Author: Prajatv Kannada

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮಾಗೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಹೆಸರು ಕೇಳ್ತಿದ್ದಂತೆ ಅವರ ಕ್ಯೂಟ್ ಸ್ಮೈಲ್ ಕಣ್ ಮುಂದೆ ಬರುತ್ತೆ. ಅಷ್ಟುಕ್ಕೂ ರಶ್ಮಿಕಾ ಇಷ್ಟು ಚಂದದ ನಗುವಿಗಾಗಿ ಏನ್ಮಾಡ್ತಾರೆ ಗೊತ್ತಾ? ಸಾಮಾನ್ಯವಾಗಿ ಹೆಚ್ಚಿನವರು ಬಿಳಿ ಅಥವಾ ಕೆಂಪು ಬಣ್ಣದ ಟೂತ್ ಪೇಸ್ಟ್ ಬಳಸುತ್ತಾರೆ. ಆದರೆ ರಶ್ಮಿಕಾ ಬಳಸೋದು ನೇರಳೆ ಬಣ್ಣದ ಟೂತ್ ಪೇಸ್ಟ್ ಅನ್ನು. ಇತ್ತೀಚೆಗೆ ರಶ್ಮಿಕಾ ಇನ್​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಶೇರ್ ಮಾಡಿದ್ದರು. ಅದರಲ್ಲಿ ನಟಿ ಬ್ರಶ್ ಮಾಡುವುದು, ರೆಡಿಯಾಗುವುದನ್ನು ತೋರಿಸಿದ್ದಾರೆ. ಈ ವೇಳೆ ನಟಿ ಪರ್ಪಲ್ ಬಣ್ಣದ ಟೂತ್​ಪೇಸ್ಟ್ ಬಳಸಿದ್ದು ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗಿದೆ. ಇದು ಜಾಹೀರಾತು ಭಾಗವೇ ಎನ್ನುವುದು ಖಚಿತವಾಗಿಲ್ಲ. ನಟಿ ಇತ್ತೀಚೆಗೆ ತಾವು ಕಾಲ್ಗೇಟ್ ವಿಸಿಬಲ್ ವೈಟ್ ಪರ್ಪಲ್ ಟೂತ್​ಪೇಸ್ಟ್ ಬಳಸುವುದಾಗಿ ರಿವೀಲ್ ಮಾಡಿದ್ದಾರೆ. ಇದರ ಬೆಲೆ 152 ರೂಪಾಯಿ ಇದೆ. ಅಂದ ಹಾಗೆ ನಟಿ ನಿತ್ಯವೂ ಹಲ್ಲುಜ್ಜಲು ಇದೇ ಪೇಸ್ಟ್ ಬಳಸೋದಾಗಿ ಹೇಳಿಕೊಂಡಿದ್ದಾರೆ.…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿ 100 ದಿನ ಕಳೆದಿದೆ. ಅತ್ತ ದರ್ಶನ್ ರನ್ನು ಹೊರ ತರಲು ಪತ್ನಿ ವಿಜಯಲಕ್ಷ್ಮೀ ಸಾಕಷ್ಟು ಪ್ರಯತ್ನಗಳನ್ನ ಮಾಡ್ತಿದ್ದು ದೇವರ ಮೊರೆ ಹೋಗ್ತಿದ್ದಾರೆ. ಇತ್ತ ದರ್ಶನ್ ಅಭಿಮಾನಿಗಳು ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ದೇವಿಯ ಮೊರೆ ಹೋಗಿದ್ದು ಬೂದುಕುಂಬಳಕಾಯಿ ದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಬಿಡುಗಡೆಗಾಗಿ ಕಾಳಿಕಾಂಬ ದೇವಿಯ ಮೊರೆ ಹೋಗಿದ್ದಾರೆ. ಅನಂತ ಪೂರ್ಣಿಮ ದಿನದಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತಂಗನಹಳ್ಳಿ ಕಾಳಿಕಾಂಬ ದೇವಿಗೆ ದರ್ಶನ್ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹಾಗಾಗಿ ಸಂಕಷ್ಟದಲ್ಲಿರುವ ದರ್ಶನ್ ಆದಷ್ಟು ಬೇಗ ಜೈಲಿನಿಂದ ಹೊರಬರಲಿ ಅಂತ ಶಕ್ತಿ ದೇವತೆ ಕಾಳಿಕಾಂಬ ದೇವಿಯ ಮೊರೆ ಹೋಗಿದ್ದಾರೆ ಫ್ಯಾನ್ಸ್. ದೇವಿಯ ಆರಾದಿಸಿದರೆ ಎಂತಹ ಕಷ್ಟಗಳಿದ್ರೂ ನಿವಾರಣೆ ಆಗ್ತದೆ ಎಂಬುದು ಇಲ್ಲಿನ ಗ್ರಾಮಸ್ಥರ ನಂಬಿಕೆಯಾಗಿದ್ದು, ಸೆ.18ರ ರಾತ್ರಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಬೂದುಕುಂಬಳಕಾಯಿ ದೀಪ ಬೆಳಗಿಸಿ ವಿಶೇಷ…

Read More

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಉಪೇಂದ್ರ ಸಿನಿಮಾ ರೀ-ರಿಲೀಸ್ ಆಗಿದೆ. ಉಪೇಂದ್ರ ಥಿಯೇಟರ್ ಗೆ ಬರ್ತಾರೆ ಅನ್ನೋ ಕಲ್ಪನೆಯೂ ಇಲ್ಲದೆ ಸಿನಿಮಾ ನೋಡುತ್ತಿದ್ದ ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಸರ್ಫ್ರೈಸ್ ನೀಡಿದ್ದಾರೆ. ತಮ್ಮದೇ ಉಪೇಂದ್ರ ಚಿತ್ರವನ್ನ ಬೆಳ್ಳಂಬೆಳಗ್ಗೆ 6 ಗಂಟೆ ಶೋಗೆ ಹೋಗಿ ವೀಕ್ಷಿಸಿದ್ದಾರೆ. ಬೆಂಗಳೂರಿನ ಕೆ.ಜಿ.ರಸ್ತೆಯ ನರ್ತಕಿ ಥಿಯೇಟರ್‌ಗೆ ಉಪೇಂದ್ರ ಭೇಟಿ ನೀಡಿ ಉಪೇಂದ್ರ ಸಿನಿಮಾ ನೋಡಿದ್ದಾರೆ. ತಮ್ಮದೇ ಚಿತ್ರವನ್ನತಾವೇ ನೋಡಿ ಖುಷಿ ಪಟ್ಟಿದ್ದಾರೆ. ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡಿರೋ ಫೋಟೋಗಳು ಕೂಡ ಗಮನ ಸೆಳೆಯುತ್ತಿವೆ. ಉಪೇಂದ್ರ ತಮ್ಮ ಸಿನಿ ಜೀವನದಲ್ಲಿ ಮಾಡಿರೋ ಸಿನಿಮಾಗಳಲ್ಲಿ ಉಪೇಂದ್ರ ವಿಶೇಷ ಚಿತ್ರವೇ ಆಗಿದೆ. ಇದನ್ನ 25 ವರ್ಷದ ಬಳಿಕ ರೀ-ರಿಲೀಸ್ ಮಾಡಿರೋದೇ ವಿಶೇಷ ನೋಡಿ. ಹಾಗಾಗಿಯೇ ಉಪೇಂದ್ರ ಜನ್ಮ ದಿನದ ಹಿನ್ನೆಲೆಯಲ್ಲಿ ಇದನ್ನ ರೀ-ರಿಲೀಸ್ ಮಾಡಿರೋದು ಮತ್ತೊಂದು ವಿಶೇಷವೇ ಆಗಿದೆ. ಸಿನಿಮಾಗಳು ರೀ-ರಿಲೀಸ್ ಆದಾಗ ಆಯಾ ನಾಯಕರು ಥಿಯೇಟರ್‌ಗೆ ಬರೋದು ಕಡಿಮೇನೆ. ಆದರೆ, ಉಪ್ಪಿ ಅದನ್ನ ಸುಳ್ಳು ಮಾಡಿದ್ದಾರೆ. ತಮ್ಮ ಚಿತ್ರವನ್ನ ಮೊದಲ…

Read More

ದೆಹಲಿ: ಕೋಲ್ಕತ್ತಾ ಆಸ್ಪತ್ರೆಯಲ್ಲಿ ಸಹೋದ್ಯೋಗಿಯೊಬ್ಬಳ ಅತ್ಯಾಚಾರ, ಕೊಲೆ ಖಂಡಿಸಿ ಬೀದಿಗಿಳಿದಿದ್ದ ಬಂಗಾಳದ ವೈದ್ಯರು 41 ದಿನಗಳ ಬಳಿಕ ಮುಷ್ಕರವನ್ನು ವಾಪಸ್‌ ತೆಗೆದುಕೊಂಡಿದ್ದಾರೆ. ಶನಿವಾರದಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಸಿಬಿಐ ಕಚೇರಿವರೆಗೆ ರ‍್ಯಾಲಿ ಮಾಡಲಿದ್ದಾರೆ. ತನಿಖೆಯನ್ನು ತ್ವರಿತಗೊಳಿಸಲು ಆಗ್ರಹಿಸಿ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ನಾಳೆಯಿಂದ ಕರ್ತವ್ಯಕ್ಕೆ ಮರಳಲು ವೈದ್ಯರು ನಿರ್ಧಾರಿಸಿದ್ದಾರೆ. ಪ್ರಕರಣ ಸಂಬಂಧ ಮೂವರು ಹಿರಿಯ ಅಧಿಕಾರಿಗಳನ್ನು ಈಗಾಗಲೇ ಸರ್ಕಾರ ವಜಾಗೊಳಿಸಿದೆ. ಇತರೆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿದ ಬಳಿಕ ಮುಷ್ಕರ ನಿಲ್ಲಿಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬುಧವಾರ ನಡೆದ ವೈದ್ಯರೊಂದಿಗಿನ ಕೊನೆಯ ಸಭೆಗೆ ಹಾಜರಾದ ಮುಖ್ಯ ಕಾರ್ಯದರ್ಶಿಗಳೇ ಭದ್ರತೆಗೆ ಸಂಬಂಧಿಸಿದಂತೆ ಅವರ ಬೇಡಿಕೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಿದ್ದರು. ಇಂದು ಮುಂಜಾನೆ ಅವರು ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಕರ್ತವ್ಯದ ಕೊಠಡಿಗಳು, ವಾಶ್‌ರೂಮ್‌ಗಳು, ಸಿಸಿಟಿವಿಗಳು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ನಿಯೋಜನೆ, ರಾತ್ರಿಯಲ್ಲಿ ಕಣ್ಗಾವಲುಗಾಗಿ ಮಹಿಳಾ, ಮೊಬೈಲ್…

Read More

ಮಂಡ್ಯ:- ನಾಗಮಂಗಲಕ್ಕೆ ಕುಮಾರಸ್ವಾಮಿ ಭೇಟಿ ವಿಚಾರವಾಗಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾಗಮಂಗಲ ಗಲಭೆ ಈಗ ಮುಗಿದುಹೋಗಿರುವ ವಿಚಾರ ಅದನ್ನು ಇಲ್ಲಗೆ ಬಿಡುವುದು ಒಳ್ಳೆಯದು. ಪದೇ ಪದೇ ಹೋಗುವುದರಿಂದ ಏನು ಪ್ರಯೋಜನ. ಪರಿಹಾರ ಕೊಡಿಸುವ ವಿಚಾರವಾಗಿ ಕೆಲಸ ಮಾಡ್ತೇವೆ. ಸೈಲೆಂಟ್ ಆಗಿರೋದನ್ನ ದಿನಾ ಬೆಳಿಗ್ಗೆ ಎದು ಕೆದಕುತ್ತಿದ್ದರೆ ನಾನು ಏನು ಮಾಡೋಕ್ಕಾಗುತ್ತೆ ಎಂದರು. ಅವರಿಗೆ ಅವರೇ ಪರಿಹಾರ ಹುಡಿಕೊಳ್ಳಬೇಕು. ಬೇಲ್ ಕೊಡಿಸೋದಕ್ಕೆ ನಮ್ಮ ಹುಡುಗರು ಕೆಲಸ ಮಾಡ್ತಿದ್ದಾರೆ. ಮತ್ತೆ ಯಾರನ್ನೂ ಅರೆಸ್ಟ್ ಮಾಡಿಲ್ಲ. ಮುಸ್ಲಿಂ-ಹಿಂದೂ ಒಗ್ಗಟ್ಟಿನಿಂದ ಇದ್ದಾರೆ. ಶಾಂತಿ ಸಭೆ ಇದೆ, ಪದೆ ಪದೆ ಹೋಗುವುದು ಸರಿಯಲ್ಲ. ಅವರು ಜಿಲ್ಲೆಯ ಎಂಪಿ ಬರಬೇಡಿ ಅನ್ನೋಕೆ ಆಗುತ್ತಾ ಎಂದರು. ನಾಗಮಂಗಲದಲ್ಲಿ ಬಾಂಗ್ಲಾದೇಶದವರು ಇರುವ ವಿಚಾರ, ಎಸ್‌ಪಿ ಅವರಿಗೆ ಹೇಳಿದ್ದೇನೆ. ಈ ಬಗ್ಗೆ ಮಾತನಾಡಿರುವ ಮಾಜಿ ಶಾಸಕರಿಗೆ ನೋಟಿಸ್ ಕೊಟ್ಟು, ವಿವರಣೆ ಕೇಳಲು ಹೇಳಿದ್ದೇನೆ. ಬಾಂಗ್ಲಾದೇಶದಿಂದ ಬಂದಿದ್ದಾರೆ ಅಂದ್ರೆ ಅದರ ವೈಫಲ್ಯ ಕೇಂದ್ರ ಸರ್ಕಾರ. ಮೋದಿ ಹಾಗೂ ಕೇಂದ್ರಮಂತ್ರಿ ಕುಮಾರಸ್ವಾಮಿ ಉತ್ತರ…

Read More

ಕಲಬುರಗಿ: ರಾಜ್ಯದ ಪ್ರತಿ ತಾಲೂಕಿನಲ್ಲಿ ಮನೆ ಇಲ್ಲದ ಬಡ ಮುಸ್ಲಿಂ ಸಮುದಾಯದವರಿಗೆ ವಕ್ಫ್ ಮಂಡಳಿಯಿಂದಲೇ ವಸತಿ ಭಾಗ್ಯ ಕಲ್ಪಿಸುವ ಯೋಜನೆ ಪ್ರಸ್ತಾವನೆ ಯಲ್ಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ವಿಂಟೆಜ್ ಪ್ಯಾಲಸ್ ನಲ್ಲಿ ಆಯೋಜಿಸಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ ಗಳ ವಖ್ಫ್ ಅದಾಲತ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸಮುದಾಯದಲ್ಲಿ ಅತ್ಯಂತ ಬಡವರಿದ್ದು ಅಂತಹ ವಸತಿ ರಹಿತರ ಸಮೀಕ್ಷೆ ನಡೆಸಿ ಅವರಿಗೆ ಕಡಿಮೆ ಬಾಡಿಗೆ ದರದಲ್ಲಿ ನೀಡಲಾಗುವುದು. ಇದರಿಂದ ಮಂಡಳಿಗೂ ಆದಾಯ ಬರುವಂತಾಗುತ್ತದೆ, ಸಮುದಾಯಕ್ಕೂ ಒಳಿತಾಗುತ್ತದೆ ಎಂದು ಹೇಳಿದರು. ಇದಲ್ಲದೆ ಮೌಜನ್ ಹಾಗೂ ಇಮಾಮ್‌ಗಳಿಗೆ ಬಾಡಿಗೆ ಆಧಾರದ ಮೇಲೆ ಮನೆ ಕಟ್ಟಿಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಎಂದು ವಸತಿ ಖಾತೆ ಸಹ ಹೊಂದಿರುವ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. ರಾಜ್ಯ ವಕ್ಫ್ ಮಂಡಳಿ ಸಮುದಾಯದ ಒಳಿತಿಗೆ ಶ್ರಮಿಸುತ್ತಿದ್ದು ತುರ್ತಾಗಿ ವೈದ್ಯಕೀಯ ನೆರವು ಪಡೆಯಲು ಅನುಕೂಲವಾಗುವಂತೆ ಜಿಲ್ಲೆಗೆ ಒಂದರಂತೆ ತಲಾ 40 ಲಕ್ಷ…

Read More

ಬೆಂಗಳೂರು:- ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಗ್ರಹಾಕರಿಗೆ ಕಣ್ಣೀರು ತರಿಸುತ್ತಿದೆ. ಸದ್ಯ ಕರ್ನಾಟಕದ ಹಲವೆಡೆ ಅತಿಯಾದ ಮಳೆಯ ಕಾರಣ ಬೆಳೆ ನೀರು‌ಪಾಲಗುತ್ತಿದ್ದರೆ, ಮತ್ತೊಂದೆಡೆ ಈರುಳ್ಳಿ ಮಳೆಯಿಂದಾಗಿ ಇಟ್ಟಲ್ಲೇ ಕೊಳೆತು ಹೋಗುತ್ತಿದೆ. ಹೀಗಾಗಿ ಹಬ್ಬದ ವಾರದಲ್ಲಿ 50 ರೂ. ಇದ್ದ ಈರುಳ್ಳಿಯ ಬೆಲೆ ಇದೀಗ 60 ರಿಂದ 70 ರೂಪಾಯಿ ಆಗಿದೆ. ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ಈರುಳ್ಳಿಯ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದೆ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ.‌ ಪರಿಣಾಮವಾಗಿ ಪೂರೈಕೆ ಕೂಡ ಕಡಿಮೆಯಾಗಿದೆ. ಸದ್ಯ ರಾಜ್ಯಕ್ಕೆ ಪುಣೆ, ಮಹಾರಾಷ್ಟ್ರದಿಂದ ಈರುಳ್ಳಿ ತರುಹಿಸಿಕೊಳ್ಳಲಾಗುತ್ತಿದೆ ದಸರಾ ವೇಳೆಗೆ ಈರುಳ್ಳಿಯ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಈ ಹಿಂದೆ ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ ರಾಜ್ಯಕ್ಕೆ ಪೂರೈಕೆಯಾಗುತ್ತಿತ್ತು. ಆದರೆ, ಈಗ ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಮಳೆಗೆ ಈರುಳ್ಳಿ ಕೊಳೆತು ಹೋಗುತ್ತಿದೆ. ಹೀಗಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಏರಿಕೆ ಅನಿವಾರ್ಯವಾಗಿದೆ.

Read More

ಚಿತ್ರದುರ್ಗ:-ಜಿಲ್ಲೆಯ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳ ಗುಂಪೊಂದು ಗಂಡ- ಹೆಂಡ್ತಿ ಕೊಚ್ಚಿ ಕೊಲೆ ಮಾಡಿದ ಘಟನೆ ಜರುಗಿದೆ ಹನುಮಂತಪ್ಪ, ತಿಪ್ಪಮ್ಮ ಕೊಲೆಯಾದ ಪತಿ- ಪತ್ನಿ ಎನ್ನಲಾಗಿದೆ. ಜಮೀನಿನಲ್ಲಿ ಈರುಳ್ಳಿಗೆ ನೀರು ಹಾಯಿಸಲು ಸಂಜೆ ತೆರಳಿದ್ದ ವೇಳೆ ಘಟನೆ ಜರುಗಿದೆ. ಕೊಲೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.ಸ್ಥಳಕ್ಕೆ ತುರುವನೂರು ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದು, ತನಿಖೆ ಮುಂದುವರಿದಿದೆ.

Read More

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದ ಬಳಿಕ ಸೆಕ್ಯೂರಿಟಿ ಟೈಟ್ ಆಗಿದೆ. ಆದ್ರೆ ಟೈಟ್ ಸೆಕ್ಯೂರಿಟಿ ಹೆಸರಿನಲ್ಲಿ ಜೈಲು ಅಧಿಕಾರಿಗಳ ನೂತನ ಕ್ರಮಗಳ ವಿರುದ್ಧ ಸಿಡಿದೆದ್ದ ಸಿಎಆರ್ ಪೊಲೀಸರು ಪ್ರತಿಭಟನೆ ನಡೆಸಿ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಸಿಎಆರ್ ಪೊಲೀಸರ ಪ್ರತಿಭಟನೆ ಕಾರಣವಾದ್ರೂ ಏನೂ ಅಂತೀರಾ….? ಇಲ್ಲಿದೆ ನೋಡಿ ಡಿಟೇಲ್ಸ್… ಹೌದು ಅಕ್ರಮ ಚಟುವಟಿಕೆಗಳ ಅಡಗು ತಾಣ ಎಂದು ಖ್ಯಾತಿ ಗಳಿಸಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್ ರಾಜಾತಿಥ್ಯ ಕೇಸ್ ಬಳಿಕ ಎಲ್ಲವೂ ಬದಲಾಗಿದೆ. ಅಧಿಕಾರಿಗಳ ತಲೆದಂಡ, ಕೊಲೆ ಆರೋಪಿಗಳ ಬೇರೆಡೆ ಸ್ಥಳಾಂತರದ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ. ಅದ್ರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ವಿಚಾರಣಾಧೀನ ಬಂಧಿಗಳನ್ನು‌ ಕರೆದೊಯ್ಯುವ ಸಿಟಿ ರಿಸರ್ವ್ ಪೊಲೀಸರಿಗೂ ಕೆಲವು ಕ್ರಮಗಳನ್ನು ಅನ್ವಯಿಸಲಾಗಿದೆ. ವಿಚಾರಣಾಧೀನ ಬಂಧಿಗಳನ್ನು ಕರೆದೊಯ್ಯುವ ವೇಳೆ ಮತ್ತು ವಾಪರ್ ಮರಳಿ ಜೈಲಿಗೆ…

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಮುಡಾ ಸಂಕಷ್ಟ ನಿಲ್ಲುವಂತೆ ಕಾಣ್ತಿಲ್ಲ. ಮುಡಾ ಹಣವನ್ನು ವರುಣ ಕ್ಷೇತ್ರದ ಹಳ್ಳಿಗಳ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಸಿಎಂ ಮೌಖಿಕ ಆದೇಶದ ಮೇರೆಗೆ ಕಾನೂನು ಮೀರಿ ಮುಡಾ ಹಣವನ್ನು ವರುಣ ಕ್ಷೇತ್ರದ ಹಳ್ಳಿಗಳ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಮೈಸೂರು ಮೂಲದ ಪಿ.ಎಸ್. ನಟರಾಜು ದೂರುಕೊಟ್ಟಿದ್ದಾರೆ. ಪ್ರಾಧಿಕಾರದ ಸಭೆಯ ಕಡತದಲ್ಲೇ ಈ ವಿಚಾರ ಉಲ್ಲೇಖವಾಗಿದೆ. ಆರ್ಥಿಕವಾಗಿ ನಷ್ಟದಲ್ಲಿದ್ದರೂ ಮುಡಾದ 450 ಕೋಟಿ ರೂ. ಮೊತ್ತದ ಕಾಮಗಾರಿ ಕೈಗೊಂಡು ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಿಬಿಐ ತನಿಖೆಗೆ ಸೂಚಿಸಬೇಕೆಂದು ಎಂದು ನಟರಾಜ್ ಕೋರಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಸಂಬಂಧ ಅಗತ್ಯ ದಾಖಲೆಗಳೊಂದಿಗೆ ಶೀಘ್ರ ವರದಿ ಸಲ್ಲಿಸುವಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸೆ.5ರಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

Read More