Author: Prajatv Kannada

ತೀರ್ಥಹಳ್ಳಿ : ವಾಹನವೊಂದರ ಬ್ರೇಕ್ ಫೇಲ್ ಆದ ಕಾರಣ ಉಳಿದ ಎಲ್ಲಾ ವಾಹನ ಗಳ ಓಡಾಟಕ್ಕೆ ತೊಂದರೆಯಾಗಿ ಸಂಪೂರ್ಣ ಟ್ರಾಫಿಕ್ ಆಗಿರುವ ಘಟನೆ ಆಗುಂಬೆ ಘಾಟಿಯಲ್ಲಿ ಗುರುವಾರ ನಡೆದಿದೆ. https://youtu.be/WrS7KxML_tU?si=0n2h016OsLeyVXQ5 ತೀರ್ಥಹಳ್ಳಿ ಭಾಗದಿಂದ ಉಡುಪಿ ಕಡೆ ಹಾಗೂ ಉಡುಪಿ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳು ಕಳೆದ ಅರ್ಧಗಂಟೆಗೂ ಹೆಚ್ಚು ಕಾಲದಿಂದ ನಿಂತಲ್ಲಿಯೇ ನಿಂತಿದ್ದು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಇತ್ತ ಅದರ ನಡುವೆಯೇ ಆಂಬುಲೆನ್ಸ್ ಗಳು ಸಹ ಓಡಾಟ ನಡೆಸಲು ಪರದಾಟ ನಡೆಸುತ್ತಿವೆ. ಸ್ಥಳದಲ್ಲಿ ಪೊಲೀಸರು ಇದ್ದು ವಾಹನ ಓಡಾಟಕ್ಕೆ ಅನುವು ಮಾಡಿ ಕೊಡಲು ಹರ ಸಾಹಸ ಪಡುತ್ತಿದ್ದಾರೆ.

Read More

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಶಾಸಕರಾದ ಮುನಿರತ್ನ ಅವರಿಂದ ಒಕ್ಕಲಿಗರ ಜಾತಿ ನಿಂದನೆ, ಜೀವ ಬೆದರಿಕೆ ಹಾಗೂ ಕುಟುಂಬ ಸದಸ್ಯರ ಬಗ್ಗೆ ಹೀನ ಮಾತುಗಳಿಂದ ನೊಂದಿರುವ ಬಿಬಿಎಂಪಿ ಗುತ್ತಿಗೆದಾರರಾದ ಚಲುವರಾಜು ಅವರ ಮನೆಗೆ ಭೇಟಿ ನೀಡಿ ನೊಂದಿರುವ ಅವರ ಕುಟುಂಬಕ್ಕೆ ಧೈರ್ಯ ತುಂಬಿ, ಸಂಘದ ವತಿಯಿಂದ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸುವ ಭರವಸೆ ನೀಡಿದರು https://youtu.be/_WhZELaxGg0?si=sjcImaB5FYm82x1O ಇದೆ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಸಿ ಎನ್ ಬಾಲಕೃಷ್ಣ ರವರು ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್ ಪ್ರಕಾಶ್ ಹಾಗೂ ಖಜಾಂಚಿ ಶ್ರೀ ಉಮಾಪತಿ ಶ್ರೀನಿವಾಸ ಗೌಡ ರವರು ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮುಖಂಡರಾದ ಶ್ರೀ ಗಿರೀಶ್ ಗೌಡ್ರು ರವರು ಉಪಸ್ಥಿತರಿದ್ದರು

Read More

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನಗರದ ತಿಪ್ಪಯ್ಯ (ಮುತ್ತು ) ಗಿರಿಮಲ್ಲಯ್ಯ ಪೂಜಾರಿ. 53. ರಬಕವಿ ತೇರಿನ ಮೇಲಿಂದ ಬಿದ್ದು ಸಾವನ್ನಪ್ಪಿದ ವ್ಯಕ್ತಿ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನಗರದ ತಿಪ್ಪಯ್ಯ (ಮುತ್ತು ) ಗಿರಿಮಲ್ಲಯ್ಯ ಪೂಜಾರಿ. 53. ರಬಕವಿ ತೇರಿನ ಮೇಲಿಂದ ಬಿದ್ದು ಸಾವನ್ನಪ್ಪಿದ ವ್ಯಕ್ತಿ. https://youtu.be/mCGs5fkd4qg?si=sX6Jc6vBomefCanv ರಬಕವಿ ಶಂಕರಲಿಂಗ ಟ್ರಸ್ಟ್ ನ ಅಡಿಯಲ್ಲಿನ ಮಹಾದೇವ ದೇವಸ್ಥಾನ ಅಡವಿಯಲ್ಲಿನ ಮಹಾದೇವ ದೇವಸ್ಥಾನದ ಸುಪವರ್ದಿಯಲ್ಲಿರುವ ರಥದ ಮನೆಯಲ್ಲಿ ರಬಕವಿ ಜಾತ್ರೆಯ ನಂತರ ರಥದ ಮೇಲೆ ಅರಿವೆ ಹೊರಿಸುವ ಸಮಯದಲ್ಲಿ ಮೇಲಮದ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಜರುಗಿತು. ರಬಕವಿ ಶಂಕರಲಿಂಗ ಟ್ರಸ್ಟ್ ನ ಅಡಿಯಲ್ಲಿನ ಮಹಾದೇವ ದೇವಸ್ಥಾನ ಅಡವಿಯಲ್ಲಿನ ಮಹಾದೇವ ದೇವಸ್ಥಾನದ ಸುಪವರ್ದಿಯಲ್ಲಿರುವ ರಥದ ಮನೆಯಲ್ಲಿ ರಬಕವಿ ಜಾತ್ರೆಯ ನಂತರ ರಥದ ಮೇಲೆ ಅರಿವೆ ಹೊರಿಸುವ ಸಮಯದಲ್ಲಿ ಮೇಲಮದ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಜರುಗಿತು. ಪ್ರಕರಣ…

Read More

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ ಹಾಗೂ ಖ್ಯಾತ ಬರಹಗಾರ ಸಲೀಂ ಖಾನ್ ಅವರಿಗೆ ಮತ್ತೆ ಪ್ರಾಣ ಬೆದರಿಕೆ ಹಾಕಲಾಗಿದೆ. ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಅವರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿದ್ದು ಸಲೀಂ ಖಾನ್ ಅವರು ಇಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತ ಮಹಿಳೆಯೊಬ್ಬರು ಅವರಿಗೆ ಬೆದರಿಕೆ ಪತ್ರ ನೀಡಿದ್ದಾರೆ. ‘ಲಾರೆನ್ಸ್ ಬಿಷ್ಣೋಯ್ ಅವರನ್ನು ಕಳುಹಿಸಬೇಕೇ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಪ್ರಕರಣದ ಸಂಬಂಧ ಅಪರಿಚಿತ ಮಹಿಳೆಯ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಅಪರಿಚಿತ ಮಹಿಳೆಯಿಂದ ಸಲೀಂ ಖಾನ್‌ಗೆ ಬೆದರಿಕೆ ಬಂದಿದ್ದು ಇದೇ ಮೊದಲು. ಹಾಗಾಗಿ ಸಂಚಲನ ಸೃಷ್ಟಿ ಆಗಿದೆ. ಈ ಮಹಿಳೆ ಯಾರು? ಅವರು ಎಲ್ಲಿಂದ ಬಂದಿದ್ದರು? ಅವರು ನಿಜಕ್ಕೂ ಬಿಷ್ಣೋಯ್ ಗ್ಯಾಂಗ್​ನವರಾ ಎನ್ನುವ ಪ್ರಶ್ನೆಗಳು ಈ ಸಂದರ್ಭದಲ್ಲಿ ಎದ್ದಿವೆ. ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಕೆಲವು ತಿಂಗಳ ಹಿಂದೆ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ…

Read More

21 ವರ್ಷದ ಯುವತಿಯ ಮೇಲೆ ರಾಷ್ಟ್ರಪ್ರಶಸ್ತಿ ವಿಜೇತ ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆರೋಪ ಕೇಳಿ ಬಂದ ಬಳಿಕ ತಲೆಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಅವರನ್ನು ಇದೀಗ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಜಾನಿ ಮಾಸ್ಟರ್ (ಶೇಖ್ ಜಾನಿ ಬಾಷಾ) ವಿರುದ್ಧ ಅಸಿಸ್ಟೆಂಟ್ ಕೊರಿಯೋಗ್ರಾಫರ್ ಒಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಮೊದಲಿಗೆ ಆರೋಪ ಸುಳ್ಳೆಂದು ವಾದಿಸಿದ್ದ ಜಾನಿ ಮಾಸ್ಟರ್ ಬಳಿಕ  ಚಿತ್ರರಂಗವು ಅತ್ಯಾಚಾರ ಸಂತ್ರಸ್ತೆ ಪರ ನಿಲವು ತಳೆಯುತ್ತಿದ್ದಂತೆ ತಲೆ ಮರೆಸಿಕೊಂಡಿದ್ದರು. ಇದೀಗ ಸೈಬರಾಬಾದ್ ಪೊಲೀಸರು ಜಾನಿ ಮಾಸ್ಟರ್ ಅನ್ನು ಗೋವಾದ ಹೋಟೆಲ್ ಒಂದರಲ್ಲಿ ಬಂಧಿಸಿದ್ದಾರೆ. ಅಲ್ಲಿಯೇ ವೈದ್ಯಕೀಯ ಪರೀಕ್ಷೆ ನಡೆಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಸೈಬರಾಬಾದ್​ಗೆ ಕರೆ ತರುತ್ತಿದ್ದಾರೆ. ಟ್ರಾನ್ಸಿಟ್ ವಾರೆಂಟ್ ಮೇಲೆ ಜಾನಿ ಮಾಸ್ಟರ್ ಅನ್ನು ಬಂಧಿಸಿ ಕರೆತರಲಾಗುತ್ತಿದ್ದು, ಸೈಬರಾಬಾದ್​ಗೆ ಕರೆತಂದ ಬಳಿಕ ಜಾನಿ ಮಾಸ್ಟರ್ ಅನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ. ಸೈಬರಾದಾದ್ ಪೊಲೀಸ್ ಆಯುಕ್ತ ಅವಿನಾಶ್ ಮೊಹಂತಿ ಹೇಳಿರುವಂತೆ.…

Read More

ಗದಗ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳ 157 ನೇ ಜಯಂತ್ಯೋತ್ಸವವು ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗುತ್ತಿದೆ. https://youtu.be/vVQ0I_dW0ZQ?si=INWduYdT6BPbsrBN ಇದರ ಅಂಗವಾಗಿ ಮುಂಡರಗಿ ಪಟ್ಟಣದ ವಾರ್ಡುಗಳಲ್ಲಿ ಪ್ರತಿದಿನ ಬೆಳಿಗ್ಗೆ ಸದ್ಭಾವನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಕುಮಾರೇಶ್ವರ ಜ್ಯೋತಿ ರಥಯಾತ್ರೆ ಒಳಗೊಂಡ ಮಠಾಧೀಶರ ಸದ್ಭಾವನಾ ಪಾದಯಾತ್ರೆ ಜಾತಿ,‌ ಮತ,‌ ಪಂಥಗಳನ್ನ ಮೀರಿ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಡ್ಲಿಪೇಟೆ ಓಣಿಯ ಮುಸ್ಲಿಂ ಸಮಾಜದ‌ ಮಕ್ಕಾ ಮಜೀದ್ ಕಮೀಟಿ ಸದಸ್ಯರು, ಕುಮಾರೇಶ್ವರ ಜ್ಯೋತಿಯಾತ್ರೆಯನ್ನ ಹಾಗೂ ಪಾದಯಾತ್ರೆಯಲ್ಲಿ‌ ಪಾಲ್ಗೊಂಡಿದ್ದ ಮಠಾಧೀಶರನ್ನ ಆತ್ಮೀಯವಾಗಿ ಸ್ವಾಗತಿಸಿಕೊಂಡರು.‌ ಆ ಮೂಲಕ ಹಿಂದೂ ಮುಸ್ಲಿಂ ಒಂದೇ‌ ಅನ್ನೋ ಭಾವೈಕ್ಯತೆಯ ಸಂದೇಶ ಸಾರುವದರೊಂದಿಗೆ, ಮಠಾಧೀಶರ ಸದ್ಭಾವನಾ ಪಾದಯಾತ್ರೆಗೆ ಕಡ್ಲಿಪೇಟೆ ಓಣಿಯ ಮುಸ್ಲಿಂ ಸಮಾಜದ ಬಾಂಧವರು ಭಾವೈಕ್ಯತೆ ಮೆರಗನ್ನ ನೀಡಿದರು. ಈ ವೇಳೆ ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಜಿ,‌ ಲಿಂಗನಾಯಕನಹಳ್ಳಿ ಚೆನ್ನವೀರ ಸ್ವಾಮಿಜಿ,‌ ಹಾವೇರಿಯ ಸದಾಶಿವ ಸ್ವಾಮಿಜಿ, ಮಣಕವಾಡದ ಸಿದ್ಧರಾಮ‌ ಸ್ವಾಮಿಜಿ, ಬಸವನ ಬಾಗೇವಾಡಿ ಸ್ವಾಮಿಜಿ,‌ ನರಗುಂದದ ಶಿವಕುಮಾರ‌ ಸ್ವಾಮಿಜಿ ಸೇರಿದಂತೆ ಕುಮಾರೇಶ್ವರ ಜಯಂತ್ಯೋತ್ಸವ ಸಮಿತಿಯ…

Read More

ಚಾಮರಾಜನಗರ: ಬಡ ಸೋಲಗರಿಂದ ಮನೆ ನಿರ್ಮಿಸಿಕೊಡುತ್ತೆವೆಂದು ಲಂಚ ಸ್ವೀಕರಿಸುವಾಗ ಅರಣ್ಯಾಧಿಕಾರಯೊಬ್ರೂ ಲೋಕಾಯುಕ್ತ ಬಲೆಗೆ ಸಿಲುಕಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಾಲಾರ್ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡಲು ಸೋಲಿಗ ಜನಾಂಗದ ನಿವಾಸಿಗಳಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಾಲರ್ ವಲಯ ವ್ಯಾಪ್ತಿಯ ಉಪವಲಯ ಅರಣ್ಯಾಧಿಕಾರಿ ಭೋಜಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. https://youtu.be/Tr90jbdCKmc?si=5AIh8bDd1Ykwrb0Z ಮಲೆ ಮಹದೇಶ್ವರ ವನ್ಯಜೀವಿ ವಲಯದ ವ್ಯಾಪ್ತಿಯ ಪಾಲಾರ್ ವಲಯದ ಉಪವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೋಜಪ್ಪ ಪಾಲಾರ್ ಗ್ರಾಮದಲ್ಲಿ ಆದಿವಾಸಿ ಕುಟುಂಬಗಳಿಗೆ 18 ಮನೆ ಮಂಜೂರಾಗಿದ್ದು ಎಲ್ಲಾ ಮನೆಯವರು ಆದಿಪಾಯ ಕಾಮಗಾರಿ ಪೂರ್ಣಗೊಂಡ ನಂತರ ಸರ್ಕಾರದಿಂದ ಮೊದಲ ಕಂತು ಬಿಡುಗಡೆಯಾಗಿದೆ. ಈ ವೇಳೆ ಮನೆ ನಿರ್ಮಾಣ ಮಾಡುತ್ತಿರುವ ಆದಿವಾಸಿಗಳನ್ನು ನೀವು ಗೋಡೆ ಕಟ್ಟಬೇಡಿ ಎಂದು ಸುಮಾರು ಒಂದು ತಿಂಗಳುಗಳ ಕಾಲ ಕಾಮಗಾರಿಗೆ ಅವಕಾಶ ಮಾಡಿಕೊಟ್ಟಿಲ್ಲ ನಂತರ ನಿವಾಸಿಗಳೆಲ್ಲರೂ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಾಗ ಪ್ರತಿ ಮನೆಯವರು ಒಂದೊಂದು ಸಾವಿರದಂತೆ 18 ಸಾವಿರ ನೀಡುವಂತೆ ಲಂಚಕ್ಕೆ…

Read More

ಕಲಬುರಗಿ: ರಮೇಶ್ ಜಾರಕಿಹೊಳಿ ಬಾಯಲ್ಲೂ ಪಕ್ಷ, ಪಕ್ಷದ ಸಿದ್ಧಾಂತ ಬಂದಿರೋದು ಒಳ್ಳೆಯ ಬೆಳವಣಿಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಕುರಿತು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಹಗರಣ ಸಂಬಂಧ ಪಾದಯಾತ್ರೆ ಚರ್ಚೆಯ ಹಂತದಲ್ಲಿದೆ. https://youtu.be/Z5pd7_0XJZ8?si=rploXiK37hzRQst9 ಇನ್ನು ರಮೇಶ್ ಜಾರಕಿಹೊಳಿ ಹೇಳಿರುವ ವಿಜಯೇಂದ್ರ ನಾಯಕನಾಗಿ ಒಪ್ಪಿಕೊಳ್ಳೊದಿಲ್ಲ ಅನ್ನೋದು ಸ್ವಾಗತ ಮಾಡುತ್ತೇನೆ. ನಾನು ನಾಯಕನಾಗಲು ಹೊರಟಿಲ್ಲ. ನಮ್ಮ ಪಕ್ಷದ ಹಿರಿಯರು, ರಾಜ್ಯದ ಅಧ್ಯಕ್ಷನಾಗಿ ನೇಮಕ ಮಾಡಿದ್ದಾರೆ. ಸದ್ಯ ಭ್ರಷ್ಟ ಸರ್ಕಾರವನ್ನ ಒಂಟಿ ಕಾಲಿನಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಅಲುಗಾಡುತ್ತಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷರನ್ನು ಓಲೈಸಲು ಕಲಬುರಗಿಯಲ್ಲಿ ಕ್ಯಾಬಿನೆಟ್ ಸಭೆ ನಡೆಸಿದ್ದಾರೆ. ಅವರ ಸರ್ಕಾರ ಬಂದು ವರ್ಷವಾದರೂ ಈ ಭಾಗದ ನೆನಪಾಗಲಿಲ್ಲ. ಹೀಗಾಗಿ ಅಚಾನಕ್ಕಾಗಿ ಇದೀಗ ಈ ಭಾಗದ ನೆನಪಾಗಿ ಸಚಿವ ಸಂಪುಟ ಸಭೆ ನಡೆಸಿದರು. ಆದರೆ ಈ ಭಾಗಕ್ಕೆ ಏನು ಪ್ರಯೋಜನವಾಗಿಲ್ಲ. ಹೀಗಾಗಿ ಬೆಂಗಳೂರು, ಮೈಸೂರು ಮುಖ್ಯಮಂತ್ರಿ ಎಂದು ಜನ ಹೇಳುತ್ತಿದ್ದಾರೆ…

Read More