ರ ಪ್ರದೇಶ ಸಿಎಂ ನಾಯ್ಡು ಆರೋಪಿಸಿದ ಬೆನ್ನಲ್ಲೇ, ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದ್ದು ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ಸಮಿತಿಯನ್ನು ದೇವಸ್ಥಾನದ ಆಡಳಿತ ಸ್ಥಾಪಿಸಿದೆ. ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಡಾ.ಸುರೇಂದ್ರನಾಥ್, ಡಾ.ವಿಜಯ್ ಭಾಸ್ಕರ್ ರೆಡ್ಡಿ, ಡಾ.ಸ್ವರ್ಣಲತಾ ಮತ್ತು ಡಾ.ಮಹದೇವನ್ ಅವರನ್ನೊಳಗೊಂಡ ನಾಲ್ಕು ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಜೆ ಶ್ಯಾಮಲಾ ರಾವ್ ಗುರುವಾರ ತಿಳಿಸಿದ್ದಾರೆ.
ಶ್ರೀನಿವಾಸಪುರ : ಅಪರಿಚಿತ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಕ್ಕಿ ಪಿಕ್ಕಿ ಕ್ರಾಸ್ ಸಮೀಪ ಈ ಘಟನೆ ನಡೆದಿದ್ದು. ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನ ತಲೆ ದೇಹ ಬೆರ್ಪಟ್ಟಿದೆ. ಮೃತ ವ್ಯಕ್ತಿ ಆಂಧ್ರಪ್ರದೇಶದ ಚೀಕಲಬೈಲು ಗ್ರಾಮದ ಗುಣಶೇಖರ್ (28),ದ್ವಿಚಕ್ರ ವಾಹನ ಸವಾರ ರಾಯಲ್ಪಾಡು ನಿಂದ ಅಂದ್ರಪ್ರದೇಶದಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಸಾಮಾಜಿಕ ಕಳಕಳಿ ಅಂಗವಾಗಿ ಮಹಾವೀರ ಲಿಂಬ್ ಸೆಂಟರ್ ಸಹಯೋಗದಲ್ಲಿ ಕೃತಕ ಕಾಲು ಜೋಡಣೆ ಶಿಬಿರ ನಡೆಯಿತು. ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ, ಚೇರ್ಮನ್ ಗೌತಮ ಗುಲೇಚಾ, ಲಿಂಗರಾಜ ಪಾಟೀಲ, ಕೌಸ್ತುಭ ಸಂಶೀಕರ, ಪ್ರವಿಣ ಬನ್ಸಾಲಿ, ಭೂಪೇಂದ್ರ ಸಕಾರಿಯಾ, ಡಾ. ಶಿವಾನಂದ, ಡಾ. ಅಸದುಲ್ಲ, ಭುಜಬಲಿ ಮಾಲಗತ್ತಿ, ರೋಹಿತ ಬೇದ್, ಆನಂದಸಿಂಗ್ ಮೊಕಾಶಿ, ಶಿವಪ್ರಸಾದ ಲಕಮನಹಳ್ಳಿ, ಜಯಂತಿಲಾಲ್ ಗುಲೇಚಾ ಇದ್ದರು.
ಬೆಂಗಳೂರು: ಬಡವರಿಗೆ ಕಡಿಮೆ ದರದಲ್ಲಿ ಊಟ ಸಿಗಬೇಕೆಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಶುರು ಮಾಡಿದ್ದರು ಸಿಎಂ ಸಿದ್ದರಾಮಯ್ಯ. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಅಷ್ಟಕ್ಕೆ ಅಷ್ಟೇ ಆಗಿತ್ತು. ಈಗ ಮತ್ತೆ ಅಧಿಕಾರಕ್ಕೆ ಬಂದಿರೋ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್‌ಗೆ ಹೊಸ ರೂಪ ನೀಡೋದಾಗಿ ಹೇಳಿದೆ. https://youtu.be/IhEK1gl6SII?si=Q8biV1Z5R9AdWXgF ಆದ್ರೇ ಇರೋ ಕ್ಯಾಂಟೀನ್ ಒಂದಕ್ಕೆ ಬೀಗ ಬಿದ್ದಿದ್ದು, ಆ ಕ್ಯಾಂಟೀನ್ ಅಕ್ರಮ ಚಟುವಟಿಕೆಯ ತಾಣವಾಗಿದೆ. ಹೊಸ ರೂಪದಲ್ಲಿ ಇಂದಿರಾ ಕ್ಯಾಂಟೀನ್ ಇರುತ್ತೆ.. ಬಡವರ ಹಸಿವು ನೀಗಿಸುತ್ತೆ, ಹೊಸ ಮೆನು ಇರುತ್ತೆ ಅಂತಾ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದ್ರೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳೇ ಕಳದ್ರೂ ಇನ್ನೂ ಹೊಸ ಮೆನು ಬಂದೇ ಇಲ್ಲ. ಅದ್ರಲ್ಲಿ ಕಳೆದ ಅವಧಿಯಲ್ಲಿ ನಿರ್ಮಾಣವಾಗಿದ್ದ ವಾರ್ಡ್ ನಂಬರ್ 155ರ ಹನುಮಂತನಗರದ ಇಂದಿರಾ ಕ್ಯಾಂಟೀನ್ ಅಕ್ಷರಶಃ ಪಾಳು ಬಿದ್ದ ಜಾಗದಂತೆ ಆಗಿದ್ದು, ಕ್ಯಾಂಟೀನ್ ಆವರಣದಲ್ಲಿ ಗಿಡಗಂಟೆಗಳು ಬೆಳೆದುಕೊಂಡಿದೆ. ಕ್ಯಾಂಟೀನ್ ಕೂಡ ಕ್ಲೋಸ್ ಆಗಿದ್ದು ಇದು ಪೋಲಿ, ಪುಂಡರ ಅಡ್ಡೆಯಾಗಿ ಮಾರ್ಪಾಡಾಗಿದ್ದು,…
ಇನ್ನೇನು ಕೆಲವೇ ದಿನಗಳಲ್ಲಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಈಗಾಗಲೇ ಬಿಗ್ ಬಾಸ್ ತೆಲುಗು, ಹಿಂದಿ ಬಿಗ್ ಬಾಸ್ ಸೀಸನ್ 18ರ ಪ್ರೋಮೋ ಕೂಡ ಔಟ್ ಆಗಿದೆ. ಕನ್ನಡದಲ್ಲಿ ಬಿಗ್ ಬಾಸ್ ಸೀಸ್‌ನ 11 ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ಫ್ಯಾನ್ಸ್ ಗೆ ಬೇಸರ ಸುದ್ದಿಯೊಂದು ಬಿಗ್ ಬಾಸ್ ಕಡೆಯಿಂದ ಕೇಳಿ ಬಂದಿದೆ. ವರದಿಯ ಪ್ರಕಾರ ಈ ಬಾರಿ ಬಿಗ್ ಬಾಸ್ ಸೀಸನ್ 11 ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಆಗುತ್ತಿಲ್ಲವಂತೆ. ಈ ಸೀಸನ್‌ನಲ್ಲಿ ಕಳೆದ ಬಾರಿಯಂತೆ 24 ಗಂಟೆಗಳ ಲೈವ್ ಇರುವುದಿಲ್ಲವಂತೆ. ಅಷ್ಟೇ ಅಲ್ಲ, ಕಾರ್ಯಕ್ರಮದ ಲೈವ್ ಮಿಸ್ ಮಾಡಿಕೊಂಡವರು ಅದನ್ನು ಜಿಯೋದಲ್ಲಿ ನೋಡುವ ಅವಕಾಶವಿತ್ತು. ಆದರೆ ಈ ಬಾರಿ ವಾಹಿನಿ ಜಿಯೋದಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡದಿರಲು ನಿರ್ಧರಿಸಿದೆ ಎಂಬ ಸುದ್ದಿ ಕೇಳಿ ಬಂದಿದೆ. ಮೂಲಗಳ ಪ್ರಕಾರ ಕಲರ್ಸ್ ಕನ್ನಡದಲ್ಲಿ ಇಷ್ಟೂ ದಿನ 1 ವರೆ ಗಂಟೆಗಳ ಕಾಲ ಹೇಗೆ ಬಿಗ್ ಬಾಸ್ ಪ್ರಸಾರ…
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮಾಗೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಹೆಸರು ಕೇಳ್ತಿದ್ದಂತೆ ಅವರ ಕ್ಯೂಟ್ ಸ್ಮೈಲ್ ಕಣ್ ಮುಂದೆ ಬರುತ್ತೆ. ಅಷ್ಟುಕ್ಕೂ ರಶ್ಮಿಕಾ ಇಷ್ಟು ಚಂದದ ನಗುವಿಗಾಗಿ ಏನ್ಮಾಡ್ತಾರೆ ಗೊತ್ತಾ? ಸಾಮಾನ್ಯವಾಗಿ ಹೆಚ್ಚಿನವರು ಬಿಳಿ ಅಥವಾ ಕೆಂಪು ಬಣ್ಣದ ಟೂತ್ ಪೇಸ್ಟ್ ಬಳಸುತ್ತಾರೆ. ಆದರೆ ರಶ್ಮಿಕಾ ಬಳಸೋದು ನೇರಳೆ ಬಣ್ಣದ ಟೂತ್ ಪೇಸ್ಟ್ ಅನ್ನು. ಇತ್ತೀಚೆಗೆ ರಶ್ಮಿಕಾ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಶೇರ್ ಮಾಡಿದ್ದರು. ಅದರಲ್ಲಿ ನಟಿ ಬ್ರಶ್ ಮಾಡುವುದು, ರೆಡಿಯಾಗುವುದನ್ನು ತೋರಿಸಿದ್ದಾರೆ. ಈ ವೇಳೆ ನಟಿ ಪರ್ಪಲ್ ಬಣ್ಣದ ಟೂತ್ಪೇಸ್ಟ್ ಬಳಸಿದ್ದು ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗಿದೆ. ಇದು ಜಾಹೀರಾತು ಭಾಗವೇ ಎನ್ನುವುದು ಖಚಿತವಾಗಿಲ್ಲ. ನಟಿ ಇತ್ತೀಚೆಗೆ ತಾವು ಕಾಲ್ಗೇಟ್ ವಿಸಿಬಲ್ ವೈಟ್ ಪರ್ಪಲ್ ಟೂತ್ಪೇಸ್ಟ್ ಬಳಸುವುದಾಗಿ ರಿವೀಲ್ ಮಾಡಿದ್ದಾರೆ. ಇದರ ಬೆಲೆ 152 ರೂಪಾಯಿ ಇದೆ. ಅಂದ ಹಾಗೆ ನಟಿ ನಿತ್ಯವೂ ಹಲ್ಲುಜ್ಜಲು ಇದೇ ಪೇಸ್ಟ್ ಬಳಸೋದಾಗಿ ಹೇಳಿಕೊಂಡಿದ್ದಾರೆ.…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿ 100 ದಿನ ಕಳೆದಿದೆ. ಅತ್ತ ದರ್ಶನ್ ರನ್ನು ಹೊರ ತರಲು ಪತ್ನಿ ವಿಜಯಲಕ್ಷ್ಮೀ ಸಾಕಷ್ಟು ಪ್ರಯತ್ನಗಳನ್ನ ಮಾಡ್ತಿದ್ದು ದೇವರ ಮೊರೆ ಹೋಗ್ತಿದ್ದಾರೆ. ಇತ್ತ ದರ್ಶನ್ ಅಭಿಮಾನಿಗಳು ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ದೇವಿಯ ಮೊರೆ ಹೋಗಿದ್ದು ಬೂದುಕುಂಬಳಕಾಯಿ ದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಬಿಡುಗಡೆಗಾಗಿ ಕಾಳಿಕಾಂಬ ದೇವಿಯ ಮೊರೆ ಹೋಗಿದ್ದಾರೆ. ಅನಂತ ಪೂರ್ಣಿಮ ದಿನದಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತಂಗನಹಳ್ಳಿ ಕಾಳಿಕಾಂಬ ದೇವಿಗೆ ದರ್ಶನ್ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹಾಗಾಗಿ ಸಂಕಷ್ಟದಲ್ಲಿರುವ ದರ್ಶನ್ ಆದಷ್ಟು ಬೇಗ ಜೈಲಿನಿಂದ ಹೊರಬರಲಿ ಅಂತ ಶಕ್ತಿ ದೇವತೆ ಕಾಳಿಕಾಂಬ ದೇವಿಯ ಮೊರೆ ಹೋಗಿದ್ದಾರೆ ಫ್ಯಾನ್ಸ್. ದೇವಿಯ ಆರಾದಿಸಿದರೆ ಎಂತಹ ಕಷ್ಟಗಳಿದ್ರೂ ನಿವಾರಣೆ ಆಗ್ತದೆ ಎಂಬುದು ಇಲ್ಲಿನ ಗ್ರಾಮಸ್ಥರ ನಂಬಿಕೆಯಾಗಿದ್ದು, ಸೆ.18ರ ರಾತ್ರಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಬೂದುಕುಂಬಳಕಾಯಿ ದೀಪ ಬೆಳಗಿಸಿ ವಿಶೇಷ…
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಉಪೇಂದ್ರ ಸಿನಿಮಾ ರೀ-ರಿಲೀಸ್ ಆಗಿದೆ. ಉಪೇಂದ್ರ ಥಿಯೇಟರ್ ಗೆ ಬರ್ತಾರೆ ಅನ್ನೋ ಕಲ್ಪನೆಯೂ ಇಲ್ಲದೆ ಸಿನಿಮಾ ನೋಡುತ್ತಿದ್ದ ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಸರ್ಫ್ರೈಸ್ ನೀಡಿದ್ದಾರೆ. ತಮ್ಮದೇ ಉಪೇಂದ್ರ ಚಿತ್ರವನ್ನ ಬೆಳ್ಳಂಬೆಳಗ್ಗೆ 6 ಗಂಟೆ ಶೋಗೆ ಹೋಗಿ ವೀಕ್ಷಿಸಿದ್ದಾರೆ. ಬೆಂಗಳೂರಿನ ಕೆ.ಜಿ.ರಸ್ತೆಯ ನರ್ತಕಿ ಥಿಯೇಟರ್‌ಗೆ ಉಪೇಂದ್ರ ಭೇಟಿ ನೀಡಿ ಉಪೇಂದ್ರ ಸಿನಿಮಾ ನೋಡಿದ್ದಾರೆ. ತಮ್ಮದೇ ಚಿತ್ರವನ್ನತಾವೇ ನೋಡಿ ಖುಷಿ ಪಟ್ಟಿದ್ದಾರೆ. ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡಿರೋ ಫೋಟೋಗಳು ಕೂಡ ಗಮನ ಸೆಳೆಯುತ್ತಿವೆ. ಉಪೇಂದ್ರ ತಮ್ಮ ಸಿನಿ ಜೀವನದಲ್ಲಿ ಮಾಡಿರೋ ಸಿನಿಮಾಗಳಲ್ಲಿ ಉಪೇಂದ್ರ ವಿಶೇಷ ಚಿತ್ರವೇ ಆಗಿದೆ. ಇದನ್ನ 25 ವರ್ಷದ ಬಳಿಕ ರೀ-ರಿಲೀಸ್ ಮಾಡಿರೋದೇ ವಿಶೇಷ ನೋಡಿ. ಹಾಗಾಗಿಯೇ ಉಪೇಂದ್ರ ಜನ್ಮ ದಿನದ ಹಿನ್ನೆಲೆಯಲ್ಲಿ ಇದನ್ನ ರೀ-ರಿಲೀಸ್ ಮಾಡಿರೋದು ಮತ್ತೊಂದು ವಿಶೇಷವೇ ಆಗಿದೆ. ಸಿನಿಮಾಗಳು ರೀ-ರಿಲೀಸ್ ಆದಾಗ ಆಯಾ ನಾಯಕರು ಥಿಯೇಟರ್‌ಗೆ ಬರೋದು ಕಡಿಮೇನೆ. ಆದರೆ, ಉಪ್ಪಿ ಅದನ್ನ ಸುಳ್ಳು ಮಾಡಿದ್ದಾರೆ. ತಮ್ಮ ಚಿತ್ರವನ್ನ ಮೊದಲ…
ದೆಹಲಿ: ಕೋಲ್ಕತ್ತಾ ಆಸ್ಪತ್ರೆಯಲ್ಲಿ ಸಹೋದ್ಯೋಗಿಯೊಬ್ಬಳ ಅತ್ಯಾಚಾರ, ಕೊಲೆ ಖಂಡಿಸಿ ಬೀದಿಗಿಳಿದಿದ್ದ ಬಂಗಾಳದ ವೈದ್ಯರು 41 ದಿನಗಳ ಬಳಿಕ ಮುಷ್ಕರವನ್ನು ವಾಪಸ್ ತೆಗೆದುಕೊಂಡಿದ್ದಾರೆ. ಶನಿವಾರದಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಸಿಬಿಐ ಕಚೇರಿವರೆಗೆ ರ‍್ಯಾಲಿ ಮಾಡಲಿದ್ದಾರೆ. ತನಿಖೆಯನ್ನು ತ್ವರಿತಗೊಳಿಸಲು ಆಗ್ರಹಿಸಿ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ನಾಳೆಯಿಂದ ಕರ್ತವ್ಯಕ್ಕೆ ಮರಳಲು ವೈದ್ಯರು ನಿರ್ಧಾರಿಸಿದ್ದಾರೆ. ಪ್ರಕರಣ ಸಂಬಂಧ ಮೂವರು ಹಿರಿಯ ಅಧಿಕಾರಿಗಳನ್ನು ಈಗಾಗಲೇ ಸರ್ಕಾರ ವಜಾಗೊಳಿಸಿದೆ. ಇತರೆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿದ ಬಳಿಕ ಮುಷ್ಕರ ನಿಲ್ಲಿಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬುಧವಾರ ನಡೆದ ವೈದ್ಯರೊಂದಿಗಿನ ಕೊನೆಯ ಸಭೆಗೆ ಹಾಜರಾದ ಮುಖ್ಯ ಕಾರ್ಯದರ್ಶಿಗಳೇ ಭದ್ರತೆಗೆ ಸಂಬಂಧಿಸಿದಂತೆ ಅವರ ಬೇಡಿಕೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಿದ್ದರು. ಇಂದು ಮುಂಜಾನೆ ಅವರು ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಕರ್ತವ್ಯದ ಕೊಠಡಿಗಳು, ವಾಶ್‌ರೂಮ್‌ಗಳು, ಸಿಸಿಟಿವಿಗಳು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ನಿಯೋಜನೆ, ರಾತ್ರಿಯಲ್ಲಿ ಕಣ್ಗಾವಲುಗಾಗಿ ಮಹಿಳಾ, ಮೊಬೈಲ್…