Author: Prajatv Kannada

ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. https://youtu.be/eZIL6KyGnlA?si=dQZnlsiH9pm0F6Tu ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಒದಗಿಸಿಕೊಡುವಂತೆ ಮಂಡಳಿಯ ಅಧ್ಯಕ್ಷರೂ ಆಗಿರುವ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಉತ್ತರ ಕರ್ನಾಟಕದ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ನಿರ್ಣಾಯಕವಾಗಿರುವ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ವನ್ಯಜೀವಿ ಅನುಮೋದನೆಗಾಗಿ ದೀರ್ಘಕಾಲದಿಂದ ಬಾಕಿ ಉಳಿದಿದೆ. ಮಹದಾಯಿ ವಾಟರ್ ಡಿಸ್​ಪ್ಯೂಟ್ ಟ್ರಿಬ್ಯೂನಲ್ ಅವಾರ್ಡ್ ಅನ್ನು 14-08-2018 ರಂದು ಘೋಷಿಸಲಾಯಿತು ಮತ್ತು 27-02-2020 ರಂದು ಭಾರತದ ಗೆಜೆಟ್‌ನಲ್ಲಿ ಪ್ರಕಟಿಸಲಾಯಿತು. ಕರ್ನಾಟಕ ರಾಜ್ಯಕ್ಕೆ ಒಟ್ಟು 13.42 ಟಿಎಂಸಿ ಹಂಚಿಕೆಯಾಗಿದೆ. ಅದರಲ್ಲಿ 3.9 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ತಿರುಗಿಸಲು ರಾಜ್ಯ ಸರ್ಕಾರವು 16-06-2022 ರಂದು CWC ಗೆ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ ಮಾರ್ಪಡಿಸಿದ ಪೂರ್ವ-ಕಾರ್ಯಸಾಧ್ಯತಾ ವರದಿಯನ್ನು ಅನುಮೋದನೆಗಾಗಿ ಸಲ್ಲಿಸಿದೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ…

Read More

ಬೆಂಗಳೂರು: ಪಿಜಿಗೆ ನುಗ್ಗಿ‌ ಕಳ್ಳನ ಕೈಚಳಕ ಕರಾಮತ್ತು ನಡೆದಿದ್ದು ಬೆಳಗಿನ‌ ಜಾವ ಪಿಜಿಗೆ ನುಗ್ಗಿ ಲ್ಯಾಪ್ ಟಾಪ್ ಕದ್ದು ಪರಾರಿಯಾದ ಕಳ್ಳ ಪಿಜಿಯಿಂದ ಲ್ಯಾಪ್ ಟಾಪ್ ಬ್ಯಾಗ್ ಕದ್ದು ಹೋಗ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. https://youtu.be/H5QFvbhDHE4?si=rd1lpgMiu1Gmolyy ಹೌದು .. ಇಂದಿರಾ ನಗರದ ಮೆಟ್ರೋ ನಿಲ್ದಾಣ ಸಮೀಪ ಇರುವ ಎಂ.ಆರ್ ಪಿಜಿಯಲ್ಲಿ ಘಟನೆ ನಡೆದಿದ್ದು ಸೆ.16ರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಳಗ್ಗೆ ಎದ್ದು ನೋಡುವಾಗ ಒಂದು ಲಕ್ಷ ಮೌಲ್ಯದ ಮ್ಯಾಕ್ ಬುಕ್ ಇಟ್ಟಿದ್ದ ಬ್ಯಾಗ್ ಮಾಯವಾಗಿದೆ ಸಿಸಿಟಿವಿಯಲ್ಲಿ ನೋಡಿದಾಗ ಕಳ್ಳನ‌ ಕೈಚಳಕ ಬಯಲಾಗಿದೆ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ರು, ಎಫ್.ಐ.ಆರ್ ಹಾಕಿಲ್ಲ ಅಂತ ಆರೋಪ ಎಕ್ಸ್ ನಲ್ಲಿ ಸಿಸಿಟಿವಿ ವಿಡಿಯೋ ಸಮೇತ ಫೋಸ್ಟ್ ಹಾಕಿ ಆರೋಪ

Read More

ಬೆಂಗಳೂರು: ಎರಡು ದಿನದ ಹಿಂದಷ್ಟೇ ಮೆಟ್ರೋ ನಿಲ್ದಾಣದಲ್ಲಿ ತಾಯಿಯೊಬ್ಬಳು ಮಗುವಿಗೆ ಹಾಲುಣಿಸಲು ಪರದಾಡಿದ್ದ ಘಟನೆಯನ್ನು ಮಾಧ್ಯಮಗಳು ವರದಿ ಮಾಡಿತ್ತು. ಈ ಬೆನ್ನಲ್ಲೇ ಘಟನೆ ಬಗ್ಗೆ ಅಲರ್ಟ್ ಆದ ರಾಜ್ಯ ಮಹಿಳಾ ಆಯೋಗ ಬಿಎಂಆರ್‌ಎಲ್‌ಗೆ ಪತ್ರ ಬರೆದು ಆರೈಕೆ ಕೇಂದ್ರ ಸ್ಥಾಪಿಸುವಂತೆ ಸೂಚಿಸಿದೆ. https://youtu.be/eZIL6KyGnlA?si=S8vl8a9NARX6yP2_ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಸಲು ಬಂದ ತಾಯಿಯೊಬ್ಬಳು ತನ್ನ ಮಗುವಿಗೆ ಹಾಲುಣಿಸಲು ಪರದಾಡಿದ್ದ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸುವ ಮೂಲಕ ಮೆಟ್ರೋ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಈ ಬೆನ್ನಲ್ಲೇ ಘಟನೆ ಸಂಬಂಧ ರಾಜ್ಯ ಮಹಿಳಾ ಆಯೋಗ ಬಿಎಂಆರ್‌ಎಲ್‌ಗೆ ಪತ್ರ ಬರೆದಿದೆ. ಸೋಮವಾರ ಟ್ರಿನಿಟಿ ಮೆಟ್ರೋ ನಿಲ್ದಾಣಕ್ಕೆ  ಬಂದಿದ್ದ ತಾಯಿ ತನ್ನ ಮಗುವಿಗೆ ಹಾಲುಣಿಸಲು ಮೆಟ್ರೋ ನಿಲ್ದಾಣದ ಒಳಭಾಗದಲ್ಲಿ ಪರದಾಡಿದ್ದರು. ಅಕ್ಕಪಕ್ಕದ ಗೋಡೆ ಮರೆಯಲ್ಲಿ ನಿಂತು, ನೆಲದ ಮೇಲೆ ಕೂತು ಪರದಾಡಿದ್ದ ಮಹಿಳೆ ವಿಡಿಯೋ ವೈರಲ್ ಆಗಿತ್ತು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರವಿದೆ. ಮೆಟ್ರೋ ನಿಲ್ದಾಣಗಳಲ್ಲಿ ಯಾಕೆ…

Read More

ಬೆಂಗಳೂರು: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ನಿಧನ(84)ವಾಗಿದ್ದು ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಹಾಗೆ ಕಾಂಗ್ರೆಸ್ ಸರ್ಕಾರದ ಮೇಲೆಯೂ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ https://youtu.be/vVQ0I_dW0ZQ?si=6I9Dl6D0TAqkA6rc ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪಣ್ಣ ಮೊನ್ನೆಯಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ವಾಪಾಸಾಗಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಕೆಂಪಣ್ಣ ಆಪ್ತರು, ಕುಟುಂಬದ ಮೂಲಗಳು ತಿಳಿಸಿವೆ. ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದು ಸಂಚಲನ ಸೃಷ್ಟಿಸಿದ್ದರು.

Read More

ನೀವು ಯಾವಾಗಲಾದರೂ ಒತ್ತಡ ಅಥವಾ ಆತಂಕವನ್ನು ಅನುಭವಿಸಿದಾಗ ನಿಮ್ಮ ಅಂಗೈಗಳನ್ನು ಒಟ್ಟಿಗೆ ಉಜ್ಜಲು ಪ್ರಯತ್ನಿಸಿ. ಅಲ್ಲದೇ ಅಂಗೈ ಉಜ್ಜುವಿಕೆಯಿಂದ ಸಿಗುವ ಪ್ರಮುಖ ಪ್ರಯೋಜನಗಳ ಬಗ್ಗೆ ತಜ್ಞರು ವಿವರಿಸಿದ್ದಾರೆ. 1. ಒತ್ತಡ ಕಡಿಮೆಯಾಗುತ್ತದೆ: ಅಂಗೈಗಳನ್ನು ಒಟ್ಟಿಗೆ ಉಜ್ಜಿದಾಗ, ನಮ್ಮ ಕೈಯಲ್ಲಿ ರಕ್ತ ಮತ್ತು ಶಕ್ತಿಯ ಪರಿಚಲನೆಯು ಹೆಚ್ಚಾಗುತ್ತದೆ. ಅದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ನೀವು ಆಯಾಸಗೊಂಡಾಗ ನಿಮ್ಮ ಏಕಾಗ್ರತೆಯನ್ನು ಮರಳಿ ಪಡೆಯಲು ಮತ್ತು ನಿಮ್ಮ ಆಲೋಚನೆಗಳನ್ನು ಚುರುಕುಗೊಳಿಸಲು ಇದು ಸಹಕಾರಿಯಾಗಿದೆ. 2. ಆತಂಕದ ಆಲೋಚನೆಗಳನ್ನು ಕಡಿಮೆ ಮಾಡುತ್ತದೆ: ಹೆಚ್ಚಿದ ಒತ್ತಡದ ಲಕ್ಷಣಗಳು ನಮ್ಮ ಮನಸ್ಸಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ಆದರೆ ದೈಹಿಕವಾಗಿಯೂ ಸಹ ಕಾಣಿಸಿಕೊಳ್ಳಬಹುದು ಅಂಗೈ ಉಜ್ಜುವಿಕೆಯಿಂದ ಉಂಟಾಗುವ ಉಷ್ಣತೆಯು ನಮ್ಮ ನರಮಂಡಲವನ್ನು ಶಮನಗೊಳಿಸುತ್ತದೆ. ನಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ದೈಹಿಕ ಒತ್ತಡದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 3. ಭಾವನಾತ್ಮಕ ಸಮತೋಲನ: ಈ ಅಭ್ಯಾಸದಿಂದ ಉತ್ಪತ್ತಿಯಾಗುವ ಉಷ್ಣತೆ ಮತ್ತು ಶಕ್ತಿಯು ಹೃದಯ ಚಕ್ರದ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.…

Read More

ಇತ್ತೀಚಿನ ದಿನಗಳಲ್ಲಿ ಚಿಕ್ಕ ಪುಟ್ಟ ಮಕ್ಕಳೂ ಸೇರಿ ಎಲ್ಲರೂ ಮೊಬೈಲ್‌ ಗೀಳಿಗೆ ಅಂಟಿಕೊಳ್ಳುತ್ತಿದ್ದಾರೆ. ಮಿತಿಮೀರಿದ ಸ್ಕ್ರೀನ್‌ ಬಳಕೆಯು ಮಕ್ಕಳಲ್ಲಿ ಹೆಚ್ಚುತ್ತಿರುವ ವರ್ತನೆಯ ಮತ್ತು ಭಾವನಾತ್ಮಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂಥ ಪ್ರಮುಖ ಸಮಸ್ಯೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಬೊಜ್ಜು ದೃಷ್ಟಿ ಸಮಸ್ಯೆಗಳು, ಗಮನ ಕೊರತೆ ಮತ್ತು ಜಡ ಜೀವನಶೈಲಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆನ್‌ಲೈನ್ ಅಪಾಯಗಳಿಗೆ ಗುರಿಯಾಗಬಹುದು. ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಪುಣೆಯ ಲೆಕ್ಸಿಕಾನ್ ರೇನ್‌ಬೋ ಥೆರಪಿ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರದ ಹಿರಿಯ ಆಕ್ಯುಪೇಷನಲ್ ಥೆರಪಿಸ್ಟ್ ಡಾ. ಇಶಾ ಸೋನಿ ಅವರು, ಅತಿಯಾದ ಸ್ಕ್ರೀನ್‌ ಟೈಂ ಗೆ ಅಂಟಿಕೊಳ್ಳುವುದು ತಿನ್ನುವ ಅಸ್ವಸ್ಥತೆಗಳು ಮತ್ತು ದೇಹದ ಡಿಸ್ಮಾರ್ಫಿಯಾಕ್ಕೆ ಕಾರಣವಾಗಬಹುದು. ಹಾಗೆಯೇ ಆತಂಕ, ಖಿನ್ನತೆಗೂ ಕಾರಣವಾಗಬಹುದು ಎಂದು ಹೇಳುತ್ತಾರೆ. ಪೋಷಕರು ಶೈಕ್ಷಣಿಕ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಸ್ಕ್ರೀನ್‌ ಟೈಂ ಅನುಮತಿಸುವ ನಡುವೆ ಸಮತೋಲನವನ್ನು ನ್ಯಾವಿಗೇಟ್ ಮಾಡಬೇಕಾಗುತ್ತದೆ ಡಿಜಿಟಲೀಕರಣವು ಎಲ್ಲರಿಗೂ ಆನ್‌ಲೈನ್‌ನಲ್ಲಿ ಮಾಹಿತಿ ಮತ್ತು ಕಲಿಕಾ ಸಾಧನಗಳ ವ್ಯಾಪಕ ಪ್ರವೇಶವನ್ನು ನೀಡುತ್ತದೆ. ಸೃಜನಶೀಲ…

Read More

ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ:ದ್ವಿತೀಯ ನಕ್ಷತ್ರ: ಉತ್ತರ ಭಾದ್ರಪದ ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: ರಾ .3:08 ನಿಂದ ಬೆ.4:32 ತನಕ ಅಭಿಜಿತ್ ಮುಹುರ್ತ: ಬೆ.11:45 ನಿಂದ ಮ.12:33 ತನಕ ಶ್ರೀ ಸೋಮಶೇಖರ್B.Sc ( ವಂಶಪಾರಂಪರಿತ) ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು. Mob.No.93534 88403 ಮೇಷ ರಾಶಿ ಆರ್ಥಿಕವಾಗಿ ಉತ್ತಮವಾಗಿಲ್ಲ. ಸಂಗಾತಿಯ ಮಾತು ಕೇಳದಿದ್ದರೆ ನಿಮಗೆ ದೊಡ್ಡ ನಷ್ಟವನ್ನುಂಟು ಮಾಡುತ್ತದೆ. ಹಣಹೂಡಿಕೆ ವಹಿವಾಟಿನಲ್ಲಿ ವಂಚನೆ ಇರಬಹುದು ಜಾಗರೂಕರಾಗಿರಿ. ಇಂದು ಕೆಲಸದ ವಿಷಯದಲ್ಲಿ ಧನಲಾಭ ಮಿಶ್ರ ದಿನವಾಗಿರುತ್ತದೆ. ವೃತ್ತಿರಂಗದಲ್ಲಿ ಕೆಲವು ಅಡೆತಡೆಗಳು ಎದುರಾಗಿದ್ದರೆ, ಮೇಲಾಧಿಕಾರಿಯ ಸಹಾಯ ದೊರೆಯುವುದು. ರಿಯಲ್ ಎಸ್ಟೇಟು ಉದ್ಯಮದಾರರು ನಿರೀಕ್ಷೆಯಂತೆ…

Read More

ಬೆಂಗಳೂರು: ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರೀ ಹೂಡಿಕೆ ಸುಳಿವು ಸಿಕ್ಕಿದ್ದು, 2030ರ ವೇಳೆಗೆ 32.5 ಲಕ್ಷ ಕೋಟಿ ರೂ. ಮೌಲ್ಯದ ಸಾಲಗಳನ್ನು ನೀಡಲು ಬ್ಯಾಂಕ್‌ಗಳ ಬದ್ಧವಾಗಿದೆ ಎಂದು ಸಚಿವಾಲಯ ನೀಡಿದ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. 4ನೇ ಜಾಗತಿಕ ಮಟ್ಟದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್ ಪೋ ಆಯೋಜಿಸಿದ್ದು ಇಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲಾಗುತ್ತಿದೆ. ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಒದಗಿಸಿದ ಡೇಟಾ ಪ್ರಕಾರ ಆರ್‌ಇ ಇನ್ವೆಸ್ಟ್ 2024 ರ ಸಮಾವೇಶದಲ್ಲಿ 6 ಟ್ರಿಲಿಯನ್ ರೂ. ಮೌಲ್ಯದ ಸಾಲ ಒದಗಿಸುವ ಪ್ರಸ್ತಾಪಗಳು ಬಂದಿದೆ. ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಈಆರ್‌ಇಡಿಎ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಲಾ 5 ಲಕ್ಷ ಕೋಟಿ ರೂ. ಮೌಲ್ಯದ ಸಾಲ ನೀಡುವ ವಾಗ್ದಾನ ಮಾಡಿದೆ. ಪವರ್ ಫೈನಾನ್ಸ್ ಕಾರ್ಪೊರೇಷನ್  ಮತ್ತು ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಡೆವಲಪ್‌ಮೆಂಟ್  ಕ್ರಮವಾಗಿ 3 ಟ್ರಿಲಿಯನ್ ರೂ. ಮತ್ತು 1.86 ಟ್ರಿಲಿಯನ್…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿ 20 ದಿನ ಕಳೆದಿದೆ. ಈ 20 ದಿನಗಳಲ್ಲಿ ದರ್ಶನ್ ತಾಯಿ ಮೀನಾ ತೂಗುದೀಪ ಒಮ್ಮೆಯೂ ಮಗನನ್ನು ನೋಡಲು ಬಳ್ಳಾರಿ ಜೈಲಿಗೆ ಹೋಗಿರಲಲ್ಲ. ಇದರಿಂದ ಬೇಸರಗೊಂಡಿದ್ದ ದರ್ಶನ್ ತಾಯಿಯನ್ನು ನೋಡಬೇಕು ಎಂದು ಹಂಬಲಿಸಿದ್ದರು. ಇದೀಗ ಮಗನನ್ನು ನೋಡಲು ತಾಯಿ ಮೀನಾ ತೂಗುದೀಪ ಮಗಳ ಜೊತೆ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ.  ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ದರ್ಶನ್ ನೋಡಲು ಮೀನಾ ಬಂದಿರಲಿಲ್ಲ. ಇದೀಗ ದರ್ಶನ್ ತಾಯಿ, ಸಹೋದರಿ ದಿವ್ಯಾ, ಬಾವ ಮಂಜುನಾಥ ಹಾಗೂ ಅಕ್ಕನ ಮಕ್ಕಳು ಆಗಮಿಸಿ ದರ್ಶನ್ ಕುಶಲೋಪರಿ ವಿಚಾರಿಸಿದ್ದಾರೆ. ಮಗನನ್ನು ಕಂಡೊಡನೆ ಮೀನಾ ಹಾಗೂ ಸಹೋದರಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಸೆ.17ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್ ಗೌಡ ಜೈಲಿಗೆ ಭೇಟಿ ನೀಡಿದ್ದರು. ಮನೆಯ ತಿನಸುಗಳು ಮತ್ತು ಹಣ್ಣುಗಳನ್ನು ನೀಡಿ ಕಾನೂನು ಸಮರ ಬಗ್ಗೆ ಚರ್ಚಿಸಿ ಹೋಗಿದ್ದಾರೆ.ಅಲ್ಲದೆ ಸದ್ಯದಲ್ಲೇ ದರ್ಶನ್ ರನ್ನು…

Read More

ನವದೆಹಲಿ: ಚಂದ್ರನ ಮೇಲೆ ಲ್ಯಾಂಡರ್‌ ಇಳಿಸುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದ್ದ ಭಾರತ ಇದೀಗ ಚಂದ್ರನ ಮೇನೆ ಮಾನವನ್ನು ಕಳಿಸುವ ಸಾಹಸಕ್ಕೆ ಮುಂದಾಗಿದೆ. ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅಧ್ಯಯನ ನಡೆಸಿದ ಬಳಿಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯ ಚಂದ್ರಯಾನ-4 ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 2040ರಲ್ಲಿ ಈ ಸಾಹಸ ನಡೆಸಲು, 2104 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ. ತಂತ್ರಜ್ಞಾನ ಇನ್ನಷ್ಟೇ ಸಿದ್ದಗೊಳ್ಳಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2040ಕ್ಕೆ ಈ ಸಾಹಸ ನಡೆಯಲಿದೆ. ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅವರನ್ನು ವಾಪಸ್ ಕರೆತರುವ ತಂತ್ರಜ್ಞಾನವನ್ನು ಇಸ್ರೋ ಅನಾವರಣಗೊಳಿಸಬೇಕಿದೆ. ಈ ಯೋಜನೆಗೆ 2,104.06 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 2008 ರಲ್ಲಿ ಇಸ್ರೋ ಚಂದ್ರನ ಅಧ್ಯಯನಕ್ಕೆ ನೌಕೆಯನ್ನು ಕಳುಹಿಸಿತ್ತು. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಅಧ್ಯಯನ ನಡೆಸುವ ಆ ನೌಕೆಗೆ ಚಂದ್ರಯಾನ -1 ಹೆಸರಿಡಲಾಗಿತ್ತು. ಚಂದ್ರನ ಮೇಲೆ ಲ್ಯಾಂಡರ್ ಹಾಗೂ ರೋವರ್ ಇಳಿಸಲು ಚಂದ್ರಯಾನ-2…

Read More